ಗಂಗೊಳ್ಳಿ: ದಿನಾಂಕ ಗಂಗೊಳ್ಳಿಯ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆಯಲ್ಲಿ ರಕ್ಷಕ –ಶಿಕ್ಷಕ ಸಂಘದ ಮಹಾಸಭೆ 30/07/2022 ರಂದು ಜರಗಿತು. ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕುಂದಾಪುರದ ಭಂಡಾರ್ಕಾರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಕನ್ನಡ ಉಪನ್ಯಾಸಕಿ ರೇಣುಕಾ ರವರು “ವಿದ್ಯಾರ್ಥಿಗಳು ನಿರಂತರ ಪರಿಶ್ರಮ, ಪ್ರಯತ್ನ ,ಛಲ,ಗುರಿಯಿಟ್ಟು ಅಧ್ಯಯನದಲ್ಲಿ ತೊಡಗಿದಾಗ ಯಶಸ್ಸು ಕಟ್ಟಿಟ್ಟ ಬುತ್ತಿ” ಎಂದು ತಿಳಿಯ ಪಡಿಸಿ “ವಿದ್ಯಾರ್ಥಿಗಳು ಮಾನವ ಧರ್ಮ ಬೆಳೆಸಿಕೊಳ್ಳುವುದರ ಜೊತೆಯಲ್ಲಿ ಶಿಕ್ಷಣದಲ್ಲಿ ಸಾಧನೆ ಮಾಡುವಂತಾಗಲಿ” ಎಂದು ಸಂದೇಶ ನೀಡಿದರು. ಶಾಲೆಯ ಮುಖ್ಯೋಪಾಧ್ಯಾಯರೂ, ರಕ್ಷಕ ಶಿಕ್ಷಕ ಸಂಘದ […]
ಶ್ರೀನಿವಾಸಪುರ 5 : ಬದುಕಿಗೆ ವಿದ್ಯೆಯ ಬೆಳಕು ತೋರುವ ಗರುವಿಗೆ ಭೂಮಿ ಮತ್ತು ತಾಯಿಯ ನಂತರದ ಸ್ಥಾನ ಸಿಕ್ಕಿರುವುದು ಗುರುವಿಗೆ ಮಾತ್ರ ಶ್ಲಾಘನೀಯವೆಂದು ಬಿಇಒ ವಿ.ಉಮಾದೇವಿ ಹೇಳಿದರು.ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ವಯೋನಿವೃತ್ತಿ ಹೊಂದಿದ ಶಿಕ್ಷಕರಿಗೆ ಬೀಳ್ಕೋಡಿಗೆ , ಪ್ರೌಡಶಾಲಾ ಸಹ ಸಂಘದ ನೂತನ ಪದಾಧಿಕಾರಿಗಳಿಗೆ, ತಾಲ್ಲೂಕು ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ನೂತನ ಪದಾಧಿಕಾರಿಗಳಿಗೆ ಸನ್ಮಾನ, ನೂತನ ಸಿಆರ್ಪಿ ಗಳಗೆ ಅಭಿನಂದನೆ ಹಾಗು ರಾಜ್ಯ ಪುರಸ್ಕøತ ಶಿಕ್ಷಣ ಸಾರಥಿ ಪ್ರಶಸ್ತಿ ಶಿಕ್ಷಕ ವೇಣುಗೋಪಾಲ್ರವರಿಗೆ […]
ಕೋಲಾರ : ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳು ಮುಂದಾಗಬೇಕೆAದು ಅಬಕಾರಿ ನಿರೀಕ್ಷಕಿ ಎಂ.ಸುಮಾ ಅವರು ಕರೆ ನೀಡಿದರು.ನಗರದ ಸ್ಮಾರ್ಟ್ ಪದವಿ ಕಾಲೇಜಿನಲ್ಲಿ ಅಬಕಾರಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮಾದಕ ವಸ್ತುಗಳ ದುರ್ಬಳಕೆಯ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಸದೃಡ ದೇಶ ಕಟ್ಟುವಲ್ಲಿ ಯುವ ಜನತೆಯ ಪಾತ್ರ ಮಹತ್ವದಾಯಕವಾಗಿದ್ದು, ಈ ನಿಟ್ಟಿನಲ್ಲಿ ಆರೋಗ್ಯವಂತ ಜೀವನಶೈಲಿ ಬಹುಮುಖ್ಯ ಎಂದ ಅವರು, ಆಕರ್ಷಣೆ, ಕತೂಹಲ, ದುಷ್ಟರ ಸಹವಾಸಕ್ಕೆ ಸಿಲುಕಿ ಮಾದಕ ವ್ಯಸನಕ್ಕೆ ದಾಸರಾಗಿದ್ದಲ್ಲಿ ಅಂತಹ ವ್ಯಕ್ತಿಯ ಜೀವನದ […]
