ಶ್ರೀನಿವಾಸಪುರ : ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ 5 ಕೊಠಡಿಗಳ ಸ್ಟ್ರಾಂಗ್ ರೂಂಗಳ ಬಗ್ಗೆ ಜಿಲ್ಲಾಧಿಕಾರಿ ಅಕ್ರಂಪಾಷ ರವರು ತಹಶೀಲ್ದಾರರ ಜೊತೆ ಪರಿಶೀಲನೆ ನಡೆಸಿದರು.ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಜಿಲ್ಲಾಧಿಕಾರಿ ಅಕ್ರಂಪಾಷ ಅವರು ತಾಲೂಕು ಕಚೇರಿಗೆ ಭೇಟಿ ನೀಡಿ, ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿದರು.ಪುರಸಭೆಯಲ್ಲಿ ನಡೆಯುತ್ತಿದ್ಧಮತಗಟ್ಟೆ ಅಧಿಕಾರಿಗಳ ತರಬೇತಿಯಲ್ಲಿ ಭಾಗವಹಿಸಿ ಕೆಲವು ಸಲಹೆ ಸೂಚನೆ ನೀಡಿದರು.ತಾಲೂಕು ಕಚೇರಿಯ ಮೇಲು ಅಂತಸ್ತಿನಲ್ಲಿ ಕಚೇರಿ ಕೆಲಸಕ್ಕೆ ಉಪಯೋಗವಾಗಲು ಕಟ್ಟುತ್ತಿರುವ ಕೊಠಡಿಗಳ ಜೊತೆ ಇನ್ನಷ್ಟು ಜಾಗ ಅಗಲೀಕರಿಸಿಕೊಂಡು ನಿರ್ವಹಣೆ […]
ಶ್ರೀನಿವಾಸಪುರ : ಹೆಣ್ಣು ಮಕ್ಕಳು ವಿದ್ಯಾವಂತರಾದರೆ ಒಳ್ಳೇಯ ಅಧಿಕಾರಿಗಳಾಗಬಹುದು ಹಾಗೂ ಕುಟುಂಬದ ಸದಸ್ಯರನ್ನು ವಿದ್ಯಾವಂತರಾಗಿ ಪ್ರರೇಪಣೆ ಮಾಡುತ್ತಾರೆ ಎಂದು ಮಂಗಸಂದ್ರದ ಬೆಂಗಳೂರು ಉತ್ತರ ವಿವಿ ಉಪನ್ಯಾಸಕ ಡಾ| ಜಿ.ಸತೀಶ್ ಸಲಹೆ ನೀಡಿದರು.ಕೋಲಾರ ತಾಲೂಕಿನ ಕೊಂಡೇನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮಂಗಸಂದ್ರದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಮಾಜಕಾರ್ಯ ವಿಭಾಗದವತಿಯಿಂದ ಪೋಕ್ಸೋ ಕಾಯ್ದೆ ಮತ್ತು ಬಾಲ್ಯ ವಿವಾಹ ಕುರಿತು ಜಾಗೃತಿ ಕಾರ್ಯಕ್ರಮವನ್ನು ಉದ್ಗಾಟಿಸಿ ಮಾತನಾಡಿದರು.ಮಕ್ಕಳ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಮಕ್ಕಳ ಕಾನೂನುಗಳ ಬಗ್ಗೆ ಪಾಲಕರು ಮತ್ತು […]
