ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ : ಜಿಲ್ಲೆಯಲ್ಲಿ ಹೋಮ್ ಐಸೋಲೇಷನ್ ನಿಯಮ ಉಲ್ಲಂಘಿಸಿರುವ ಸೋಂಕಿತರನ್ನು ಕಡ್ಡಾಯವಾಗಿ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಿಸಿ ಅವರಿಗೆ ಚಿಕಿತ್ಸೆಯನ್ನು ನೀಡುವಂತೆ ಅರಣ್ಯ , ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಅರವಿಂದ ಲಿಂಬಾವಳಿ ಅವರು ಸೂಚಿಸಿದರು .ಇಂದು ಜಿಲ್ಲಾಧಿಕಾರಿಗಳ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕೋವಿಡ್ -19 ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಈವರೆಗೆ ಒಟ್ಟು ಸೋಂಕಿತರ ಸಂಖ್ಯೆ ಗುಣಮುಖರಾದವರ ಸಂಖ್ಯೆ , ಹೋಂ ಐಸೋಲೇಷನ್‌ನಲ್ಲಿ […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಕರೋನಾ ವೈರಸ್ನ ಎರಡನೇ ಅಲೆ ಎಲ್ಲೆಡೆ ಹರಡುತ್ತಿದೆ ಇಂತಹ ಕಠಿಣ ಪರಿಸ್ಥಿತಿಯಲ್ಲಿ. ಗ್ರಾಮೀಣ ಬಾಗದಲ್ಲಿ ಕೋವಿಡ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶದಂತೆ ಕೋವಿಡ್ ಸೋಂಕಿತ ಮನೆಗಳಿಗೆ ಪೋಸ್ಟರ್ ಕಡ್ಡಾಯವಾಗಿ ಅಂಟಿಸಲಾಗುವುದು . ಕೋವಿಡ್ ಸೋಂಕಿತ ವ್ಯಕ್ತಿ ವಿನಾಕಾರಣ ಹೊರಗೆ ಓಡಾಡಿದರೆ ಸ್ಥಳದಲ್ಲಿಯೇ ಎಫ್.ಐ.ಆರ್ ದಾಖಲಿಸುವ ವಿಶೇಷ ಜವಾಬ್ದಾರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ನೀಡಲಾಗಿದೆ , ಸೋಂಕಿತ ವ್ಯಕ್ತಿಯ ಭೇಟಿ ಸ್ಥಳದಲ್ಲಿ ಸರ್ಕಾರಕ್ಕೆ ಮಾಹಿತಿ ರವಾನೆ ಮಾಡಲಾಗುವುದು . […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ ; ರೈತರೇನು ನಿಮ್ಮ ಕಣ್ಣಿಗೆ ಭಿಕ್ಷುಕರಂತೆ ಕಾಣುತ್ತೇವೇಯೇ, ಪರಿಹಾರ ಘೋಷಿಸುವಾಗ ಸೌಜನ್ಯಕ್ಕಾದರೂ ಕೃಷಿಕನ ಕಷ್ಟ ಆಲಿಸುವುದು ಬೇಡವೇ ಎಂದು ಪ್ರಶ್ನಿಸಿದ ಶಾಸಕ ಹಾಗೂ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್‍ಕುಮಾರ್ ಪ್ರತಿ ಹೆಕ್ಟೇರ್ ಬೆಳೆಗೆ ಕನಿಷ್ಟ 75 ಸಾವಿರ ಘೋಷಿಸುವಂತೆ ಆಗ್ರಹಿಸಿದರು.ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಖಾಸಗಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸಚಿವ ಸಂಪುಟದಲ್ಲಿ ಯಾರೂ ರೈತರಿಲ್ಲ, ಕೃಷಿಕನ ನೋವು ಇವರಿಗೆ ಹೇಗೆ ತಾನೇ ಅರ್ಥವಾದೀತು ಎಂದು ವಾಗ್ದಾಳಿ ನಡೆಸಿದರು.