ಶ್ರೀನಿವಾಸಪುರ : ತಾಲೂಕಿನ ಯರಂವಾರಿಪಲ್ಲಿ ಪಂಚಾಯಿತಿಯ ಪಿಡಿಒ ಅಧಿಕಾರಿ ಮನೆಯನ್ನೇ ಪಂಚಾಯಿತಿ ಕಚೇರಿಯನ್ನೇ ಮಾಡಿಕೊಂಡು ಕಚೇರಿಗೆ ಬಾರದೇ ಪಂಚಾಯಿತಿ ಹಣವನ್ನು ಗುಳಂ ಮಾಡಿಕೊಂಡು ಸರ್ಕಾರವನ್ನು , ಸಾರ್ವಜನಿಕರನ್ನ ಮೋಸ ಮಾಡುತ್ತಿದ್ದಾರೆ ಎಂದು ಗ್ರಾ.ಪಂ. ಉಪಾಧ್ಯಕ್ಷ ವೈ.ಆರ್. ಶ್ರೀನಿವಾಸರೆಡ್ಡಿ ಪಿಡಿಒ ಅಧಿಕಾರಿ ವಿರುದ್ಧ ಸರ್ಕಾರವು ಕ್ರಮಕೈಗೊಳ್ಳುವಂತೆ ಮನವಿ ಮಾಡಿದರು. ಯರಂವಾರಿಪಲ್ಲಿ ಗ್ರಾಮಪಂಚಾಯಿತಿ ಉಪಾಧ್ಯಕ್ಷರಿಂದ ಹಾಗೂ ಸದಸ್ಯರಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕಾರ್ಯಪ್ರವೃತ್ತಿ ವಿರುದ್ಧ ಗ್ರಾ.ಪಂ ಕಚೇರಿ ಮುಂದೆ ಪ್ರತಿಭಟಿಸಿ ಮಾತನಾಡಿದರು , ಸರ್ಕಾರವು ಗ್ರಾಮೀಣ ಭಾಗದ ಹಳ್ಳಿಗಳು ಅಭಿವೃದ್ಧಿ […]
ನವ ಕರ್ನಾಟಕ ಸ್ವಾಭಿಮಾನಿ ವೇದಿಕೆಯ ರಾಜ್ಯ ಪ್ರಧಾನ ಕಾರ್ಯದರ್ಶಿಯನ್ನಾಗಿ ಶ್ರೀನಿವಾಸಪುರದ ಸಾದಿಕ್ ಅಹ್ಮದ್ ಅವರನ್ನು, ವೇದಿಕೆಯ ರಾಜ್ಯಾಧ್ಯ್ಕಷ ರಾಮಚಂದ್ರಪ್ಪ ಆಯ್ಕೆ ಮಾಡಿದ್ದಾರೆ. ಮುಖಂಡರಾದ ಮಂಜುನಾಥ್, ನರಸಿಂಹಯ್ಯ, ಬರೀದ್, ಸಾಬೀರ್ ಇದ್ದರು
ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಡಿ.9 ರಂದು ಏರ್ಪಡಿಸಿರುವ 12ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹೆಚ್ಚಿನ ಸಂಖ್ಯೆಯ ಸಾಹಿತ್ಯ ಪ್ರೇಮಿಗಳು ಭಾಗವಹಿಸುವುದರ ಮೂಲಕ ಸಮ್ಮೇಳನ ಯಶಸ್ವಿಗೊಳಿಸಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎನ್.ಬಿ.ಗೋಪಾಲಗೌಡ ಮನವಿ ಮಾಡಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 8.30ಕ್ಕೆ ಧ್ವಜಾರೋಹಣದ ಬಳಿಕ, ಗ್ರಾಮದಲ್ಲಿ ಸಮ್ಮೇಳನಾಧ್ಯಕ್ಷ ಸಾಹಿತಿ ಪಾತಮುತ್ತಕಪಲ್ಲಿ ಎಂ.ಚಲಪತಿಗೌಡ ಅವರ ಮೆರವಣಿಗೆ ಏರ್ಪಡಿಸಲಾಗಿದೆ ಎಂದು ಹೇಳಿದು.ಸಮ್ಮೇಳನದ ಉದ್ಘಾಟನೆ ಬಳಿಕ ವಿಚಾರ […]
ಕೋಲಾರ:- ಸರಕಾರಿ ಶಾಲೆಯಲ್ಲಿ ಓದಿದ್ದರಿಂದಲೇ ತಮಗೆ ಸಮಾಜದ ವಿವಿಧ ವರ್ಗಗಳ ಜನರ ಕಷ್ಟ ಅರಿತುಕೊಳ್ಳಲು ಸಹಕಾರಿಯಾಯಿತೆಂದು ರೋಟರಿ ಸೆಂಟ್ರಲ್ ಅಧ್ಯಕ್ಷ ಸಿ.ಎಂ.ಆರ್.ಶ್ರೀನಾಥ್ ಹೇಳಿದರು.ತಾಲೂಕಿನ ಮಣಿಘಟ್ಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ರೋಟರಿ ಸೆಂಟ್ರಲ್ವತಿಯಿಂದ ಬರೆಯುವ ಫಲಕಗಳನ್ನು ಬುಧವಾರ ಕೊಡುಗೆಯಾಗಿ ನೀಡಿ ಅವರು ಮಾತನಾಡುತ್ತಿದ್ದರು.