
ಕೋಲಾರ : ಶಿಕ್ಷಣ ಸಚಿವರಾದ ಮಧುಬಂಗಾರಪ್ಪ ಅವರು ಇಂದು ಕೋಲಾರ ಜಿಲ್ಲೆಯ ಮಾಲೂರಿನ ಮಾಸ್ತಿಲ್ಲಿ ಪಂಚಮಿತ್ರ ವಾಟ್ಸ್ ಆಫ್ ಚಾಟ್ನ್ನು ಲೋಕಾರ್ಪಣೆ ಮಾಡಿದರು. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯಡಿ ಬರುವ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳ ವಿವರಗಳನ್ನು ಹಾಗೂ ಆಯಾ ಗ್ರಾಮ ಪಂಚಾಯತಿಗೆ ಸಂಬಂಧಿಸಿದ ದೂರು ಹಾಗೂ ಸೇವೆಗಳಿಗೆ ಒಂದೇ ಸೂರಿನಡಿ ವ್ಯವಸ್ಥೆ ಮೇಲ್ಕಂಡ ವ್ಯವಸ್ಥೆ ಕಲ್ಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳಬೇಕೆಂದು ಅವರು ತಿಳಿಸಿದರು. ಸಾರ್ವಜನಿಕರು ತಮಗೆ ಅವಶ್ಯವಿರುವ ಗ್ರಾಮ ಪಂಚಾಯತಿಗಳ ವಿವಿಧ ಮಾಹಿತಿ ಮತ್ತು […]

ಶ್ರೀನಿವಾಸಪುರ 3 ತಾಲೂಕಿನ ಗೌನಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಅವಗಾನಪಲ್ಲಿ ಗ್ರಾಮದ ಬಳಿ ಬುಧವಾರ ಮಧ್ಯಾಹ್ನ ಕಾರು ಅಪಘಾತದಲ್ಲಿ ವಕೀಲ ಮುಬಾರಕ್ ಪಾಷಾ (34 ವರ್ಷ) ಮೃತಪಟ್ಟಿರುವ ಘಟನೆ ನಡೆದಿದೆ.ವಿವರ : ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರದ ಪ್ರೇಮ್ ನಗರದ ವಾಸಿಯಾದ ಮೃತ ಮುಬಾರಕ್ರವರು ಕೆಲಸದ ನಿಮಿತ್ತ ಚಿಂತಾಮಣಿ ಯಿಂದ ತಾಡಿಗೋಳ್ ಕ್ರಾಸ್ ಮೂಲಕ ಗೌನಿಪಲ್ಲಿಗೆ ಹೋಗುವ ಮಾರ್ಗ ಮಧ್ಯದಲ್ಲಿನ ಅವಗಾನಪಲ್ಲಿ ಗ್ರಾಮದ ಬಳಿಯ ತಿರುವಿನಲ್ಲಿ ನಿಯಂತ್ರಣ ತಪ್ಪಿ ಕಾರ್ ಪಲ್ಟಿ ಹೊಡೆದ ಪರಿಣಾಮ ರಸ್ತೆ ಬದಿಯ […]

ಕೋಲಾರ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ಇಂದು ಜಿಲ್ಲಾದ್ಯಂತ ಮಿಂಚಿನ ಸಂಚಾರ ಮಾಡಿ ವಿವಿಧ ಕಾಮಗಾರಿಗಳನ್ನು ಉದ್ಘಾಟನೆ ಮಾಡಿದರು. ಬಂಗಾರಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿ 12 ಹಾಸಿಗೆಗಳ ನೂತನ ಕಟ್ಟಡ, ಕೆಜಿಎಫ್ ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಿರುವ ಬಿಪಿಹೆಚ್ ಲ್ಯಾಬ್, ಸ್ಟೇಮಿ(STEMI) ಕಾರ್ಡಿಯಾಕ್ ಟೆಲಿ ಯುನಿಟ್, ಬೆಮೆಲ್ನಿಂದ ನಿರ್ಮಿಸಲ್ಪಟ್ಟ ಆಮ್ಲಜನಕ ಘಟಕ ನೂತನ ಆಂಬ್ಯುಲೆನ್ಸ್ಗಳ ಉದ್ಘಾಟನೆ, ಮುಳಬಾಗಿಲು ವೈದ್ಯಕೀಯ ಅಧಿಕಾರಿ ಸಿಬ್ಬಂದಿಗೆ ವಾಸಗೃಹ ಸಮುಚ್ಚಯ, ಸಾರ್ವಜನಿಕ ಆಸ್ಪತ್ರೆ ಹೊರ ರೋಗಿ ಘಟಕ […]

