
ಕೋಲಾರ,ಜೂ.01: ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎನ್‍ಡಿಎ ಅಭ್ಯರ್ಥಿ ಡಾ.ವೈ.ನಾರಾಯಣಸ್ವಾಮಿ ಅವರ ಗೆಲುವು ನಿಶ್ಚಿತ ಎಂದುಪ್ರಚಾರ ಸಭೆಯಲ್ಲಿ ಕೆಯುಡಿ ಮಾಜಿ ಅಧ್ಯಕ್ಷ ವಿಜಯಕುಮಾರ್ ಹಾಗೂ ಮಾಧ್ಯಮ ಸಹ ಸಂಚಾಲಕ್ ಕೆಂಬೋಡಿ ನಾರಾಯಣಸ್ವಾಮಿ ಜಂಟಿ ಹೇಳಿಕೆ ನೀಡಿರುತ್ತಾರೆಇಂದು ನಗರದ ಹಲವು ಶಾಲೆಗಳಲ್ಲಿ ಮತದಾರರನ್ನು ಭೇಟಿ ಮಾಡಿ ಡಾ. ವೈ.ಎ.ನಾರಾಯಣಸ್ವಾಮಿ ರವರ ಪರವಾಗಿ ಮತಯಾಚನೆ ಮಾಡಲಾಯಿತು.ಇಡೀ ಜಿಲ್ಲಾದ್ಯಂತ ವೈ.ಎ.ನಾರಾಯಣಸ್ವಾಮಿ ಅವರ ಪರ ಅಲೆ ಜೋರಾಗಿದೆ. ಖಾಸಗಿ, ಸರ್ಕಾರಿ, ಅನುಧಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರು ಜೂ, 3 ರಂದು ನಡೆಯುವ ಚುನಾವಣೆಯಲ್ಲಿ […]

ಶ್ರೀನಿವಾಸಪುರ : ಪರಿಸರದ ಬಗ್ಗೆಯ ಜಾಗೃತಿ ಕಾರ್ಯಕ್ರಮಗಳು ಯಾವುದೇ ಕಾರಣಕ್ಕೂ ಹೇಳಿಕೆ ಸಿಮೀತವಾಗಬಾರದು , ಪರಿಸರದ ಮಧ್ಯೆ ಹಬ್ಬದ ರೀತಿಯಲ್ಲಿ ಆಚರಣೆಯಾಗಬೇಕಾಗಿದೆ ಎಂದು ತಾಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೆ.ಸಿ.ಮಂಜುನಾಥ್ ಹೇಳಿದರು.ತಾಲೂಕಿನ ಲಕ್ಷ್ಮೀಪುರ ಕ್ರಾಸ್‍ನ ವಿಎಸ್‍ಆರ್ ಶಾಲಾವರಣದಲ್ಲಿ ಶುಕ್ರವಾರ ಕೃಷಿ ಇಲಾಖೆವತಿಯಿಂದ ವಿಶ್ವ ಪರಿಸರ ದಿನಾಚರಣೆ ಸಪ್ತಾಹ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಪ್ರತಿಯೊಬ್ಬರು ಸಸಿ ನೆಟ್ಟು ಅದನ್ನ ಕಾಪಾಡುವ ನಿಟ್ಟಿನಲ್ಲಿ ಸನ್ನಧರಾಗಬೇಕು. ಈಗಾಗಲೇ ಪರಿಸರ ಕಲುಷಿತಗೊಂಡಿದ್ದು, ಕಲುಷಿತಗೊಂಡಿರುವುದಕ್ಕೆ ನಾನಾ ಕಾರಣಗಳು ಇವೆ. ಒಂದು ರೀತಿಯಲ್ಲಿ ನಾಗರೀಕತೆಯ […]

