
ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ತಾಲ್ಲೂಕಿನ ದಿಂಬಾಲ ಗ್ರಾಮದ ಸಮೀಪ, ರೋಣೂರು ಕೆರೆ ಅಂಗಳದಲ್ಲಿನ ಜೂಜುಕಟ್ಟೆಯೊಂದರ ಮೇಲೆ ಸೋಮವಾರ ದಾಳಿ ನಡೆಸಿ ಜೂಜಾಡುತ್ತಿದ್ದ 6 ಮಂದಿಯನ್ನು ಬಂಧಿಸಿ, ಬಂಧಿತರಿಂದ ಪಣಕ್ಕೆ ಇಟ್ಟಿದ್ದ ರೂ.5700ಹಾಗೂ 6 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಾರಾಯಣಪ್ಪ, ಸಿಬಂದಿ ವೇಣುಗೋಪಾಲ್, ಆಂಜನಪ್ಪ, ರೆಡ್ಡಪ್ಪ, ಗಂಗಾಧರ್, ರವಿ ದಾಳಿಯಲ್ಲಿ ಭಾಗವಹಿಸಿದ್ದರು.

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ವಿಕಲಚೇತನರ ಪುನರ್ವಸತಿ ಕಾರ್ಯಕರ್ತರು ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ವಿಕಲ ಚೇತನರ ಕ್ಷೇಮಾಭಿವೃದ್ಧಿಗೆ ಶ್ರಮಿಸಬೇಕು ಎಂದು ಜಿಲ್ಲಾ ವಿಕಲ ಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆಯ ಜಿಲ್ಲಾಧಿಕಾರಿ ಬಿ.ಎಂ.ಮುನಿರಾಜು ಹೇಳಿದರು. ಪಟ್ಟಣದಲ್ಲಿ ಸೊಮವಾರ ಏರ್ಪಡಿಸಿದ್ದ ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿ, ಅಂಗವಿಲತೆ ಶಾಪವಲ್ಲ. ಅದೊಂದು ಸಾಮಾನ್ಯ ಅಂಗ ವೈಕಲ್ಯ ಮಾತ್ರ. ಅಂಗವಿಕಲರು ಕೀಳರಿಮೆ ತಳೆಯದಂತೆ ನೋಡಿಕೊಳ್ಳಬೇಕು. ಅವರಲ್ಲಿನ ವಿಶೇಷವಾದ ಕೌಶಲ್ಯಗಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು […]

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ: ವ್ಯಕ್ತಿ ಹಾಗೂ ದೇಶದ ಅಭಿವೃದ್ಧಿಯಲ್ಲಿ ಎಲ್ಐಸಿ ಪಾತ್ರ ಹಿರಿದು. ಸಂಸ್ಥೆಯ ಪ್ರತಿನಿಧಿಗಳು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚು ಪಾಲಸಿ ಪಡೆಯುವುದರ ಮೂಲಕ, ಅವರ ಭವಿಷ್ಯಕ್ಕೆ ಆಧಾರ ಕಲ್ಪಿಸಬೇಕು ಎಂದು ಎಲ್ಐಸಿ ಶಾಖಾ ವ್ಯವಸ್ಥಾಪಕ ಸತೀಶ್ ಹೇಳಿದರು. ಪಟ್ಟಣದ ಎಲ್ಐಸಿ ಕಚೇರಿ ಸಭಾಂಗಣದಲ್ಲಿ ಶನಿವಾರ ಏರ್ಪಡಿಸದ್ದ ಎಲ್ಐಸಿ ಪ್ರತಿನಿಧಿಗಳು ಹಾಗೂ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಇತ್ತಿಚಿನ ದಿನಗಳಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟ 500 ಮಂದಿಗೆ ಪರಿಹಾರ ನೀಡಲಾಗಿದೆ. ಜನರಲ್ಲಿ ಭವಿಷ್ಯಕ್ಕಾಗಿ ಉಳಿತಾಯ […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ, ಕೋವಿಡ್-19 ಹಿನ್ನಲೆಯಲ್ಲಿ ಈ ಭಾರಿ ಸಾಮಾಜಿಕ ಅಂತರ ಹಾಗೂ ಮಾಸ್ಕ್ನ್ನು ಧರಿಸಿ ಸ್ವಾತಂತ್ರ ದಿನಾಚರಣೆಯನ್ನು ಸರಳವಾಗಿ ಆಚರಿಸಲಾಗುವುದು ಎಂದು ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ತಿಳಿಸಿದರು.ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ 74 ನೇ ವರ್ಷದ ಸ್ವಾತಂತ್ರನೇ ದಿನಾಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಎಸ್.ಎಂ.ಶ್ರೀನಿವಾಸ್ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ನ್ನು ಹಾಕಿಕೊಂಡು ಬರಬೇಕು ಜೊತೆಗೆ ತಮ್ಮ ಕಛೇರಿಗಳಲ್ಲಿಯೇ ಧ್ವಜಾರೋಹಣವನ್ನು ನೆರವೇರಿಸಿ ಬೆಳಗ್ಗೆ 9 ಗಂಟೆಗೆ ತಾಲ್ಲೂಕು ತಹಶೀಲ್ದಾರ್ ಕಛೇರಿಗೆ ಆಗಮಿಸಬೇಕು ತದನಂತರ ಸರ್ಕಾರಿ ಬಾಲಕಿಯರ […]

