ಶ್ರೀನಿವಾಸಪುರ 1 : ಒತ್ತಡ ಜೀವನದಲ್ಲಿ ಆಧ್ಯಾತ್ಮ ಮತ್ತು ದೇವರ ಆರಾಧನೆಗೆ ಕೊಂಚ ಕಾಲವನ್ನು ವಿನಿಯೋಗಿಸುವ ಮೂಲಕ ನೆಮ್ಮದಿ ಪಡೆದುಕೊಳ್ಳಬಹುದು ಎಂದು ಶಾಸಕ ಕೆ.ಆರ್.ರಮೇಶ್‍ಕುಮಾರ್ ತಿಳಿಸಿದರು.ಶ್ರೀನಿವಾಸಪುರ ತಾಲೂಕಿನ ರೋಣೂರು ಲಕ್ಷ್ಮೀವೆಂಕಟರಮಣಸ್ವಾಮಿ ದೇವಾಲಯಕ್ಕೆ ವೈಕುಂಠ ಏಕಾದಶಿ ಅಂಗವಾಗಿ ಬೇಟಿ ನೀಡಿ ಮಾತನಾಡಿ,ಮಾನವೀಯ ಮೌಲ್ಯಗಳನ್ನು ಬೆಳೆಸಲು ವಿಶೇಷ ಹಬ್ಬ,ಪರಂಪರೆಯ ಸಂಪ್ರದಾಯಗಳನ್ನು ಆಚರಿಸಬೇಕು ಹಾಗೂ ಅವುಗಳ ಮಹತ್ವದ ಬಗ್ಗೆ ಹಿರಿಯರಿಂದ ಯುವಪೀಳಿಗೆ ಅರಿಯಬೇಕೆಂದರು.ಸ್ವಾಮಿಗೆ ಪಾಂಚರಾತ್ರಾಗಮ ಪ್ರಕಾರ ಸುಪ್ರಬಾತ ಸೇವೆ ,ಪಂಚಾಮೃತ ಅಭಿಷೇಕ,ಅಲಂಕಾರ ಮುಂಜಾನೆ 5ಗಂಟೆಗೆ ವೈಕುಂಠದ್ವಾರ ಪೂಜೆ,ವೈಕುಂಠ ದ್ವಾರ ಪ್ರವೇಶ,ಶಾತ್ತುಮೊರೈ,ಮಹಾಮಂಗಳಾರತಿ,ತೀರ್ಥಪ್ರಸಾದ ವಿನಿಯೋಗ […]
ಕೋಲಾರ:- ಅಪಘಾತದಿಂದ ಕಾಲಿಗೆ ಶಸ್ತ್ರಚಿಕಿತ್ಸೆಗೆ ಇದ್ದೆಲ್ಲಾ ಹಣ ಖರ್ಚು ಮಾಡಿ ತನ್ನ ಮಗಳ ಮದುವೆಗೆ ಹಣವಿಲ್ಲದೇ ನೊಂದಿದ್ದ ಕುಟುಂಬಕ್ಕೆ ಹಾಗೂ ಪಾಶ್ರ್ವವಾಯು ಪೀಡಿತ ಇಬ್ಬರಿಗೆ ಆರ್ಥಿಕ ನೆರವು ನೀಡುವ ಮೂಲಕ ಕೋಲಾರ,ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾನವೀಯತೆ ಮೆರೆದಿದ್ದಾರೆ.ಇಲ್ಲಿನ ಮುನೇಶ್ವರ ನಗರದ ನಿವಾಸಿಯಾಗಿದ್ದು, ಗಾರೆ ಕೆಲಸದಿಂದ ಜೀವನ ಸಾಗಿಸುತ್ತಿದ್ದ ನಾಗರಾಜ್ ಎಂಬುವವರಿಗೆ ಅಪಘಾತವಾಗಿ ಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಮಗಳ ಮದುವೆಗೆಂದು ಕೂಡಿಟ್ಟಿದ್ದ ಒಂದೂವರೆ ಲಕ್ಷ ಹಣವನ್ನು ತಮ್ಮ ಚಿಕಿತ್ಸೆಗೆ ಖರ್ಚು ಮಾಡಿದ್ದರು.ಮಗಳ ಮದುವೆ ಮಾಡಲು […]
