ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ ಮಾ 8 : ಮಹಿಳೆಯರನ್ನು ಗಂಡು ಹೆಣ್ಣು ಎಂಬ ಭೇದಭಾವ ಮಾಡದೆ ಸಮಾನ ದೃಷ್ಟಿಯಲ್ಲಿ ನೋಡಿದಾಗ ಮಾತ್ರ ಸಮಾಜ ಉನ್ನತ ಮಟ್ಟದಲ್ಲಿರುತ್ತದೆ ಹೀಗಾಗಿ ಮಹಿಳೆಯರು ಕೇವಲ ಕುಟುಂಬಕಷ್ಟೇ ಸೀಮಿತವಾಗದೆ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಉಪ ಪ್ರಾಂಶುಪಾಲರಾದ ಡಿ.ನಾಗವೇಣಿ ತಿಳಿಸಿದರು.ತಾಲ್ಲೂಕಿನ ಹರಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ , ತಮಗೆ ನೀಡಿದ ಆತ್ಮೀಯ ಸನ್ಮಾನ ಸ್ವೀಕರಿಸಿ ಅವರು […]
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ನಂಗಲಿ; ಮಾ.8: ಘೋಷಣೆಗೆ ಸೀಮಿತವಾದ ಮಹಿಳಾ ಸಬಲೀಕರಣ ಸರ್ಕಾರಗಳ ವಿರುದ್ಧ ರೈತಸಂಘದ ತಾಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಆರೋಪ ಮಾಡಿದರು.ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ವಡ್ಡಹಳ್ಳಿ ಪ್ರಗತಿಪರ ರೈತ ಮಹಿಳೆ ರತ್ನಮ್ಮ ಅವರ ತೋಟದಲ್ಲಿ ಗಿಡ ನೆಟ್ಟು, ಮಹಿಳೆಯರನ್ನು ಸನ್ಮಾನಿಸಿ ಮಾತನಾಡಿದ ಅವರು, ಚುನಾವಣೆ ಸಮೀಪಿಸಿದರೆ ಸಾಕು ರಾಜಕಾರಣಿಗಳಿಗೆ ಮಹಿಳಾ ಸಬಲೀಕರಣ ನೆನಪಾಗುತ್ತದೆ. ಮಹಿಳೆಯರ ಸಮಾವೇಶ ಮಾಡಿ ಸಬಲೀಕರಣದ ಬಗ್ಗೆ ಪುಂಕಾನು ಪುಂಕವಾಗಿ ಮಾತನಾಡಿ ಬಜೆಟ್ನಲ್ಲಿ ಮಹಿಳೆಯರಿಗಾಗಿ ಒಂದಿಷ್ಟು ಘೋಷಣೆಗಳನ್ನು ಮಾಡಿ ಅನುದಾನ […]
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ : ಮಾನವನಿಗೆ ಕಣ್ಣು ಎಂಬುದು ಪ್ರಮುಖವಾದ ಅಂಗವಾಗಿದೆ . ಪಂಚೇಂದ್ರಿಯಗಳಲ್ಲಿ ಇದು ಒಂದಾಗಿದ್ದು , ಕಣ್ಣು ಇಲ್ಲದಿದ್ದರೆ ಈ ಪ್ರಪಂಚವನ್ನು ನೋಡುವುದಕ್ಕೆ ಸಾಧ್ಯವಿಲ್ಲ . ಕಣ್ಣಿನ ಆರೋಗ್ಯಕ್ಕೆ ಪ್ರತಿಯೊಬ್ಬರು ಹೆಚ್ಚು ಒತ್ತು ನೀಡಿ ಎಂದು ಜಿಲ್ಲಾಧಿಕಾರಿಗಳಾದ ವೆಂಕಟ್ ರಾಜ ಅವರು ತಿಳಿಸಿದರು . ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿ ಆವರಣ ಸಭಾಂಗಣದಲ್ಲಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ […]