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ: ಹಾಲು ಉತ್ಪಾದಕರ ಸಂಹಕಾರ ಸಂಘಗಳಿಗೂ ನೂತನ ಕಟ್ಟಡ ನಿರ್ಮಿಸಿಕೊಳ್ಳಲು ಅಗತ್ಯವಾದ ಆರ್ಥಿಕ ನೆರವು ನೀಡಲಾಗುವುದು ಎಂದು ಕೋಚಿಮುಲ್ ನಿರ್ದೇಶಕ ಎನ್.ಹನುಮೇಶ್ ಹೇಳಿದರು. ತಾಲ್ಲೂಕಿನ ಚಿಂತಮಾಕನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿ, ತಾಲ್ಲೂಕಿನಲ್ಲಿ 109 ಹಾಲು ಉತ್ಪಾದಕರ ಸಹಕಕಾರ ಸಂಘಗಳು ಸ್ವಂತ ಕಟ್ಟಡ ಹೊಂದಿವೆ. ತಾಲ್ಲೂಕಿನ 163 ಹಾಲು ಉತ್ಪಾದಕರ ಸಹಕಾರ ಸಂಘಗಳು ಸ್ವಂತ ಕಟ್ಟಡ ಹೊಂದಲು ಅಗತ್ಯವಾದ ಯೋಜನೆ ರೂಪಿಸಲಾಗಿದೆ ಎಂದು […]

ರಾಯಲ್ಪಾಡು : ಖಾಸಗಿ ಶಾಲೆಗಳಿಗಿಂತ ಸರ್ಕಾರಿ ಶಾಲೆಗಳು ಉತ್ತಮ ಮೌಲ್ಯಗಳ ಜೊತೆಗೆ ಉತ್ತಮ ಶಿಕ್ಷಣ ನೀಡುತ್ತಿದೆ ಎಂದು ಶಾಸಕ ಕೆ.ಆರ್.ರಮೇಶ್ಕುಮಾರ್ ಹೇಳಿದರು.ರಾಯಲ್ಪಾಡಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ನೂತನ ಕಟ್ಟಡ ಕಾಮಗಾರಿ ನಿರ್ಮಾಣಕ್ಕೆ ಶುಕ್ರವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ಈಗಿರುವ ಶೌಚಾಲಯ ಜತೆಗೆ ಶಾಲಾಕಾಲೇಜು ಸಿಬ್ಬಂದಿಗಳಿಗೆ, ಹೆಣ್ಣು ಮಕ್ಕಳ ಶೌಚಾಲಯಗಳಿಗೆ 24ಲಕ್ಷ ರೂ ಅನುದಾನ ಬಿಡುಗಡೆ ಮಾಡಿಸುವುದಾಗಿ ಹಾಗೂ ಶಾಲಾ ಕಾಲೇಜಿಗೆ ಬೇಕಾದ ಮೂಲಭೂತ ಸೌಲಭ್ಯಗಳನ್ನೆಲ್ಲಾ ಈಡೇರಿಸುವುದಾಗಿ ಭರವಸೆ ನೀಡಿದರು.ಗುತ್ತಿಗೆದಾರರು ಸರ್ಕಾರದಿಂದ ಬಿಡುಗಡೆಯಾಗುವ ಯಾವುದೇ ಕಾಮಗಾರಿಯನ್ನಾಗಲಿ ಮನಬಂದತೆ […]