ಮುಸ್ಲಿಂ ಸಮುದಾಯದ ಮಕ್ಕಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಸಂಗವನ್ನು ಅರ್ಧದಲ್ಲಿ ಮುಟ್ಟುಗೊಳಿಸಿ ವ್ಯಾಪಾರ ಮತ್ತು ಆಟೋಮೊಬೈಲ್ಸ್ ಗಳಿಗೆ ಮಾರುಹೋಗುತ್ತಿದ್ದಾರೆ ಇಂತಹ ಕೃತ್ಯಗಳಿಗೆ ಕಡಿವಾಣ ಹಾಕಿ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ರವರು ಕರೆ ನೀಡಿದ್ದಾರೆ ಶ್ರೀನಿವಾಸಪುರ ಪಟ್ಟಣದ ಸರ್ಕಾರಿ ಉರ್ದು ಮತ್ತು ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸಮಾಜ ಸೇವಕ ಹಾಗೂ ಅಲ್ಪಸಂಖ್ಯಾತರ ಯುವ ಘಟಕದ ಅಧ್ಯಕ್ಷ ಸಾಧಿಕ್ ಅಹಮದ್ ರವರು ಮಕ್ಕಳಿಗಾಗಿ ಉಚಿತ ಪಠ್ಯ ಪರಿಕರಗಳು ಮತ್ತು ಗುರುತಿನ ಚೀಟಿಗಳನ್ನು ವಿತರಣೆ ಮಾಡುವ […]
ಶ್ರೀನಿವಾಸಪುರ 4 : ವಚನಗಳು ಎಂದರೆ ಶರಣರ ಕೈಗನ್ನಡಿ, ಸಮಾಜಕ್ಕೆ ದಾರಿ ದೀಪ ವಚನಗಳಲ್ಲಿ ಮೂರು ವಿಧಗಳಿದ್ದು, ವಿಡಂಬಾತ್ಮಕ ವಚನ, ಆಧ್ಯಾತ್ಮಿಕ ವಚನ ಮತ್ತು ಸಂವಾದಾತ್ಮಕ ವಚನ ಈ ಮೂರು ವಚನಗಳನ್ನು ಅರಿತಿದ್ದೇ ಆದರೆ ಮಾನವನ ಜೀವನ ಸಾರ್ಥಕ ಎಂದ ಅವರು ಈ ಎಲ್ಲವನ್ನೂ ಮಕ್ಕಳು ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಜೀವನ ನಡೆಸಬೇಕು ಎಂದು ಕೋಲಾರ ಬಾಲಕರ ಕಾಲೇಜಿನ ಪ್ರಾದ್ಯಾಪಕ ಪ್ರೊ. ಶಂಕರಪ್ಪ ತಿಳಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ […]
ಕೋಲಾರ:- ಕೆಜಿಎಫ್ ತಾಲ್ಲೂಕಿನ ಸಮಗ್ರ ಅಭಿವೃದ್ದಿಗಾಗಿ ಕಂಕಣ ತೊಟ್ಟಿರುವ ತಮ್ಮ ಪ್ರಯತ್ನದಿಂದ ಈಗಾಗಲೇ ವಿವಿಧ ಯೋಜನೆಗಳಡಿ ಸುಮಾರು 35 ಕೋಟಿ ರೂ ಮಂಜೂರು ಮಾಡಿಸಿದ್ದು ಲೋಕೋಪಯೋಗಿ ಇಲಾಖೆ ಅಡಿಯಲ್ಲಿ 15 ಕೋಟಿ ರೂಗಳ ರಸ್ತೆ ಕಾಮಗಾರಿ ಶೀಘ್ರ ಆರಂಭಿಸಲು ಕೆಜಿಎಫ್ ಶಾಸಕಿ ರೂಪಕಲಾ ಶಶಿಧರ್ ಮನವಿ ಮಾಡಿದರು.ನಗರದ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರರಾದ ಚಂದ್ರಶೇಖರ್ ಅವರನ್ನು ಖುದ್ದು ಭೇಟಿಯಾಗಿ ಮುಖ್ಯಮಂತ್ರಿಗಳು ಅನುಮೋದನೆ ನೀಡಿರುವ 15 ಕೋಟಿ ರೂಗಳ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಪ್ರಸ್ತಾವನೆ ಸಲ್ಲಿಸಿದ್ದು, ಕೂಡಲೇ ಟೆಂಡರ್ […]