ರೈತರ […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ : ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ರಾಯಲ್ಪಾಡು ಗ್ರಾಮದ ಶ್ರೀ ಕಾಶೀವಿಶ್ವೇಶ್ವರ ಸ್ವಾಮಿ ದೇವಾಲಯಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಭೇಟಿ ನೀಡಿ ದೇವರ ದರ್ಶನ ಪಡೆದರು . ಈ ಹಿಂದೆ ಸಹ ರಾಜ್ಯದ ಪ್ರಮುಖ ರಾಜಕಾರಣಿಗಳು ಹಾಗೂ ಹೊರರಾಜ್ಯದ ಮಹಾರಾಷ್ಟ್ರ ,ಆಂಧ್ರಪ್ರದೇಶ, ತಮಿಳುನಾಡು ,ರಾಜಕಾರಣಿಗಳು ಸಹ ದೇವರ ದರ್ಶನ ಪಡೆದಿದ್ದಾರೆ ಚಿತ್ರನಟ ಚಿರಂಜೀವಿ ಅವರು ಸಹ ಪ್ರಸಿದ್ಧ ಜ್ಯೋತಿಷ ತಜ್ಞರಾದ ವೆಲ್ಲಾಲ ಸತ್ಯ ನಾರಾಯಣ ಶಾಸ್ತ್ರಿ ಬಳಿ ಭವಿಷ್ಯದ […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ : ಇವತ್ತು, ಅಂದರೆ ಮೇ 21, 2021 ಸಂಜೆ 6.00 ಗಂಟೆಯಿಂದ ಮೇ 25, 2021 ಬೆಳಿಗ್ಗೆ 6.00 ಗಂಟೆ ವರೆಗೆ ಜಿಲ್ಲೆಯಲ್ಲಿ ಲಾಕ್ ಡೌನ್ ನಿಯಮಗಳು ಕಠಿಣಗೊಳಿಸಲಾಗಿದ್ದು, ಪೆಟ್ರೋಲ್, ಹಾಲು, ವೈದ್ಯಕೀಯ ಸೇವೆ ಹೊರತುಪಡಿಸಿ ಉಳಿದ ಎಲ್ಲ ವಾಣಿಜ್ಯ ವ್ಯವಹಾರಗಳನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಡಾ. ಆರ್ ಸೆಲ್ವಮಣಿ ಅವರು ತಿಳಿಸಿದರು.ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಈಗಾಗಲೇ ಲಾಕ್ ಡೌನ್ ನಿಯಮಗಳು ಜಾರಿಯಲ್ಲಿದ್ದರೂ […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಕೋಲಾರ:- ಕೋವಿಡ್ ಸಂಕಷ್ಟದಿಂದ ಬಳಲಿರುವ ಜಿಲ್ಲೆಯ ಕೆಜಿಎಫ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರತಿ ಬಿಪಿಎಲ್ ಕುಟುಂಬದ ಮನೆಬಾಗಿಲಿಗೂ ತಲಾ 10 ಕೆಜಿ ಅಕ್ಕಿ ತಲುಪಿಸುವುದಾಗಿ ಶಾಸಕಿ ರೂಪಕಲಾ ಶಶಿಧರ್ ತಿಳಿಸಿದರು.ನಗರದಲ್ಲಿಂದು ಮಾತನಾಡಿದ ಅವರು, 30 ಸಾವಿರ ದಿನಸಿ ಕಿಟ್ ವಿತರಣೆಗೆ ಸಿದ್ದತೆ ನಡೆಸಿದ್ದೆ ಆದರೆ ಕ್ಷೇತ್ರದಲ್ಲಿ 56ಸಾವಿರಕ್ಕೂ ಹೆಚ್ಚು ಬಿಪಿಎಲ್ ಕಾರ್ಡುದಾರರಿದ್ದಾರೆ ಎಂದ ಅವರು, ಈಗ ಆ ಎಲ್ಲಾ ಕುಟುಂಬಗಳಿಗೂ ನೆರವಾಗಲು ನಿರ್ಧರಿಸಿರುವುದಾಗಿ ತಿಳಿಸಿದರು.ನಗರ,ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬಕ್ಕೂ ತಲಾ 10 […]