ಶ್ರೀನಿವಾಸಪುರ : ಪಟ್ಟಣದ ಹೊರವಲಯ ಈದ್ಗ ಹತ್ತಿರದ ಆಂಬೀಷನ್ ನ್ಯಾಷನಲ್ ಶಾಲೆಗೆ ಸಮಾಜ ಸೇವಕ ಎಸ್ ನಾರಾಯಣಸ್ವಾಮಿ ಅವರು ಭೇಟಿ ನೀಡಿ ಶಾಲೆಯ ಕಾಮಗಾರಿಕೆಯನ್ನು ವೀಕ್ಷಿಸಿ ಅವರ ತಾಯಿ ದಿವಂಗಿತ ಶ್ರೀಮತಿ ಶಾರದಮ್ಮ ಅವರ ಹೆಸರಲ್ಲಿ ಶಾಲೆಯ ಒಂದು ಕಟ್ಟಡವನ್ನು ನಿರ್ಮಿಸಲು 3,50,000ವನ್ನು ದಾನ ಮಾಡಿದ್ದು ಇದೇ ಸಂದರ್ಭದಲ್ಲಿ ಮಾತನಾಡುತ್ತ ನಾನು ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಶಾಲೆಯಲ್ಲಿ ಓದಿದ್ದು ಬೆಳೆದು ನಮ್ಮ ತಾಯಿಯವರು ಸರ್ಕಾರಿ ಶಾಲೆಯಲ್ಲಿ ಕೆಲಸವನ್ನು ನಿರ್ವಹಿಸಿದ್ದರು ಹೈದರ್ ಅಲಿ ಮೊಹಲ್ಲಾ ನಿವಾಸಿಗಳಾಗಿದ್ದು ನಾನು ನನ್ನ […]

ಶ್ರೀನಿವಾಸಪುರ : ಆದಿ ಜಾಂಬವ ಸಮಾಜ ತನ್ನದೇ ಆದ ಇತಿಹಾಸ, ಪರಂಪರೆ ಹಿನ್ನೆಲೆ ಇರುವಂತಹ ಸಮಾಜ. ಇಂದಿನ ಆಧುನಿಕ ಯುಗದಲ್ಲಿ ಸಾಂಸ್ಕøತಿಕ, ರಾಜಕೀಯ, ಧಾರ್ಮಿಕ, ಸಾಮಾಜಿಕವಾಗಿ ಬೆಳವಣಿಗೆ ಹೊಂದುವುದು ತುಂಬಾ ಅವಶ್ಯವಿದೆ ಎಂದು ಸಮಾಜ ಸೇವಕ ಹೂವಳ್ಳಿ ಕೆ.ಅಂಬರೀಶ್ ಹೇಳಿದರು.ಪಟ್ಟಣದ ತಹಶೀಲ್ದಾರ್ ಕಛೇರಿ ಮುಂಭಾಗ ಸೋಮವಾರ ಆದಿ ಜಾಂಬವ ಜಯಂತ್ಸೋವ ಕಾರ್ಯಕ್ರಮಕ್ಕೆ ಅಂಬೇಡ್ಕರ್ ಪುತ್ಥಳಿಗೆ ಪುಷ್ಪಮಾಲೆ ಹಾಕುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.ಮಾದಿಗ ಸಮುದಾಯ ಶೈಕ್ಷಣಿಕವಾಗಿ ಮುಂದೆ ಬರಬೇಕು. ಪೋಷಕರು ತಮ್ಮ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅಗತ್ಯವಾದ […]

ಶ್ರೀನಿವಾಸಪುರ : ನೀರು ಅಮೂಲ್ಯವಾದ ಸಂಪತ್ತು ಇದನ್ನ ಸುರಕ್ಷಿತವಾಗಿ, ಮಿತವಾಗಿ ಬಳಸುವಂತೆ ತಿಳಿಸಿ, ಜಲ ಮೂಲಗಳನ್ನು ಸಂರಕ್ಷಿಸಿ ಇದರಿಂದ ಅಂತರ್ಜಲವನ್ನು ಹೆಚ್ಚಿಸಿ ಮುಂದಿನ ಪೀಳಗೆಗೆ ಉಳಿಸುವ ಪ್ರಯತ್ನ ಮಾಡುವುದು ನಮ್ಮೆಲರ ಕರ್ತವ್ಯ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು. ಶ್ರೀನಿವಾಸಪುರ ವಿದಾನ ಸಭಾ ಕ್ಷೇತ್ರದ ಜನಘಟ್ಟ ಗ್ರಾಮದಲ್ಲಿ ೧.೨೨ ಕೋಟಿಯಲ್ಲಿ ಗ್ರಾಮದ ೩೨೨ ಮನೆಗಳಿಗೆ ಮನೆ ಮನೆಗೂ ಗಂಗೆ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು. ಸರ್ಕಾರವು ಎಷ್ಟೇ ಉಪಯುಕ್ತ ಯೋಜನೆಗಳು ತಂದರೂ ಸಹ ನಾಗರೀಕರು ಆ ಯೋಜನೆಗಳನ್ನು ಸದ್ಬಳಕೆ […]

