ಶ್ರೀನಿವಾಸಪುರ: ಫಲಾನುಭವಿಗಳನ್ನು ಪಾರದರ್ಶಕವಾಗಿ ಅರ್ಜಿದಾರರ ಸಮ್ಮುಖದಲ್ಲಿ ಲಾಟರಿ ಎತ್ತುವುದರ ಮೂಲಕ ಆಯ್ಕೆ ಮಾಡಲಾಗುವುದು ಎಂದು ತಾಲ್ಲೂಕು ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಎಂ.ಶ್ರೀನಿವಾಸನ್ ಹೇಳಿದರು.ಪಟ್ಟಣದ ತೋಟಗಾರಿಕಾ ಇಲಾಖೆ ಕಚೇರಿ ಆವರಣದಲ್ಲಿ ತೋಟಗಾರಿಕಾ ಇಲಾಖೆ, ಜಿಲ್ಲಾ ಪಂಚಾಯಿತಿ, ರಾಷ್ಟ್ರೀಯ ತೋಟಗಾರಿಕಾ ಮಿಷನ್ ಹಾಗೂ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಲಾಟರಿ ಮುಖಾಂತರ ಫಲಾನುಭವಿಗಳನ್ನು ಆಯ್ಕೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸರ್ಕಾರ ನಿಗದಿಪಡಿಸಿದ ಯೂನಿಟ್‍ಗಳಿಗಿಂತಲೂ ಹೆಚ್ಚಿನ ಸಂಖ್ಯೆಯ ಅರ್ಜಿಗಳು ಬಂದಾಗ ಆಯ್ಕೆ ಕಷ್ಟವಾಗುತ್ತದೆ. ಅಧಿಕಾರಿಗಳು […]

Read More

ಶ್ರೀನಿವಾಸಪುರ: ಪಟ್ಟಣದ ಪುರಸಭಾ ಕಚೇರಿ ಸಭಾಂಗಣದಲ್ಲಿ ಪುರಸಭೆ ಸರ್ವ ಸದಸ್ಯರ ಸಭೆಯನ್ನು ಏರ್ಪಡಿಸಲಾಗಿತ್ತು. ಆದರೆ ನಿಗದಿತ ಸಮಯಕ್ಕೆ ಸರಿಯಾಗಿ ಸಭೆ ಪ್ರಾರಂಭವಾಗದೆ ಗೊಂದಲ ಏರ್ಪಟ್ಟಿತ್ತು.ಬೆಳಿಗ್ಗೆ 11 ಗಂಟೆಗೆ ಸಭೆ ನಿಗದಿಯಾಗಿದ್ದರೂ ಪುರಸಭಾಧ್ಯಕ್ಷೆ ಲಲಿತಾ ಶ್ರೀನಿವಾಸ್ ಮತ್ತು ಆಡಳಿತ ಪಕ್ಷದ ಸದಸ್ಯರು ಬಂದಿರಲಿಲ್ಲ. ಆದರೆ ಉಪಾಧ್ಯಕ್ಷೆ ಆಯಿಷಾ ನಯಾಜ್ ಹಾಗೂ ವಿರೋಧ ಪಕ್ಷದ ಸದಸ್ಯರು ಹಾಜರಿದ್ದರು. ಸಮಯ 11.30 ತ್ತಾದರೂ ಆಡಳಿತ ಪಕ್ಷದ ಸದಸ್ಯರು ಬರಲಿಲ್ಲ. ಆದರೆ ಅನಾರೋಗ್ಯದಿಂದಾಗಿ ಸಭೆಯನ್ನು ಮಧ್ಯಾಹ್ನ 12.30ಕ್ಕೆ ಮುಂದೂಡಿರುವುದಾಗಿ ಅಧ್ಯಕ್ಷೆ ಮುಖ್ಯಾಧಿಕಾರಿ ಎಂ.ಜಯರಾಂ […]

