ಕೋಲಾರ,ಸೆ.10: ನಗರದ ಹೊರವಲಯದಲ್ಲಿರುವ ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಆವರಣದಲ್ಲಿ ಮನೋರೋಗ ವಿಭಾಗದಿಂದ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಅಧೀಕ್ಷಕ ಡಾ.ಕೃಷ್ಣಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಆತ್ಮಹತ್ಯೆ ತಡೆಗಟ್ಟುವಲ್ಲಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಪಾತ್ರ ಮುಖ್ಯವಾಗಿರುತ್ತದೆ. ನಾವು ಆತ್ಮಸ್ಥೈರ್ಯ ಮತ್ತು ದೈರ್ಯವನ್ನು ಕೊಡುವುದರಿಂದ ಆತ್ಮಹತ್ಯೆಯನ್ನು ತಕ್ಕಮಟ್ಟಿಗೆ ತಗ್ಗಿಸಬಹುದು ಎಂದರು.ಮನೋರೋಗ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮೋಹನರೆಡ್ಡಿ ಮಾತನಾಡಿ, ಆತ್ಮಹತ್ಯೆ ಮಾಡಿಕೊಳ್ಳುವ ವ್ಯಕ್ತಿ ಪದೇಪದೇ ಸಾಯುವ ಕುರಿತು ಮಾತನಾಡುತ್ತಾ ಇರುತ್ತಾನೆ. ಅಂತಹ ವ್ಯಕ್ತಿಗಳನ್ನು ಶೀಘ್ರವಾಗಿ ಮನೋವೈದ್ಯರಲ್ಲಿ […]

Read More

ಶ್ರೀನಿವಾಸಪುರ : ನಮ್ಮ ದೇಶದಲ್ಲಿ ಎಲ್‍ಐಸಿ ಸಂಸ್ಥೆಯಲ್ಲಿ ಒಂದು ಲಕ್ಷ ಉದ್ಯೋಗಿಗಳು ಕೆಲಸ ನಿರ್ವಹಿಸುತ್ತಿದ್ದಾರೆ. 18 ಲಕ್ಷ ಏಜೆಂಟರು ಕಾರ್ಯನಿರ್ವಹಿಸುತ್ತಿದ್ದಾರೆ. ಇಡೀ ದೇಶದಲ್ಲಿನ 27 ಖಾಸಗಿ ಕಂಪನಿಗಳ ಪೈಕಿ ಎಲ್‍ಐಸಿ ಮಾರುಕಟ್ಟೆ ಷೇರಲ್ಲಿ 69.91% ಪ್ರಸ್ತುತ ಷೇರಗಳನ್ನು ಹೊಂದಿದೆ. ಎಲ್‍ಐಸಿ ಶಾಶ್ವತ ನಿಧಿ 63ಲಕ್ಷ ಕೋಟಿ ಮೀಸಲು ಇಟ್ಟಿದೆ ಎಂದು ಉಪಶಾಖೆ ವ್ಯವಸ್ಥಾಪಕ ಎಸ್.ವಿ.ಪ್ರಸಾದ್ ಹೇಳಿದರು..ಪಟ್ಟಣದ ಎಲ್‍ಐಸಿ ಉಪಶಾಖೆಯಲ್ಲಿ ಶುಕ್ರವಾರ ಎಲ್‍ಐಸಿ 68 ನೇ ವರ್ಷದ ಸಪ್ತಾಹ ಪ್ರಯುಕ್ತ ನಡೆದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಕ್ರೈಮ್ ನಿಧಿಗೆ […]