ಶ್ರೀನಿವಾಸಪುರ : ಗ್ರಾಮೀಣ ಭಾಗದ ಎಲ್ಲಾ ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವ ಮೂಲಕ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಜಲ ಜೀವನ್ ಮಿಷನ್ ಯೋಜನೆಯನ್ನು ಅನುಷ್ಟಾನ ಮಾಡಲಾಗುತ್ತಿದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು. ಶ್ರೀನಿವಾಸಪುರ ವಿದಾನ ಸಭಾ ಕೇತ್ರದ ಹೋಳೂರು ಗ್ರಾಮದಲ್ಲಿ ಶನಿವಾರ ೧.೭೫ ಕೋಟಿ ವೆಚ್ಚದಲ್ಲಿನ ಕಾಮಗಾರಿ ಚಾಲನೆ ನೀಡಿ ಮಾತನಾಡಿದರು. ಗ್ರಾಮದಲ್ಲಿನ ೭೫೦ ಮನೆಗಳಿಗೆ ಮನ ಮನೆಗೂ ಗಂಗೆ ಹರಿಸಲಾಗುತ್ತದೆ ಎಂದರು. ಹಾಗೂ ಗ್ರಾಮದಲ್ಲಿ ಓವರ್ ಹೆಡ್ ಟ್ಯಾಂಕ್ನ್ನು ರಿಪೇರಿ ಹಾಗು […]

ಕೋಲಾರ ಮಾ-2, ಲಕ್ಷಾಂತರ ರೂಪಾಯಿ ಶುಲ್ಕ ಪಡೆದು ನೀಟ್, ಸಿ.ಇಟಿ ತರಬೇತಿ ನೀಡುತ್ತೇವೆಂದು ವಿದ್ಯಾರ್ಥಿಗಳನ್ನು ವಂಚನೆ ಮಾಡುತ್ತಿರುವ ಆಕಾಶ್ ಬೈಜುಸ್ ಸಂಸ್ಥೆ ವಿರುದ್ದ ಕ್ರಿಮಿನಲ್ ಮೊಕದಮ್ಮೆ ದಾಖಲು ಮಾಡಿ ನೊಂದಿರುವ ವಿದ್ಯಾರ್ಥಿಗಳಿಗೆ ನ್ಯಾಯ ದೊರಕಿಸಿಕೊಡಬೇಕೆಂದು ರೈತ ಸಂಘದಿಂದ ಶಿಕ್ಷಣ ಸಂಸ್ಥೆ ಮುಂದೆ ಹೋರಾಟ ಮಾಡಿ ಆರಕ್ಷಕ ಉಪನಿರೀಕ್ಷಕರಾದ ಸಹೀದ್ ಅಹಮದ್ ಮುಖಾಂತರ ಜಿಲ್ಲಾಧಿಕರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.ಹೋರಾಟದ ಸ್ಥಳಕ್ಕೆ ಬಂದ ಶಿಕ್ಷಣ ಸಂಸ್ಥೆಯ ರಾಕೇಶ್, ರಾಜಗೋಪಾಲ್, ನೊಂದ ಪೋಷಕರ ಮನವೊಲಿಸಿ, ನಿಮ್ಮ ಮಕ್ಕಳಿಗೆ ಬುಧವಾರದ ಒಳಗೆ ನ್ಯಾಯ […]

ಕೋಲಾರ / 01 ಮಾರ್ಚ್ : ಭಾರತ ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನ ಹಕ್ಕುಗಳನ್ನು ನೀಡಿದೆ. ಜಾತಿ, ಧರ್ಮಕ್ಕೆ ಸೀಮಿತವಾಗಿರದೆ ಭಾರತದ ಪ್ರಜೆಗಳಾದ ನಾವು ಯಾವುದೇ ವರ್ಣಬೇದ ಇಲ್ಲದೆ ಸಮಾನ ಹಕ್ಕುಗಳನ್ನು ನೀಡಿದೆ. ದೇಶದ ಮೊದಲ ಪ್ರಜೆ ರಾಷ್ಟ್ರಪತಿಗಳಿಂದ ಹಿಡಿದು ಸಾಮಾನ್ಯ ಪ್ರಜೆಗೂ ಸಮಾನ ಅವಕಾಶಗಳನ್ನು ಸಂವಿಧಾನವು ಕಲ್ಪಿಸಿಕೊಟ್ಟಿದೆ ಎಂದು ಶ್ರೀನಿವಾಸಪುರ ಶಾಸಕರಾದ ವೆಂಕಟಶಿವಾರೆಡ್ಡಿ ರವರು ತಿಳಿಸಿದರು.ಶ್ರೀನಿವಾಸಪುರ ತಾಲ್ಲೂಕು ಪಂಚಾಯಿತಿ ಮುಂಭಾಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆÉ ಹಾಗೂ ನಗರಸಭೆ ವತಿಯಿಂದ ಹಮ್ಮಿಕೊಂಡಿದ್ದ […]