
ಕೋಲಾರ : ಕೋಲಾರ ಜಿಲ್ಲೆಯ ಅನುದಾನ ರಹಿತ ಅಥವಾ ಅನುದಾನಿತ ಖಾಸಗಿ ಶಾಲೆಗಳಲ್ಲಿ ಮಕ್ಕಳ ಪ್ರವೇಶಾತಿಗಾಗಿ ಯಾವುದೇ ರೀತಿಯ ಡೊನೇಷನ್ ಪಡೆಯುವಂತಿಲ್ಲ ಒಂದು ವೇಳೆ ಕಾನೂನು ಬಾಹಿರವಾಗಿ ದೇಣಿಗೆ ಪಡೆದಿರುವುದು ಕಂಡುಬಂದಲ್ಲಿ ಅಂತಹ ಶಾಲೆಗಳ ನೋಂದಣಿ ರದ್ದು ಮಾಡಿ ಆಡಳಿತ ಮಂಡಳಿಯ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ಎಚ್ಚರಿಕೆ ನೀಡಿದ್ದಾರೆ. ಪ್ರಸಕ್ತ ಶೈಕ್ಷಣಿಕ ಸಾಲಿಗೆ ಇಂದಿನಿಂದ ಪ್ರವೇಶ ಪ್ರಕ್ರಿಯೆ ಆರಂಭಗೊಂಡಿದೆ ಕೆಲವು ಶಾಲೆಗಳಲ್ಲಿ ಡೊನೇಷನ್ ಪಡೆಯಲಾಗುತ್ತದೆ ಎಂದು ಸಾರ್ವಜನಿಕ ವಲಯದಲ್ಲಿ […]

ಕೋಲಾರ,ಮೇ.27: ಪ್ರತಿಯೊಬ್ಬರೂ ಪ್ರಥಮ ಚಿಕಿತ್ಸೆ ಕುರಿತು ಅರಿವು ಹಾಗೂ ತರಬೇತಿ ಪಡೆದು ಸಕಾಲದಲ್ಲಿ ತೊಂದರೆಗೊಳಗಾದವರಿಗೆ ನೆರವು ನೀಡಿದಾಗ ಅಮೂಲ್ಯವಾದ ಜೀವವನ್ನು ಉಳಿಸಲು ಸಹಕಾರಿಯಾಗುತ್ತದೆ ಎಂದು ದೇವರಾಜ ಅರಸು ವೈದ್ಯಕೀಯ ಸಂಶೋಧನಾ ಕೇಂದ್ರದ ತುರ್ತು ಚಿಕಿತ್ಸ ವಿಭಾಗದ ಕನ್ಸಲ್ಟೆಂಟ್ ಡಾ.ರಾಜೇಶ್ ಅವರು ತಿಳಿಸಿದರು. ತುರ್ತು ವೈದ್ಯಕೀಯ ಚಿಕಿತ್ಸಾ ದಿನಾಚರಣೆ ಅಂಗವಾಗಿ ನಗರದ ಆರ್.ಎಲ್.ಜಾಲಪ್ಪ ಆಸ್ಪತ್ರೆ ಮತ್ತು ದೇವರಾಜ ಅರಸು ವೈದ್ಯಕೀಯ ಸಂಶೋಧನಾ ಕೇಂದ್ರ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ, ಇಂದು ನಗರದ ಪತ್ರಕರ್ತರ ಭವನದಲ್ಲಿ ಏರ್ಪಡಿಸಿದ್ದ […]

