ಶ್ರೀನಿವಾಸಪುರ, ಮೇ.13: ಮುಂಗಾರು ಮಳೆಗೆ ನಷ್ಟವಾಗಿರುವ ಮಾವು ಬೆಳೆ ವೀಕ್ಷಣೆ ಮಾಡಲು ವಿಶೇಷ ತಂಡ ರಚನೆ ಮಾಡಿ ಮಾವು ಮಾರುಕಟ್ಟೆಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಕಮೀಷನ್ ಹಾವಳಿ ತಡೆಗಟ್ಟಲು ಆಗ್ರಹಿಸಿ ಮೇ.20 ರ ಸೋಮವಾರ ಕೃಷಿ ಉತ್ಪನ್ನ ಮಾರುಕಟ್ಟೆ ಮುತ್ತಿಗೆ ಹಾಕಲು ತೋಟಗಾರಿಕಾ ಕಚೇರಿ ಆವರಣದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.ರೈತರು ಬೆವರು ಸುರಿಸಿ ಖಾಸಗಿ ಸಾಲ ಮಾಡಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿ ಜೋಪಾನ ಮಾಡಿ ಕಾಪಾಡಿಕೊಂಡು ಬಂದಿದ್ದ ಮಾವಿನ ಪಸಲು ಒಂದೇ ರಾತ್ರಿಗೆ […]
ಶ್ರೀನಿವಾಸಪುರ: ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ಭಾನುವಾರ ಶಂಕರ ಜಯಂತಿ ಅಂಗವಾಗಿ ಶಂಕರಾಚಾರ್ಯರ ಭಾವ ಚಿತ್ರಕ್ಕೆ ಸುಮದಾಯದ ಮುಖಂಡರು ಪುಷ್ಪನಮನ ಸಲ್ಲಿಸಿದರು.ತಹಶೀಲ್ದಾರ್ ಕಛೇರಿ ಸಿಬ್ಬಂದಿ ಅಭಿಷೇಕ್, ಆರ್‍ಐ ಗುರುರಾಜರಾವ್, ಶಂಕರಮಠದ ವ್ಯವಸ್ಥಾಪಕ ಶ್ರೀನಿವಾಸ್,ಸಮುದಾಯದ ಮುಖಂಡರಾದ ಗೋಪಿನಾಥ್‍ರಾವ್, ಸುಬ್ರಮಣ್ಯಂ, ಶಂಕರಮಠದ ಅರ್ಚಕ ಸುಬ್ರಮಣ್ಯ ಸ್ವಾಮಿ ಇದ್ದರು.
ಶ್ರೀನಿವಾಸಪುರ : ಪಟ್ಟಣದ ಶಂಕರಮಠದಲ್ಲಿ ಶುಕ್ರವಾರ ರಾತ್ರಿ ಶಂಕರ ಜಯಂತಿ ಅಂಗವಾಗಿ ಸೌಂದರ್ಯ ಲಹರಿ, ಉಪನ್ಯಾಸಗಳು, ಹಾಗೂ ಮಂಟಪೋತ್ಸವವು ಭಜನೆ , ಕೋಲಾಟ ಹಾಗೂ ಮಂತ್ರ ಪಠಣಗಳೊಂದಿಗೆ ಅದ್ದೂರಿಯಾಗಿ ನಡೆಯಿತು.ಕಾರ್ಯಕ್ರಮದಲ್ಲಿ ಶಂಕರಮಠದ ವ್ಯವಸ್ಥಾಪಕ ಶ್ರೀನಿವಾಸ್ ತಾಲೂಕು ಸತ್ಸಂಗದ ಅಧ್ಯಕ್ಷ ಸತ್ಯಮೂರ್ತಿ, ಸದಸ್ಯೆ ಮಂಗಳಸತ್ಯಮೂರ್ತಿ , ಶಂಕರ ಮಠದ ಸದಸ್ಯರಾದ ಮಂಜುನಾಥ್ , ಶ್ರೀನಿವಾಸಮೂರ್ತಿ, ದೇವಸ್ಥಾನದ ಅರ್ಚಕ ಸುಬ್ರಮಣ್ಯಸ್ವಾಮಿ, ನಾಗೇಂದ್ರ ಇದ್ದರು.