Read More

ಶ್ರೀನಿವಾಸಪುರ; ತಾಲೂಕಿನ ಬೂರುಗಾನಹಳ್ಳಿ ಗ್ರಾಮದಲ್ಲಿ ಶ್ರೀ ಮಂಜುನಾಥರವರ ತೋಟದಲ್ಲಿ ವಿಸ್ತರಣ ಶಿಕ್ಷಣ ಘಟಕ (ಕೋಲಾರ), ಕೃಷಿ ವಿಜ್ಞಾನ ಕೇಂದ್ರ ಚಿಂತಾಮಣಿ ರವರ ವತಿಯಿಂದ ಮಾವು ಬೆಳೆಯಲ್ಲಿ ಸೆಪ್ಟೆಬಂರ್ 26 ಸೋಮುವಾರದಂದು ಮಾವು ಸ್ಪೇಷಲ್ ಸಿಂಪರಣೆಯ ಬಗ್ಗೆ ಪದ್ಧತಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು, ಈ ಸಂಧರ್ಭದಲ್ಲಿ ವಿಸ್ತರಣ ಶಿಕ್ಷಣ ಘಟಕ (ಕೋಲಾರ), ಶ್ರೀಮತಿ ಸಿಂಧು ಕೆ ವಿಜ್ಞಾನಿಗಳು (ತೋಟಗಾರಿಕೆ) ಮತ್ತು ಡಾ. ದೀಲಿಪ್. ಎಸ್, ವಿಜ್ಞಾನಿಗಳು (ಕೃಷಿ ವಿಸ್ತರಣಾ) ರವರು ಮಾವು ಬೆಳೆಯಲ್ಲಿ ಪೋಷಕಾಂಶಗಳ ನಿರ್ವಹಣೆ ಬಗ್ಗೆ ತಿಳಿಸಿಕೊಟ್ಟರು. ರೋಗನಿರೋಧಕ […]

Read More

ಕೋಲಾರ : ಸಮಾಜದ ಸ್ವಸ್ಥ್ಯ ಹಾಗೂ ಶಾಂತಿ ಕದಡುವ ವಾತಾವರಣ ನಿರ್ಮಾಣ ಮಾಡುತ್ತಿರುವ ಜಾನ್ಸನ್ ಕುಂದರ್ ಹಾಗೂ ಆತನ ಸಹಚರರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸುವಂತೆ ಒತ್ತಾಯಿಸಿ ಕ್ರೈಸ್ತ ಪಾದರಿಗಳು ಹಾಗೂ ಸಮುದಾಯದ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿಸಲ್ಲಿಸಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿ ಮಾತನಾಡಿದ ಮೆಥೋಡಿಸ್ಟ್ ದೇವಾಲಯಗಳ ಮೇಲ್ವಿಚಾರಕ ರೆ.ಶಾಂತಕುಮಾರ್, ಕ್ರೈಸ್ತ ಸಮುದಾಯ ಸಮಾಜದಲ್ಲಿ ಅಹಿಂಸೆ, ಶಾಂತಿ, ನೆಮ್ಮದಿಯನ್ನು ಬಯಸುವ ಸಮುದಾಯವಾಗಿ ಯಾವುದೇ ಗಲಭೆಗಳಿಗೆ ಕಾರಣವಾಗದೆ ಉತ್ತಮ ಸಮಾಜ ನಿರ್ಮಾಣಕ್ಕೆ ಸತತವಾಗಿ ಶ್ರಮಿಸುತ್ತಿದೆ. […]