ಕೋಲಾರ : ಸರ್ಕಾರಿ ಆಸ್ತಿಗಳೆಂದರೆ ಯಾರು ಬೇಕಾದರೂ ಒತ್ತುವರಿ ಮಾಡಬಹುದು ಮತ್ತು ಯಾರು ಕೇಳುವವರಿಲ್ಲ ಎಂಬ ಭಾವನೆ ಇತ್ತು. ಆದರೆ ಸರ್ಕಾರಿ ಆಸ್ತಿಗಳ ಕಾವಲಿಗೆ ಲ್ಯಾಂಡ್ ಬೀಟ್ ವ್ಯವಸ್ಥೆ ಜಾರಿಗೆ ಬಂದಿದ್ದು ಮುಂದಿನ ದಿನಗಳಲ್ಲಿ ಸರ್ಕಾರಿ ಆಸ್ತಿಗಳ ಒತ್ತುವರಿಗೆ ಅವಕಾಶ ಇಲ್ಲ. ಈ ತಂತ್ರಶದಲ್ಲಿ ಸರ್ಕಾರಿ ಜಮೀನುಗಳ ದಾಖಲೆ ಹಾಗೂ ಜಿಯೋ ಫೆನ್ಸ್ ಮೂಲಕ ನಿಗಾ ವಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷ ಎಚ್ಚರಿಸಿದ್ದಾರೆ. ಸರ್ಕಾರಿ ಆಸ್ತಿಗಳ ಸಂರಕ್ಷಣೆ ಮಾಡಲು ಸರ್ಕಾರ ಹೊಸ ತಂತ್ರಾಂಶವನ್ನು ಅಭಿವೃದ್ದಿಪಡಿಸಿದೆ. ಈ […]

ಕೋಲಾರ,ಜೂ.03: ನನ್ನದೇನಿದ್ದರೂ ಎಲೆಕ್ಷನ್ ರಾಜಕಾರಣವೇ ಹೊರತು ಸೆಲೆಕ್ಷನ್ ರಾಜಕಾರಣ ಅಲ್ಲ ಅಂತ ಪ್ರತಿಪಾದಿಸುತ್ತಿದ್ದವರು. ತನ್ನ ಜೀವನದುದ್ದಕ್ಕೂ ಬೇರೆಯವರಿಗೆ ಅಧಿಕಾರ ಕೊಡಿಸುವಂತಹ ಶಕ್ತಿಯನ್ನು ಶ್ರೀನಿವಾಸಪುರ ಕ್ಷೇತ್ರದ ಜನತೆ ಅವರಿಗೆ ಮೈ ತುಂಬಿಸಿತ್ತು. ಅಂತಹ ಶಕ್ತಿ ಒಂದು ತನಗಾಗಿ ಅಧಿಕಾರ ಕೇಳಲು ಪಕ್ಷದ ರಾಜ್ಯಾಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಮನೆ ಒಳಕ್ಕೆ ಹೋಗುವ ದಯನೀಯ ಸ್ಥಿತಿ ರಮೇಶ್ ಕುಮಾರ್ ಅವರಿಗೆ ಬಂದಿರುವುದೇ ಎಂದು ಮುಖಂಡ ಶೇಷಾಪುರ ಗೋಪಾಲ್ ಕುಟುಕಿದರು.ಕಳೆದ ನಾಲ್ಕೈದು ವರ್ಷಗಳ ಕೋಲಾರ ಅವಿಭಾಜ್ಯ ಜಿಲ್ಲೆಗಳಾದ ಕೋಲಾರ […]

ಶ್ರೀನಿವಾಸಪುರ : ಹಾಲು ಕುಡಿಯುವುದರಿಂದ ಹಾಲು ಮಾನವ ದೇಹಕ್ಕೆ ಒಂದು ರೀತಿಯಲ್ಲಿ ಪೋಷಕಾಂಶಗಳ ಆಗರವಾಗಿದೆ. ಗುಣಮಟ್ಟದ ಪ್ರೋಟಿನ್‍ಗಳ ಮೂಲವಾಗಿದೆ. ಹಾಲು ಮಾನವನ ಮೂಳೆಯ ಆರೋಗ್ಯಕ್ಕೆ ಬೇಕಾದ ಆಹಾರವಾಗಿದೆ ಎಂದು ಕೋಚಿಮುಲ್ ಜಿಲ್ಲಾ ಹಾಲು ಒಕ್ಕೂಟದ ಶ್ರೀನಿವಾಸಪುರ ಶಿಬಿರ ಕಚೇರಿಯ ಉಪ ವ್ಯವಸ್ಥಾಪಕ ಎಂ.ಮುನಿರಾಜು ಹೇಳಿದರು.ಪಟ್ಟಣದ ಕೆಎಂಫ್ ಶಾಖೆಯಿಂದ ಶನಿವಾರ ವಿಶ್ವ ಹಾಲು ದಿನಾಚರಣೆಯನ್ನು ಸರ್ಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಗುಡ್ ಲೈಫ್ ಹಾಲನ್ನು ವಿತರಣೆ ಮಾಡುವುದರ ಮೂಲಕ ಆಚರಣೆ ಮಾಡಲಾಯಿತು.ಆರೋಗ್ಯಕ ಜೀವನ, ಆಹಾರ ಪದ್ದತಿ ಮತ್ತು ಆಹಾರ ಉತ್ಪಾದನೆಯಲ್ಲಿ […]

