ಶ್ರೀನಿವಾಸಪುರದಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಪರ ಭಾನುವಾರ ಏರ್ಪಡಿಸಿದ್ದ ಚುನಾವಣಾ ಪ್ರಚಾರ ಸಭೆಯನ್ನು ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಹಾಗೂ ಸಚಿವ ಡಾ. ಸುಧಾಕರ್ ಉದ್ಘಾಟಿಸಿದರು. ಕೋಮುವಾದಿಗಳು ಹಾಗೂ ಸಂವಿಧಾನ ವಿರೋಧಿಗಳು ಎಲ್ಲಿಯವರೆಗೆ ಇರುತ್ತಾರೊ, ಅಲ್ಲಿಯವರೆಗೆ ನಾನು ಸಾರ್ವಜನಿಕ ಜೀವನದಿಂದ ದೂರ ಹೋಗುವುದಿಲ್ಲ ಎಂದು ಮಾಜಿ ಶಾಸಕ ಕೆ.ಆರ್.ರಮೇಶ್ ಕುಮಾರ್ ಘೋಷಿಸಿದರು. ಪಟ್ಟಣದ ಮಾವಿನ ಕಾಯಿ ಮಂಡಿಯಲ್ಲಿ ಕೋಲಾರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ವಿ.ಗೌತಮ್ ಪರ ಭಾನುವಾರ ಏರ್ಪಡಿಸಿದ್ದ ಚುನಾವಣಾ ಪ್ರಚಾರ […]
ಕೋಲಾರ:- ಅಂಬೇಡ್ಕರ್ ದೇಶಕ್ಕೆ ನೀಡಿದ ಅತ್ಯುನ್ನತ ಸಂವಿಧಾನವನ್ನು ಬಳಸಿಕೊಂಡು ಭಾರತ ದೇಶವನ್ನು ವಿಶ್ವದ ಬಲಿಷ್ಠ ರಾಷ್ಟ್ರವನ್ನಾಗಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಪ್ರಜೆಗಳ ಮೇಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕನ್ನಯ್ಯ ಹೇಳಿದರು.ನಗರದ ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಅಂಬೇಡ್ಕರ್ 133 ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.ಅಂಬೇಡ್ಕರ್ ಅವರ ಸಮವಿಧಾನವು ಸಮಾನತೆ, ಸಹೋದರತೆ, ಸೌಹಾರ್ದತೆ ಹಾಗೂ ಸಾಮಾಜಿಕ ನ್ಯಾಯ ಎಂಬ ನಾಲ್ಕು ಪ್ರಮುಖ ಅಂಶಗಳ ಮೇಲೆ ನಿಂತಿದೆ, ಸಂವಿಧಾನದ ಈ […]
ಕುಂದಾಪುರ (ಎ. 14) : ಇಂದಿನ ಮಕ್ಕಳಿಗೆ ವಿದ್ಯೆಯ ಜೊತೆಗೆ ವ್ಯವಹಾರ ಜ್ಞಾನ ಅತಿ ಮುಖ್ಯ. ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬದುಕಬೇಕಾದರೆ ಮಕ್ಕಳಿಗೆ ಎಲ್ಲರೊಂದಿಗೆ ಬೆರೆಯಲು ಮಾತಿನ ಕೌಶಲ್ಯ, ಲೆಕ್ಕಾಚಾರದ ವಿಚಾರ ತಿಳಿದಿರಬೇಕೆಂದು ಎಚ್. ಎಮ್. ಎಮ್ ಮತ್ತು ವಿ. ಕೆ. ಆರ್ ಸಂಸ್ಥೆ ಆಯೋಜಿಸಿದ ಪ್ಯಾಟಿ ಮಕ್ಕಳ್ ಹಳ್ಳಿ ಟೂರ್ ನ 10ನೇ ದಿನದಲ್ಲಿ ಶಾಲಾ ವಠಾರದಲ್ಲಿ ನಡೆದ ಮಕ್ಕಳ ಸಂತೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶ್ರೀಯುತ ವಿಜಯ್ ರವರು ಮಾತನಾಡಿದರು. ಅವರು ಡಾ. […]
