ಕೋಲಾರ,ಆ.16: ಚೆನ್ನೈ ಕಾರಿಡಾರ್ ರಸ್ತೆ ಅಭಿವೃದ್ದಿಗೆ ಭೂಮಿ ಕಳೆದುಕೊಂಡಿರುವ ಗಡಿಭಾಗದ ಏತುರಹಳ್ಳಿ, ಚುಕ್ಕನಹಳ್ಳಿ ರೈತರ ಮರಗಿಡಗಳ ಎರಡನೇ ಕಂತಿನ ಪರಿಹಾರ ವಿತರಣೆ ಮಾಡುವವರೆಗೂ ಕಾಮಗಾರಿ ಸ್ಥಗಿತಗೊಳಿಸುವಂತೆ ಬುಧವಾರ ನಡೆದ ರೈತರ ಸಭೆಯಲ್ಲಿ ಗುತ್ತಿಗೆದಾರರಿಗೆ ಮಾನ್ಯ ಜಿಲ್ಲಾಧಿಕಾರಿಗಳಾದ ಆಕ್ರಂ ಪಾಷರವರು ಸೂಚನೆ ನೀಡಿದರು.ಮುಳಬಾಗಿಲು ಗಡಿಭಾಗದ ಏತುರಹಳ್ಳಿ ಚುಕ್ಕನಹಳ್ಳಿ ರೈತರಿಗೆ ಬರಬೇಕಾದ 2 ನೇ ಕಂತಿನ ಮರಗಿಡಗಳ ಪರಿಹಾರ ನೀಡಲು ಅಧಿಕಾರಿಗಳ ನಿರ್ಲಕ್ಷದ ಬಗ್ಗೆ ನೊಂದ ರೈತರಾದ ರಾಜಣ್ಣ, ನಟರಾಜ್‍ರವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಾಗ ಸಭೆ ಕರೆದು ಸಮಸ್ಯೆ ಬಗೆಹರಿಸುತ್ತೇವೆಂದು […]
ಶ್ರೀನಿವಾಸಪುರ: ಶ್ರೀನಿವಾಸಪುರ ತಾಲ್ಲೂಕಿನ ಯಚ್ಚನಹಳ್ಳಿ ಕ್ರಾಸ್ ಸಮೀಪದ ವಿಐಪಿ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್ ಮಾತನಾಡಿ ದೇಶದ ಸ್ವಾತಂತ್ರ್ಯ ರಕ್ಷಣೆ ಎಲ್ಲರ ಹೊಣೆ’ ಎಂದರು. ಭಾರತ ಸ್ವಾತಂತ್ರ್ಯಾನಂತರ ಅಭಿವೃದ್ಧಿಯ ಹಾದಿಯಲ್ಲಿ ಸಾಗುತ್ತಿದೆ. ದೇಶದ ಬಹುದೊಡ್ಡ ಜನಸಂಖ್ಯೆಗೆ ಮೂಲ ಸೌಕರ್ಯ ಒದಗಿಸುವಲ್ಲಿ ಯಶಸ್ವಿಯಾಗಿದೆ. ನಾಗರಿಕರ ತಲಾದಾಯದಲ್ಲೂ ಹೆಚ್ಚಳವಾಗಿದೆ. ಈ ಪರಿಸ್ಥಿತಿಗೆ ಕಾರಣರಾದ ಸ್ಯಾತಂತ್ರ್ಯ ಹೋರಾಟಗಾರಿಗೆ ನಾವು ಕೃತಜ್ಞರಾಗಿರಬೇಕು ಎಂದು ವಿಐಪಿ ಶಾಲೆಯ ಅಧ್ಯಕ್ಷ ಹಾಗೂ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಡಾ. […]
ಕೋಲಾರ:- ಪ್ರತಿಯೊಬ್ಬರೂ ಜಾತಿ ಮತ ಧರ್ಮಗಳನ್ನು ಮೀರಿ ಭಾರತೀಯರೆಂಬ ಭಾವನೆಯಲ್ಲಿ ದೇಶದ ಅಖಂಡತೆ ಮತ್ತು ಸಾರ್ವಭೌಮತ್ವತೆಯನ್ನು ಕಾಪಾಡಬೇಕೆಂದು ಭಾರತ ಸೇವಾದಳ ಗೌರವಾಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಹೇಳಿದರು.ನಗರದ ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಭಾರತ ಸೇವಾದಳ ಜಿಲ್ಲಾ ಸಮಿತಿ, ಕ್ಷೇತ್ರ ಶಿಕ್ಷಣಾಕಾರಿಗಳ ಕಚೇರಿ, ಹಳೇ ಮಾಧ್ಯಮಿಕ ಶಾಲೆ, ಉರ್ದು ಮಾಧ್ಯಮಿಕ ಶಾಲೆ ಹಾಗೂ ರೋಟರಿ ಸೆಂಟ್ರಲ್‍ವತಿಯಿಂದ ಆಯೋಜಿಸಲಾಗಿದ್ದ 78 ನೇ ಸ್ವಾತಂತ್ರ್ಯೋತ್ಸವ ಸಮಾರಂಭದ ಧ್ವಜಾರೋಹಣ ಸಮಾರಂಭದಲ್ಲಿ ಪಾಲ್ಗೊಂಡು ನಿವೃತ್ತರಾಗಲಿರುವ ಬಿಇಒ ಕನ್ನಯ್ಯ ಹಾಗೂ ರಾಷ್ಟ್ರ ಪ್ರಶಸ್ತಿ ವಿಜೇತ ಸುಲೇಮಾನ್ ಖಾನ್‍ರನ್ನು […]