ಶ್ರೀನಿವಾಸಪುರ , ಪೋಟೋ : ಪಟ್ಟಣದ ಕಟ್ಟೆ ಕೆಳಗಿನ ಪಾಳ್ಯದ ನಿವಾಸಿ ಮಹಿಳೆಯಬ್ಬರಿಗೆ ಬಾಯಿ ಕ್ಯಾನ್ಸರ್ ನಿಂದ ಬಳುತ್ತಿದ್ದ ಹಿನ್ನೆಲೆಯಲ್ಲಿ ಯಾದವ ಸಮಾಜದ ಮುಖಂಡ ಎಂ.ಎಸ್.ಕೃಷ್ಣಪ್ಪ , ಉದ್ಯಮಿ ಬಾಸ್ಕರ್, ಲಾಯರ್, ರಾಧಕೃಷ್ಣರವರು ಮುಂದಿನ ಚಿಕಿತ್ಸೆಗೆ ಆರ್ಥಿಕ ನೆರವನ್ನು ನೀಡಿ, ಈ ಮಹಿಳೆಯ ಮಗಳ ವಿದ್ಯಾಭ್ಯಾಸಕ್ಕೂ ಸಹಾಯ ಹಸ್ತವನ್ನು ನೀಡುವುದಾಗಿ ದಾನಿಗಳು ತಿಳಿಸಿದರು.
ಶ್ರೀನಿವಾಸಪುರ : ಬಸವಣ್ಣ ಅವರು ಶೈವ ಧರ್ಮದ ಭಕ್ತಿ ಚಳುವಳಿಯಲ್ಲಿ ಪ್ರಸಿದ್ದ ಸಂತರಾಗಿದ್ದರು. ಇವರು ರಾಜನೀತಿಜ್ಞರಾಗಿ ಮತ್ತು ಸಮಾಜ ಸುಧಾರಕರಾಗಿ ತಮ್ಮ ಕಾವ್ಯ ಮತ್ತು ಬರವಣಿಗೆಯ ಮೂಲಕ ಸಾರ್ವಜನಿಕರಲ್ಲಿ ಸಾಮಾಜಿಕ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಅವಿರತವಾಗಿ ಶ್ರಮಿಸಿದರು ಎಂದು ಹೇಳಿ ಬಸವಣ್ಣನವರ ತತ್ವಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಲು ಎಂದು ತಹಶೀಲ್ದಾರ್ ಜಿ.ಎನ್.ಸುದೀಂದ್ರ ಸಲಹೆ ನೀಡಿದರು.ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ಶುಕ್ರವಾರ ಬಸವ ಜಯಂತಿ ಅಂಗವಾಗಿ ಬಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.ಆರ್‍ಐ ಮುನಿರೆಡ್ಡಿ, ಸಮುದಾಯ ಮುಖಂಡ ವೀರಭದ್ರಸ್ವಾಮಿ, ತಹಸೀಲ್ದಾರ್ […]
ಶ್ರೀನಿವಾಸಪುರ : ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಪಡೆದಿರುವ ಸರ್ಕಾರಿ ಬಾಲಕೀಯರ ಶಾಲೆಯ ವಿದ್ಯಾರ್ಥಿ ಕೆ ಎಂ ಮೇದಾ 625 ಅಂಕಗಳಿಗೆ 621 ಅಂಕ ಪಡೆದಿರುವ ವಿದ್ಯಾರ್ಥಿ ಮನೆಗೆ ಹಿರಿಯೂರು ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಭೇಟಿ ನೀಡಿ ವಿದ್ಯಾರ್ಥಿಗೆ ಸನ್ಮಾನಿಸಿ ಗೌರವಿಸಿ ಶುಭ ಆರೈಸಿದರು. ಶ್ರೀನಿವಾಸಪುರ ಪಟ್ಟಣಕ್ಕೆ ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದು ಕಾಂಗ್ರೇಸ್ ಅಭ್ಯರ್ಥಿ ಡಿ ಟಿ ಶ್ರೀನಿವಾಸ್ ರವರ ಪರವಾಗಿ ಶ್ರೀನಿವಾಸ್ ರವರ ಧರ್ಮಪತ್ನಿ […]
