
ಕೋಲಾರ: ಜಾಗತಿಕ ತಾಪಮಾನದ ಬಗ್ಗೆ ಎಚ್ಚೆತ್ತುಕೊಂಡು ಜಿಲ್ಲೆಯನ್ನು ಹಸಿರು ಹೊದಿಕೆಯಂತಾಗಿಸಲು ಸಾರ್ವಜನಿಕರು ಸಹಕಾರಿಸಬೇಕಾಗಿದೆ. ಪರಿಸರದ ರಕ್ಷಣೆ ಮಾಡಿದಾಗ ಮಾಡಿದಾಗ ಮಾತ್ರ ಮನುಕುಲ ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯ ಎಂದು ಕೋಲಾರ ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷಾ ರವರು ಅಭಿಪ್ರಾಯಪಟ್ಟಿದ್ದಾರೆ.ಕೋಲಾರ ಜಿಲ್ಲಾಧಿಕಾರಿಗಳ ಕಚೇರಿಗಳ ಆವರಣದಲ್ಲಿ ಕದಂಬ ಸೇವಾ ಫೌಂಡೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರತೀ ದಿನ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಕದಂಬ ಸೇವಾ ಫೌಂಡೇಷನ್ ವತಿಯಿಂದ ಪ್ರತೀ ದಿನ ಕನಿಷ್ಠ ಒಂದು ಗಿಡ ನೆಡುವ ಸಂಕಲ್ಪದೊಂದಿಗೆ ದಿನಕ್ಕೊಂದು ಗಿಡ ನೆಡುವ […]

ಶ್ರೀನಿವಾಸಪುರ : ಪ್ರಪಂಚದಲ್ಲಿಯೇ ಮಾವಿಗೆ ವಿಶ್ವ ಪ್ರಸಿದ್ದಿಯಾಗಿದೆ ಶ್ರೀನಿವಾಸಪುರ ಎಪಿಎಂಸಿ ಮಾರುಕಟ್ಟೆ ಆದರೆ ಮೂಲಭೂತ ಸೌಲಭ್ಯಗಳು ಕೊರತೆ ಎದ್ದು ಕಾಣುತ್ತದೆ.ಪಟ್ಟಣದ ಎಪಿಎಂಸಿ ಪ್ರಾಂಗಣದಲ್ಲಿ ಮಾವು ವಹಿವಾಟ ಪ್ರಾರಂಭವಾಗಿ ಎರಡು ತಿಂಗಳು ಕಳೆಯುತ್ತಿದೆ ಎಪಿಎಂಸಿಯಲ್ಲಿ ಮಾತ್ರ ಮೂಲಭೂತ ಸೌಲಭ್ಯಗಳು ಇಲ್ಲದೆ ಕೂಲಿ ಕಾರ್ಮಿಕರು ಬಯಲಿನಲ್ಲಿಯೇ ಶೌಚಾಲಯವನ್ನು ಅವಲಂಬಿಸಿದ್ದಾರೆ. ಕನಿಷ್ಟ ನೀರು ಸಹ ಸಿಗುತ್ತಿಲ್ಲ. ಎಲ್ಲಂದರಲ್ಲಿ ಕಸಕಡ್ಡಿ ಚರಂಡಿ ತುಂಬಿ ಗೊಬ್ಬನಾರುತ್ತದೆ. ಸಾಂಕ್ರಾಮಿಕ ರೋಗಗಳು ಹರಡುವ ಬೀತಿಯನ್ನು ಉಂಟು ಮಾಡಿದೆ. ಒಂದೇ ಸ್ಥಳದಲ್ಲಿ ಬಟ್ಟೆ ಒಗೆಯುವುದು ಸ್ನಾನ ಮಾಡುವುದು ನೀರು […]

