(ಫೋಟೊ ಮೊದಲಿನದು, ಸಂಗ್ರಹದಿಂದ) ಶ್ರೀನಿವಾಸಪುರ : ತಾಲೂಕಿನ ಶೀಗೆಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ಗ್ರಾಮದ ನಾರಾಯಣಸ್ವಾಮಿಯವರ (40 ವರ್ಷ), ಇಬ್ಬರು ಮಕ್ಕಳಾದ ಪವನ್ (12 ವರ್ಷ), ನಿತಿನ್(10 ವರ್ಷ) ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಮೃತ ಕುಟುಂಬದವರು ಶ್ರೀನಿವಾಸಪುರ ಠಾಣೆಗೆ ದೂರು ಸಲ್ಲಿಸಿದ್ದು ಪೊಲೀಸರ ತನಿಖೆಯ ನಂತರ ಸತ್ಯಾಂಶ ಹೊರಬೀಳಲಿದೆ.
ಶ್ರೀನಿವಾಸಪುರ : ಏ.26 ರ ರಂದು ನಡೆಯುವ ಸಾರ್ವತ್ರಿಕ ಲೋಕಸಭಾ ಚುನಾವಣೆ ಮತದಾನದೊಂದು ನಡೆಸಬಹುದಾದ ಎಲ್ಲಾ ನಮೂನೆಗಳ ಬಗ್ಗೆ ಮಾಹಿತಿ, ಬ್ಯಾಲೆಟ್ ಯೂನಿಟ್ , ಕಂಟ್ರೋಲ್ ಯೂನಿಟ್, ಹಾಗು ಮತಯಂತ್ರಗಳ ಬಗ್ಗೆ ಮಾಸ್ಟರ್ ಅಧಿಕಾರಿಗಳಿಂದ ಮತಗಟ್ಟೆ ಅಧಿಕಾರಿ ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ಮೊದಲ ತರಬೇತಿ ನೀಡಲಾಗುತ್ತಿದೆ ಎಂದು ಎಆರ್ ಓ, ಎಂ.ಆರ್.ಸುಮಾ ತಿಳಿಸಿದರು.ಪಟ್ಟಣ ಹೊರವಲಯದ ಬೈರವೇಶ್ವರ ವಿದ್ಯಾನಿಕೇತನದಲ್ಲಿ ಸೋಮವಾರ ಕೋಲಾರ ಲೋಕಸಭಾ ಕ್ಷೇತ್ರಕ್ಕೆ ಸಂಬಂದಿಸಿದಂತೆ ತಾಲೂಕಿನ ಪಿಆರ್ ಓ, ಎಪಿಆರ್ ಓಗಳಿಗೆ ಗಳಿಗೆ ಒಂದು ದಿನ […]
ಶ್ರೀನಿವಾಸಪುರ: ಮಕ್ಕಳಿಗೆ ಬರಿ ಶಿಕ್ಷಣ ಇದ್ದರೆ ಸಾಲದು. ದೈಹಿಕ ಮಾನಸಿಕ ಒತ್ತಡಗಳು ನಿಗ್ರಹಿಸಿ ಶಿಸ್ತು ಬದ್ದ ಪ್ರಜೆಗಳಾಗಿ ರೂಪುಗೊಳ್ಳಲು ಯೋಗ ವಿದ್ಯೆ ಪ್ರತಿಯೊಬ್ಬರು ಕಲಿತು ಜೀವನ ಸಾರ್ಥಕ ಪಡಿಸಿಕೊಳ್ಳಬೇಕೆಂದು ಜಿಲ್ಲಾ ಶಿಕ್ಷಣ ಪ್ರಮುಖ ಕೆ.ಎಂ.ಚೌಡಪ್ಪ ಹೇಳಿದರು.ಪಟ್ಟಣದ ತ್ಯಾಗಜರಾಜ ಬಡಾವಣೆಯ ಯೋಗ ಮಂದಿರದಲ್ಲಿ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ ಶ್ರೀನಿವಾಸಪುರ ಶಾಖೆಯಿಂದ ಶಾಲಾ ಮಕ್ಕಳಿಗೆ ಏರ್ಪಡಿಸಿದ್ದ ವ್ಯಕ್ತಿತ್ವ ವಿಕಸನ ಮತ್ತು ಯೋಗಾಭ್ಯಾಸ 30 ದಿನಗಳ ವಸಂತ ಶಿಭಿರ ಉದ್ಘಾಟಿಸಿ ಮಾತನಾಡಿದರು.ಪೋಷಕರು ಹೆಚ್ಚು ಹಣ ಕೊಟ್ಟು ಮಕ್ಕಳ ಆಡಂಬರ ಶಿಕ್ಷಣಕ್ಕೆ […]