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ:- ಸ್ವಚ್ಛತಾ ಶ್ರಮದಾನ ಕಾರ್ಯಕ್ರಮಗಳನ್ನು ನಡೆಸುವುದರ ಜೊತೆಗೆ ನಿರಂತರ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಸ್ಥಳೀಯರಲ್ಲಿ ಜಾಗೃತಿ ಅರಿವು ಉಂಟು ಮಾಡಬೇಕೆಂದು ಬೆಂಗಳೂರು ಉತ್ತರ ವಿವಿ ಉಪ ಕುಲಪತಿ ಪ್ರೊ|ನಿರಂಜನ ವಾನಳ್ಳಿ ಹೇಳಿದರು.ನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಅವರು ಅವರು ಮಾತನಾಡುತ್ತಿದ್ದರು.ರಾಷ್ಟ್ರೀಯ ಸೇವಾ ಕಾರ್ಯಕ್ರಮ ಶಿಬಿರದಲ್ಲಿ ಅಂತರಗಂಗೆ ಬೆಟ್ಟವನ್ನು ಸ್ವಚ್ಛಗೊಳಿಸುವ ಕಾರ್ಯಕ್ರಮ ಕೈಗೆತ್ತಿಕೊಂಡಿರುವುದು ಶ್ಲಾಘನೀಯ ಕಾರ್ಯವಾಗಿದೆ, ಹಾಗೆಯೇ ಅಂತರಗಂಗೆ ಬೆಟ್ಟ ಪರಿಸರವನ್ನು ನಿರಂತರವಾಗಿ […]
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ : ಶ್ರಮಿಕರಿಗೆ ಸಾಲ ಕೊಡಲು ರಾಷ್ಟ್ರೀಕೃತ ಬ್ಯಾಂಕ್ಗಳು ಹತ್ತಾರು ದಾಖಲೆ ಕೇಳಿ ವರ್ಷಾನುಗಟ್ಟಲೇ ಸತಾಯಿಸುತ್ತವೆ . ಸೂಟು ಬೂಟು ಹಾಕಿಕೊಂಡು ಇಂಗ್ಲಿಷ್ನಲ್ಲಿ ಮಾತನಾಡಿದದರೆ ಅವನ ಕೈಕುಲಕಿ ನೂರಾರು ಸಾವಿರ ಕೋಟಿ ರೂ ನೀಡುತ್ತವೆ .10-20 ಸಾವಿರ ರೂ ಸಾಲ ಪಡೆದವರ ಮನೆ ಹರಾಜು ಹಾಕುವ ದೇಶದ ಪರಿಸ್ಥಿತಿ ಬದಲಾಯಿಸ ಬೇಕಾಗಿದೆ ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು .ಪಟ್ಟಣದ ರಾಜಧಾನಿ ಮಂಡಿಯಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಶ್ರೀನಿವಾಸಪುರ ಶಾಖೆ , […]
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಸಂ.ಕ.ಸಮಾಚಾರ, ರಾಯಲ್ಪಾಡು 1 : ಮಹಿಳೆಯರು ಸ್ತ್ರೀ ಶಕ್ತಿ , ಸ್ವ ಸಹಾಯ ಸಂಘಗಳ ಮೂಲಕ ಸರಕಾರದ ಸೌಲಭ್ಯಗಳನ್ನು ಸದ್ಭಳಸಿಕೊಂಡು ಅರ್ಥಿಕ ಅಭಿವೃದ್ದಿ ಹೊಂದಬೇಕು ಎಂದು ಶಾಸಕರಾದ ಕೆ.ಆರ್.ರಮೇಶ್ಕುಮಾರ್ ತಿಳಿಸಿದರು.ಲಕ್ಷ್ಮೀಪುರ ಗ್ರಾ.ಪಂ. ಬಳಿ ಡಿಸಿಸಿ ಬ್ಯಾಂಕ್ ವತಿಯಿಂದ 4ಕೋಟಿ 10ಲಕ್ಷ ಸಾಲವನ್ನು 82 ಸ್ತ್ರೀ ಶಕ್ತಿ ಸಂಘಗಳಿಗೆ ಶನಿವಾರ ವಿತರಿಸಿ ಮಾತನಾಡಿದರು.ಗ್ರಾಮೀಣ ಭಾಗದಲ್ಲಿನ ಮಹಿಳೆಯರು ಬ್ಯಾಂಕ್ವತಿಯಿಂದ ಸಾಲವನ್ನು ಪಡೆದ ಹಣದಿಂದ ಕುಟುಂಬವನ್ನು ಅರ್ಥಿಕ ಸಭಲಾಗಲು ಬೇಕಾಗುವ ರೀತಿಯಲ್ಲಿ ಹಣವನ್ನು ಬಳಸಿಕೊಳ್ಳುವಂತೆ ಮನವಿ ಮಾಡಿದರು.ಪ್ರಾರಂಭದ […]