ಶ್ರೀನಿವಾಸಪುರ : ಅಪ್ರಾಪ್ತ ವೈಯಸ್ಸಿನ ಮಕ್ಕಳ ಕೈಗೆ ದ್ವಿಚಕ್ರ ವಾಹನ ನೀಡಬೇಡಿ ಪ್ರಸ್ತುತ ಕಾನೂನು ವ್ಯವಸ್ಥೆಯು ಬದಲಾಗಿ ಶಿಕ್ಷೆ ಪ್ರಮಾಣ ಜಾಸ್ತಿ ಆಗಿದೆ ಆದ್ದರಿಂದ ಪೋಷಕರು ತಮ್ಮ ಮಕ್ಕಳಿಗೆ ಯಾವುದೇ ಕಾರಣಕ್ಕೂ ದ್ವಿಚಕ್ರವಾಹನಗಳನ್ನು ಓಡಿಸಲು ಕೊಡಬೇಡಿ ಎಂದು ಕೋಲಾರ ಅಡಿಷನಲ್ ಎಸ್ ಪಿ ರವಿಶಂಕರ್ ಸಲಹೆ ನೀಡಿದರು.ಪಟ್ಟಣದ ಸಂತೆ ಮೈದಾನದಲ್ಲಿ ಭಾನುವಾರ ಕೋಲಾರ ಜಿಲ್ಲಾ ಪೊಲೀಸ್ ಇಲಾಖೆವತಿಯಿಂದ ಸಾರ್ವಜನಿಕರಿಗೆ ಕಾನೂನು ಅರಿವು ಸಭೆಗೆ ಚಾಲನೆ ನೀಡಿ ಮಾತನಾಡಿದರು.ವಿಶೇಷವಾಗಿ ಯುವಕರು ವಿದ್ಯಾರ್ಥಿಗಳು ಪೋಷಕರ ಬಗ್ಗೆ ಗಮನಹರಿಸಬೇಕು ಎಷ್ಟು ಕಷ್ಟ […]

ಕೋಲಾರ:- ಮನುಷ್ಯನ ಜೀವನದಲ್ಲಿ ಇಂದು ಆಹಾರ,ನೀರಿನಷ್ಟೇ ಕಾನೂನು ಅತಿ ಮುಖ್ಯವಾಗಿದ್ದು, ದೈನಂದಿನ ಬದುಕಿಗೆ ಅಗತ್ಯವಾದ ಕನಿಷ್ಟ ಕಾನೂನುಗಳ ಅರಿವು ಅಗತ್ಯವಿದೆ, ನಿಮ್ಮ ಪೋಷಕರ ಆಶಯ ಈಡೇರಿಕೆ ನಿಮ್ಮ ಜವಾಬ್ದಾರಿ ಎಂಬುದನ್ನು ಅರಿತು ಹಕ್ಕುಗಳನ್ನು ಕೇಳುವುದರ ಜತೆಗೆ ಕರ್ತವ್ಯ ಪಾಲನೆಯೂ ಮುಖ್ಯ ಎಂಬುದನ್ನು ವಿದ್ಯಾರ್ಥಿನಿಯರು ಅರಿಯಬೇಕು ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುನೀಲ್ ಎಸ್.ಹೊಸಮನಿ ಕರೆ ನೀಡಿದರು.ನಗರದ ಕೋಲಾರದ ಕೋರ್ಟ್ ವೃತ್ತದಲ್ಲಿನ ಅಂಬೇಡ್ಕರ್ ವಿದ್ಯಾರ್ಥಿ ನಿಲಯದಲ್ಲಿ ಜಿಲ್ಲಾ ಕಾನೂನು […]