ಶ್ರೀನಿವಾಸಪುರ : ಕಾಲು ಮತ್ತು ಬಾಯಿ ರೋಗ ಬಂದಾಗ ಚಿಕಿತ್ಸೆ ಬದಲಾಗಿ ಲಸಿಕೆಯೇ ಮುಖ್ಯವಾಗಿದೆ ಎಂಬುದನ್ನು ರೈತರು ಅರಿಯಬೇಕು ಎಂದರು. ಪಶು ವೈದ್ಯರು ಮನೆಮನೆಗೆ ಲಸಿಕಾಕರಣಕ್ಕೆ ಬಂದಾಗ ರೈತರು ತಮ್ಮ ಜಾನುವಾರುಗಳಿಗೆ ಮರೆಯದೇ ಲಸಿಕೆ ಕೊಡಿಸಬೇಕು ಎಂದು ಕೋಲಾರದ ಪಶು ಸಂಗೋಪನ ಇಲಾಖೆ ಉಪನಿದೇಶಕ ಡಾ|| ಸುಬಾನ್ ಮನವಿ ಮಾಡಿದರು.ತಾಲೂಕಿನ ಆರ್.ತಿಮ್ಮಸಂದ್ರ ಗ್ರಾಮದ ಹಾಲು ಉತ್ಪಾದಕರ ಸಂಘದ ಬಳಿ ಸೋಮವಾರ ಪಶು ಸಂಗೋಪನ ಇಲಾಖೆ ವತಿಯಿಂದ ಕಾಲು ಬಾಯಿ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ರೈತರಿಗೆ ಆರ್ಥಿಕ […]
ಕೋಲಾರ,ಏ.01: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕೊಡ ಮಾಡುವ ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ದತ್ತಿನಿಧಿ ಪ್ರಶಸ್ತಿಗೆ ಭಾಜನರಾದ ಕೋಲಾರಶಕ್ತಿ ದಿನಪತ್ರಿಕೆಯ ಸಂಪಾದಕರಾದ ಕೆ.ಗೋಪಿಕಾಮಲ್ಲೇಶ್ ಹಾಗೂ ಡಿ.ವಿ.ಜಿ ದತ್ತಿನಿಧಿ ಪ್ರಶಸ್ತಿಗೆ ಭಾಜನರಾದ ಕೆ.ಯು.ಡ.ಬ್ಲ್ಯೂ.ಜೆ ಮಾಜಿ ಅಧ್ಯಕ್ಷರೂ ಆದ ಮುಳಬಾಗಿಲು ತಾಲೂಕಿನ ಉತ್ತನೂರು ಗ್ರಾಮದ ವಿ.ವೆಂಕಟೇಶ್ ಅವರು ಇಂದು ಚಿತ್ರದುರ್ಗದ ಎಸ್.ಆರ್.ಎಸ್ ಕಾಲೇಜು ಆವರಣ ಡಾ.ಬಿ.ವಿ.ವೈಕುಂಠರಾಜು ವೇದಿಕೆಯಲ್ಲಿ ನಡೆದ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದತ್ತಿನಿಧಿ ಪ್ರಶಸ್ತಿ ಸ್ವೀಕರಿಸಿದರು.ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ […]
ಆಂಧ್ರಪ್ರದೇಶದ ರಾಮಸಮುದ್ರಂ ಪಟ್ಟಣದಲ್ಲಿ ಶನಿವಾರ ಏರ್ಪಡಿಸಿದ್ದ ಡಾ. ವೆಂಕಟಾಚಲ ಕ್ಲಿನಿಕ್ ಉದ್ಘಾಟನಾ ಸಮಾರಂಭದಲ್ಲಿ, ಶ್ರೀನಿವಾಸಪುರದ ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ವೆಂಕಟಾಚಲ ಮಾತನಾಡಿದರು.ಶ್ರೀನಿವಾಸಪುರ: ಜನರು ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ನೀಡಬೇಕು. ಯಾವುದೇ ಭಾಗ್ಯಕಿಂತ ಆರೋಗ್ಯ ಭಾಗ್ಯ ದೊಡ್ಡದು ಎಂಬುದನ್ನು ಮರೆಯಬಾರದು ಎಂದು ಶ್ರೀನಿವಾಸಪುರದ ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ವೆಂಕಟಾಚಲ ಹೇಳಿದರು.ಸಮೀಪದ ಆಂಧ್ರಪ್ರದೇಶದ ರಾಮಸಮುದ್ರಂ ಪಟ್ಟಣದಲ್ಲಿ ಶನಿವಾರ ಏರ್ಪಡಿಸಿದ್ದ ಡಾ. ವೆಂಕಟಾಚಲ ಕ್ಲಿನಿಕ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ […]