ಕೋಲಾರ: ನಗರದ ಪತ್ರಕರ್ತರ ಭವನದಲ್ಲಿ ಭಾನುವಾರ ಸ್ವರ್ಣಭೂಮಿ ಫೌಂಡೇಷನ್ ಹಮ್ಮಿಕೊಂಡಿದ್ದ ವಚನ ವೈಭವ 3ನೇ ವರ್ಷದ ಕಾರ್ಯಕ್ರಮದಲ್ಲಿ ಸರ್ಕಾರಿ ಶಾಲೆ ಕನ್ನಡ ಮಾದ್ಯಮದಲ್ಲಿ ಓದಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ ವಿಕಲಚೇತನ ಪ್ರತಿಭಾವಂತ ವಿದ್ಯಾರ್ಥಿ ಕೆ.ಸಿ. ಚರಣ್ ರವರನ್ನು ನಾಗಲಾಪುರ ವೀರ ಸಿಂಹಾಸನ ಸಂಸ್ಥಾನ ಮಠದ ಶ್ರೀ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ ರವರು ಸನ್ಮಾನಿಸಿದರು.ಪ್ರತಿಭಾವಂತ ವಿದ್ಯಾರ್ಥಿ ಕೆ.ಸಿ.ಚರಣ್‍ಗೆ ಸಮಾಜ ಸೇವಕರಾದ ಪರ್ವತ್ ಸ್ಪೋರ್ಟ್ಸ್‍ನ ಎಂ.ಆನಂದರೆಡ್ಡಿರವರು 5001 ಹಾಗೂ ಗಮನ ಶಾಂತಮ್ಮನವರು 2001 ರೂ ಪ್ರೋತ್ಸಾಹ ಧನವನ್ನು ನೀಡಿದರು.ಈ […]

ಕೋಲಾರ : ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯ ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ವಿಮೆಗೆ ಹೆಸರು ನೋಂದಾಯಿಸುವ ಮೂಲಕ ರೈತರು ತಮ್ಮ ಬೆಳೆಗಳಿಗೆ ಬೆಳೆವಿಮೆ ಮಾಡಿಸಿಕೊಳ್ಳಬೇಕೆಂದು ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಅವರು ತಿಳಿಸಿದರು. ಇಂದು ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಆಯೋಜಿಸಲಾಗಿದ್ದ, ಜಿಲ್ಲಾ ಮಟ್ಟದ ಬೆಳೆ ವಿಮೆ ಜಂಟಿ ಸಮಿತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಪ್ರಸಕ್ತ ಸಾಲಿನ ಮುಂಗಾರು ಬೆಳೆಗಳ ವಿಮೆ ಮಾಡಿಸಲು ಬ್ಯಾಂಕ್, ಸಹಕಾರ ಸಂಘಗಳಲ್ಲಿ ಬೆಳೆ ಸಾಲ […]

ಕೋಲಾರ: ದಕ್ಷ ಪೋಲೀಸ್ ಐಪಿಎಸ್ ಅಧಿಕಾರಿ ಡಿಸಿಪಿ ಡಿ.ದೇವರಾಜ್‍ರವರ ಹುಟ್ಟುಹಬ್ಬವನ್ನು ನಗರದ ರೈಲ್ವೆ ನಿಲ್ದಾಣದ ಬಳಿ ಇರುವ ಧರ್ಮರಾಯನಗರದ ಉದ್ಯಾನವನದಲ್ಲಿ ಡಿ.ದೇವರಾಜ್‍ಅಭಿಮಾನಿಗಳು, ಕನ್ನಡ ಸೇನೆ ಜಿಲ್ಲಾ ಘಟಕ ಹಾಗೂ ಸ್ಕೌಟ್ ಮತ್ತು ಗೈಡ್ಸ್ ವತಿಯಿಂದ ಹಣ್ಣಿನ ಗಿಡಗಳನ್ನು ನೆಡುವುದರ ಮೂಲಕ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಕನ್ನಡ ಸೇನೆ ಜಿಲ್ಲಾಧ್ಯಕ್ಷ ಕನ್ನಡಮಿತ್ರ ವೆಂಕಟಪ್ಪ ಮಾತನಾಡಿ, ನಮ್ಮ ಕೋಲಾರದ ದಕ್ಷ ಹಾಗೂ ಪ್ರಾಮಾಣಿಕ ಪೋಲೀಸ್ ಅಧಿಕಾರಿಯಾದ ಡಿಸಿಪಿ ಡಿ.ದೇವರಾಜ್ ರವರು ಕೋಲಾರದಲ್ಲಿ ಎಸ್ಪಿಯಾಗಿ ಉತ್ತಮ ಸೇವೆ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಅವರು […]