Read More

ಶ್ರೀನಿವಾಸಪುರ : ಸಾಕ್ಷರತೆಯು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲೂ ಬಹುಮುಖ್ಯ ಅಂಶವಾಗಿದ್ದು, ಸಾಕ್ಷರತೆ ವ್ಯಕ್ತಿಯನ್ನು ಸಮಾಜದಲ್ಲಿ ಘನತೆಯಿಂದ ಬದಕಲು ಸಹಾಯ ಮಾಡುವುದರ ಜೊತೆಗೆ ಸ್ವಾವಲಂಭಿಯಾಗಿ ಬದುಕಲು ಸಹಕರಿಸುತ್ತದೆ ಎಂದು ಬಿಆರ್‍ಸಿ ಕೆ.ಸಿ.ವಸಂತ ಹೇಳಿದರು.ಪಟ್ಟಣದ ಬಿಆರ್‍ಸಿ ಕೇಂದ್ರದಲ್ಲಿ ಶುಕ್ರವಾರ ಅಂತರಾಷ್ಟ್ರೀಯ ಸಾಕ್ಷರತಾ ದಿನಾಚರಣೆಗೆ ಚಾಲನೆ ನೀಡಿ ಮಾತನಾಡಿದರು.ಸಾಕ್ಷರತೆಯು ಉದ್ಯೋಗ ಮತ್ತು ಶೈಕ್ಷಣಿಕ ಅವಕಾಶಗಳನ್ನು ಕಲ್ಪಿಸಿಕೊಡುತ್ತದೆ. ಇದು ಜನರನ್ನು ಬಡತನ ಮತ್ತು ನಿರುದ್ಯೋಗದಿಂದ ಹೊರಬರಲು ಸಹಾಯ ಮಾಡುತ್ತದೆ. ಸಾಕ್ಷರತಾ ಪ್ರಮಾಣ ಹಾಗೂ ಇನ್ನೂ ಹೆಚ್ಚಿನ ರೀತಿಯಲ್ಲಿ ನಾವು ಸಾಕ್ಷರತೆಯನ್ನು ಸಾಧಿಸಬೇಕಾದ ಜವಾಬ್ದಾರಿ […]

Read More

ಶ್ರೀನಿವಾಸಪುರ : ಆಕಸ್ಮಿಕ ಬೆಂಕಿ ತಗುಲಿ ಟನ್ ಗಟ್ಟಲೆ ಹಳೆ ಪ್ಲಾಸ್ಟಿಕ್ ಇದ್ದ ಗುಜರಿ ಅಂಗಡಿ ಧಗಧಗನೇ ಹೊತ್ತಿ ಉರಿದ ಘಟನೆ ಶ್ರೀನಿವಾಸಪುರ ಪಟ್ಟಣದಲ್ಲ್ಲಿ ನಡೆದಿದೆ.ಶ್ರೀನಿವಾಸಪುರ ಪಟ್ಟಣದ ಚಿಂತಾಮಣಿ ರಸ್ತೆಯಲ್ಲಿರುವ ಹಳೆ ಮಾವಿನಕಾಯಿ ಮಂಡಿ ಮುಂಭಾಗದಲ್ಲಿ ಜಾವೀದ್ ಪಾಷ ಎನ್ನುವರಿಗೆ ಸೇರಿದ ಹಳೆಯ ಪ್ಲಾಸ್ಟಿಕ್ ಗೋದಾಮು ಇದ್ದು ಅಲ್ಲೆ ನಾನಾ ರೀತಿಯ ಹಳೆಯ ಗುಜರಿ ಸಾಮಾನುಗಳನ್ನು ತಗೆದುಕೊಳ್ಳುತ್ತಿದ್ದ ಅಂಗಡಿ ಇತ್ತು ಆಕಸ್ಮಿಕ ಬೆಂಕಿ ಹೊತ್ತಿಕೊಂಡು ಕ್ಷಣಾರ್ಧದಲ್ಲಿ ಇಡೀ ಅಂಗಡಿಗೆ ವ್ಯಾಪಿಸಿ ಗೋದಾಮು ಬೆಂಕಿಗೆ ಆಹುತಿಯಾಗಿದೆ. ಬೆಂಕಿ ಕೆನ್ನಾಲಿಗೆಗೆ […]

