
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ,ಏ.14: ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ರ 131ನೇ ಜಯಂತಿಯನ್ನು ಕೋಲಾರದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.ಅಂಬೇಡ್ಕರ್ ಅವರ ಭಾವಚಿತ್ರಗಳನ್ನೊಳಗೊಂಡ ಜಯಂತಿ ಮೆರವಣಿಗೆಯನ್ನು ಎಂ.ಜಿ ರಸ್ತೆಯಲ್ಲಿ ನಗರದ ಅಂಜುಮನ್-ಎ-ಇಸ್ಲಾಮೀಯ ವತಿಯಿಂದ ಪುಷ್ಪಾರ್ಚನೆ ಮಾಡುವ ಮೂಲಕ ಭಾತೃತ್ವವನ್ನು ಮೆರೆದು ಗಮನ ಸೆಳೆದರು. ಈ ಸಂದರ್ಭದಲ್ಲಿ ಮಾತನಾಡಿದ ಅಂಜುಮನ್-ಎ-ಇಸ್ಲಾಮೀಯ ಅಧ್ಯಕ್ಷ ಝಮೀರ್ ಅಹಮದ್, ಕ್ಲಾಕ್ ಟವರ್ ಪದೇ ಪದೇ ಚರ್ಚೆಗೆ ಗ್ರಾಸವಾಗುತ್ತಿದೆ. ನಮ್ಮ ಕೋಲಾರದಲ್ಲಿ ಹಿಂದೂ ಮುಸ್ಲಿಂ ಎಂಬ ಭೇದಭಾವ ಇಲ್ಲದೆ ಜೀವಿಸುತಿದ್ದೇವೆ. ರಾಜಕಾರಣಿಗಳು ತಮ್ಮ ಬೇಳೆ […]

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಜನ ರಾಜಕೀಯ ಬದಲಾವಣೆಗಾಗಿ ಹಾತೊರೆಯುತ್ತಿದ್ದಾರೆ. ಕೆಲವು ದಶಕಗಳಿಂದ ಇಲ್ಲಿನ ಆಡಳಿತದ ಚುಕ್ಕಾಣಿ ಹಿಡಿದಿದ್ದ ಇಬ್ಬರು ನಾಯಕರ ಬಗ್ಗೆ ಬೇಸತ್ತಿರುವ ಅವರು ಹೊಸ ನಾಯಕನ ಹುಡುಕಾಟದಲ್ಲಿ ತೊಡಗಿದ್ದಾರೆ ಎಂದು ಮುಖಂಡ ಗುಂಜೂರು ಎಸ್.ಶ್ರೀನಿವಾಸರೆಡ್ಡಿ ಹೇಳಿದರು.ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಾರ್ವಜನಿಕ ಸಮಾರಂಭದಲ್ಲಿ ಕೆಲವು ಜೆಡಿಎಸ್ ಬೆಂಬಲಿಗರನ್ನು ತಮ್ಮ ಬಣಕ್ಕೆ ಸೇರಿಸಿಕೊಂಡ ಬಳಿಕ ಮಾತನಾಡಿದ ಅವರು, ‘ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸಲಿದ್ದು, ಜನರ ಆಶೀರ್ವಾದ ದೊರೆತಲ್ಲಿ ತಾಲ್ಲೂಕಿನ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ’ […]

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಕೊರೊನಾದಿಂದ ಸಾವನ್ನಪ್ಪಿರುವ ವ್ಯಕ್ತಿಳ ಸಂಬಂಧಿಕರು ಪರಿಹಾರ ಧನವನ್ನು ಕುಟುಂಬದ ಕ್ಷೇಮಕ್ಕಾಗಿ ಬಳಸಬೇಕು ಎಂದು ತಹಶೀಲ್ದಾರ್ ಶರಿನ್ತಾಜ್ ಹೇಳಿದರು.ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಮಂಗಳವಾರ, ಕೊರೊನಾದಿಂದ ನಾವನ್ನಪ್ಪಿದ್ದ ವ್ಯಕ್ತಿಗಳ 38 ಕುಟುಂಬಗಳಿಗೆ ತಲಾ ರೂ.1ಲಕ್ಷ ಪರಿಹಾರ ಧನದ ಚೆಕ್ ವಿತರಿಸಿ ಮಾತನಾಡಿ, ಸರ್ಕಾರ ಮಂಜೂರು ಮಾಡಿರುವ ಹಣವನ್ನು ಮಕ್ಕಳ ಶಿಕ್ಷಣ ಹಾಗೂ ಕುಟುಂಬದ ಸಮಸ್ಯೆಗಳ ಪರಿಹಾರಕ್ಕೆ ಬಳಸಿಕೊಳ್ಳಬೇಕು ಎಂದು ಹೇಳಿದರು.ಕೊರೊನಾ ಬಗ್ಗೆ ಹರುವ ಭಾವನೆ ಬೇಡ. ಕೊರೊನಾ ನಿಯಮ ಪಾಲನೆ ಜೀವನದ ಅವಿಭಾಜ್ಯ […]

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರದಲ್ಲಿ ಪುನೀತ್ ರಾಜ್ಕುಮಾರ್ ಅಭಿಮಾನಿ ಬಳಗದ ವತಿಯಿಂದ ಭಾನುವಾರ ಶ್ರೀರಾಮ ನವಮಿ ಪ್ರಯುಕ್ತ ಪಾನಕ ಪನಿಯಾರ ವಿತರಿಸಲಾಯಿತು

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರದ ರಂಗಾರಸ್ತೆ ಸಮೀಪ ಭಾನುವಾರ ಕೆ.ಮೋಹನಾಚಾರಿ ವಿಶ್ವಕರ್ಮ ಅವರ ನೇತೃತ್ವದಲ್ಲಿ ನಾಗರಕಲ್ಲು ಸ್ಥಾಪನೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಮುಖಂಡರಾದ ರಾಜಣ್ಣ, ನಾಗರಾಜ್, ಹರೀಶ್, ಉಮಾಶಂಕರ್ ಇದ್ದರು.

