ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಶ್ರೀನಿವಾಸಪುರ : ನಮ್ಮ ಮಕ್ಕಳ ಭವಿಷ್ಯಕ್ಕಾಗಿ ಮುಂದಿನ 15 ವರ್ಷಗಳಲ್ಲಿ ಮಾನವೀಯ ಮೌಲ್ಯಗಳನ್ನು ತುಂಬುವ ಕಾರ್ಯ ನಡೆಯಬೇಕಿದೆ . ಇದಕ್ಕಾಗಿ ಪ್ರತಿ ವ್ಯಕ್ತಿಯ ಮನಗಳಲ್ಲಿ , ಮನೆಗಳಲ್ಲಿ , ಮತಗಳಲ್ಲಿ ಬದಲಾವಣೆ ಆಗಲೇ ಬೇಕಿದೆ ಈ ಕಾರ್ಯಕ್ಕೆ ನಮ್ಮಲ್ಲರಲ್ಲೂ ಸಣ್ಣ ಬದಲಾವಣೆ ಮಾಡಿಕೊಳ್ಳಲೇಬೇಕಿದೆ ಎಂದು ಬರಹಗಾರ , ಚಿಂತಕ , ಹೆಚ್.ಕೆ. ವಿವೇಕಾನಂದ ಹೇಳಿದರು . ಮಾನವೀಯ ಮೌಲ್ಯಗಳ ಜಾಗೃತಿ ಹಾಗೂ ಪುನರುತ್ಥಾನ ಜ್ಞಾನ ಬಿಕ್ಷ ಪಾದಯಾತ್ರೆ ಮೂಲಕ 10520 ಕಿ.ಮೀ. […]
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ : ಜಿಲ್ಲೆಯ ರೈತರ ಸಮಸ್ಯೆಗೆ ಸ್ಪಂದಿಸದೆ ನಾಪತ್ತೆಯಾಗಿರುವ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಅವರನ್ನು ಹುಡುಕಿಕೊಟ್ಟು ಮಳೆ ಆರ್ಭಟಕ್ಕೆ ನಾಶವಾಗಿರುವ ಪ್ರತಿ ಎಕರೆ ವಾಣಿಜ್ಯ ಬೆಳೆಗೆ 5 ಲಕ್ಷ ಪರಿಹಾರ ನೀಡಬೇಕೆಂದು ರೈತಸಂಘದಿಂದ ತೋಟಗಾರಿಕೆ ಇಲಾಖೆ ಕಚೇರಿ ಮುಂದೆ ನಷ್ಟ ಬೆಳೆ ಸಮೇತ ಹೋರಾಟ ಮಾಡಿ ಉಪನಿರ್ದೇಶಕರ ಮುಖಾಂತರ ಸರ್ಕಾರಕ್ಕೆ ಮನವಿ ನೀಡಿ ಆಗ್ರಹಿಸಲಾಯಿತು . ಜಿಲ್ಲೆಯ ಗಂಧ ಗಾಳಿ ಗೊತ್ತಿಲ್ಲದ ಶೋಕಿಗಾಗಿ ಉಸ್ತುವಾರಿ ಸಚಿವರ ಸ್ಥಾನ ಪಡೆದು ಜಿಲ್ಲೆಯ […]
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ : ಬಿಡ್‌ದಾರರಿಗೆ ಮಳಿಗೆಗಳನ್ನು ಬಿಡಿಸಿಕೊಡಬೇಕೆಂದು ಆಗ್ರಹಿಸಿ ಡಾ.ಸೈಯದ್ ಹಾಸೀಮ್ ಅಶ್ರಫ್ ತಂಡದವರು ಇಲ್ಲಿನ ನಗರಸಭೆ ಮುಂದೆ ಪ್ರತಿಭಟನೆ ನಡೆಸಿದರು. ಕಳೆದ ಒಂದೂವರೆ ವರ್ಷದ ಹಿಂದೆ ನಗರಸಭೆ ಮಳಿಗೆಗಳನ್ನು ಹರಾಜಿನಲ್ಲಿ ಕೂಗಿ ಯಶಸ್ವಿ ಆಗಿದ್ದರೂ ಇದುವರೆಗೂ ಅಂಗಡಿಗಳನ್ನು ಬಿಡ್‌ದಾರರಿಗೆ ಬಿಟ್ಟುಕೊಡದೆ ಪೌರಾಯುಕ್ತರು ಮೀನಾಮೇಷ ಎಣಿಸುತ್ತಿದ್ದು ರಾಜಕೀಯ ಹಾಗೂ ಹಣದ ಒತ್ತಡಕ್ಕೆ ಅಧಿಕಾರಿಗಳು ಮಣಿಯುತ್ತಿದ್ದಾರೆಂದು ಡಾ.ಅಶ್ರಫ್ ಆರೋಪಿಸಿದರು . ಹರಾಜು ಕೂಗಿದ ಮರುಗಳಿಗೆಯೇ ಶೇ .೫೦ ಹಣ ಪಾವತಿ ಆಗಿದ್ದು ೨೦ ದಿನದ ಹಿಂದೆ […]