ಶ್ರೀನಿವಾಸಪುರ : ಈ ಹಿಂದೆ ಬಿಜೆಪಿ ಆಡಳಿತದಲ್ಲಿ ರಾಜ್ಯ ಕೆರೆ, ಕುಂಟೆ ಹಾಗೂ ಡ್ಯಾಮ್‌ಗಳಲ್ಲಿ ಸದಾ ನೀರು ಹರಿಯುತ್ತಿತ್ತು. ಕೆರೆಗಳ ಕಟ್ಟೆಯ ಮೇಲೆಯೂ ಹರಿಯುತ್ತಿತ್ತು. ಆದರೆ ಇಂದು ಮೂಕ ಜೀವಿಗಳು ನೀರು ಕುಡಿಯಲು ನೀರಿಲ್ಲದೆ ಪರದಾಡುತ್ತಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮಾಜಿ ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದರು. ಕೋಲಾರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಶ್ರೀನಿವಾಸಪುರ ವಿಧಾನ ಸಭಾ ಕ್ಷೇತದ ಹೋಳೂರು ನಲ್ಲಿ ಶನಿವಾರ ಆಯೋಜಿಸಲಾಗಿದ್ದ ಎನ್‌ಡಿಎ ಅಭ್ಯರ್ಥಿಯ ಚುನಾವಣಾ ಪ್ರಚಾರ ಬಹಿರಂಗ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲಿ ಸಕಾಲದಲ್ಲಿ […]
ರಚನೆ:- ಬಿ.ಆರ್. ರವೀಂದ್ರ, ವಕೀಲರು ಮತ್ತು ಸಾಹಿತಿಗಳು ಕೋಲಾರ. ಈಗ ಸಮಾಜದಲ್ಲಿ ತಂದೆ ತಾಯಿಗಳಿಗೆ ತಮ್ಮ ವೃದ್ಧಾಪ್ಯದಲ್ಲಿ ಯಾರು ಚೆನ್ನಾಗಿ ನೋಡಿಕೊಳ್ಳಬಹುದು ಎನ್ನುವ ಅನುಮಾನದ ದೃಷ್ಟಿಯಿಂದ ಕಾಣುವುದು ಹೆಚ್ಚಾಗಿ ಮಕ್ಕಳ ಮನದಲ್ಲಿ ಮೂಡುವ ಪ್ರಶ್ನೆ ಪಿತೃಗಳಿಗೆ ಪಿತೃ ಭಕ್ತಿ ತೋರುವುದಾದರೂ ಹೇಗೆ? ಎಂದು, ಸಾಧಾರಣವಾಗಿ ಸಮಾಜದಲ್ಲಿ ಒಟ್ಟು ಕುಟುಂಬಗಳು ಮರೆಯಾದ ನಂತರ ಪೋಷಕರಿಗೆ ಈ ರೀತಿಯ ಭಯ, ಆತಂಕ ಇರುವ ಮಕ್ಕಳಲ್ಲಿ ಸಾಕುವವರು ಯಾರು? ಬಿಟ್ಟು ಹೋಗುವವರು ಯಾರು? ಹೀಗೆ ಹಲವಾರು ಚಿಂತೆ, ಆಲೋಚನೆಗಳಲ್ಲಿ ಬಿದ್ದು ಮಾತಿನ […]
ಶ್ರೀನಿವಾಸಪುರ : ಕ್ಷೇತ್ರವನ್ನು ಅಭಿವೃದ್ಧಿ ಪಡಿಸಿ ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವ ಉದ್ದೇಶದಿಂದ ೫೦೦೦ ಎಕರೆ ಭೂಮಿಯನ್ನು ಕೈಗಾರಿಕಾ ವಲಯ ಮಾಡಲು ಇಚ್ಚೆಸಿದ್ದೇನೆ. ೩೦೦೦ ಎಕರೆಗಳಷ್ಟು ಯಲ್ದೂರು ಗ್ರಾಮದ ಬಳಿ ಹಾಗೂ ಮೂರರಿಂದ ನಾಲ್ಕು ಸಾವಿರ ಎಕರೆಗಳಷ್ಟು ಮದನಪಲ್ಲಿ ರಸ್ತೆಯಲ್ಲಿ ಕೈಗಾರಿಕಾ ವಲಯವನ್ನು ಸ್ಥಾಪನೆ ಮಾಡಲಾಗುವುದು . ಈ ಯೋಜನೆಯು ಎರಡು ಮೂರು ವರ್ಷಗಳಲ್ಲಿ ಕಾರ್ಯಗತವಾಗಲಿದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಭರವಸೆ ನೀಡಿದರು. ತಾಲೂಕಿನ ಲಕ್ಷ್ಮಿಪುರ ಗ್ರಾಮದಲ್ಲಿ ಶುಕ್ರವಾರ ಜೆಡಿಎಸ್, ಬಿಜೆಪಿ ಪಕ್ಷದ ಮೈತ್ರಿ ಅಭ್ಯರ್ಥಿಪರ ಮತಯಾಚನಾ […]