ಕೋಲಾರ,ಮಾ.29: ಕೋಲಾರದವರು ಯಾವುದೇ ಸಂಘದಲ್ಲಿ ಇದ್ದರೂ ಅದು ಕ್ರಿಯಾಶೀಲವಾಗಿ ನಡೆಯುತ್ತದೆ. ಈಗ ಕೋಲಾರದ ಇಬ್ಬರಿಗೆ ಪ್ರಶಸ್ತಿ ಒಲಿದಿರುವುದು ಹೆಮ್ಮೆಯ ವಿಚಾರ ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ತಿಳಿಸಿದರು.ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಕೊಡ ಮಾಡುವ ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ದತ್ತಿನಿಧಿ ಪ್ರಶಸ್ತಿಗೆ ಭಾಜನರಾಗಿರುವ ಕೋಲಾರಶಕ್ತಿ ದಿನಪತ್ರಿಕೆಯ ಸಂಪಾದಕಿ ಕೆ.ಗೋಪಿಕಾ ಮಲ್ಲೇಶ್ ಹಾಗೂ ಡಿ.ವಿ.ಜಿ ದತ್ತಿನಿಧಿ ಪ್ರಶಸ್ತಿಗೆ ಭಾಜನರಾಗಿರುವ ಕೆ.ಯು.ಡ.ಬ್ಲ್ಯೂ.ಜೆ ಮಾಜಿ ಅಧ್ಯಕ್ಷ ವಿ.ವೆಂಕಟೇಶ್ ಅವರನ್ನು ಶುಕ್ರವಾರ ಪತ್ರಕರ್ತರ ಭವನದಲ್ಲಿ ಜಿಲ್ಲಾ ಕಾರ್ಯನಿರತ […]
ಕೋಲಾರ,ಮಾ.28: ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕೊಡ ಮಾಡುವ ಗಿರಿಜಮ್ಮ ರುದ್ರಪ್ಪ ತಾಳಿಕೋಟೆ ದತ್ತಿನಿಧಿ ಪ್ರಶಸ್ತಿಗೆ ಕೋಲಾರಶಕ್ತಿ ದಿನಪತ್ರಿಕೆಯ ಸಂಪಾದಕರಾದ ಕೆ.ಗೋಪಿಕಾಮಲ್ಲೇಶ್ ಹಾಗೂ ಡಿ.ವಿ.ಜಿ ದತ್ತಿನಿಧಿ ಪ್ರಶಸ್ತಿಗೆ ಕೆ.ಯು.ಡ.ಬ್ಲ್ಯೂ.ಜೆ ಮಾಜಿ ಅಧ್ಯಕ್ಷರೂ ಆದ ಮುಳಬಾಗಿಲು ತಾಲೂಕಿನ ಉತ್ತನೂರು ಗ್ರಾಮದ ವಿ.ವೆಂಕಟೇಶ್ ಭಾಜನರಾಗಿದ್ದಾರೆ.ದತ್ತಿನಿಧಿ ಪ್ರಶಸ್ತಿಗಳು ತಲಾ 5 ಸಾವಿರ ರೂ ನಗದು, ಪ್ರಶಸ್ತಿ ಫಲಕ ಮತ್ತು ಗೌರವ ಪುರಸ್ಕಾರಗಳನ್ನು ಹೊಂದಿರುತ್ತದೆ. ಚಿತ್ರದುರ್ಗದಲ್ಲಿ ಏಪ್ರಿಲ್ 1 ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ದತ್ತಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.ಗಿರಿಜಮ್ಮ ರುದ್ರಪ್ಪ […]
ಶ್ರೀನಿವಾಸಪುರ : ಲೋಕಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸೋಮವಾರ ಸಂಜೆ ಸಿಐಎಸ್ಎಫ್ ಎಎಸ್ಐ ಪಿ.ಸಿ.ಬರ್ಮನ್ ನೇತೃತ್ವದಲ್ಲಿ ಸಿಐಎಸ್ಎಫ್ ನಂಬರ್ 931 ರ 40 ಸೈನ್ಯಕರಿಂದ ಪಥಸಂಚಲನವನ್ನು ಹಮ್ಮಿಕೊಳ್ಳಲಾಗಿತ್ತು.ಪಟ್ಟಣದ ಎಂಜಿ ರಸ್ತೆ, ಚಿಂತಾಮಣಿ ರಸ್ತೆ ಹಾಗೂ ಇತರೆ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಸಿದ ಸಿಐಎಸ್ಎಫ್ ತುಕಡಿ ಸಾರ್ವಜನಿಕರಲ್ಲಿ ಮತದಾನ ಜಾಗೃತಿ ಮೂಡಿಸಿದರು.ಅಲ್ಪ ಸಂಖ್ಯಾತ ಯುವ ಕಲ್ಯಾಣ ತಾಲೂಕು ಅಧ್ಯಕ್ಷ ಸಾದಿಕ್ಅಹಮ್ಮದ್, ಮುಖಂಡ ಅಬ್ದುಲ್ಲಾ ರವರು ಸೈನ್ಯಕರಿಗೆ ತಂಪು ಪಾನೀಯವನ್ನು ನೀಡಿ ಸ್ವಾಗತಿಸಿದರು.ಈ ವೇಳೆ ಜಿಲ್ಲಾ ಹೆಚ್ಚುವರಿ […]