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಶ್ರೀನಿವಾಸಪುರ: ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು ರಾಜ್ಯ ಬಜೆಟ್ನಲ್ಲಿ ಕೋಲಾರ ಜಿಲ್ಲೆಯನ್ನು ಕಡೆಗಣಿಸಿರುವುದನ್ನು ಪ್ರತಿಭಟಿಸಿ ರಸ್ತೆ ತಡೆ ನಡೆಸಿದರು. ಇದರಿಂದ ಎಂಜಿ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡು ಪ್ರಯಾಣಿಕರು ಪರದಾಡಿದರು.ಕರ್ನಾಟಕ ಪ್ರಾಂತ ರೈತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಆರ್.ಸೂರ್ಯನಾರಾಯಣ ಈ ಸಂದರ್ಭದಲ್ಲಿ ಮಾತನಾಡಿ, ರಾಜ್ಯ ಸರ್ಕಾರ ಕೋಲಾರ ಜಿಲ್ಲೆ ಅಭಿವೃದ್ಧಿ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಶುಕ್ರವಾರ ಮಂಡಿಸಲಾಗಿರುವ ಬಜೆಟ್ನಲ್ಲಿ ಜಿಲ್ಲೆಯನ್ನು ಸಂಪೂರ್ಣ ಕಡೆಗಣಿಸಲಾಗಿದೆ ಎಂದು ಹೇಳಿದರು.ಕರ್ನಾಟಕ ಪ್ರಾಂತ […]
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ:- ಅರ್ಹ ಬಡವರನ್ನು ಹುಡುಕಿ ಡಿಸಿಸಿ ಬ್ಯಾಂಕಿನಿಂದ ಸಾಲ ಸೌಲಭ್ಯ ಒದಗಿಸಿ ಅವರಿಗೆ ಆರ್ಥಿಕವಾಗಿ ಶಕ್ತಿ ತುಂಬುವ ಮೂಲಕ ಸಮಾಜದಲ್ಲಿ ಆರ್ಥಿಕ ಅಸಮಾನತೆ ಹೋಗಲಾಡುಸುವ ಸಂಕಲ್ಪ ನನ್ನದಾಗಿದೆ ಎಂದು ಕೆಜಿಎಫ್ ಶಾಸಕಿ ರೂಪಕಲಾ ತಿಳಿಸಿದರು.ಕೆಜಿಎಫ್ ತಾಲ್ಲೂಕಿನ ಪಾರಂಡಹಳ್ಳಿ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಆಶ್ರಯದಲ್ಲಿ ಡಿಸಿಸಿ ಬ್ಯಾಂಕಿನಿಂದ ಮಹಿಳೆಯರು,ರೈತರಿಗೆ 70 ಲಕ್ಷ ರೂ ಸಾಲ ವಿತರಿಸಿ ಅವರು ಮಾತನಾಡುತ್ತಿದ್ದರು.ಸಾಲ ಉಳ್ಳವರಿಗೆ ಸಿಕ್ಕರೆ ಪ್ರಯೋಜನವಿಲ್ಲ, ಅರ್ಹ ಬಡ ಫಲಾನುಭವಿಗಳಿಗೆ ಸಾಲ […]
ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ ಕೋಲಾರ,ಮಾ-5, ರಾಜ್ಯ ಬಜೆಟ್ನಲ್ಲಿ ಕೋಲಾರ ಜಿಲ್ಲೆಯನ್ನು ನಿರ್ಲಕ್ಷ ಮಾಡಿ ತಿರುಪತಿ ನಾಮ ಹಾಕಿರುವ ಸರ್ಕಾರದ ವಿರುದ್ದ ರೈತ ಸಂಘದಿಂದ ಗಾಂಧಿ ವೃತ್ತದಲ್ಲಿ ಮುಖ್ಯ ಮಂತ್ರಿ ಹಾಗೂ ಜನ ಪ್ರತಿನಿಧಿಗಳ ಪ್ರಕೃತಿ ದಹನ ಮಾಡುವ ಮುಖಾಂತರ ಆಕ್ರೋಷ ವ್ಯಕ್ತಪಡಿಸಿದರು.ಹೋರಾಟದ ನೇತೃತ್ವ ವಹಿಸಿ ಮಾತನಾಡಿದ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ರಾಜ್ಯ ಬಜೆಟ್ನಲ್ಲಿ ಕೋಲಾರ ಜಿಲ್ಲೆಗೆ ವಿದರ್ಭ ಪ್ಯಾಕೇಜ್ ಘೋಷಣೆ ಮಾಡುವ ಜೊತೆಗೆ ನೀರಾವರಿ ವಿಷಯ ಆಧಾರಿತ ಕೈಗಾರಿಕೆಗಳ ಮಾವು ಸಂಸ್ಕರಣ ಘಟಕಗಳು ರಸ್ತೆ, […]