ಕೋಲಾರ,ಜೂ.01: ಕರ್ನಾಟಕದ ಕೋಲಾರ ಜಿಲ್ಲೆಯು ಫ್ಲೋರೈಡ್ ಪೀಡಿತ ಪ್ರದೇಶವಾಗಿದೆ. ಈ ಪ್ರದೇಶದ ಜನಸಂಖ್ಯೆಯು ಮುಖ್ಯವಾಗಿ ಕುಡಿಯುವ, ಅಡುಗೆ ಮತ್ತು ಇತರ ಅವಶ್ಯಕತೆಗಳಿಗೆ ಹಾಗೂ ಉಪಯುಕ್ತತೆಗಳಿಗಾಗಿ ಅಂತರ್ಜಲವನ್ನು ಅವಲಂಬಿಸಿರುತ್ತಾರೆ. ಕುಡಿಯುವ ನೀರಿನಲ್ಲಿ ಫೆÇ್ಲೀರೈಡ್ ಮಟ್ಟವು 1.5 ಪಿಪಿಎಂಗೂ ಅಧಿಕವಾಗಿ ಮೀರಿ ಇತ್ತೀಚಿನ ವರದಿಗಳ ಪ್ರಕಾರ ಜಿಲ್ಲೆಯ ಅಂತರ್ಜಲದಲ್ಲಿ ಸರಾಸರಿ 3.06 ಪಿಪಿಎಂದಾಖಲಾಗಿದೆ ಹಾಗೂ ,ಇದು ಕುಡಿಯಲು ಯೋಗ್ಯವಲ್ಲ ಎಂದು ಪರಿಗಣಿಸಲಾಗಿದೆ. ಕರ್ನಾಟಕದಲ್ಲಿ ಅತಿಹೆಚ್ಚು ಫೆÇ್ಲೀರೋಸಿಸ್‍ಪ್ರಕರಣಗಳು ದಾಖಲಾಗಿದ್ದು ಕೋಲಾರ ಜಿಲ್ಲೆಯು 2ನೇ ಸ್ಥಾನದಲ್ಲಿದೆ. ಹೆಚ್ಚಿನ ಫ್ಲೋರೈಡ್ ಸೇವನೆಯು ದೀರ್ಘಕಾಲದ ಮೂಳೆಯ, […]