ಶ್ರೀನಿವಾಸಪುರ : ಹಲವು ವರ್ಷಗಳ ಹಿಂದೆ ಸಾಗುವಳಿ ಚೀಟಿಗಳನ್ನು ಪಡೆದು ರೈತರು ಭೂಮಿಯಲ್ಲಿ ಕೊಳವೆ ಬಾವಿಗಳನ್ನು ಹಾಕಿ ಸುಮಾರು 30 ರಿಂದ 40 ವರ್ಷಗಳಿಂದ ವ್ಯವಸಾಯ ಮಾಡಿಕೊಳ್ಳುತ್ತಿದ್ದ ಜಮೀನನ್ನು ಅರಣ್ಯ ಇಲಾಖೆ ಅಧಿಕಾರಿಗಳು 2023 ರಲ್ಲಿ ಈ ಭೂಮಿ ಅರಣ್ಯ ಇಲಾಖೆಗೆ ಸಂಬಂದಿಸಿದೆಂದು ಸಂಪೂರ್ಣವಾಗಿ ಮಾವಿನ ಮರಗಳು ಕ್ಯಾಪ್ಸಿಕಮ್ ಕೋಸು ಸೇರಿ ಹಲವು ಬೆಳೆಗಳನ್ನು ಸಹಾ ಸಂಪೂರ್ಣವಾಗಿ ಮಣ್ಣು ಪಾಳು ಮಾಡಲಾಯಿತು . ಒತ್ತುವರಿ ತೆರವುಗೊಳಿಸುವಂತಹ ವೇಳೆ ಜೆಸಿಬಿ ಗಳ ಮೇಲೆ ಕೆಲ ರೈತರು ಕಲ್ಲು ತೂರಾಟವನ್ನು […]
ಕೋಲಾರ:- ಜಿಲ್ಲಾದ್ಯಂತ 65 ಕೇಂದ್ರಗಳಲ್ಲಿ ಶನಿವಾರ ನಡೆದ ದ್ವಿತೀಯ ಭಾಷಾ ವಿಷಯದ ಪರೀಕ್ಷೆಯೊಂದಿಗೆ ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಿ ಮುಕ್ತಾಯವಾಗಿದ್ದು, ಇದಕ್ಕೆ ಸಹಕಾರ ನೀಡಿದ ಜಿಲ್ಲಾಡಳಿತ,ಜಿಪಂ,ಪೋಲೀಸ್ ಇಲಾಖೆ, ಆರೋಗ್ಯ ಇಲಾಖೆ, ಪೋಷಕರು, ಶಿಕ್ಷಕರು,ವಿದ್ಯಾರ್ಥಿಗಳಿಗೆ ಡಿಡಿಪಿಐ ಕೃಷ್ಣಮೂರ್ತಿ ಧನ್ಯವಾದ ಸಲ್ಲಿಸಿದ್ದಾರೆ.ಈ ಕುರಿತು ಹೇಳಿಕೆ ನೀಡಿರುವ ಅವರು, ಜಿಲ್ಲಾದ್ಯಂತ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಮುಕ್ತಾಯಗೊಂಡಿದೆ, ಇದೇ ಮೊದಲ ಬಾರಿಗೆ ಪರೀಕ್ಷಾ ಕೊಠಡಿಗಳಲ್ಲಿ ಕಡ್ಡಾಯ ಸಿಸಿ ಕ್ಯಾಮರಾ ಅಳವಡಿಕೆ, ವೆಬ್ ಕಾಸ್ಟಿಂಗ್ ಮಾಡಿದ್ದು ವಿಶೇಷವಾಗಿದ್ದು, ಎಲ್ಲಿಯೂ ಗೊಂದಲ,ಸಮಸ್ಯೆಗಳಿಗೆ […]
ಶ್ರೀನಿವಾಸಪುರ : ನಾವು ರೈತಪರವಾಗಿ ಎಂದು ಸಭೆಗಳಲ್ಲಿ ಮಾತನಾಡಿದ ಸರ್ಕಾರವು ಇಂದು ರೈತರನ್ನ ಬೀದಿಗೆ ತಳ್ಳಿದೆ ಎಂದು ರೈತ ಸಂಘದ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ವೀರಭದ್ರಸ್ವಾಮಿ ಹೇಳಿದರು.ತಾಲೂಕಿನ ದಳಸನೂರು ಗ್ರಾಮದಲ್ಲಿ ಶುಕ್ರವಾರ ಲೋಕಸಭೆ ಚುನಾವಣೆ ಮತದಾನ ಬಹಿμÁ್ಕರ ಮಾಡಲು ಗ್ರಾಮಸ್ಥರ ನಿರ್ಧಾರಿಸಿದ್ದು,ನೂರಾರು ಎಕರೆ ಸಾಗುವಳಿ ಜಮೀನು ವಶಕ್ಕೆ ಪಡೆದಿರುವ ಅರಣ್ಯ ಇಲಾಖೆ ರೈತರ ಜಮೀನು ಕಳೆದುಕೊಂಡ್ರು.