
ಕೋಲಾರ, ಮೇ.22: ಗ್ರಾ.ಪಂಗಳಲ್ಲಿ ಕಸ ವಿಲೇವಾರಿ ಮಾಡುವ ವಾಹನ ಚಾಲನಾ ವೃತ್ತಿಯು ಅತ್ಯಂತ ಶ್ರೇಷ್ಠವಾದದ್ದು ಹಾಗೂ ಯಾವುದೇ ವೃತ್ತಿ ಹೆಚ್ಚು ಮತ್ತು ಕಡಿಮೆ ಎಂದು ವಿಂಗಡಿಸಲು ಸಾಧ್ಯವಿಲ್ಲ ಎಂದು ಜಿ.ಪಂ ಯೋಜನಾ ನಿರ್ದೇಶಕ ರವಿಚಂದ್ರ .ಎನ್ ಹೇಳಿದರು.ತಾಲ್ಲೂಕಿನ ಹೊನ್ನೇನಹಳ್ಳಿಯ ಕೆನರಾ ಬ್ಯಾಂಕ್ ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ಲಘುವಾಹನ ಚಾಲನಾ ತರಬೇತಿ ಪಡೆದ ಶಿಬಿರಾರ್ಥಿಗಳಿಗೆ ವಾಹನಾ ಚಾಲನಾ ಪರವಾನಗಿ ವಿತರಿಸಿ ಮಾತನಾಡಿದರು.ರಾಜ್ಯದ ಪ್ರತಿ ಗ್ರಾ.ಪಂ.ಯ ಸ್ವಚ್ಚತಾ ವಾಹಿನಿಯನ್ನು ಚಲಾಯಿಸುವ ವೃತ್ತಿಯನ್ನು ಮಹಿಳೆಯರಿಗೆ ಸರ್ಕಾರ ಮೀಸಲಿರಿಸಿದೆ. ಇದರಿಂದ […]

ಕೋಲಾರ ; ಕೋಲಾರ ಜಿಲ್ಲೆಯಾದ್ಯಂತ 934 ಎಕರೆ ಜಮೀನು ಪಹಣಿಯಲ್ಲಿ ಇಂಡೀಕರಗೊಳಿಸಲು ಬಾಕಿಯಿದ್ದು, ಇನ್ನು 15 ದಿನದೊಳಗಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಸೂಚಿಸಿದರು.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿಂದು ಭೂ ಸ್ವಾಧೀನಪಡಿಸಲಾದ ಜಮೀನುಗಳ ಭೂ ದಾಖಲೆಗಳಲ್ಲಿ ಇಂಡೀಕರಿಸುವ ಕುರಿತಾದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಹಳೇ ಜಮೀನುಗಳ ಪೋಡಿ, ಪಹಣಿ ಹಾಗೂ ಇಸ್ಸೆಗೆ ಸಂಬಂಧಿಸಿದಂತೆ ಇರುವ ಸಮಸ್ಯೆಗಳನ್ನು ತ್ವರಿತವಾಗಿ ಬಗೆಹರಿಸಿ ಇಂಡೀಕರಿಸುವ ಕಾರ್ಯವನ್ನು ಮುಗಿಸುವಂತೆ ತಿಳಿಸಿದರು. ರೈಲ್ಷೆ ಯೋಜನೆಗಳಿಗೆ, ಸಾರ್ವಜನಿಕ ಉದ್ದೇಶಕ್ಕೆ ಹಾಗೂ ಸರ್ಕಾರದ ವಿವಿಧ ಯೋಜನೆಗಳಿಗೆ ಅಗತ್ಯವಿರುವ […]