ಕೋಲಾರ:- ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಜಂಟಿ ಆಶ್ರಯದಲ್ಲಿ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ ಮಂಗಸಂದ್ರದ ಸ್ನಾತಕೋತ್ತರ ಕೇಂದ್ರದಲ್ಲಿ ಜುಲೈ 28 ರಂದು ನಡೆಯಲಿದೆ.ಮಹಿಳಾ ಮತ್ತು ವರ್ತಮಾನ (ಸಾಹಿತ್ಯ ಮತ್ತು ಸಮಾಜ) ಕುರಿತು ನಡೆಯಲಿರುವ ಈ ವಿಚಾರ ಸಂಕಿರಣವು ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಆರಂಭಗೊಂಡ ಮೇಲೆ ಕೇಂದ್ರ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆಯುತ್ತಿರುವ ಮೊದಲ ವಿಚಾರ ಸಂಕಿರಣವಾಗಿದೆಜು.28ರ ಬೆಳಗ್ಗೆ 10 ಗಂಟೆಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಪ್ರೋ.ಚಂದ್ರಶೇಖರ ಕಂಬಾರ ಅವರು […]
ಕೋಲಾರ:- ತಾಲ್ಲೂಕಿನ ನರಸಾಪುರ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಯು.ಗೋವಿಂದ್ ಅವರಿಗೆ 2021-22ನೇ ಸಾಲಿನ ಶಿಕ್ಷಣ ಸಾರಥಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ತುಮಕೂರು ನಗರದ ಸಿದ್ದಗಂಗಾ ಮಠದ ಆವರಣದಲ್ಲಿನ ಉದ್ಧಾನೇಶ್ವರ ಕಲ್ಯಾಣ ಮಂಟಪದಲ್ಲಿ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್,ಮೈಸೂರು ಇವರಿಂದ ನಡೆದ ರಾಜ್ಯಮಟ್ಟದ ಶೈಕ್ಷಣಿಕ ಸಮ್ಮೇಳನದಲ್ಲಿ ಅವರಿಗೆ ಶಿಕ್ಷಣ ಸಾರಥಿ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.ಶಿಕ್ಷಣ ಕ್ಷೇತ್ರದಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಮಾಡಿರುವ ಗಣನೀಯ ಸೇವೆ ಹಾಗೂ ವಿದ್ಯಾರ್ಥಿಗಳು,ಶಿಕ್ಷಕರಿಗೆ ಉತ್ತಮ ಶೈಕ್ಷಣಿಕ ಮಾರ್ಗದರ್ಶನ ನೀಡಿ ಕ್ಲಸ್ಟರ್ ವ್ಯಾಪ್ತಿಯ ಶಾಲೆಗಳ ಅಭಿವೃದ್ದಿಗೆ ನಿಸ್ವಾರ್ಥ,ಪ್ರಾಮಾಣಿಕ […]
ಕೋಲಾರ:- ವಿದ್ಯಾರ್ಥಿಗಳು ಸ್ವಾವಲಂಬಿಗಳಾಗಬೇಕು, ಕೇವಲ ಪಠ್ಯಪುಸ್ತಕಗಳಿಗೆ ಸೀಮಿತವಾಗದೆ ವ್ಯಕ್ತಿತ್ವ ವಿಕಸನದ ಜತೆ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು ಎಂದು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಕಿವಿಮಾತು ಹೇಳಿದರು.ಮಂಗಳವಾರ ನಗರದ ಸಹ್ಯಾದ್ರಿ ಪದವಿ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಮಾರಾಟ ಮೇಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂತಹ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಿ, ಬದುಕಿಗೆ ಪಠ್ಯ ಸಾಲದು ಜತೆಗೆ ಮಾರಾಟ ಕೌಶಲ್ಯಗಳನ್ನು ಬೆಳೆಸಿಕೊಂಡರೆ ನಿಮ್ಮ ಮುಂದಿನ ಬದುಕಿನಲ್ಲಿ ಸಹಕಾರಿಯಾಗಲಿದೆ ಎಂದರು.ನಿಮ್ಮ ಜೀವನದ ಗುರಿ ಸಾಧನೆಗೆ ಇಂತಹ ಕಾರ್ಯಕ್ರಮಗಳು ಸಹಕಾರಿ ಎಂದ ಅವರು, ನಿಮ್ಮ […]