Read More

ಕೋಲಾರ, ಸೆ.26: ಜಿಲ್ಲಾದ್ಯಾಂತ ಜಾನುವಾರುಗಳಿಗೆ ಮಾರಕವಾಗಿರುವ ಚರ್ಮ ಗಂಟು ರೋಗ ನಿಯಂತ್ರಣ ಮಾಡುವಲ್ಲಿ ವಿಪಲವಾಗಿರುವ ಪಶು ಇಲಾಖೆಯ ವಿರುದ್ದ ಕ್ರಮ ಕೈಗೊಳ್ಳುವಂತೆ ರೈತ ಸಂಘದಿಂದ ಹಾಲಿನೊಂದಿಗೆ ಹೋರಾಟ ಮಾಡಿ ಮುಖ್ಯಕಾರ್ಯ ನಿರ್ವಾಹಣಾಧಿಕಾರಿಗಳಿಗೆ ಮನವಿ ನೀಡಿ ಅಗ್ರಹಿಸಲಾಯಿತು. ಹಸುವಿನಿಂದ ಹಾಲು ಕರೆದು ಲಕ್ಷಾಂತರ ರೈತಕುಟುಂಬಗಳ ಜೀವನಾಡಿಯಾಗಿರುವ ಹೈನೋದ್ಯಮವನ್ನು ರಕ್ಷಣೆ ಮಾಡಿ ಎಂದು ಹಾಲುನೀಡುತ್ತೇವೆ. ಹಸುವನ್ನು ಉಳಿಸಿಕೊಟ್ಟು ಸ್ವಾಭಿಮಾನದ ಬದುಕನ್ನು ಕಲ್ಪಿಸಿ ಎಂದು ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಮಾನ್ಯರನ್ನು ಒತ್ತಾಯ ಮಾಡಿದರು. ಗ್ರಾಮೀಣ ಪ್ರದೇಶದ ಪಶು ವೈದ್ಯ ಸೇವೆ ಮಾಡಬೇಕಾದ […]

Read More

ಕೋಲಾರ : – ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಶ್ನೆಪತ್ರಿಕೆ ಹಿಂದಿನ ವರ್ಷದಷ್ಟು ಸುಲಭವಾಗಿರುವುದಿಲ್ಲ , ನೀವು ಈಗಿನಿಂದಲೇ ಪರಿಶ್ರಮ ಹಾಕಿ ಓದಿದರೆ ಮಾತ್ರವೇ ಈ ಬಾರಿ ಉತ್ತಮ ಸಾಧನೆ ಮಾಡಲು ಸಾಧ್ಯ ಎಂಬುದನ್ನು ಅರಿತು ಕಲಿಕೆ ಮುಂದುವರೆಸಿ ಎಂದು ಜಿಲ್ಲಾ ಎಸ್ಸೆಸ್ಸೆಲ್ಸಿ ಪರೀಕ್ಷಾ ನೋಡಲ್ ಅಧಿಕಾರಿ ಎ.ಎನ್.ನಾಗೇಂದ್ರಪ್ರಸಾದ್ ಮಕ್ಕಳಿಗೆ ಕಿವಿಮಾತು ಹೇಳಿದರು . ತಾಲ್ಲೂಕಿನ ಅರಾಭಿಕೊತ್ತನೂರು ಸರ್ಕಾರಿ ಪ್ರೌಢಶಾಲೆಗೆ ದಿಢೀರ್‌ ಭೇಟಿ ನೀಡಿದ್ದ ಅವರು ಶಾಲೆಯಲ್ಲಿ ನಡೆಯುತ್ತಿದ್ದ ಎಸ್ಸೆಸ್ಸೆಲ್ಸಿ ಅರ್ಧವಾರ್ಷಿಕ ಪರೀಕ್ಷೆ ವೀಕ್ಷಿಸಿದ ನಂತರ ಮಕ್ಕಳೊಂದಿಗೆ ಮಾತನಾಡಿದರು . […]