ರೈತರ ನೆರವಿಗೆ ಬಾರದ ಸರ್ಕಾರದ ಕ್ರಮಕ್ಕೆ ಖಂಡಿಸಿದರು.ಜಂಟಿ ಸರ್ವೆ ಮಾಡಿಸಿ ರೈತರ ನೆರವಿಗೆ ಬರುವಂತೆ ಸರ್ಕಾರಕ್ಕೆ ಒತ್ತಾಯಮಾಡುತ್ತಿದ್ದೇವೆ ಎಂದು ತಿಳಿಸಿದರು.ಗ್ರಾಮದಲ್ಲಿ […]
ಕರ್ನಾಟಕ ಸರ್ಕಾರವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಹಿರಿಯ ಸಹಾಯಕ ನಿರ್ದೇಶಕರ ಕಛೇರಿ, ಜಿಲ್ಲಾ ನ್ಯಾಯಾಲಯ ಸಂಕೀರ್ಣ ಆವರಣ, ಕೋಲಾರ-563101.ದೂರವಾಣಿ: 08152-222077E-Mail ID – vaarthailakhekolar@gmail.com ಪತ್ರಿಕಾ ಪ್ರಕಟಣೆಲೋಕಸಭಾ ಸಾರ್ವತ್ರಿಕ ಚುನಾವಣೆ-2024 : 25 ನಾಮಪತ್ರಗಳ ಸಲ್ಲಿಕೆಕೋಲಾರ, ಏಪ್ರಿಲ್ 04 (ಕರ್ನಾಟಕ ವಾರ್ತೆ): ನಂ.14-14ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ (04-04-2024) ಇಲ್ಲಿಯವರೆಗೆ 25 ಅಭ್ಯರ್ಥಿಗಳಿಂದ 33 ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದ್ದಾರೆ.28-ಕೋಲಾರ (ಪ.ಜಾ) ಲೋಕಸಭಾ […]
ಕೋಲಾರ: ಲೋಕಸಭಾ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗುರುವಾರ ಕೆ.ವಿ.ಗೌತಮ್ ನಾಮಪತ್ರ ಸಲ್ಲಿಕೆ ಬಳಿಕ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಗರದಲ್ಲಿ ರೋಡ್ ಶೋ ನಡೆಸಿದರು ಈ ಸಂದರ್ಭದಲ್ಲಿ ಅವರೊಂದಿಗೆ ಅಭ್ಯರ್ಥಿ, ಸಚಿವರು, ಶಾಸಕರು, ಮುಖಂಡರು ಜೊತೆ ಡಿ.ಕೆ.ಶಿವಕುಮಾರ್ ನಗರದ ಬಂಗಾರಪೇಟೆ ವೃತ್ತದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ತೆರೆದ ವಾಹನದಲ್ಲಿ ಮುಖಂಡರು ಕೆ.ವಿ.ಗೌತಮ್ ಅವರಿಗೆ ಮತಯಾಚಿಸಿದರು. ಸಾವಿರಾರು ಕಾರ್ಯಕರ್ತರು ಬೃಹತ್ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಬಂಗಾರಪೇಟೆ ವೃತ್ತದಿಂದ ಎಸ್ಎನ್ಆರ್ ಜಿಲ್ಲಾಸ್ಪತ್ರೆ ಮಾರ್ಗವಾಗಿ ಗಾಂಧಿವನಕ್ಕೆ […]