ಪಟ್ಟಣದ ಹಳೇ ಮಾವಿನ ಮಂಡಿ ಬಳಿ ನವ ಕರ್ನಾಟಕ ಸ್ವಾಭಿಮಾನಿ ವೇದಿಕೆ ಕಚೇರಿಯಲ್ಲಿ ಶನಿವಾರ 2023ರ ನೂತನ ಕ್ಯಾಲೆಂಡರ್‍ನ್ನು ಜೆಡಿಎಸ್ ಪಕ್ಷದ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಶಿವಾರೆಡ್ಡಿ ರವರು ಬಿಡುಗಡೆ ಮಾಡಿದರು.ಈ ಸಮಯದಲ್ಲಿ ಜಿ.ಪಂ. ಮಾಜಿ ಅಧ್ಯಕ್ಷ ತೂಪಲ್ಲಿ ಆರ್.ನಾರಾಯಣಸ್ವಾಮಿ , ಮುಖಂಡರಾದ ಸಾಧಿಕ್ ಅಹಮ್ಮದ್, ರವಿ,ಜಗನ್, ಕಾರ್‍ಬಾಬು, ಬಕಾಶ್, ಇದಾಯಿತ್, ರಿಯಾಜ್,ಏಜಾಜ್ ಪಾಷ ಇದ್ದರು.
ಶ್ರೀನಿವಾಸಪುರ: ಮಾದಕ ವಸ್ತುಗಳ ಸೇವೆನೆಗೊಮ್ಮೆ ಒಳಗಾದರೆ ಅದರಿಂದ ಹೊರಬರುವುದು ಕಷ್ಟ ಇದರಿಂದ ಮಾದಕ ದ್ರವ್ಯದ ವ್ಯಸನಿಯ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಜಿಲ್ಲಾ ಅಬಕಾರಿ ಉಪ ಆಯುಕ್ತ ಎಚ್.ಎಂ.ರಮೇಶ್‍ಕುಮಾರ್ ಹೇಳಿದರು.ಪಟ್ಟಣದ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ತಾಲೂಕು ಅಬಕಾರಿ ಇಲಾಖೆ , ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಮಾದಕ ವಸ್ತು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ತಾಲೂಕು ಅಬಕಾರಿ ನಿರೀಕ್ಷಕ ರೋಹಿತ್ ಮಾತನಾಡಿ ಮದ್ಯಪಾನ, ಧೂಮಪಾನದಂತಹ ದುಶ್ಚಟಗಳಿಗೆ ಹದಿಹರೆಯ […]
ಕೋಲಾರ:- ಆರು ವರ್ಷದ ಬಾಲಕಿಯೊಬ್ಬಳು ಕಳೆದ 2019 ರಲ್ಲಿ ಬ್ಲಡ್ ಕ್ಯಾನ್ಸರ್‍ನಿಂದ ಬಳಲುತ್ತಿದ್ದ ಸುದ್ದಿ ತಿಳಿದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಖುದ್ದ ಮಗುವಿನ ಮನೆಗೆ ಹೋಗಿ ಚಿಕಿತ್ಸೆಗೆ 1.5 ಲಕ್ಷ ನೆರವು ಒದಗಿಸಿದ್ದರಿಂದಾಗಿ ಆಕೆ ಇದೀಗ ಆರೋಗ್ಯವಂತಳಾಗಿ ಹೊಸ ಬದುಕಿನತ್ತ ಹೆಜ್ಜೆ ಹಾಕಿದ್ದು, ಜೀವ ಉಳಿಸಿದ ನೆರವಿಗೆ ಬ್ಯಾಂಕಿಗೆ ಆಗಮಿಸಿ ಧನ್ಯವಾದ ಸಲ್ಲಿಸಿದ ಘಟನೆ ಶನಿವಾರ ನಡೆಯಿತು.ತಾಲ್ಲೂಕಿನ ಬೆತ್ತನಿ ಗ್ರಾಮದ ಸುಮಂತ್ ಕುಮಾರ್,ಚೈತ್ರಾ ದಂಪತಿಗಳ ಈ ಮುದ್ದಾದ 6 ವರ್ಷದ ಬಾಲಕಿ ಕಾರುಣ್ಯ ಮಾರಕ […]