ಶ್ರೀನಿವಾಸಪುರ ತಾಲೂಕಿನ ತಾಡಿಗೋಳ್ ಗ್ರಾಮದಲ್ಲಿ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯದಲ್ಲಿ ಮಂಗಳವಾರ ಲೋಕಕಲ್ಯಾಣಾರ್ಥ ಸಾಮೂಹಿಕವಾಗಿ ಕಲ್ಯಾಣೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತುಈ ಕಾರ್ಯಕ್ರಮದಲ್ಲಿ ಶಾಸಕ ಜೆ.ಕೆ . ವೆಂಕಟಶಿವಾರೆಡ್ಡಿ ಭಾಗವಹಿಸಿದ್ದರು. ಈ ಸಮಯದಲ್ಲಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ ದೇವಾಲಯ ಗಳು ಇಂದು ನೆಮ್ಮದಿ ತಾಣಗಳಾಗಿ ದ್ದು ಪ್ರತಿಯೊಬ್ಬರೂ ಸಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳು ವಂತೆ ಸಲಹೆ ನೀಡಿದರು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳು ವುದರಿಂದ ಗ್ರಾಮಗಳಲ್ಲಿ ಬ್ರಾತುತ್ವ, ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದರು”

ಶ್ರೀನಿವಾಸಪುರ : ತಹಶೀಲ್ದಾರ್ ಕಚೇರಿ ಅವರಣದಲ್ಲಿ ಇರುವ ಗ್ರಂಥಾಲಯಕ್ಕೆ ಹೋಗುವ ಸ್ಥಳದಲ್ಲಿ ಮಳೆ ನೀರು ನಿಂತು ಗ್ರಂಥಾಲಯಕ್ಕೆ ಹೋಗಿ ಬರುವ ಓದುಗರು ಪರದಾಡುವ ಪರಿಸ್ಥಿತಿ ಉಂಟಾಗಿದೆ.ತಹಶೀಲ್ದಾರ್ ಕಚೇರಿ ಆವರಣದಲ್ಲಿ ಇರುವ ಬ್ರಿಟಿಷರ ಕಾಲದಲ್ಲಿ ನಿರ್ಮಾಣ ಮಾಡಲಾಗಿದ್ದ ಕಟ್ಟಡಲ್ಲಿಯೇ ಹಲವು ವರ್ಷಗಳಿಂದ ಗ್ರಂಥಾಲಯ ನಡೆಸುತ್ತಿದ್ದು ಇತ್ತೀಚಿಗೆ ತಾಲ್ಲೂಕು ಕಚೇರಿ ಆವರಣವನ್ನು ನವೀಕರಣ ಮಾಡಿದ ಸಂದರ್ಭದಲ್ಲಿ ಆವರಣದಲ್ಲಿಯೂ ಸಹಾ ಕಾಂಕ್ರೀಟ್ ಹಾಕಲಾಗಿದ್ದು ಮಳೆ ಬಿದ್ದ ಸಂದರ್ಭದಲ್ಲಿ ಗ್ರಂಥಾಲಯದ ಮುಂಭಾಗ ತಗ್ಗುಪ್ರದೇಶವಾಗಿದ್ದು ಮಳೆ ನೀರು ಶೇಖರಣೆಯಾಗಿ ಸಾರ್ವಜನಿಕರು ಗ್ರಂಥಾಲಯಕ್ಕೆ ಬರಲು ಸಹ […]