ಶ್ರೀನಿವಾಸಪುರ : ರಾಜಣ್ಣ ಮತ್ತು ಮಂಜುನಾಥ್ ಎಂಬುವರು ಸರ್ಕಾರಿ ನೌಕರರಾಗಿದ್ದು ಈ ವ್ಯಕ್ತಿಗಳು ಕಾಲುವೆಯನ್ನು ಒತ್ತುವರಿ ಮಾಡಿಕೊಂಡು ಬೇಲಿ ಹಾಕುತ್ತಿದ್ದು ಸುಮಾರು ಆರು ಏಳು ತೋಟಗಳಿಗೆ ಹೋಗುವಂತಹ ರೈತರಿಗೆ ಹಾಗೂ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಪಕ್ಕದ ಜಮೀನುಗಳ ವಾರಸುದಾರರಾದ ಎಂ.ಅಶ್ವತ್ಥಪ್ಪ ,ರಾಮಪ್ಪ , ವೆಂಕಟೇಶಪ್ಪ, ಯಲ್ಲಪ್ಪ,ನಾರಾಯಣಸ್ವಾಮಿ ,ಲಕ್ಷ್ಮೀಸಾಗರ ನಾರಾಯಣಸ್ವಾಮಿ, ಚಲಪತಿ , ಪಾರ್ವತಮ್ಮ , ಜ್ಯೋತಮ್ಮ ಆರೋಪಿಸಿದ್ದಾರೆ.ಹಲವು ವರ್ಷಗಳಿಂದ ರಾಜಕಾಲವೆಯನ್ನೇ ತೋಟಗಳಿಗೆ ಹೋಗುವ ರಸ್ತೆಯನ್ನಾಗಿ ಸಾರ್ವಜನಿಕರು ಬಳಕೆ ಮಾಡುತ್ತಿದ್ದ ರಾಜಕಾಲುವೆ ಜಾಗವನ್ನು ಶ್ರೀನಿವಾಸಪುರ ತಾಲ್ಲೂಕಿನ ಶೇಷಾಪುರ […]

ಕೋಲಾರ:- ಸತತ ಏಳು ಬಾರಿ ಸಂಸದನನ್ನಾಗಿ ಆಯ್ಕೆ ಮಾಡಿ ನನ್ನ ಬೆನ್ನಿಗೆ ನಿಂತ ಕೋಲಾರ ಜಿಲ್ಲೆಯ ಜನರ ಇಷ್ಟಾರ್ಥಗಳನ್ನು ರೇಣುಕಾ ಯಲ್ಲಮ್ಮ ತಾಯಿ ನೆರವೇರಿಸಲು ನನಗೆ ರಾಜಕೀಯ ಜನ್ಮ ನೀಡಿದ ಜಿಲ್ಲೆಯಲ್ಲಿ ಉತ್ತಮ ಮಳೆ,ಬೆಳೆಯಾಗಿ ಸಮೃದ್ದಿ ನೆಲಸಲಿ ಎಂದು ರಾಜ್ಯ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಪ್ರಾರ್ಥಿಸಿದರು.ನಗರದ ಪಿಸಿ ಬಡಾವಣೆಯ ರೇಣುಕಾಯಲ್ಲಮ್ಮ ಹೂವಿನ ಕರಗಮಹೋತ್ಸವದ ಹಿನ್ನಲೆಯಲ್ಲಿ ಗುರುವಾರ ಸಂಜೆ ಪ್ರತಿವರ್ಷದಂತೆ ಈ ಬಾರಿಯೂ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ ನಂತರ ಅವರು ಮಾಧ್ಯಮದೊಂದಿಗೆ ಮಾತನಾಡುತ್ತಿದ್ದರು.ಕೋಲಾರದಲ್ಲಿ ರೇಣುಕಾ ಯಲ್ಲಮ್ಮ ದೇವಿ […]

ಶ್ರೀನಿವಾಸಪುರ : ಯುವ ಸಮುದಾಯವು ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಅರಿತುಕೊಳ್ಳತ್ತಾ , ಭಾರತೀಯ ಸಂಸ್ಕøತಿ, ಪರಂಪರೆಯನ್ನು ಅಧ್ಯಾಯನ ಮಾಡಲು ಆಸಕ್ತಿ ವಹಿಸಬೇಕು ಎಂದು ಚಿಕ್ಕಬಳ್ಳಾಪುರ ಶಾಖ ಮಠದ ಶ್ರೀ ಮಂಗಳಾನಂದನಾಥಸ್ವಾಮಿ ಹೇಳಿದರು.ತಾಲೂಕಿನ ಬೈರವೇಶ್ವರ ವಿದ್ಯಾನಿಕೇತನದ ಆವರಣದಲ್ಲಿ ಗುರುವಾರ 10ಕೋಟಿ ವೆಚ್ಚದಲ್ಲಿ ಕಾಲೇಜುನ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಇಂದು ಗ್ರಾಮೀಣ ಭಾಗದಲ್ಲಿನ ವಿದ್ಯಾರ್ಥಿಗಳು ಎಲೆ ಮರಿಕಾಯಿಯಂತೆ ತಮ್ಮಲ್ಲಿನ ವಿದ್ಯೆಯನ್ನು , ಕೌಶಲ್ಯ ತೋರಿಸುತ್ತಾ, ತಮ್ಮಲ್ಲಿನ ವಿದ್ಯೆಯನ್ನು ಕೌಶಲ್ಯ ಪ್ರೋತ್ಸಾಹಿಸುವವರು ಇಲ್ಲದೆ ಅರ್ಧಕ್ಕೆ ನಿಲ್ಲಿಸುವಂತಾಗಿದೆ ಈ […]

