
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಬಾಗಲಕೋಟೆಯಲ್ಲಿ ನಡೆಯುವ ತೋಟಗಾರಿಕೆ ಮೇಳ 2021ರ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಮಾತನಾಡಲು ತೋಟಗಾರಿಕೆ ಇಲಾಖೆಯ ಡೀನ್ ಬಿ.ಜಿ ಪ್ರಕಾಶ್ ರವರು ದಿನಾಂಕ: 30-12-2020ರ ಬುಧವಾರ ಬೆಳಗ್ಗೆ 10-00 ಗಂಟೆಗೆ ನಗರದ ಪತ್ರಕರ್ತರ ಭವನದಲ್ಲಿ ಪತ್ರಿಕಾಗೋಷ್ಟಿಯನ್ನು ಕರೆದಿದ್ದಾರೆ. ಪತ್ರಿಕಾ ಮತ್ತು ದೃಶ್ಯ ಮಾಧ್ಯಮ ಮಿತ್ರರಾದ ತಾವುಗಳು ಈ ಸುದ್ಧಿಗೋಷ್ಟಿಗೆ ಆಗಮಿಸುವಂತೆ ಕೋರಿದೆ.

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ:- ಪತ್ರಕರ್ತರು ಅಪಾಯ ಲೆಕ್ಕಿಸದೇ ಕೋವಿಡ್ ಸಂದರ್ಭದಲ್ಲಿ ಕೆಲಸ ಮಾಡಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದ್ದಾರೆ, ಸಂಕಷ್ಟದಲ್ಲಿದ್ದ ವಿವಿಧ ವರ್ಗಗಳ ನೆರವಿಗೆ ಸರ್ಕಾರ ನಿಲ್ಲುವಂತೆ ಮಾಡಿದ್ದಾರೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಎನ್.ಭೃಂಗೀಶ್ ಶ್ಲಾಘಿಸಿದರು.ಮಂಗಳವಾರ ಕರ್ನಾಟಕ ಮಾಧ್ಯಮ ಅಕಾಡೆಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೋಲಾರ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ, ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ನಗರದ ಪತ್ರಕರ್ತರ ಭವನದಲ್ಲಿ ಕೋವಿಡ್-19: ಸರ್ಕಾರ ಮತ್ತು ಮಾಧ್ಯಮ ವಿಚಾರ […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ:- ಸ್ವಚ್ಚತೆ, ಸಾಮಾಜಿಕ ಅಂತರ,ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಅನುಸರಿಸಿದರೆ ಕೊರೋನಾ ತಡೆ ಸಾಧ್ಯ ಎಂದು ತಾಲ್ಲೂಕಿನ ನರಸಾಪುರ ಪ್ರಾಥಮಿಕ ಆರೋಗ್ಯಸ ಕೇಂದ್ರದ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಹೆಚ್.ವಿ.ವಾಣಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.ಶಾಲೆಗಳು ಜ.1 ರಿಂದ ಆರಂಭಗೊಳ್ಳುತ್ತಿರುವ ಹಿನ್ನಲೆಯಲ್ಲಿ ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲಾ 10ನೇ ತರಗತಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಶಾಲೆಯ ಆವರಣದಲ್ಲೇ ನರಸಾಪುರ ಪಿಹೆಚ್ಸಿಯಿಂದಕೋವಿಡ್ ಟೆಸ್ಟ್ ನಡೆಸಿ ಅವರು ಮಾತನಾಡುತ್ತಿದ್ದರು.