ಶ್ರೀನಿವಾಸಪುರ : ಸರ್ಕಾರಿ ಶಾಲೆಯಲ್ಲಿನ ವಿದ್ಯಾರ್ಥಿಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ಪಡೆದು ಜೀವನದ ಗುರಿಯನ್ನು ಮಟ್ಟುವಂತೆ ದಾನಿ ಎಜಿಎಂಎಸ್ಸಿ ಕಂಪನಿ ವ್ಯವಸ್ಥಾಪಕ ಲಿಂಗಾಪುರ ನಾಗರಾಜ್ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ತಾಲೂಕಿನ ಚೆನ್ನಯ್ಯಗಾರಿಪಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಭಾನುವಾರ ಬೆಂಗಳೂರಿನ ಎಜಿಎಂಎಸ್ಸಿ ಕಂಪನಿವತಿಯಿಂದ ಉಚಿತವಾಗಿ ನಲಿಕಲಿ ಟೇಬಲ್ಗಳು, ಚೇರುಗಳು, ಶಾಲಾ ಬ್ಯಾಗ್ಗಳು, ಟ್ರ್ಯಾಕ್ ಶೊಟ್ ಹಾಗು ನೋಟ್ ಪುಸ್ತಕಗಳನ್ನು ವಿತರಿಸಿ ಮಾತನಾಡಿದರು.ನಾನು ಪ್ರಾಥಮಿಕ ವಿದ್ಯಾಬ್ಯಾಸವನ್ನು ಕೋಟಬಲ್ಲಪಲ್ಲಿ ಸರ್ಕಾರಿ ಶಾಲೆಯಲ್ಲಿಯೇ ಓದಿದ್ದು, ನಂತರ ಪ್ರೌಡಶಿಕ್ಷಣ , ಪಿಯುಸಿ, ಪದವಿ, ಉನ್ನತ […]
ಶ್ರೀನಿವಾಸಪುರ : ಹುಟ್ಟಿದ ಮೇಲೆ ಸಾವು ಖಚಿತ. ಆದರೆ ಆತುರದ ನಿರ್ಧಾರವನ್ನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದು ತಪ್ಪು, ಆತುರದ ನಿರ್ಧಾರವನ್ನು ತೆಗೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ತಮ್ಮ ಕುಟುಂಬವನ್ನ ಬೀದಿಪಾಲು ಆಗುತ್ತದೆ. ಇದರೊಂದಿಗೆ ಮಾನಸಿಕವಾಗಿ ಹಿಂಸೆಗೆ ಒಳಗಾಗುತ್ತಾರೆ ಎಂದರು. ಆದ್ದರಿಂದ ಪ್ರತಿಯೊಬ್ಬರು ಸಹ ತಮ್ಮ ಜೀವನವನ್ನ ಜವ್ದಾರಿಯುತವಾಗಿ ನಡೆಸಿಕೊಂಡು ಹೋಗಬೇಕು ಎಂದು ಶ್ರೀನಿವಾಸಪುರ ಪೊಲೀಸ್ ನಿರೀಕ್ಷಕ ಎಂ.ಬಿ.ಗೊರವನಕೊಳ್ಳ ಹೇಳಿದರು.ತಾಲೂಕಿನ ಶೀಗೆನಹಳ್ಳಿ ಗ್ರಾಮದಲ್ಲಿ ಆತ್ಮಹತ್ಯೆಗೆ ಶರಣಾದ ಕುಟುಂಬಕ್ಕೆ ಸೋಮವಾರ ರಾತ್ರಿ ಧನ ಸಹಾಯ ನೀಡಿ ಮಾತನಾಡಿದರು.ಮೃತರ ತಂದೆ ವೆಂಕಟೇಶಪ್ಪ ರವರಿಗೆ […]