
ಪಟ್ಟಣದ ಹೊರವಲಯದ ಕ್ರೀಡಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಪೌರ ಕಾರ್ಮಿಕರ ಕ್ರೀಡಾ ಕೂಟ ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಗಳು ಮನೋಲ್ಲಾಸ ಉಂಟುಮಾಡುತ್ತವೆ. ಸದಾ ದುಡಿಯುವ ಪೌರ ಕಾರ್ಮಿಕರು ಆಟೋಟಗಳಲ್ಲಿ ಭಾಗವಹಿಸಬೇಕು. ಕೆಲಸದ ದಣಿವು ಮರೆತು ಆಟ ಆಡಬೇಕು ಎಂದು ಹೇಳಿದರು.ಉಪಾದ್ಯಕ್ಷೆ ಅಯೀಷಾ ನಾಯಜ್ ಮಾತನಾಡಿ, ನಿಮ್ಮ ವೈಯಕ್ತಿಕ ಆರೋಗ್ಯದ ಕಡೆವು ಹೆಚ್ಚಿನ ಕಾಳಜಿ ವಹಿಸಿ ಕಾರ್ಯನಿರ್ವಹಣಾ ವೇಳೆಯಲ್ಲಿ ಆರೋಗ್ಯದ ದೃಷ್ಠಿಯಿಂದ ತಮಗೆ ನೀಡಿರುವ ಸಾಧನ ಸಲಕರಣೆಗಳನ್ನು ಕಡ್ಡಾಯವಾಗಿ ಬಳಸಬೇಕೆಂದರು.ಮುಖ್ಯಾಧಿಕಾರಿ ಎಂ.ಜಯರಾಂ ಮಾತನಾಡಿ, ದೈಹಿಕ ಹಾಗೂ ಮಾನಸಿಕ ದೃಢತೆ ಕ್ರೀಡೆಗಳಿಂದ […]

ಶ್ರೀನಿವಾಸಪುರ 1 : ಸರ್ಕಾರದ ಆದೇಶ ಮೇರೆಗೆ ಜಿಲ್ಲಾಧಿಕಾರಿಗಳ ನಡೆ ಗ್ರಾಮದ ಕಡೆ ಕಾರ್ಯಕ್ರವನ್ನು ಆಯೋಜಿಸಲಾಗಿದ್ದು , ಸಾರ್ವಜನಿಕರು ಇಂತಹ ಕಾರ್ಯಕ್ರಮದಲ್ಲಿ ಪಾಲ್ಗುಂಡು ಸರ್ಕಾರದ ಸೌಲಭ್ಯಗಳ ಸದ್ಭಳಕೆ ಮಾಡಿಕೊಳ್ಳುವಂತೆ ತಹಶೀಲ್ದಾರ್ ಶರೀನಾತಾಜ್ ಹೇಳಿದರು.ರಾಯಲ್ಪಾಡು ಹೋಬಳಿಯ ಚಿಲ್ಲಾರ್ಲಪಲ್ಲಿ ಗ್ರಾಮದಲ್ಲಿ ಶನಿವಾರ ಜಿಲ್ಲಾಧಿಕಾರಿಗಳ ನಡೆ, ಹಳ್ಳಿಯ ಕಡೆ ಕಾರ್ಯಕ್ರಮದ ಅಡಿಯಲ್ಲಿ ತಾಲ್ಲೂಕು ಆಡಳಿತ ಮತ್ತು ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸಾರ್ವಜನಿಕರು ಸಮಸ್ಯೆ ಇದ್ದಲ್ಲಿ ಅರ್ಜಿ ಸಲ್ಲಿಸಬಹುದು. ಸಾರ್ವಜನಿಕರು ಗ್ರಾಮದಲ್ಲಿನ ಸ್ಮಶಾನವು ಒತ್ತುವರಿಯಾಗಿರುವ ಬಗ್ಗೆ […]