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರದಲ್ಲಿ ಶ್ರೀರಾಮ ನವಮಿ ಪ್ರಯುಕ್ತ ಪುನೀತ್ ರಾಜ್ಕುಮಾರ್ ಅಭಿಮಾನಿ ಬಳಗ ಹಾಗೂ ಬೆಂಗಳೂರಿನ ನೇತ್ರ ಕಲಾ ಸಂಘದ ವತಿಯಿಂದ ಭಾನುವಾರ ರಾತ್ರಿ ಏರ್ಪಡಿಸಿದ್ದ ರಸ ಸಂಜೆ ಕಾರ್ಯಕ್ರಮವನ್ನು ಪೊಲೀಸ್ ಇನ್ಸ್ಪೆಕ್ಟರ್ ಸಿ.ರವಿಕುಮಾರ್ ಉದ್ಘಾಟಿಸಿದರು.

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಸಾಮರಸ್ಯ ಇದ್ದರೆ ಮಾತ್ರ ನೆಮ್ಮದಿ ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಡಾ. ವೈ.ಎ.ನಾರಾಯಣಸ್ವಾಮಿ ಹೇಳಿದರು.ತಾಲ್ಲೂಕಿನ ಯಚ್ಚನಹಳ್ಳಿ ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಸೀತಾರಾಮ ಕಲ್ಯಾಣೋತ್ಸವ ಸಮಾರಂಭದಲ್ಲಿ ಗ್ರಾಮದ ಅಲ್ಪ ಸಂಖ್ಯಾತರಿಗೆ ವಿವಿಧ ಸೌಲಭ್ಯ ವಿತರಿಸಿ ಮಾತನಾಡಿ, ಯಚ್ಚನಹಳ್ಳಿ ಗ್ರಾಮವನ್ನು ಮಾದರಿ ಗ್ರಾಮವನ್ನಾಗಿ ರೂಪಿಸಲಾಗಿದೆ. ಗ್ರಾಮಸ್ಥರಿಗೆ ಅಗತ್ಯವಾದ ಎಲ್ಲ ಮೂಲ ಸೌಕರ್ಯ ಕಲ್ಪಿಸಲಾಗಿದೆ ಎಂದು ಹೇಳಿದರು.ಎರಡನೇ ಹಂತದಲ್ಲಿ ಕೆಸಿ ವ್ಯಾಲಿ ಕಾಮಗಾರಿ ಕೈಗೊಳ್ಳಲು ಸರ್ಕಾರ ರೂ.450 ಕೋಟಿ ಬಿಡುಗಡೆ ಮಾಡಿದೆ. ಮುದುವಾಡಿ […]

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ:- ತಾಲ್ಲೂಕಿನ ವಕ್ಕಲೇರಿಯಲ್ಲಿ ಶ್ರೀರಾಮನವಮಿ ಅಂಗವಾಗಿ ಸೀತಾರಾಮ ಕಲ್ಯಾಣೋತ್ಸವ ಹಾಗೂ ರಥೋತ್ಸವ ಶ್ರದ್ಧಾಭಕ್ತಿಗಳಿಂದ ನೇರವೇರಿತು.ಉತ್ಸವದಲ್ಲಿ ಪಾಲ್ಗೊಂಡಿದ್ದ ಮುಖಂಡ ವಕ್ಕಲೇರಿ ರಾಮು, ಗಾಂಧೀಜಿಯವರು ಭಾರತ ರಾಮರಾಜ್ಯವಾಗಬೇಕು ಎಂದು ನಂಬಿದ್ದರು ಅಂದರೆ ರಾಮನ ಆಡಳಿತ ಎಷ್ಟು ಜನಪರವಾಗಿತ್ತು ಎಂಬುದನ್ನು ಗಮನಿಸಬೇಕಾಗುತ್ತದೆ ಎಂದರು.ಜನತೆ ಎಷ್ಟೇ ಸಮಸ್ಯೆಗಳಿಂದ್ದರೂ ತಮ್ಮ ಸಂಪ್ರದಾಯ ಹಾಗೂ ಭಕ್ತಿ,ಶ್ರದ್ಧೆಯಿಂದ ವಿಮುಖರಾಗದೇ ರಾಮೋತ್ಸವ ಆಚರಿಸುತ್ತಿದ್ದು, ಎಲ್ಲರಿಗೂ ಅವರು ಶುಭಾಷಯ ಕೋರಿದರು.ಪೂಜಾ ಕಾರ್ಯಗಳ ನೇತೃತ್ವವನ್ನು ಅರ್ಚಕರಾದ ಸುಬ್ಬಣ್ಣಸ್ವಾಮಿ, ರಾಜು, ಮುರಳಿ ವಹಿಸಿಕೊಂಡಿದ್ದು, ಮುಖಂಡ ವಕ್ಕಲೇರಿ ರಾಮು, ಟೈಲರ್ […]