ಶಾಲೆಗಳು ನಡೆಯದ ಕಾರಣ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಹಿನ್ನಡೆಯಾಗಿದೆ, […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ:- ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರು ಕರಾರಿನಂತೆ ನೀರನ್ನು ಪೂರ್ಣ ಪ್ರಮಾಣದಲ್ಲಿ ಕೆಸಿ ವ್ಯಾಲಿ,ಹೆಚ್ಎನ್ ವ್ಯಾಲಿ ಮೂಲಕ ಹರಿಸಲು ವಿಳಂಬವಾಗಿರುವುದರಿಂದ ಕೂಡಲೇ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಯೋಜನೆಯ ವೇಗ ಹೆಚ್ಚಿಸುವಂತೆ ವಿಧಾನಪರಿಷತ್ ಸದಸ್ಯ ಡಾ.ವೈಎ.ನಾರಾಯಣಸ್ವಾಮಿ ಮನವಿ ಮಾಡಿದ್ದಾರೆ.ಈ ಸಂಬಂಧ ರಾಜ್ಯ ಕಾನೂನು,ಸಂಸದೀಯ ಹಾಗೂ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಅವರಿಗೆ ಲಿಖಿತ ಮನವಿ ಸಲ್ಲಿಸಿರುವ ಅವರು, ಸೆಪ್ಟೆಂಬರ್ 2020ರೊಳಗೆ 400 ಎಂಎಲ್ಡಿ ಕೆಸಿ ವ್ಯಾಲಿಯ ಮೂಲಕ ನೀರನ್ನು […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ : ಮನೆಗಳಲ್ಲಿ ಬೀಳುವ ಹಸಿ ಕಸದಿಂದ ಕಾಂಪೋಸ್ಟ್ ಗೊಬ್ಬರ ತಯಾರಿಸಿ ಬಳಸಿಕೊಳ್ಳಬೇಕು ಎಂದು ಪುರಸಭೆಯ ಸ್ವಚ್ಛತಾ ರಾಯಭಾರಿ ಟಿ.ಎಸ್.ಮಾಯಾ ಬಾಲಚಂದ್ರ ಹೇಳಿದರು. ಪಟ್ಟಣದ ವೆಂಕಟೇಶ್ವರ ಬಡಾವಣೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶನಿವಾರ ಏರ್ಪಡಿಸಿದ್ದ ಕಾಂಪೋಸ್ಟ್ ತಯಾರಿಕಾ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿ, ಪುರಸಭಾ ನಿಯಮದಂತೆ ಪ್ರತಿ ಮನೆಯಲ್ಲೂ ಹಸಿ ಕಸ ಹಾಗೂ ಒಣ ಕಸ ಎಂದು ವಿಭಾಗಿಸಲಾಗುತ್ತದೆ. ಹಸಿ ಕಸವನ್ನು ಕಡಿಮೆ ಖರ್ಚಿನಲ್ಲಿ, ಸರಳ ವಿಧಾನದ ಮೂಲಕ ಕಾಂಪೋಸ್ಟ್ […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ: ಆಟೋ ಚಾಲಕರು ಸಮವಸ್ತ್ರ ಧರಿಸಿ ಶಿಸ್ತು ಕಾಪಾಡಬೇಕು, ಕಾನೂನನ್ನು ಗೌರವಿಸಬೇಕು, ಕೊರೊನಾದಿಂದ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.ನಗರದ ಶ್ರೀಸತ್ಯಸಾಯಿ ಮಂದಿರದಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ ಕೆ.ಜಯದೇವ್ರ 53 ನೇ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗವಹಿಸಿ, ನೂರು ಆಟೋ ಚಾಲಕರಿಗೆ ಸಮವಸ್ತ್ರವಿತರಣೆಗೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.