ಶ್ರೀನಿವಾಸಪುರ: ಮತದಾರ ಯಾವುದೇ ಆಮಿಷಕ್ಕೆ ಒಳಗಾಗದೆ, ಜವಾಬ್ದಾರಿಯುತವಾಗಿ ಮತದಾನದ ಹಕ್ಕು ಚಲಾಯಿಸುವುದರ ಮೂಲಕ ಬದಲಾವಣೆ ತರಬೇಕು ಎಂದು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಹೇಳಿದರು.ಪಟ್ಟಣದ ವೆಂಕಟೇಶ್ವರ ನರ್ಸಿಂಗ್ ಹೋಂ ಸಭಾಂಗಣದಲ್ಲಿ ತಾಲ್ಲೂಕು ಎಎಪಿ ಘಟಕದ ವತಿಯಿಂದ ಏರ್ಪಡಿಸಿದ್ದ ಕುವೆಂಪು ಜನ್ಮ ದಿನಾಚರಣೆ ಹಾಗೂ ಪರಿವರ್ತನೆ ಕ್ಯಾಲೆಂಡರ್ ಬಿಡುಗಡೆ ಸಮಾರಂಭದಲ್ಲಿ, ಕ್ಯಾಲೆಂಡರ್ ಬಿಡುಗಡೆ ಮಾಡಿ ಅವರು ಮಾತನಾಡಿದರು.ಜನ ಪ್ರತಿನಿಧಿಗಳಿಗೆ ಋಣ ಮುಕ್ತತೆ ಪರಿಕಲ್ಪನೆ ಇರಬೇಕು. ಅವರು ಸಮಾಜದ ಋಣ ತೀರಿಸಲು ಪ್ರಯತ್ನಿಸಬೇಕು. ಆದರೆ ಮತದಾರರಲ್ಲಿ ಋಣ ಮುಕ್ತತೆ […]
ಕೋಲಾರ: ನಗರಸಭೆ ಪೌರಾಯುಕ್ತರ ಸರ್ವಾಧಿಕಾರಿ ಧೋರಣೆಯಿಂದ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದ್ದು ಕೂಡಲೇ ಅಧಿಕಾರಿಯನ್ನು ಎತ್ತಂಗಡಿ ಮಾಡಬೇಕೆಂದು ಆಗ್ರಹಿಸಿ ಅಧ್ಯಕ್ಷರು-ಉಪಾಧ್ಯಕ್ಷರ ಜತೆಗೂಡಿ ಸದಸ್ಯರು ಪ್ರತಿಭಟನೆ ನಡೆಸಿದರು. ನಗರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಬೇಕಾದ ವಿಷಯಗಳ ಕುರಿತು ಅಧ್ಯಕ್ಷೆ ಶ್ವೇತಾ ಆರ್. ಶಬರೀಶ್ ಅವರು ಟಿಪ್ಪಣಿಯನ್ನು ಕೊಡಲು ಮುಂದಾದಾಗ ಪೌರಾಯುಕ್ತರಾದ ಸುಮ ಅವರು ಪಟ್ಟಿಯನ್ನು ಪಡೆದುಕೊಳ್ಳಲು ನಿರಾಕರಿಸಿದ್ದು ಆಡಳಿತಾತ್ಮಕ ವಿಷಯಗಳನ್ನು ಮಾತ್ರವೇ ಮಂಡಿಸುವುದಾಗಿ ಹೇಳಿದಾಗ ಇಬ್ಬರ ನಡುವೆ ಅಸಮಾಧಾನ ಉಂಟಾಗಿತ್ತು. ಮಂಗಳವಾರ ಸಭೆ ಆರಂಭ ಆಗುತ್ತಿದ್ದಂತೆಯೇ ಅಧ್ಯಕ್ಷರು ಸಮಸ್ಯೆಗಳನ್ನು ಮುಂದಿಟ್ಟಾಗ ಚರ್ಚೆ ಮಾಡಲು […]