ಕೋಲಾರ,ಮೇ.23: ಖಾಸಗಿ ಶಾಲೆಗಳ ದುಬಾರಿ ಶುಲ್ಕ ನಿಯಂತ್ರಣ ಮಾಡಲು ವಿಶೇಷ ತಂಡ ರಚನೆ ಮಾಡಿ ಜಿಲ್ಲಾದ್ಯಂತ ಶಿಥಿಲಗೊಂಡಿರುವ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿಪಡಿಸಿ ಸಕಾಲಕ್ಕೆ ಪಠ್ಯ ಪುಸ್ತಕ, ಸಮವಸ್ತ್ರ ಪೂರೈಕೆ ಮಾಡಿ ಖಾಲಿ ಇರುವ ಶಿಕ್ಷಕರ ನೇಮಕ ಮಾಡಿ ಮಕ್ಕಳ ಭವಿಷ್ಯವನ್ನು ರೂಪಿಸಬೇಕೆಂದು ರೈತಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಪತ್ರಿಕಾ ಹೇಳಿಕೆ ಮುಖಾಂತರ ಮಾನ್ಯ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು.ನಗರಸಭೆ ಆವರಣದಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ರವರು ದೇಶದ ಭವಿಷ್ಯ ರೂಪಿಸುವ ಶಿಕ್ಷಣ ವ್ಯವಸ್ಥೆಯನ್ನು ಸರಿಪಡಿಸದೇ ಹೋದರೆ ಮುಂದಿನ ದಿನಗಳಲ್ಲಿ […]

ಶ್ರೀನಿವಾಸಪುರ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನೌಕರರ ಸಂಘದ 22 ನೇ ತ್ರೈ ವಾರ್ಷಿಕ ಮಹಾಧಿವೇಶನ ಪ್ರಾಥಮಿಕ ಪ್ರತಿನಿಧಿಗಳ ಚುನಾವಣೆ ಯಲ್ಲಿ 6 ಜನ ಸದಸ್ಯರು ಸ್ಪರ್ದಿಸಿದ್ದು ಇದರಲ್ಲಿ 3 ಜನ ಸದಸ್ಯರು ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.ಪಟ್ಟಣದ ಕೆಇಬಿ ಉಪವಿಬಾಗದಿಂದ ಪ್ರಾಥಮಿಕ ಪ್ರತಿನಿಧಿಗಳ ಚುನಾವಣೆಯಲ್ಲಿ ಚಂದ್ರು ಆರ್. 76 ಮತ, ಆರ್.ಕೆ ಶ್ರೀನಿವಾಸ್ ಕುಮಾರ್ 69 ಮತ, ಕೆ.ವಿ ನಂಜುಂಡೇಶ್ವರ 64 ಮತ ಪಡೆದು ಜಯಶೀಲರಾಗಿದ್ದಾರೆ, ಇವರ ಪ್ರತಿಸ್ಪರ್ದಿಗಳಾದ ಎನ್.ರಾಜಣ್ಣ 61 ಮತ, ಪಿ.ಶ್ರೀನಿವಾಸ್ 60 […]