ಶ್ರೀನಿವಾಸಪುರ, ಸ.17, ತಾಲ್ಲೂಕಿನಾದ್ಯಂತ ಗ್ರಾಮೀಣ ಪ್ರದೇಶಗಳು ಹಾಗೂ ಡಾಬಾಗಳಲ್ಲಿ ಅಕ್ರಮ ಮದ್ಯ ಮಾರಾಟ ನಿಯಂತ್ರಣ ಮಾಡಲು ವಿಶೇಷ ತಂಡ ರಚನೆ ಮಾಡುವಂತೆ ರೈತ ಸಂಘದಿಂದ ಅಬಕಾರಿ ಇಲಾಖೆ ಮುಂದೆ ಹೋರಾಟ ಮಾಡಿ ಅಬಕಾರಿ ನಿರೀಕ್ಷಕರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.ವಿಧಾನ ಸಭಾಧ್ಯಕ್ಷ ಜನ ಪ್ರಿಯ ಶಾಸಕರಾದಂತಹ ಕೆ.ಆರ್.ರಮೇಶ್‍ಕುಮಾರ್ ರವರ ತವರು ಜಿಲ್ಲೆಯಲ್ಲೇ ಗ್ರಾಮೀಣ ಪ್ರದೇಶಗಳ ಅಕ್ರಮ ಮದ್ಯ ಮಾರಾಟ ದಂದೆ ರಾಜಾರೋಷವಾಗಿ ನಡೆಯುತ್ತಿದ್ದರು ಯಾವುದೇ ಕ್ರಮ ಕೈಗೊಳ್ಳದೆ ಮೌನವಾಗಿರುವುದಕ್ಕೆ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಶಾಸಕರ ವಿರುದ್ದ […]

ಶ್ರೀನಿವಾಸಪುರ: ಮಕ್ಕಳ ಹೃದಯದಲ್ಲಿ ಕನ್ನಡ ಸಂಸ್ಕøತಿಯನ್ನು ಬಿತ್ತಬೇಕು. ಕನ್ನಡ ಪ್ರೀತಿ ಅರಳುವಂತೆ ಮಾಡಬೇಕು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ.ಸೋಮಶೇಖರ ಹೇಳಿದರು.ತಾಲ್ಲೂಕಿನ ಲಕ್ಷ್ಮೀಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆ ಆವರಣದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಹಾಗೂ ಆತ್ಮಶ್ರೀ ಕನ್ನಡ ಸಾಂಸ್ಕøತಕ ಪ್ರತಿಷ್ಠಾನದ ವತಿಯಿಂದ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ಶುಕ್ರವಾರ ಗಡಿನಾಡ ಉತ್ಸವ ಹಾಗೂ ಗಡಿಯಲ್ಲಿ ಕನ್ನಡ ಕಲರವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಾಂಸ್ಕøತಿಕ ಅಸ್ಮಿತತೆ ಉಂಟುಮಾಡುವುದು ಹಾಗೂ ಕನ್ನಡ […]

ಕೋಲಾರ:- ಕೆ.ಜಿ.ಎಫ್ ನಗರದಲ್ಲಿ ಬಿಇಎಂಎಲ್ ಕಾರ್ಖಾನೆಯಿಂದ ಸರ್ಕಾರ ವಾಪಸ್ಸು ಪಡೆದಿರುವ 973.24 ಎಕರೆ ಬಳಕೆಯಾಗದ ಭೂಮಿಯನ್ನು ಕೆಐಡಿಬಿಗೆ ಹಸ್ತಂತರಿಸುವ ಪ್ರಕ್ರಿಯೆ ಮುಗಿಸಿ ಕೈಗಾರಿಕಾ ಟೌನ್‍ಷಿಫ್ ಸ್ಥಾಪನೆಗೆ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕಿ ರೂಪಕಲಾ ಶಶಿಧರ್ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.ವಿಧಾನಸಭೆಯಲ್ಲಿ ಶುಕ್ರವಾರ ಒಟ್ಟು 1870 ಎಕರೆ ಜಮೀನಿನ ಪೈಕಿ ಬಿಎಎಂಎಲ್ ಬಳಸಿಕೊಳ್ಳದ 973.24 ಎಕರೆ ಜಮೀನನ್ನು ಕಂದಾಯ ಇಲಾಖೆ ವಶದಿಂದ ಕೈಗಾರಿಕಾ ಇಲಾಖೆ, ಕೆಐಡಿಬಿಗೆ ಹಸ್ತಂತರಿಸುವ ಪ್ರಕ್ರಿಯೆ ವಿಳಂಬವಾಗಿರುವ ಕುರಿತು ಶಾಸಕಿ ರೂಪಕಲಾ […]