ಶ್ರೀನಿವಾಸಪುರ : ಹೊನ್ನೇರಿನ ವಿಶೇಷತೆ ಎಂದರೆ ಸೂರ್ಯೋದಯಕ್ಕೆ ಮುನ್ನ ರೈತರು ತಮ್ಮ ಎತ್ತುಗಾಡಿ ಹಾಗು ಕೃಷಿ ಪರಿಕರಗಳನ್ನು ನೀರಿನಿಂದ ತೊಳೆದು ಸ್ವಚ್ಚಗೊಳಿಸುತ್ತಾರೆ. ಬಳಿಕ ಎತ್ತುಗಳಿಗೆ ಪೂಜೆ ಸಲ್ಲಿಸುತ್ತಾರೆ.ಬಳಿಕ ನೊಗ ಹೂಡಿದ ಎತ್ತುಗಳು ಮಂಗಳ ವಾದ್ಯಗಳೊದಿಗೆ ಮೆರವಣಿಗೆ ನಡೆಸಲಾಗುತ್ತದೆ.ಸಾಂಕೇತಿಕವಾಗಿ ಉಳುಮೆ ಮಾಡಿ ಕೃಷಿ ಚಟುವಟಿಕೆ ಆರಂಭಕ್ಕೆ ಮುನ್ನಡಿ ಬರೆಯುತ್ತಾರೆ.ಶ್ರೀನಿವಾಸಪುರ ತಾಲೂಕಿನ ಗಾಂಡ್ಲಹಳ್ಳಿ ಗ್ರಾಮದಲ್ಲಿ ಬುಧವಾರ ಭರಣಿ ಮಳೆ ಬಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಹೊಸ ವರ್ಷದ ಕೃಷಿ ಚಟುವಟಿಕೆಯ ಮೊದಲ ಹೆಜ್ಜೆ ಎಂದೇ ಬಾವಿಸಿ ಹೊನ್ನೇರು ಕಟ್ಟುವ ಸಂಪ್ರದಾಯ ಇಂದಿಗೂ […]
ಶ್ರೀನಿವಾಸಪುರ : ತಾಲೂಕಿನ ಚಿಂತಾಮಣಿ ರಸ್ತೆಯ ಕಲ್ಲೂರು ಗ್ರಾಮದ ಸಮೀಪ ಶುಕ್ರವಾರ ಸಂಜೆ ತಿರುಮಲದಿಂದ ಚಿಕ್ಕಬಳ್ಳಾಪುರ ಹೋಗುತ್ತಿದ್ದ ಕಾರಿಗೆ ಆಕಸ್ಮಿಕವಾಗಿ ಜಿಂಕೆ ಡಿಕ್ಕಿ ಹೊಡೆದ ಪರಿಣಾಮ ಜಿಂಕೆ ಸ್ಥಳದಲ್ಲೆ ಮೃತ ಪಟ್ಟಿದೆ.ಜಿಂಕೆಯು ರಸ್ತೆ ದಾಟುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಅರಣ್ಯ ಅಧಿಕಾರಿ ಅನಿಲ್‍ಕುಮಾರ್ ಸ್ಥಳಕ್ಕೆ ಬೇಟಿ ನೀಡಿ ಸ್ಥಳ ಪರಿಶೀಲಿಸಿ, ಕಾರು ಚಾಲಕನನ್ನು ವಿಚಾರಣೆಯ ಸಂಬಂದ ಶ್ರೀನಿವಾಸಪುರ ಅರಣ್ಯ ಇಲಾಖಾ ಕಚೇರಿಗೆ ಕರೆದ್ಯೂಲಾಯಿತು.
ಶ್ರೀನಿವಾಸಪುರ: ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಶೇ.90 ರಷ್ಟು ಫಲಿತಾಂಶ ದೊರೆತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮುನಿಲಕ್ಷ್ಮಯ್ಯ ತಿಳಿಸಿದ್ದಾರೆ.1253 ಗಂಡು, 1214 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 2467 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಆ ಪೈಕಿ 1103 ಗಂಡು, 1117 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 2220 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಶೇ.88ರಷ್ಟು ವಿದ್ಯಾರ್ಥಿಗಳು ಹಾಗೂ ಶೇ.92 ರಷ್ಟು ವಿದ್ಯಾರ್ಥಿನಿಯರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ತಾಲ್ಲೂಕಿಗೆ ಶೇ.90 ರಷ್ಟು ಫಲಿತಾಂಶ ಲಭ್ಯವಾಗಿದೆ ಎಂದು ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.ಶ್ರೀನಿವಾಸಪುರದ ಸರ್ಕಾರಿ ಬಾಲಕಿಯರ ಪದವಿ […]