ಕೋಲಾರ,ಡಿ.27: ಫ್ಲೋರೋಸಿಸ್ ಒಂದು ಮಹಾಮಾರಿಯಾಗಿ ಪರಿಣಮಿಸಿದೆ. ಫ್ಲೋರೋಸಿಸ್ ದಂತ ಹಾಗೂ ಮೂಳೆಯ ದುಷ್ಪರಿಣಾಮಗಳ ಜೊತೆ ಬಹು ಅಂಗಾಂಗಗಳ ಮೇಲೂ ಸಹ ಪ್ರಭಾವ ಬೀರುತ್ತದೆ. ಗರ್ಭವಾಸ್ಥೆಯನ್ನು ಸಹ ಫ್ಲೋರೋಸಿಸ್ ಹೊರೆತುಪಡಿಸಿಲ್ಲ. ಇದರ ಪ್ರಯುಕ್ತ ಬಹಳ ಸಂಶೋಧನೆಗಳು ಭಾರತ ಹಾಗೂ ಇತರ ರಾಷ್ಟ್ರಗಳಲ್ಲಿಯೂ ಸಹ ನಡೆಯುತ್ತಿದೆ.ಅಮೇರಿಕಾದ ಮಹಾವಿದ್ಯಾಲಯದ ಪ್ರಸೂತಿ ತಜ್ಞರು ಮತ್ತು ಸ್ತ್ರೀರೋಗ ತಜ್ಞರು ಗರ್ಭವಾಸ್ಥೆಯಲ್ಲಿ ಅಧಿಕ ರಕ್ತದೊತ್ತಡದಿಂದಾಗುವ ಹಾಗೂ ಸಂಬಂಧಿತ ಅಸ್ವಸ್ಥತೆಯನ್ನು ಪ್ರಿ-ಎಕ್ಲಾಂಪ್ಸಿಯಾ ಎಂದು ವ್ಯಾಖ್ಯಾನಿಸಿದ್ದಾರೆ. ಇದು ಸಾಮಾನ್ಯವಾಗಿ 20 ವಾರಗಳ ಗರ್ಭಾವಸ್ಥೆಯ ನಂತರ ಸಂಭವಿಸುತ್ತದೆ. ವಿಶೇಷವಾಗಿ ಅಭಿವೃದ್ಧಿಶೀಲ […]
ಶ್ರೀನಿವಾಸಪುರ: ಕಳಪೆ ಬಿತ್ತನೆ ಆಲೂಗಡ್ಡೆ ಹಾಗೂ ಮಾಂಡೋಸ್ ಚಂಡಮಾರುತದಿಂದ ನಷ್ಟವಾಗಿರುವ ಪ್ರತಿ ಎಕರೆಗೆ 2 ಲಕ್ಷರೂ ಪರಿಹಾರ ನೀಡಿ ನಾಪತ್ತೆಯಾಗಿರುವ ಬೆಳೆ ವಿಮೆ ಕಂಪನಿ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲು ಮಾಡಬೇಕೆಂದು ರೈತಸಂಘದಿಂದ ತೋಟಗಾರಿಕೆ ಕಚೇರಿಯೆದುರು ನಷ್ಟ ಬೆಳೆ ಸಮೇತ ಹೋರಾಟ ಮಾಡಿ, ಸಹಾಯಕ ನಿರ್ದೇಶಕರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ನೀಡಿ ಆಗ್ರಹಿಸಲಾಯಿತು.ಮನವಿ ಸಲ್ಲಿಸಿ ಮಾತನಾಡಿದ ರಾಜ್ಯ ಸಂಚಾಲಕ ಬಂಗವಾದಿ ನಾಗರಾಜಗೌಡ, ಜಿಲ್ಲೆಯ ರೈತರ ಅಮಾಯಕತನವನ್ನೇ ಬಂಡವಾಳವಾಗಿಸಿಕೊಂಡಿರುವ ವಿಮೆ ಕಂಪನಿಗಳು ಅಧಿಕಾರಿಗಳ ಮೇಲೆ ಒತ್ತಡ ಹಾಕಿ […]