ಶ್ರೀನಿವಾಸಪುರ : ಶ್ರೀನಿವಾಸಪುರ ತಾಲೂಕಿನ ಲಕ್ಷ್ಮೀಪುರ ಮಾದರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಗೆ ಮಂಗಳವಾರ ಕ್ಷೇತ್ರ ಸಂಯೋಜಕರಾದ ಕೆಸಿ ವಸಂತ ಮೇಡಂ ರವರು ಭೇಟಿ ನೀಡಿ ಅಕ್ಷರ ದಾಸೋಹದಲ್ಲಿ ಬರಗಾಲ ಬಿಸಿಯೂಟದಲ್ಲಿ 72 ಮಕ್ಕಳು ಹಾಜರಾಗಿ ಒಟ್ಟಿಗೆ ಊಟ ಮಾಡುತ್ತಿರುವ ಸ್ಥಳವನ್ನು ಪರಿಶೀಲಿಸಿದರು.ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೋಳಿ ಫಾರಂ, ಇಟ್ಟಿಗೆ ಫ್ಯಾಕ್ಟರಿ ಗಳಲ್ಲಿ ಕೂಲಿ ಕೆಲಸ ಮಾಡುತ್ತಿರುವ ಮಕ್ಕಳ ಊಟಕ್ಕೆ ಅನುವು ಮಾಡಿಕೊಡುತ್ತಿರುವುದಾಗಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳಾದ ಹಾಗೂ ನೋಡಲ್ ಅಧಿಕಾರಿಗಳಾದ ಆರ್ ಆಂಜನೇಯ ರವರು ತಿಳಿಸಿದರು.ವೀಕ್ಷಣೆ […]

ಶ್ರೀನಿವಾಸಪುರ, ಮೇ.20: ಮಾವು ಮಾರುಕಟ್ಟೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ರೈತ ಕೂಲಿಕಾರ್ಮಿಕರ ಆರೋಗ್ಯ ರಕ್ಷಣೆ ಮಾಡಿ ಕಾನೂನು ಬಾಹಿತ ಕಮೀಷನ್ ಹಾವಳಿಗೆ ಕಡಿವಾಣ ಹಾಕಿ ವಾಹನ ಸಂಚಾರ ಅವ್ಯವಸ್ಥೆ ಸರಿಪಡಿಸಬೇಕೆಂದು ಎ.ಪಿ.ಎಂ.ಸಿ ಕಾರ್ಯದರ್ಶಿರವರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.365 ದಿನ ಕಷ್ಟಪಟ್ಟು ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಮಾವು ಪಸಲನ್ನು ಬಿಸಿಲು ಗಾಳಿ ಎನ್ನದೆ ದುಬಾರಿ ಔಷದಿಗಳನ್ನು ಖರೀದಿ ಮಾಡಿ ರೋಗಗಳಿಂದ ಮಾವು ಬೆಳೆ ರಕ್ಷಣೆ ಮಾಡಿ ಪಸಲನ್ನು ಮಾರುಕಟ್ಟೆಗೆ ತಂದರೆ ವ್ಯಾಪಾರಸ್ಥರು ರಾತ್ರಿವೇಳೆ ಹರಾಜು ಹಾಕಿ 10 ನಿಮಿಷದಲ್ಲಿ […]

ಕೋಲಾರ,ಮೇ.18: ತಾಲೂಕಿನ ಶಿಳ್ಳಂಗೆರೆ ಗ್ರಾಮದಲ್ಲಿ ಚರಂಡಿಗಳು ಮತ್ತು ಕಸಕಡ್ಡಿಗಳನ್ನು ಸ್ವಚ್ಛ ಮಾಡುವಂತೆ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮದ ನಿವಾಸಿ ಹಾಗೂ ದಲಿತ ಮುಖಂಡ ಅರುಣ್ ಕುಮಾರ್, ಪದಾಧಿಕಾರಿಗಳಾದ ಮುರಳಿ, ಪ್ರತಾಪ್, ವೇಣು, ಹರೀಶ್ ಜಿ ಆರೋಪಿಸಿದ್ದಾರೆ.ಗ್ರಾಮದಲ್ಲಿ ಎಲ್ಲಂದರಲ್ಲಿ ಕಸಕಡ್ಡಿಗಳು ಬಿದ್ದಿವೆ. ಚರಂಡಿಗಳು ಕಸಕಡ್ಡಿಗಳಿಂದ ತುಂಬಿರುವ ಕಾರಣ ಮಳೆ ಬಂದಾಗ ನೀರು ಸರಾಗವಾಗಿ ಹರಿಯದೆ ಮನೆಗಳಿಗೆ ನುಗ್ಗಿತ್ತಿವೆ. ಚರಂಡಿಗಳಲ್ಲಿ ನಿಂತಿರುವ ನೀರು ಗೊಬ್ಬು ನಾರುತ್ತಾ ದುರ್ವಾಸನೆ ಬಿರುತ್ತಿವೆ. […]