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ : ಕೋಲಾರ ನಾಗರಿಕ ಪೊಲೀಸ್ ಇಲಾಖೆಗೆ ೧೯೯೪ ಅ . ೫ ರಂದು ಕಾನ್ಸ್‌ಟೇಬಲ್ ಹುದ್ದೆಗೆ ಆಯ್ಕೆಯಾದ ಟೈಗರ್ ಬ್ಯಾಚ್ ಸವಿನೆನಪಿಗಾಗಿ ನಗರದ ಮುಸ್ಸಂಜೆ ಮನೆ ವೃದ್ಧಾಶ್ರಮಕ್ಕೆ ಹಾಸಿಗೆ – ದಿಂಬು , ಜಮಖಾನ ಕೊಡುಗೆಯಾಗಿ ನೀಡಲಾಗಿದೆ ಎಂದು ರಾಷ್ಟ್ರಪತಿ ಪದಕ ಪುರಸ್ಕೃತ ಪಿಎಸ್‌ಐ ಸೋಮಶಂಕರ್ ತಿಳಿಸಿದರು . ಭಾನುವಾರ ನಗರದ ಪಿಸಿ ಬಡಾವಣೆಯ ಮುಸ್ಸಂಜೆ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಟೈಗರ್ ಬ್ಯಾಚ್‌ನ ಎಲ್ಲಾ ಪೊಲೀಸ್ ಸಿಬ್ಬಂದಿ ಪ್ರತಿವರ್ಷದಂತೆ ಈ ವರ್ಷವೂ […]
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ : ನಗರದ ರೋಟರಿ ಸೆಂಟ್ರಲ್ ವತಿಯಿಂದ ಭಾನುವಾರ ನಗರದ ಎಪಿಎಂಸಿ ಟೊಮೇಟೋ ಮಾರುಕಟ್ಟೆಯಲ್ಲಿ ರೈತರು , ಕೂಲಿ ಕಾರ್ಮಿಕರಿಗೆ ಪೌಷ್ಠಿಕ ಪಾನೀಯವನ್ನು ರೋಟರಿ ಸೆಂಟ್ರಲ್ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಹಾಗೂ ಕಾರ್ಯದರ್ಶಿ ಎಸ್.ಸುಧಾಕರ್ ವಿತರಿಸಿದರು . ವಿಷ್ಯಾದ ಅತಿ ದೊಡ್ಡ ಎರಡನೇ ಟೊಮೇಟೋ ಮಾರುಕಟ್ಟೆ ಎಂದು ಹೆಸರಾಗಿರುವ ಕೋಲಾರ ಎಪಿಎಂಸಿ ಮಾರುಕಟ್ಟೆಲ್ಲಿ ನಿತ್ಯವೂ ನೂರಾರು ಟನ್ ಟೊಮೆಟೋ ಆವಕವಾಗಿ , ಇದನ್ನು ನಿತ್ಯ ಬೆಳಿಗ್ಗೆ ಹರಾಜು ಮಾಡಿಹೊರ ರಾಜ್ಯ ಮತ್ತು ದೇಶಗಳಿಗೆ ಕಳುಹಿಸಲಾಗುತ್ತದೆ […]
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ನೀರಾವರಿಯನ್ನು ಬಳಸಿಕೊಳ್ಳಲು ಇಚ್ಛೆಯುಳ್ಳ ರೈತರು ತೋಟಗಾರಿಕಾ ಇಲಾಖೆಯನ್ನು ಸಂಪರ್ಕಿಸಬೇಕು . ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಪಾಲಿಹೌಸ್ ನಿರ್ಮಾಣ ಮಾಡುವ ರೈತರಿಗೆ ಶೇಕಡ 50 ರಷ್ಟು ಸಮುದಾಯ ಕೃಷಿ ಹೊಂಡಗಳಿಗೆ 4 ಲಕ್ಷ ಮತ್ತು ಸಣ್ಣ ಕೃಷಿ ಹೊಂಡಗಳಿಗೆ 70 ಸಾವಿರ ಸಹಾಯಧನ ನೀಡಲಾಗುತ್ತದೆ . ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಯೋಜನೆಯಡಿಯಲ್ಲಿ ಯಾವುದೇ ಬಹುವಾರ್ಷಿಕ ತೋಟಗಾರಿಕೆ ಬೆಳೆಗಳಾದ ಮಾವು , ಸೀಬೆ , ಸಪೋಟ ಹಾಗೂ ಡ್ರಾಗನ್ ಫ್ರಟ್ ಬೆಳೆಯುವುದಕ್ಕೆ ಇಲಾಖೆ […]
ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ : ಎಸ್ಸಿ , ಎಸ್ಟಿಗಳಿಗೆ ಸರ್ಕಾರ ನೀಡುತ್ತಿರುವ ಎಲ್ಲ ಸೌಲಭ್ಯಗಳನ್ನು ಹಿಂದುಳಿದ ಜಾತಿಗಳ ಜನಾಂಗದವರಿಗೂ ಒದಗಿಸಬೇಕೆಂದು ಪ್ರವರ್ಗ ೧ ಜಾತಿಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷ ಆರ್.ಜೋಗಮಲ್ ಆಗ್ರಹಿಸಿದರು . ಸುದ್ದಿಗಾರರೊಂದಿಗೆ ಮಾತನಾಡಿ , ೧೯೯೪ ರವರೆಗೆ ಸರ್ಕಾರ ಹಿಂದುಳಿದ ಜಾತಿಗಳ ಜನಾಂಗದವರಿಗೆ ಎಸ್ಸಿ , ಎಸ್ಟಿಗಳ ಮಾದರಿಯಲ್ಲಿ ಸೌಲಭ್ಯಗಳನ್ನು ಒದಗಿಸಿದ್ದರೂ ನಂತರದಲ್ಲಿ ಏಕಾಏಕಿ ಸ್ಥಗಿತಗೊಳಿಸುವ ಮೂಲಕ ಅನ್ಯಾಯ ಮಾಡಿರುವುದರಿಂದಾಗಿ ಈಗಲಾದರೂ ನ್ಯಾಯ ಒದಗಿಸಬೇಕಾಗಿದೆ ಎಂದರು . ವಿದ್ಯಾರ್ಥಿ ವೇತನ […]
ವರದಿ ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ : ನಾವು ಆಧುನಿಕ ಸಿದ್ಧ ಪಡಿಸಿದ ಬೀಜ ಸಂಸ್ಕೃತಿ ಹಾಗೂ ರಸಾಯನಿಕ ಔಷಧಿಗಳನ್ನು ಅವಲಂಭಿತ ಕೃಷಿ ಪದ್ಧತಿಯನ್ನು ಅನುಸರಿಸುತ್ತಾ , ನಮ್ಮ ಪಾರಂಪರಿಕ ಕೃಷಿ ಪದ್ಧತಿಗಳನ್ನು ಮರೆಯುತ್ತಿದ್ದೇವೆ . ನಮ್ಮ ನೆಲದ ಪಾರಂಪರಿಕ ಕೃಷಿ ಪದ್ಧತಿಯ ಬಗೆಗಿನ ಸ್ಥಳೀಯ ಸಾಂಪ್ರದಾಯಿಕ ಜ್ಞಾನಾಧ್ಯಯನ ನಡೆಸಿ ದಾಖಲು ಮಾಡುವ ಅಗತ್ಯವಿದೆ . ಹಾಗಾಗಿ ರೈತರು ಸಾವಯವ ಕೃಷಿಗೆ ಒತ್ತು ನೀಡಬೇಕೆಂದು ಎಂದು ಕೋಲಾರ ಜಿಲ್ಲಾಧಿಕಾರಿ ಡಾ . ಸಲ್ವಮಣಿ ಕರೆ ನೀಡಿದರು . […]
ವರದಿ : ಶಬ್ಬೀರ್ ಅಹಮ್ಮದ್ ಶ್ರೀನಿವಾಸಪುರ ಕೋಲಾರ : – ದೈವಕೃಪೆಯಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದ್ದು , ಕೃಷಿ ಚಟುವಟಿಕೆಗಳಿಗೆ ರೈತರಿಗೆ ಅಗತ್ಯವಾದ ಸಾಲ ಸೌಲಭ್ಯ ಒದಗಿಸುವ ಮೂಲಕ ಅನ್ನದಾತನ ನೆರವಿಗೆ ನಿಲ್ಲಲು ಡಿಸಿಸಿ ಬ್ಯಾಂಕ್ ಸಂಕಲ್ಪ ಮಾಡಿದೆ ಎಂದು ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಿಳಿಸಿದರು . ನಗರದ ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಆವರಣದಲ್ಲಿ ಶುಕ್ರವಾರ ವಿಜಯದಶಮಿ ಅಂಗವಾಗಿ ನಡೆದ ಆಯುಧಪೂಜೆಯಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು . ಬ್ಯಾಂಕ್ ಅಭಿವೃದ್ಧಿಯ ಮೂಲಕ ೧೫ […]