ಕೊರೊನಾ ಕಾಲದಲ್ಲಿ ಆಟೋ ಚಾಲಕರು ಸೇರಿದಂತೆ ಸಾರ್ವಜನಿಕವಾಗಿ ಕೆಲಸ ಮಾಡುತ್ತಿರುವ ಕೃಷಿ ಕೂಲಿ ಕಾರ್ಮಿಕರು ಹಾಗೂ ಚಾಲಕರು […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾಯಿದೆಗಳನ್ನು ವಿರೋಧಿಸಿ ದೆಹಲಿ ಚಲೋ ಹೊರಟಿರುವ ಪಂಜಾಬ್, ಹರಿಯಾಣ ರೈತರ ಹೋರಾಟಕ್ಕೆ ಬೆಂಬಲಿಸಿ ಡಿಸೆಂಬರ್ 31ರಂದು ಕೋಲಾರ ಜಿಲ್ಲೆಯಿಂದ 300 ಮಂದಿ ರೈತರು ದೆಹಲಿ ಚಲೋ ಹೊರಡಲು ರೈತಸಂಘದ ಸಭೆಯಲ್ಲಿ ತೀರ್ಮಾನಿಸಲಾಯಿತು.ನಗರದಲ್ಲಿ ಶನಿವಾರ ನಡೆದ ಸಭೆಯ ನೇತೃತ್ವವಹಿಸಿ ಮಾತನಾಡಿದ ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಕೇಂದ್ರ ಸರ್ಕಾರವು ಜನಾಭಿಪ್ರಾಯವಿಲ್ಲದೆ ಜಾರಿಗೆ ತಂದಿರುವ ಕಾಯಿದೆಗಳನ್ನು ವಿರೋಧಿಸಿ ದೆಹಲಿ ಚಲೋ ಹೊರಟಿರುವ ಪಂಜಾಬ್, ಹರಿಯಾಣ […]

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ: ರೈತರನ್ನು ಸ್ಮರಿಸುವ ವಿಶ್ವರೈತ ದಿನಾಚರಣೆ ಹಾಗೂ ರೈತನಾಯಕ ಕೆ.ಎಸ್.ಪುಟ್ಟಣ್ಣಯ್ಯ ಜನ್ಮದಿನವನ್ನು ರೈತಸಂಘದಿಂದ ನಗರದ ಹಳೆ ಬಸ್ ನಿಲ್ದಾಣದಲ್ಲಿ ಗ್ರಾಮೀಣ ಪ್ರದೇಶದ ಶೈಲಿಯಲ್ಲಿ ರಾಗಿ ಒಕ್ಕಣೆ ಮಾಡುವ ಸಂಪ್ರಾದಾಯದಂತೆ ಭತ್ತ, ರಾಗಿ ಮತ್ತು ತರಕಾರಿ ಹಂಚುವ ಮುಖಾಂತರ ಆಚರಣೆ ಬುಧವಾರ ಆಚರಣೆ ಮಾಡಲಾಯಿತು.ಕಾರ್ಯಕ್ರಮದಲ್ಲಿ ಭಾಗವಹಿಸಿ ಅಧ್ಯಕ್ಷತೆವಹಿಸಿ ಮಾತನಾಡಿದ ಜಿಲ್ಲಾಧಿಕಾರಿಗಳಾದ ಸಿ.ಸತ್ಯಭಾಮ, ಭೂಮಿಯು ತಾಯಿ ಸಮಾನಳಾಗಿದ್ದು, ಆಕೆಯನ್ನು ನಂಬಿದವರಿಗೆ ಎಂದಿಗೂ ಮೋಸವಾಗುವುದಿಲ್ಲ. ನಾಡಗೀತೆಯಂತೆಯೇ ರೈತಗೀತೆಗೂ ಹೆಚ್ಚಿನ ಪ್ರಾಧಾನ್ಯತೆಯಿದ್ದು, ಕೇಳಿದಾಗ ರೋಮಾಂಚನವಾಗುತ್ತದೆ. ಆ ಹಾಡಿನಲ್ಲೇ […]

ವರದಿ:ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ : ತಾಲ್ಲೂಕಿನಲ್ಲಿ ಬೆಳಿಗ್ಗೆ ಮಂದಗತಿಯಲ್ಲಿ ನಡೆದ ಮತದಾನ ಮಧ್ಯಾಹ್ನದ ಹೊತ್ತಿಗೆ ಚುರುಕು ಪಡೆದುಕೊಂಡಿತು. ಪುರುಷ ಹಾಗೂ ಮಹಿಳಾ ಮತದಾರರು ಮತಗಟ್ಟೆಗಳ ಮುಂದೆ ಅಂತರ ಪಾಲನೆಯೊಂದಿಗೆ ಪ್ರತ್ಯೇಕ ಸಾಲುಗಳಲ್ಲಿ ನಿಂತು ಮತದಾನ ಮಾಡಿದರು. ಒಟ್ಟು 1,42,229 ಮತದಾರ ಪೈಕಿ, 123095 ಮತದಾರರು ಮತದಾನ ಮಾಡಿದ್ದಾರೆ. ಅದರಲ್ಲಿ ಮತದಾನ ಮಾಡಿರುವ 62803 ಪುರುಷ ಹಾಗೂ 60767 ಮಹಿಳಾ ಸೇರಿದ್ದಾರೆ. ತಾಲ್ಲೂಕಿನಲ್ಲಿ ಶೇ.88.68ರಷ್ಟು ಮತದಾನವಾಗಿದೆ ಎಂದು ತಹಶೀಲ್ದಾರ್ ಎಸ್.ಎಂ.ಶ್ರೀನಿವಾಸ್ ತಿಳಿಸಿದರು. ಮತಾದಾರರು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. […]