Read More

ಶ್ರೀನಿವಾಸಪುರ : ಪರಿಸರವನ್ನು ಉಳಿಸಿಲು ಕೇವಲ ಸರ್ಕಾರ, ಸಂಘ ಸಂಸ್ಥೆಗಳು ಕಾರ್ಯನಿರ್ವಹಿಸದರೆ ಸಾಲದು , ಇವುಗಳ ಜೊತೆಗೆ ನಾಗರೀಕರು ಕೈಜೋಡಿಸಬೇಕಾಗಿದೆ ಎಂದರು. ಸ್ವಚ್ಚತೆ, ನೈರ್ಮಲ್ಯತೆ , ಆರೋಗ್ಯವನ್ನು ಯಾವರೀತಿಯಾಗಿ ಕಾಪಡಿಕೊಳ್ಳುವುದರ ಬಗ್ಗೆ ನಾಗರೀಕರಿಗೆ ತಿಳಿಸಿಕೊಡಬೇಕು ಎಂದು ಪುರಸಭೆ ಅಧ್ಯಕ್ಷ ಬಿ.ಆರ್.ಭಾಸ್ಕರ್ ತಿಳಿಸಿದರು.ಪಟ್ಟಣದ ಪುರಸಭೆ ಹಾಗು ವಿವಿಧ ಸರ್ಕಾರಿ ಶಾಲೆಗಳ ಸಹಯೋಗದಲ್ಲಿ ಬುಧವಾರ ಸ್ವಚ್ಚತ್ತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.ಈಗಿನ ವಿದ್ಯಾರ್ಥಿಗಳು ಮುಂದೊಂದು ದಿನ ಜಗತ್ತಿನ ಸತ್ಪ್ರಜೆಗಳು ಆಗುತ್ತಾರೆ ವಿದ್ಯಾರ್ಥಿಗಳು ಪರಿಸರವನ್ನು ಹೇಗೆ ರಕ್ಷಿಸಬಹುದು ಎಂಬುದನ್ನು ಪ್ರಾರಂಭದ ಹಂತದಲ್ಲೇ […]

Read More

ಶ್ರೀನಿವಾಸಪುರ ಪಟ್ಟಣದ ಹೊರವಲಯದ ಎನುಮೇರಪಲ್ಲಿ ಗ್ರಾಮದ ಪಂಚಮುಖಿ ಆಂಜನೇಯ ಸ್ವಾಮಿ ದೇವಾಲಯದ ಆರಣದಲ್ಲಿ ಸೋಮವಾರ ತಾಲೂಕು ವೃತ್ತ ನಿರತ ಛಾಯಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದವತಿಯಿಂದ ಇತ್ತೀಚಿಗೆ ಕರ್ನಾಟಕ ರಾಜ್ಯ ಛಾಯಗ್ರಾಹಕರ ಸಂಘದವತಿಯಿಂದ ಛಾಯ ವಿಭೂಷಣ ಪ್ರಶಸ್ತಿಯನ್ನ ಪಡೆದ ವಿಶ್ವನಾಥಸಿಂಗ್ ರವರನ್ನು ಸನ್ಮಾನಿಸಲಾಯಿತು.ತಾಲೂಕು ಛಾಯಗ್ರಾಹಕರ ಸಂಘದ ಸದಸ್ಯರಾದ ವೇಣುಗೋಪಾಲರೆಡ್ಡಿ, ರಾಯಲ್ಪಾಡು ಅಶೋಕರೆಡ್ಡಿ, ರಘು , ಮಂಜು ಹಾಗು ಪದಾಧಿಕಾರಿಗಳು ಇದ್ದರು