ಶ್ರೀನಿವಾಸಪುರ : ಪಟ್ಟಣದ ಹಾಪ್ ಕಾಮ್ಸ್ ಮುಂಭಾಗ ಬಿಯರ್ ಬಾಟೆಲ್ ಗಳಿಂದ ಹಾಗು ಸಂಚಾರಿ ಸೂಚನಾ ವಸ್ತುಗಳಿಂದ ಕೋಲಾರದ ಗಾಂದಿನಗರ ಹಾಗು ಶ್ರೀನಿವಾಸಪುರ ತಾಲೂಕಿನ ಮೊಗಿಲಹಳ್ಳಿ ಗ್ರಾಮದ ಯುವಕರ ನಡುವೆ ಬಡಿದಾಟದಲ್ಲಿ ಇಬ್ಬರಿಗೆ ಗಾಯಗಳಾಗಿರುವ ಘಟನೆ ಬುಧವಾರ ನಡೆದಿದೆ. ಗಾಯಾಳುಗಳು ಶ್ರೀನಿವಾಸಪುರ ಸರ್ಕಾರಿ ಆಸ್ಪತ್ರೆಗೆ ದಾಖಲುಘಟನೆಯ ಬಗ್ಗೆ ಶ್ರೀನಿವಾಸಪುರ ಪೊಲೀಸರು ಘಟನಾ ಸ್ಥಳಕ್ಕೆ ಬೇಟಿ ನೀಡಿ ಹರೀಶ್ ಮತ್ತು ಮಂಜುನಾಥ ರವರುಗಳನ್ನು ವಶಕ್ಕೆ ಪಡೆದು ಮೊಕದ್ದಮೆ ಸಂಖ್ಯೆ 158/ 2024 ಕಲಂ 160 ಐಸಿಸಿ ರೀತ್ಯಾ ಪ್ರಕರಣ […]

ಕೋಲಾರ:- ಪೊಲೀಸ್ ಸಿಬ್ಬಂದಿಯ ಮಕ್ಕಳ ಶೈಕ್ಷಣಿಕ ಪ್ರಗತಿಗಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲೂ ಕಂಪ್ಯೂಟರ್ ತರಗತಿಗಳನ್ನು ಆರಂಭಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ತಿಳಿಸಿದರು.ನಗರದ ಪೆÇಲೀಸ್ ವಾಣಿಜ್ಯ ಮತ್ತು ಕಂಪ್ಯೂಟರ್ ತರಬೇತಿ ಶಾಲೆಯಲ್ಲಿ ಪೊಲೀಸರ ಮಕ್ಕಳಿಗಾಗಿ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ನಗರದ ಪೆÇಲೀಸ್ ವಾಣಿಜ್ಯ ಮತ್ತು ಕಂಪ್ಯೂಟರ್ ತರಬೇತಿ ಶಾಲೆ ಸರ್ಕಾರಿ ಹುದ್ದೆಗಳನ್ನು ಸೃಷ್ಟಿಸುವ ಕೇಂದ್ರವಾಗಿದೆ ಮತ್ತು ಮುಂದಿನ ದಿನಗಳಲ್ಲಿ ಎಲ್ಲಾ ತಾಲೂಕುಗಳಲ್ಲಿ ಕಂಪ್ಯೂಟರ್ ತರಗತಿಗಳನ್ನು ಪ್ರಾರಂಭಿಸಲಾಗುವ ಮೂಲಕ ಅಲ್ಲಿನ ಪೊಲೀಸರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ನೆರವಾಗುವುದಾಗಿ […]

ಕೆಜಿಎಫ್., ಮೇ.29 : ಕೆಜಿಎಫ್ ಪೊಲೀಸ್ ಜಿಲ್ಲೆಯ ರಾಬರ್ಟ್‍ಸನ್‍ಪೇಟೆ ಪೊಲೀಸ್ ಠಾಣೆಯ ಪೊಲೀಸರು ಗಾಂಜಾ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಿ, ಅವರಿಂದ ಸುಮಾರು ರೂ. 5,00,000/- ಮೌಲ್ಯದ 6 ಕೆಜಿ 340 ಗ್ರಾಂ ಒಣ ಗಾಂಜಾವನ್ನು ಹಾಗೂ ಕೃತ್ಯಕ್ಕೆ ಬಳಸಿದ ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಮೇ.29 ರಂದು ಬೆಳಿಗ್ಗೆ ರಾಬರ್ಟ್‍ಸನ್‍ನ್‍ಪೇಟೆ ಪೊಲೀಸ್ ಠಾಣಾ ಸರಹದ್ದು, ಪಾರಾಂಡಹಳ್ಳಿಯ ಹೊರವಲಯದ ಕ್ಯಾಸಂಬಳ್ಳಿ ರಸ್ತೆಯ ಬದಿಯಲ್ಲಿ ದ್ವಿಚಕ್ರವಾಹನದಲ್ಲಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ, ರಾಬರ್ಟ್‍ಸನ್‍ಪೇಟೆ ಪೊಲೀಸ್ […]