ಕೆಜಿಎಫ್ : ಮೇ. 17 ಸಿಇಎನ್ ಸೈಬರ್ ಕ್ರೈಂ ಪೊಲೀಸರು ಗಾಂಜಾ ಮಾರಾಟ ಮಾಡುತ್ತಿದ್ದ ಓರ್ವ ಆರೋಪಿಯನ್ನು ಬಂಧಿಸಿ, ಆತನಿಂದ ರೂ: 10 ಲಕ್ಷ (ಹತ್ತು ಲಕ್ಷ ರೂಪಾಯಿಗಳು) ಮೌಲ್ಯದ ಗಾಂಜಾವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಂಗಾರಪೇಟೆ ಪಟ್ಟಣದಲ್ಲಿ ಗಾಂಜಾ ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಬಂದಾಕ್ಷಣ ಡಿವೈಎಸ್ಪಿ ಎಸ್.ಪಾಂಡುರಂಗ ನೇತೃತ್ವದಲ್ಲಿ ಸಿಇಎನ್ ಸೈಬರ್ ಕ್ರೈಂ ಪೊಲೀಸ್ ಇನ್ಸ್‌ಪೆಕ್ಟರ್ ಲಕ್ಷ್ಮೀನಾರಾಯಣ ಮತ್ತು ಸಿಬ್ಬಂದಿಗಳು ಕೂಡಲೇ ಕಾರ್ಯಾಚರಣೆ ನಡೆಸಿ, ಬಂಗಾರಪೇಟೆ ಸರ್ಕಾರಿ ಜೂನಿಯರ್ ಕಾಲೇಜು ಮುಂಭಾಗದಲ್ಲಿ ಗಾಂಜಾ […]

ಶ್ರೀನಿವಾಸಪುರ : ತಾಲೂಕಿನ ರೈತಾಪಿ ಕುಟುಂಬಗಳು ಹಾಗು ಇತರೆ ಸಾಮಾನ್ಯ ಕುಟುಂಗಳ ತಮ್ಮ ಮಕ್ಕಳ ಉಜ್ವಲ ಭವಿಷ್ಯದ ಕನಸನ್ನು ಕಟ್ಟಿಕೊಂಡಿರುತ್ತಾರೆ. ಅವರ ಕನಸು ನನಸು ಮಾಡುವ ಉದ್ದೇಶದಿಂದ ನಮ್ಮ ಶಾಲೆಯು ಕಡಿಮೆ ಶುಲ್ಕವನ್ನು ಪಡೆದು ಉತ್ತಮ ಗುಣ ಮಟ್ಟದ ಶಿಕ್ಷಣವನ್ನು ಹಾಗೂ ಶಿಸ್ತು ಕೊಡುವುದರ ಮೂಲಕ ವಿದ್ಯಾರ್ಥಿಗಳ ಪೋಷಕರ ಕನಸು ನನಸು ಮಾಡುವ ಕೆಲಸವನ್ನು ಮಾಡುತ್ತಿದ್ದೇವೆ ಎಂದು ವಿಐಪಿ ಶಾಲಾ ಆಡಳಿತ ಮಂಡಲಿ ಅಧ್ಯಕ್ಷ ಡಾ|| ಕೆ.ಎನ್. ವೇಣುಗೋಪಾಲರೆಡ್ಡಿ ಹೇಳಿದರು.ತಾಲೂಕಿನ ರೋಣೂರು ಕ್ರಾಸ್ ಬಳಿ ವಿಐಪಿ ಶಾಲೆಯಲ್ಲಿ […]