ಶ್ರೀನಿವಾಸಪುರ: ಸ್ವಾತಂತ್ರ್ಯ ಯೋಧರ ತ್ಯಾಗ, ಹೋರಾಟ ಹಾಗೂ ಬಲಿದಾನದ ಮೂಲಕ ಪಡೆದುಕೊಂಡಿರುವ ಸ್ವಾತಂತ್ರ್ಯ ಅಮೂಲ್ಯವಾದುದು. ಅದು ಕೈಜಾರದಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಹೇಳಿದರು.ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆದರಣಾ ಸಮಿತಿ ವತಿಯಿಂದ ಏರ್ಪಡಿಸಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ದೇಶಕ್ಕಾಗಿ ಜೈಲುವಾಸ ಅನುಭವಿಸಿದ, ಪ್ರಾಣಾರ್ಪಣೆ ಮಾಡಿದ ಸ್ವಾತಂತ್ರ್ಯ ಹೋರಾಟಗಾರರು ನಿತ್ಯ ಸ್ಮರಣೀಯರು ಎಂದು ಹೇಳಿದರು.ಸ್ವಾತಂತ್ರ್ಯಾನಂತರ ದೇಶ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. […]
ಕೋಲಾರ,ಆ.15: ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಂಘದ ಕಛೇರಿಯ ಕಾರ್ಯಾಲಯದಲ್ಲಿ 78ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.ಸಂಘದ ಅಧ್ಯಕ್ಷರಾದ ಬಿ.ವಿ.ಗೋಪಿನಾಥ್ ಧ್ವಜಾರೋಹಣವನ್ನು ನೆರವೇರಿಸಿದರು.ಕಾರ್ಯಕ್ರಮದಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ವಿ.ಮುನಿರಾಜು ಕೆ.ಎಸ್.ಗಣೇಶ್, ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್, ಖಜಾಂಚಿ ಎ.ಜಿ ಸುರೇಶ್‍ಕುಮಾರ್, ಹಿರಿಯ ಪತ್ರಕರ್ತರಾದ ಬಿ.ಸುರೇಶ್, ಕೆ.ಬಿ.ಜಗದೀಶ್, ಕೋ.ನಾ.ಪ್ರಭಾಕರ್, ನಾ.ಮಂಜುನಾಥ್, ಶ್ರೀನಿವಾಸಮೂರ್ತಿ, ಕೋ.ನಾ.ಮಂಜುನಾಥ್, ಎಚ್.ಕೆ.ರಾಘವೇಂದ್ರ, ಸಿ.ಜಿ.ಮುರಳಿ, ಅಯ್ಯೂಬ್ ಖಾನ್, ಆಸೀಫ್ ಪಾಷ, ಎಸ್ ಸೋಮಶೇಖರ್, ಸಮೀರ್ ಅಹಮದ್, ಎಸ್.ರವಿಕುಮಾರ್, ವೆಂಕಟೇಶಪ್ಪ, ಅಮರ್, ಮಂಜುನಾಥ್, ರಘುರಾಜ್, ರಾಘವೇಂದ್ರ, ಸುಧಾಕರ್, […]
ಕೋಲಾರ : ಕೋಲಾರ ನಗರದ ಸರ್ ಎಂ ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದ್ದ 78ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿ ನಲ್ಲಿ ಅತಿ ಹೆಚ್ಚು ಅಂಕೆ ಪಡೆದಿರುವ ನಗರದ ಮಹಿಳಾ ಸಮಾಜ ಪಿಯು ಕಾಲೇಜಿನ ವಿದ್ಯಾರ್ಥಿನಿ ಅರ್ಫೈನ್ ಮೊಹಮ್ಮದಿ ಬಿನ್ ಮೊಹಮ್ಮದ್ ಸಿಬ್ಬತ್ಉಲ್ಲಾ ಮಹಾಲಕ್ಷ್ಮಿ ಲೇಔಟ್ ಕೋಲಾರ ರವರಿಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ ಮೌಲಾನ ಅಬುಲ್ ಕಲಾಂ ಆಜಾದ್ ಪ್ರಶಸ್ತಿ ನೀಡಿ ಗೌರವಹಿಸಿದ್ದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ , […]