ಶ್ರೀನಿವಾಸಪುರ: ಪಟ್ಟಣದ ಹೊರವಲಯದ ರೋಣೂರು ಕ್ರಾಸ್ ಬಳಿ ಇರುವ ವಿಷನ್ ಇಂಡಿಯಾ ಪಬ್ಲಿಕ್ ಪದವಿ ಪೂರ್ವ ಕಾಲೇಜಿನ ಕಛೇರಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.ವಿಷನ್ ಇಂಡಿಯಾ ಪಬ್ಲಿಕ್ ಕಾಲೇಜಿನ ಕಾರ್ಯದರ್ಶಿ ಡಾ|| ಎಂ.ಎಸ್.ಕವಿತಾ ಮಾತನಾಡಿ ನಮ್ಮ ಪದವಿ ಪೂರ್ವ ಕಾಲೇಜು ವಿಜ್ಞಾನ ವಿಭಾಗದಲ್ಲಿ ೧೦೦% ಹಾಗೂ ವಾಣಿಜ್ಯ ವಿಭಾಗದಲ್ಲಿ ೯೮% ಫಲಿತಾಂಶ ಪಡೆದಿರುತ್ತದೆ ಎಂದು ಮಾಹಿತಿ ನೀಡಿದರು.ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಭೂಮಿಕ ಕೆ ಎನ್ ೫೮೧ (೯೬.೮೩%) ಪ್ರಥಮ ಹಾಗೂ ಅನುಶ್ರೀ ಎನ್ ೫೭೯ (೯೬.೫%) […]
ಶ್ರೀನಿವಾಸಪುರ : ದ್ವಿತೀಯ ಪಿ ಯು ಸಿ 2023-24 ನೇ ಸಾಲಿನ ಫಲಿತಾಂಶ ಏಪ್ರಿಲ್ 10 ರಂದು ಪ್ರಕಟವಾಗಿದ್ದು ಪಟ್ಟಣದ ಗಂಗೋತ್ರಿ ಕಾಲೇಜಿನ ವಿದ್ಯಾರ್ಥಿ ಜುವೇರಿಯ ಎಂಬ ವಿದ್ಯಾರ್ಥಿ ವಿಜ್ಞಾನ ವಿಭಾಗದಲ್ಲಿ 600 ಅಂಕಗಳಿಗೆ 583 ಅಂಕಗಳನ್ನು ಪಡೆದು ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದರೆ ವಾಣಿಜ್ಯ ವಿಭಾಗದಲ್ಲಿ ಉಮಾ ಎಂಬ ವಿದ್ಯಾರ್ಥಿ 600 ಅಂಕಗಳಿಗೆ 587 ಅಂಕಗಳನ್ನು ಪಡೆದು ತಾಲ್ಲೂಕಿಗೆ ವಾಣಿಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಕಾಲೇಜು ಅಧ್ಯಕ್ಷ ಎಸ್.ಸಿ. ಮುರಳಿನಾಥ್, ಕಾಲೇಜಿನ ಕಾರ್ಯದರ್ಶಿ ಎಸ್.ಸಿ.ಅಮರನಾಥ್.ಪ್ರಾಂಶುಪಾಲ […]
ಶ್ರೀನಿವಾಸಪುರ 1 : ಕವಿತೆಗಳು ಭಾವ ತುಂಬಿ ಬರಬೇಕು. ಪದ್ಯದ ಶೈಲಿಯನ್ನು ಬಿಟ್ಟುಕೊಡಬಾರದು. ಭಾಷೆ ಸರಳವಾಗಿದ್ದು,ಓದುಗರಿಗೆ ಹತ್ತಿರವಾಗಿದ್ದರೆ ಚೆನ್ನ. ಪ್ರಸ್ತುತ ಸನ್ನಿವೇಶಗಳಿಗೆ ಸ್ಪಂದಿಸುವಂತಿರಬೇಕು ಎಂದು ಹಿರಿಯ ಕವಿ ಪಣಸಮಾಕನಹಳ್ಳಿ ಆರ್. ಚೌಡರೆಡ್ಡಿ ಹೇಳಿದರು.ಕನ್ನಡ ಸಾಹಿತ್ಯ ಪರಿಷತ್ತು ಶ್ರೀನಿವಾಸಪುರ ಘಟಕದಿಂದ, ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಸಂಜೆ “ಯುಗಾದಿ ಕವಿಗೋಷ್ಠಿ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಉದ್ಘಾಟನೆ ಮಾಡಿ ಮಾತನಾಡಿದರು.ಇಂಗ್ಲೀಷಿನ ನ್ಯೂಮನ್ ಕವಿ ತನ್ನ “ಲೀಡ್ ಕೈಂಡ್ಲಿ, ಲೈಟ್” ಎಂಬ ಒಂದೇ ಕವಿತೆಯಿಂದ ಜಗತ್ಪ್ರಸಿದ್ಧರಾದರು. ಸಂಖ್ಯೆ ಮುಖ್ಯವಲ್ಲ, ಬರೆದದ್ದು […]