ಶ್ರೀನಿವಾಸಪುರ : ಸಾಧಕರ ಪುಸ್ತಕಕ್ಕೆ ಶಿಕ್ಷಕಿ ಮಮತ ರಾಣಿ ಕೆ ಆಯ್ಕೆ. ನಾಡು ನುಡಿಗಾಗಿ ಕನ್ನಡ ಕಟ್ಟುವ ಕೆಲಸ ಸಾಹಿತ್ಯದ ಮೂಲಕ ವಿಶೇಷ ಸಾಧನೆ ಮಾಡುತ್ತಿರುವ ಸಾಧಕರ ಪುಸ್ತಕಕ್ಕೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಸಹ ಶಿಕ್ಷಕರೂ,ಕವಯಿತ್ರಿಯಾದ ಶ್ರೀಮತಿ ಮಮತ ರಾಣಿ ಕೆ .ಶ್ರೀ ಮುತ್ತು ವಡ್ಡರ ಸಂಪಾದಕೀಯ ಸಾಧಕರ ಸಾಧನೆಯ ಪರಿಚಯದ ಎಲೆಮರೆ ಕಾಯಿ ಪುಸ್ತಕಕ್ಕೆ ಆಯ್ಕೆಗೊಂಡಿದ್ಧು , ಲಯನ್ಸ ಕ್ಲಬ್ ಆಪ್ ಮೈಸೂರು ಮಿಲೇನಿಯಂ ಮತ್ತು ಕನ್ನಡ ನುಡಿ ಮುತ್ತು ಸಾಹಿತ್ಯ ವೇದಿಕೆ ಕರ್ನಾಟಕ,ನಿಸರ್ಗ […]

ಶ್ರೀನಿವಾಸಪುರ, ಜೂ.9: ಮುಂಗಾರು ಮಳೆ ಆರ್ಭಟಕ್ಕೆ ನಾಪತ್ತೆ ಆಗಿರುವ ಪುರಸಭೆ ಅಧಿಕಾರಿಗಳನ್ನು ಹುಡುಕಿಕೊಟ್ಟು ಒತ್ತುವರಿ ಆಗಿರುವ ರಾಜಕಾಲುವೆ ಚರಂಡಿ ತೆರೆವುಗೊಳಿಸಿ ಜನಸಾಮಾನ್ಯರ ಬದುಕು ಆರೋಗ್ಯವನ್ನು ರಕ್ಷಣೆ ಮಾಡಬೇಕೆಂದು ಜೂ.13 ರ ಗುರುವಾರ ಕಸದ ಸಮೇತ ಪುರಸಬೆ ಮುತ್ತಿಗೆ ಹಾಕಲು ತಾಲ್ಲೂಕು ಕಚೇರಿ ಅವರಣದಲ್ಲಿ ಕರೆದಿದ್ದ ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.ಪ್ರತಿ ವರ್ಷ ಮುಂಗಾರು ಮಳೆ ಆರ್ಭಟಕ್ಕೆ ನಗರಾದ್ಯಂತ ಜನ ಸಾಮಾನ್ಯರ ಬದುಕು ಆರೋಗ್ಯ ಹದಗೆಟ್ಟಾಗ ತಾಲ್ಲೂಕಾಡಳಿತ ಹಾಗೂ ಪುರಸಭೆ ಅಧಿಕಾರಿಗಳಿಗೆ ಅವ್ಯವಸ್ಥೆಯ ಸಮಸ್ಯೆ ನೆನಪಿಗೆ ಬರುತ್ತದೆ. ನೆಪಮಾತ್ರಕ್ಕೆ […]