ಶ್ರೀನಿವಾಸಪುರ: ಕ್ಷೇತ್ರದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಮೊದಲ ಆದ್ಯತೆ ನೀಡಲಾಗಿದೆ. ಎಲ್ಲೇ ಮೂಲ ಸೌಕರ್ಯದ ಕೊರತೆ ಕಂಡುಬಂದರೂ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಕೆ.ಆರ್.ರಮೇಶ್ ಕುಮಾರ್ ಹೇಳಿದರು.ತಾಲ್ಲೂಕಿನ ಮುದಿಮಡಗು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಟಪಲ್ಲಿ ಗ್ರಾಮಕ್ಕೆ ಗುರುವಾರ ಶಾಸಕ ಕೆ.ಆರ್.ರಮೇಶ್ ಕುಮಾರ್ ಭೇಟಿ ನೀಡಿ ಸಾರ್ವಜನಿಕರ ಕುಂದು ಕೊರತೆ ವಿಚಾರಿಸಿ ಮಾತನಾಡಿದರು.ತಾಲ್ಲೂಕಿನಲ್ಲಿ ಸರ್ಕಾರಿ ಸೌಲಭ್ಯ ನೀಡುವಲ್ಲಿ ತಾರತಮ್ಯ ಮಾಡಿಲ್ಲ. ಯಾವುದೇ ಸೌಲಭ್ಯವಿರಲಿ ಪಕ್ಷಾತೀತವಾಗಿ ಅರ್ಹ ಫಲಾನುಭವಿಗಳಿಗೆ ನೀಡಲಾಗಿದೆ. ಮನೆ ಇಲ್ಲದವರಿಗೆ ಮನೆಗಳನ್ನು ನಿರ್ಮಿಸಿಕೊಡಲಾಗಿದೆ. ಕುಡಿಯುವ ನೀರಿನ ಸಮಸ್ಯೆ […]

ಕೋಲಾರ,ಸೆ-15, ದೇಶಕ್ಕಾಗಿ ತಮ್ಮ ಜೀವವನ್ನು ಮುಡುಪಾಗಿಟ್ಟಿರುವ ಮಾಜಿ ಸೈನಿಕರಿಗೆ ಭೂ ಮಂಜೂರಾತಿ ಮಾಡುವಂತೆ ರೈತ ಸಂಘದಿಂದ ಅಪರ ಜಿಲ್ಲಾಧಿಕಾರಿಗಳಾದ ಸ್ನೇಹಾ ರವರಿಗೆ ಮನವಿ ನೀಡಿ ಆಗ್ರಹಿಸಲಾಯಿತು.ಕಾಯುವ ಯೋಧ, ಅನ್ನ ಹಾಕುವ ರೈತರನ್ನು ಸರ್ಕಾರಗಳು ನಿರ್ಲಕ್ಷೆ ಮಾಡುತ್ತಾ ಬರುತ್ತಿವೆ. ಅತಿವೃಷ್ಟಿ ಅನಾವೃಷ್ಟಿಯಾದಾಗ ರೈತರು ಕಛೇರಿಗಳಿಗೆ ಪರಿಹಾರಕ್ಕೆ ಅಲೆದಾಡಿದರೆ ದೇಶದ ಗಡಿಭಾಗ ಕಾಯುವ ನಿವೃತ್ತ ಯೋಧÀರು ಸರ್ಕಾರ ಆದೇಶದಂತೆ ಭೂ ಮಂಜೂರಾತಿಗೆ ಕಛೇರಿಗೆ ಅಲೆದಾಡಿ ಸುಸ್ತಾಗಿ ಭೂಮಿಯು ಬೇಡ ಈ ಕಷ್ಟವು ಬೇಡ ಎಂದು ಕಣ್ಣೀರು ಸುರಿಸುತ್ತಿರುವ ಲಕ್ಷಾಂತರ ಯೋಧರ […]

ಶ್ರೀನಿವಾಸಪುರ: ಮಹಿಳೆಯರು ಸಾಲ ಸೌಲಭ್ಯ ಬಳಸಿಕೊಂಡು ಆರ್ಥಿಕವಾಗಿ ಮುಂದೆ ಬರಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.ತಾಲ್ಲೂಕಿನ ಗೌನಿಪಲ್ಲಿ ಗ್ರಾಮದಲ್ಲಿ ಸ್ಥಳೀಯ ದೊಡ್ಡಪ್ರಮಾಣದ ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಬುಧವಾರ ಏರ್ಪಡಿಸಿದ್ದ ಸ್ತ್ರೀ ಶಕ್ತಿ ಸಂಘಗಳ ಸದಸ್ಯರ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಗ್ರಾಮೀಣ ಮಹಿಳೆಯರನ್ನು ಖಾಸಗಿ ಲೇವಾದೇವಿಗಾರರ ಶೋಷಣೆಯಿಂದ ಮುಕ್ತಗೊಳಿಸಿ, ಸ್ವಾವಲಂಬಿ ಜೀವನ ನಡೆಸುವಂತೆ ಮಾಡುವ ಉದ್ದೇಶದಿಂದ ಸಾಲ ಸೌಲಭ್ಯ ಒದಗಿಸಲಾಯಿತು ಎಂದು ಹೇಳಿದೆ.ಈಗ ರೂ.50 ಬಡ್ಡಿರಹಿತ ಹಾಗೂ ಶೇ.4 ರಷ್ಟು ಬಡ್ಡಿ ದರದಲ್ಲಿ […]