ವರದಿ ; ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ : ಬಿ.ಜೆ.ಎಂ.ಎಲ್ ಕೋವಿಡ್ ಕೇರ್ ಸೆಂಟರ್ ಆಸ್ಪತ್ರೆಗೆ ಮುಂದಿನ ದಿನಗಳಲ್ಲಿ ಬೇಕಾಗುವ 1000 ಲೀ . ಆಕ್ಸಿಜನ್ ಪ್ಲಾಂಟ್ , ಆಕ್ಸಿಜನ್ ಕಾನ್ಸನ್ ಟ್ರೇಟರ್ , ಮೆಡಿಸನ್ ಮತ್ತಿತರ ವೈದ್ಯಕೀಯ ಸಲಕರಣೆಗಳನ್ನು ನೀಡುವುದಾಗಿ ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವರಾದ ಶ್ರೀ ಪ್ರಹ್ಲಾದ್ ಜೋಶಿ ಅವರು ತಿಳಿಸಿದರು . ಇಂದು ಕೆ.ಜಿ.ಎಫ್ ನ ಬಿ.ಜಿ.ಎಂ.ಎಲ್ ಕೋವಿಡ್ ಕೇರ್ ಸೆಂಟರ್ ಆಸ್ಪತ್ರೆಯನ್ನು ವರ್ಚುವಲ್ ಪ್ಲಾಟ್‌ಫಾರಂ ಮುಖಾಂತರ ಉದ್ಘಾಟಿಸಿದ ಅವರು , […]
ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ನಾಗರಿಕರು ಕೊರೊನಾ ತಡೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವುದರ ಮೂಲಕ, ಸೋಂಕು ಹರಡುವುದನ್ನು ತಡೆಯಬೇಕು ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿದ್ಯಾರಾಣಿ ಹೇಳಿದರು.ತಾಲ್ಲೂಕಿನ ಚಲ್ದಿಗಾನಹಳ್ಳಿ ಗ್ರಾಮದ ಸಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ತಾಲ್ಲೂಕು ಆಡಳಿತ, ಗ್ರಾಮ ಪಂಚಾಯಿತಿ ಹಾಗೂ ಕೊರೊನಾ ಕಾರ್ಯಪಡೆ ವತಿಯಿಂದ ಏರ್ಪಡಿಸಿದ್ದ ಕೊರೊನಾ ಜಾಗೃತಿ ಸಭೆಯಲ್ಲಿ ಮಾತನಾಡಿ, ಕೊರೊನಾಗೆ ಹೆದರಬೇಕಾಗಿಲ್ಲ. ಮುಂಜಾಗ್ರತೆ ವಹಿಸಬೇಕು. ರೋಗ ಹರಡದಂತೆ ತಡೆಯಬೇಕು ಎಂದು ಹೇಳಿದರು.ಕೋವಿಡ್ ಲಕ್ಷಣ ಕಂಡು ಬಂದ ಕೂಡಲೆ […]
ವರದಿ :ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ : 23 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಬಿ.ಜೆ.ಎಂ.ಎಲ್ ಆಸ್ಪತ್ರೆಯನ್ನು ಇಂದು ಕೋವಿಡ್ ಕೇರ್ ಸೆಂಟರ್ ಆಗಿ ಮಾರ್ಪಾಡು ಮಾಡಲಾಗಿದೆ . ಇದರಿಂದ ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯಲು ತುಂಬಾ ಅನುಕೂಲವಾಗುತ್ತದೆ . ಡಾಕ್ಟರ್ , ಆರೋಗ್ಯ ಸಿಬ್ಬಂದಿ , ಔಷಧಿ ಯಾವುದೇ ಕೊರತೆಯಾಗದಂತೆ ನಾಳೆಯಿಂದ ಆಸ್ಪತ್ರೆಯು ಕಾರ್ಯ ನಿರ್ವಹಿಸಲಿದೆ ಎಂದು ಅರಣ್ಯ , ಕನ್ನಡ ಮತ್ತು ಸಂಸ್ಕೃತಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಅರವಿಂದ್ ಲಿಂಬಾವಳಿ ಅವರು ತಿಳಿಸಿದರು […]