ತೋಟಗಾರಿಕೆ ಮಹಾವಿದ್ಯಾಲಯ,ಕೋಲಾರಆವರಣದಲ್ಲಿ ದಿನಾಂಕ 25.05.2024 ರಿಂದ04.06.2024 ರವರೆಗೆ 15ದಿನಗಳ ಇಂಟರಶಿಪ್ ಕಾರ್ಯಾಕ್ರಮವನ್ನು ಮಹಿಳಾ ಸರ್ಕಾರಿ ಕಾಲೇಜ್ ಕೋಲಾರದಅಂತಿಮ ವರ್ಷದ 20 ವಿದ್ಯಾರ್ಥಿನಿಯರಿಗೆ ಕೈಗೊಳ್ಳಲಾಯಿತು. ದಿನಾಂಕ 20.05.2024ರಂದುತೋಟಗಾರಿಕೆ ಮಹಾವಿದ್ಯಾಲಯದ ಡೀನ್‍ರವರಾದ ಡಾ.ವೆಂಕಟೇಶಲುರವರು ಇಂಟರಶಿಪ್ ಕಾರ್ಯಕ್ರಮದ ಉದ್ಘಾಟನೆ ನೇರವೇರಿಸಿದರು. ಈ ಕಾರ್ಯಕ್ರಮಕ್ಕೆ ಶ್ರೀಮತಿ. ಪದ್ಮಾ, ಮುಖ್ಯಸ್ಥರು ಸಸ್ಯಶಾಸ್ರ್ತ ವಿಭಾಗ, ಶ್ರೀಮತಿ.ಶೋಭಾ ಹಾಗೂ ಶ್ರೀಮತಿ.ಲಾವಣ್ಯ ಪ್ರಾಧ್ಯಾಪಕರು, ಮಹಿಳಾ ಸರ್ಕಾರಿಕಾಲೇಜ್,ಕೋಲಾರರವರು ಅತಿಥಿಗಳಾಗಿ ಭಾಗವಹಿಸಿದ್ದರು.ಇಂಟರ್‍ಶಿಪ್ ತರಬೇತಿಯಲ್ಲಿ ತೋ.ಮ.ವಿ,ಕೋಲಾರದ ವಿವಿಧ ಪ್ರಾಧ್ಯಾಪಕರುತೋಟಗಾರಿಕೆ ವಿಜ್ಞಾನಕ್ಕೆಸಂಬಂಧಿಸಿದ ವಿಷಯಗಳ ಕುರಿತು ಭೋದನೆಹಾಗೂ ಪ್ರಾಯೋಗಿಕ ತರಬೇತಿಗಳನ್ನು ಕೈಗೊಂಡರು. ಮುಖ್ಯವಾಗಿ ವಿವಿಧತೋಟಗಾರಿಕೆ ಬೆಳೆಗಳ […]

ಕೋಲಾರ,ಜೂ.07: ಗ್ರಾಮ ಪಂಚಾಯತಿ ಅಧಿಕಾರಿಗಳು ಪ್ರಾಮಾಣಿಕ ಸೇವೆಗೆ ಆದ್ಯತೆ ನೀಡುವ ಮೂಲಕ ಸರ್ಕಾರದ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸುವ ಕಾರ್ಯ ಮಾಡಿದಾಗ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ ಎಂದು ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಥ್ ಅಭಿಪ್ರಾಯಪಟ್ಟರು.ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯಿತಿ, ಅಸರ, ಗ್ರಾಮವಿಕಾಸ ಯೋಜನೆಯಡಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಅಭಿವೃದ್ದಿ ಅಧಿಕಾರಿಗಳಿಗೆ ಹವಾಮಾನ ಬದಲಾವಣೆ ಹಾಗೂ ಹವಾಮಾನ ಕ್ರಿಯೆಯಲ್ಲಿ ಗ್ರಾಮ ಪಂಚಾಯಿತಿಗಳ ಪಾತ್ರದ ಕುರಿತು ಹಮ್ಮಿಕೊಂಡಿದ್ದ ಸಮಾಲೋಚನಾ […]