Read More

ಶ್ರೀನಿವಾಸಪುರ : ತಾಲೂಕಿನ ಹೊಗಳಗೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಓದು ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಕರ್ನಾಟಕ ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ1 ನೇ ತರಗತಿಯಿಂದ 7ನೇ ತರಗತಿಗೆ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳು ಈ ದಿನ ಓದುವ ಅಭಿಯಾನ ಭಾಗವಹಿಸುವುದು ಕಡ್ಡಾಯವಾಗಿರುತ್ತದೆ ಬಿಆರ್‍ಸಿ ಕೆ.ಸಿ.ವಸಂತ ಕರೆ ನೀಡಿದರು.ಸರ್ಕಾರದ ಆದೇಶದಂತೆ ನಡೆಯುವ ಈ ಕಾರ್ಯಕ್ರಮ ಉತ್ತಮವಾದ ಯೋಜನೆಯಾಗಿರುತ್ತದೆ ಈ ದಿನದಿಂದ 21 ದಿನಗಳ ಕಾಲ ವಿವಿಧ ರೀತಿಯ ಚಟುವಟಿಕೆಗಳನ್ನು ಆಧರಿಸಿ ಈ ಕಾರ್ಯಕ್ರಮ […]

Read More

ಶ್ರೀನಿವಾಸಪುರ : ಮಹಿಳೆಯರ ಸ್ವಾವಲಂಬಿ ಜೀವನಕ್ಕೆ ಮಾತೃ ಹೃದಯದ ಮಾತೃಶ್ರೀ ಹೇಮಾವತಿ ಅಮ್ಮನವರ ಕೊಡುಗೆ ಆಪಾರ ಎಂದು ತಾಲ್ಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ತಿಳಿಸಿದರು.ಪಟ್ಟಣದ ಹೇಮಾವತಿ ಜ್ಞಾನವಿಕಾಸ ಕೇಂದ್ರದಲ್ಲಿ ಸೋಮವಾರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನವಿಕಾಸ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಳ್ಳಲಾದ ವಾರ್ಷಿಕೋತ್ಸವ ಹಾಗೂ ವರಮಹಾಲಕ್ಷ್ಮೀ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ವರಮಹಾಲಕ್ಷ್ಮೀ ವ್ರತ ಶ್ರೇಷ್ಠವಾದ ಹಾಗೂ ಅತ್ಯಂತ ಪವಿತ್ರವಾದ ವೃತ… ಲಕ್ಷ್ಮೀದೇವಿಯೂ ಅಷ್ಟಲಕ್ಷ್ಮೀಯಾಗಿ ಈ ಮನುಷ್ಯನಿಗೆ ಬೇರೆ ಬೇರೆ ಅವತಾರದಲ್ಲಿ ಅನುಗ್ರಹವನ್ನು ನೀಡುತ್ತಾರೆ. ಇವತ್ತು ಜನ ಸಾಮಾನ್ಯರಲ್ಲಿ ದೇವರ ಮೇಲಿನ […]

Read More

ಶ್ರೀನಿವಾಸಪುರ:  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೆರೆಯಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮವನ್ನು ಅಡ್ಡಗಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಿಮೋರಪಲ್ಲಿಯ ಲಕ್ಕಮ್ಮನ ಕೆರೆಯಲ್ಲಿ ಹಮ್ಮಿಕೊಂಡಿದ್ದು. ಈ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಯಾದ ಪ್ರಕಾಶ್ ಕುಮಾರ್ ಗಿಡ ನಾಟಿ ಮಾಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಪ್ರತ್ಯಕ್ಷವಾಗಿ ಪರಿಸರವನ್ನ ರಕ್ಷಣೆ ಮಾಡಿಕೊಂಡರೆ ಪರೋಕ್ಷವಾಗಿ ನಮ್ಮನ್ನು ನಾವು ರಕ್ಷಣೆ ಮಾಡಿಕೊಂಡಂತೆ ಎಂಬ ಮಾತನ್ನು ಹೇಳುತ್ತಾ. ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ, ನಗರೀಕರಣ ಎಂಬ ಹೆಸರಿನಲ್ಲಿ ಮರಗಳನ್ನು ಕಡಿದು […]

Read More
1 24 25 26 27 28 337