ಶ್ರೀನಿವಾಸಪುರ: ಪಟ್ಟಣ ಹೊರವಲಯದ ಪುಂಗನೂರು ಕ್ರಾಸ್‍ನಲ್ಲಿದ್ದ ನಾಡಪ್ರಭು ಕೆಂಪೇಗೌಡ ಪ್ರತಿಮೆ ಮಾನಸಿಕ ಅಸ್ವಸ್ಥನಿಂದ ಧ್ವಂಸ ಮಾಡಿರುವ ಘಟನೆ ನಡೆದಿದೆ.ಬುಧವಾರ ಬೆಳಗ್ಗೆ ಮಾನಸಿಕ ಅಸ್ವಸ್ಥ ಯರ್ರಂವಾರಪಲ್ಲಿ ಮೂಲದ ತಿರುಮಳಪ್ಪ (65 ವರ್ಷ) ಅಲಿಯಾಸ್ ಗಾಂದಿ ಎಂಬ ವ್ಯಕ್ತಿಯು ದ್ವಸಂ ಗೊಳಿಸಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಕಂಬಕ್ಕೆ ಕಟ್ಟಿ ಹಾಕಿದ್ದು, ವಿಷಯ ತಿಳಿದ ತಕ್ಷಣ ಶ್ರೀನಿವಾಸಪುರ ಪಟ್ಟಣದ ಪೊಲೀಸರ ನಿರೀಕ್ಷಕ ಎಂ.ಬಿ.ಗೂರವಕೊಳ್ಳ ತಂಡ ಸ್ಥಳಕ್ಕೆ ಬೇಟಿ ನೀಡಿ ಮಾನಸಿಕ ಅಸ್ವಸ್ಥನನ್ನು ವಶಕ್ಕೆ ಪಡೆದು , ಸ್ಥಳೀಯರನ್ನ ಸಮದಾನ ಪಡಿಸಿದರು.ಪೊಲೀಸರು ದೂರು ದಾಖಲಿಸಿಕೊಂಡು […]
ಕೋಲಾರ : ಸ್ವಾತಂತ್ರ್ಯ ದಿನದ ಅಂಗವಾಗಿ ಆ.15ರ ನಗರದ ಸರ್ ಎಂ ವಿಶ್ವೇಶ್ವರಯ್ಯ ಜಿಲ್ಲಾ ಆಟದ ಮೈದಾನದಲ್ಲಿ ಮಾನ್ಯ ನಗರಾಧಿವೃದ್ಧಿ ಮತ್ತು ನಗರ ಯೋಜನೆ ಸಚಿವರು ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ಎಸ್. ಸುರೇಶ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ, ಸಂದೇಶ ನೀಡಿದರು. ಸರ್ಕಾರ ಜನರಿಗೆ ನೀಡಿದ ಭರವಸೆಯ ಪಂಚ ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲಾಗಿದೆ. ಕೋಲಾರ ಜಿಲ್ಲೆಗೆ ಭರಪೂರ ಅನುದಾನ ಒದಗಿಸಲು ಶ್ರಮ ವಹಿಸಲಾಗಿದೆ. ಒಳಚರಂಡಿ ಜಾಲ, […]
ಶ್ರೀನಿವಾಸಪುರ :- ತಾಲ್ಲೂಕಿನ ಹೊದಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿದ್ದ ಗೋಪಾಲ್ ರೆಡ್ಡಿ ರಾಜೀನಾಮೆ ನೀಡಿ ತೆರವಾಗಿದಂತಹ ಸ್ಥಾನಕ್ಕೆ ಆಗಸ್ಟ್ 13ರಂದು ಚುನಾವಣೆ ನಡೆದಿದ್ದು ನೂತನ ಅಧ್ಯಕ್ಷರಾಗಿ ಮಂಜುಳಾರವರು ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿ ಶ್ರೀನಿವಾಸನ್ ತಿಳಿಸಿದರು ಚುನಾವಣಾಧಿಕಾರಿ ಶ್ರೀನಿವಾಸನ್ ಮಾತನಾಡಿ ಹೊದಲಿ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 18 ಸದಸ್ಯರಿದ್ದು ಅಧ್ಯಕ್ಷರ ಸ್ಥಾನಕ್ಕೆ ಚುನಾವಣೆ ನಡೆದಂತಹ ಸಂದರ್ಭದಲ್ಲಿ ಅಧ್ಯಕ್ಷರ ಸ್ಥಾನಕ್ಕೆ ಎರಡು ನಾಮಪತ್ರಗಳು ಸಲ್ಲಿಕೆಯಾಗಿದ್ದು ಮಂಜುಳಾ ಹಾಗೂ ಲಕ್ಷ್ಮೀದೇವಮ್ಮ ಎಂಬವರು ನಾಮಪತ್ರ ಸಲ್ಲಿಕೆ ಮಾಡಿದ್ದು ಚುನಾವಣಾ ಪ್ರಕ್ರಿಯೆಂತೆ ಗೌಪ್ಯ ಮತದಾನ ಮಾಡಲಾಗಿ […]