Read More

ಹುತ್ತೂರು ಸೊಸೈಟಿಗೆ ಅಂಟಿರುವ ಕ್ಯಾನ್ಸರ್‌ ೨ ನೇ ಸ್ಟೇಜ್‌ಗೆ – ಬ್ಯಾಲಹಳ್ಳಿ ಗೋವಿಂದಗೌಡ ೩ ನೇಹಂತ ತಲುಪಿ ಸರ್ವನಾಶವಾಗೋ ಮುನ್ನಾ ಎಚ್ಚರವಹಿಸಿ – ಆಡಳಿತ ಮಂಡಳಿಗೆ ತಾಕೀತುಕೋಲಾರ : – ತಾಲ್ಲೂಕಿನ ಹುತ್ತೂರು ಸೊಸೈಟಿಗೆ ಅಂಟಿರುವ ಕ್ಯಾನ್ಸರ್‌ ೨ ನೇ ಹಂತ ತಲುಪಿದೆ , ಮೂರನೇ ಹಂತ ಮುಟ್ಟಿ ಸರ್ವನಾಶವಾಗುವ ಮುನ್ನಾ ಆಗಿರುವ ತಪ್ಪುಗಳನ್ನು ಸರಿಪಡಿಸಿ ಸಂಘಕ್ಕೆ ಜೀವ ತುಂಬಿ ಸರಿದಾರಿಗೆ ತನ್ನಿ ಎಂದು ಆಡಳಿತ ಮಂಡಳಿ ನಿರ್ದೇಶಕರಿಗೆ ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ […]

Read More

ಶ್ರೀನಿವಾಸಪುರ: ಜನರು ಆರೋಗ್ಯ ತಪಾಸಣೆಗೆ ಒಳಗಾಗುವುದರ ಮೂಲಕ ಸಂಭವನೀಯ ಅನಾರೋಗ್ಯದಿಂದ ಮುಕ್ತರಾಗಬೇಕು ಎಂದು ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಹಾಗೂ ಎಎಪಿ ಮುಖಂಡ ಡಾ. ವೈ.ವಿ.ವೆಂಕಟಾಚಲ ಹೇಳಿದರು.ಪಟ್ಟಣದ ಸಂತೆ ಮೈದಾನದಲ್ಲಿ ಶನಿವಾರ ತಾಲ್ಲೂಕು ಎಎಪಿ ಘಟಕದ ವತಿಯಿಂದ ಏರ್ಪಡಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಆರ್ಥಿಕ ಸಮಸ್ಯೆ ಹಾಗೂ ನಿರ್ಲಕ್ಷ್ಯದ ಪರಿಣಾಮವಾಗಿ ಗ್ರಾಮೀಣ ಪ್ರದೇಶದ ಬಡವರ ಆರೋಗ್ಯ ಹದಗೆಡುತ್ತಿದೆ ಎಂದು ಅಭಿಪ್ರಾಯಪಟ್ಟರು.ಗ್ರಾಮೀಣರು ಕೃಷಿ ಚಟುವಟಿಕೆ ಒತ್ತಡದಲ್ಲಿ ವೈಯಕ್ತಿಕ ಆರೋಗ್ಯದ ಕಡೆ […]

Read More

ಶ್ರೀನಿವಾಸಪುರ : ಕೇಂದ್ರ ಸರ್ಕಾರವು ಹಣವಂತರಿಗೆ ಒಂದು ನೀತಿ , ಬಡವರಿಗೆ ಒಂದು ನೀತಿಯನ್ನು ಅನುಸರಿಸುತ್ತಿದ್ದು, ಇದರಿಂದಾಗಿ ಜನಸಾಮಾನ್ಯರು ಕೇಂದ್ರ ಸರ್ಕಾರದ ದ್ವಂದ ನೀತಿಗಳಿಂದ ತತ್ತರಿಸುತ್ತಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ಕೇಂದ್ರ ಸರ್ಕಾರದ ವಿರುದ್ಧ ಆರೋಪ ವ್ಯಕ್ತಡಿಸಿದರು.ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ರೈತ ಸಂಘದ ಜಿಲ್ಲಾ ಸಮ್ಮೇಳನದ ನಿರ್ಣಯಗಳ ಬಿಡುಗಡೆಗಾಗಿ ನಡೆದ ಪತ್ರಿಕಾಗೋಷ್ಟಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಕೇಂದ್ರ ಸರ್ಕಾರಕ್ಕೆ ರೈತ ಬಗ್ಗೆ ಕಾಳಜಿ ಇಲ್ಲ. ಅದೋನಿ ಆದಾಯ ವರ್ಷಕ್ಕೆ 11ಲಕ್ಷ […]

Read More