ವರದಿ : ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ನಮ್ಮ ದೇಶವನ್ನು ಕಾಪಾಡಲಿಕ್ಕೆ ಸೈನಿಕರು ಯಾವ ರೀತಿ ಹೋರಾಟ ಮಾಡುತ್ತಿದ್ದಾರೋ ಆ ರೀತಿಯಲ್ಲಿ ಇವತ್ತು ಕರೋನ ವಿರುದ್ದ ಗೆಲ್ಲಲೇಬೇಕೆಂಬ ಪರಿಸ್ಥಿತಿಯಲ್ಲಿ ನೀವೆಲ್ಲರೂ ಹೋರಾಟದಲ್ಲಿ ಕಾರ್ಯ ನಿರ್ವಹಿಸುತ್ತಿದ್ದೀರಿ ಎಂದು ಮಾವು ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಶ್ರೀನಿವಾಸಪುರ ರೋಟರಿ ಸಂಸ್ಥೆಯ ಚಾರ್ಟರ್ಡ್ ಪ್ರಸಿಟೆಂಡ್ ಎಲ್. ಗೋಪಾಲಕೃಷ್ಣ ತಿಳಿಸಿದರು.ರೋಟರಿ ಸಂಸ್ಥೆ, ಶ್ರೀನಿವಾಸಪುರ ಇವರಿಂದ ಪಟ್ಟಣದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಕೋವಿಡ್ ವಿರುದ್ದ ಹೋರಾಡುತ್ತಿರುವ ವೈಧ್ಯರು, ಶುಶ್ರೂಕಿಯರು, ಆಂಬುಲೆನ್ಸ್ ಚಾಲಕರು ಮತ್ತು ಸಿಬ್ಬಂದಿಗೆ ಏರ್ಪಡಿಸಿದ್ದ […]

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ : ಜಿಲ್ಲೆಯಲ್ಲಿ ಕೋವಿಡ್ -19 ನಿಯಂತ್ರಿಸಲು ಜಿಲ್ಲಾಡಳಿತವು ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದೆ ಎಂದು ಅಬಕಾರಿ ಮತ್ತು ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್.ನಾಗೇಶ್ ಅವರು ತಿಳಿಸಿದರು . ಇಂದು ಜಿಲ್ಲಾಧಿಕಾರಿಗಳ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೋವಿಡ್ -19 ವೈರಸ್ ವಿಚಾರವಾಗಿ ನಡೆದ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು . ಜಿಲ್ಲೆಯ ಎಲ್ಲಾ ಅಧಿಕಾರಿಗಳ ಕಾರ್ಯವೈಖರಿಯಿಂದ ಕರೋನವನ್ನು ನಿಯಂತ್ರಿಸಲು ಸಾಧ್ಯವಾಯಿತು ಎಂದರು . ಜಿಲ್ಲೆಯಲ್ಲಿ ಇದುವರೆಗೂ 1497 ಕೋವಿಡ್ ಸೋಂಕಿತರಿದ್ದು […]

ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ : ಸ.ಪ್ರ.ದ.ಕಾಲೇಜಿನಲ್ಲಿ ಬೆರಳಚ್ಚು ಹುದ್ದೆಯಲ್ಲಿ 20 ವರ್ಷ ಸೇವೆ ಸಲ್ಲಿಸಿ ಬೆಂಗಳೂರು ಕಮಿಷನರ್ ಕಛೇರಿಗೆ ಬಡ್ತಿ ಹೊಂದಿದ ವಿ. ರಾಧಮ್ಮ ರವರಿಗೆ ಕಾಲೇಜು ವತಿಯಿಂದ ಬೀಳ್ಕೊಡುಗೆ ಸರಳ ಕಾರ್ಯಕ್ರಮದಲ್ಲಿ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.ಕಾರ್ಯಕ್ರಮದಲ್ಲಿ ರಾಜಮ್ಮ ರವರು ಕೆಲಸ ಮಾಡುವ ಸಮಯದಲ್ಲಿ ಒತ್ತಡದ ಕೆಲಸದ ನಡುವೆ ತಾಳ್ಮೆಯಿಂದ ಕಾಲೇಜು ಕೆಲಸಗಳನ್ನು ಮಾಡಿಕೊಡುತ್ತಿದ್ದ ಬಗ್ಗೆ ಗುಣಗಾನ ಮಾಡಲಾಯಿತು.ಕಾರ್ಯಕ್ರಮದಲ್ಲಿಪ್ರಾಂಶುಪಾಲ ಕೆ. ವಿ. ವೆಂಕಟೇಶ್, ಉಪನ್ಯಾಸಕರಾದ ವಿ. ನಾಗಪ್ಪ,ಮ್ಯಾನೇಜರ್ […]