ವಿವಿಧ ವರ್ಗದ ಮಕ್ಕಳೊಂದಿಗೆ ಬೆರೆತು ಕಲಿಯುವ ಅವರ ನೋವು ನಲಿವಿನಲ್ಲಿ ಭಾಗಿಯಾಗುವ, ಕಷ್ಟ ಸುಖದಲ್ಲಿ ತೊಡಗಿಸಿಕೊಳ್ಳುವ ಸರಕಾರಿ ಶಾಲೆ ಮಕ್ಕಳು ಭಾಗ್ಯವಂತರೆಂದು ಅವರು ವಿವರಿಸಿದರು.ಸರಕಾರಿ ಶಾಲೆ ಮಕ್ಕಳ ವಿದ್ಯಾಭ್ಯಾಸ ಅನುಕೂಲಕ್ಕಾಗಿರೋಟರಿ ಸೆಂಟ್ರಲ್ವತಿಯಿಂದ ಡೆಸ್ಕ್ ಸೇರಿದಂತೆ […]
ಕೋಲಾರ ಡಿಸೆಂಬರ್ 7 : ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕೋಲಾರ ಜಿಲ್ಲೆಯ ಯುವ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಕೋಲಾರ ಟಿ. ಚನ್ನಯ್ಯ ರಂಗಮಂದಿರದಲ್ಲಿ ನಡೆದ 2022-23ನೇ ಸಾಲಿನ ಕೋಲಾರ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ವೀಣೆ ಸ್ಪರ್ಧೆಯಲ್ಲಿ ಕೋಲಾರ ನಗರದ ಪಿ.ಸಿ. ಬಡಾವಣೆಯ ಕಿಶೋರ್ ಕುಮಾರ್.ಎಸ್ ರವರು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಅಯ್ಕೆಯಾಗಿರುತ್ತಾರೆ.ಕಿಶೋರ್ ಕುಮಾರ್ ರವರು ಪ್ರಸ್ತುತ ವೀಣಾಶಾಸ್ತ್ರಿ ಎಂದೇ ಪ್ರಸಿದ್ಧರಾಗಿದ್ದ ದಿವಂಗತ ಲಕ್ಷ್ಮೀನಾರಾಯಣ ಶಾಸ್ತ್ರಿ […]
ಕೋಲಾರ :ನಮ್ಮ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಿ.ದೇವರಾಜ್ ಅವರು ತಮ್ಮ ಕರ್ತವ್ಯದ ಜೊತೆಗೆ ಸಾಮಾಜಿಕ ಸೇವೆಗಳಲ್ಲದೆ ಜಿಲ್ಲೆಯ ರೈತರಿಗೆ ಪರ್ಯಾಯ ಬೆಳೆಗಳನ್ನು ಬೆಳೆಯುವ ಮೂಲಕ ಮಾರ್ಗದರ್ಶನ ನೀಡುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಪ್ರಶಂಸಿದರು . ಇಂದು ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್ , ಕರ್ನಾಟಕ ಪ್ರಾದೇಶಿಕ ಕೃಷಿಕ ಸಮಾಜ , ಕೃಷಿ , ತೋಟಗಾರಿಕೆ ಮತ್ತು ಪೊಲೀಸ್ ಇಲಾಖೆ , ಜಿಲ್ಲಾ ಕೃಷಿ ಸಮಾಜ ಮತ್ತು ತೋಟಗಾರಿಕೆ ಮಹಾವಿದ್ಯಾಲಯ […]
ಕೋಲಾರ : – ಭಾರತದ ಅಗಾಧ ಸಾಧನೆಗೆ ಅಂಬೇಡ್ಕರ್ ನೀಡಿದ ಸಂವಿಧಾನವೇ ಕಾರಣವಾಗಿದೆಯೆಂದು ಭಾರತ ಸೇವಾದಳ ಜಿಲ್ಲಾ ಗೌರವಾಧ್ಯಕ್ಷ ಸಿ.ಎಂ.ಆರ್ . ಶ್ರೀನಾಥ್ ಅಭಿಪ್ರಾಯಪಟ್ಟರು . ನಗರದ ಭಾರತ ಸೇವಾದಳ ಜಿಲ್ಲಾ ಕಚೇರಿಯಲ್ಲಿ ಮಂಗಳವಾರ ಅಂಬೇಡ್ಕರ್ರ ೬೬ ನೇ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡುತ್ತಿದ್ದರು . ಸಂವಿಧಾನ ಭಾರತಕ್ಕೆ ಸೀಮಿತವಾಗಿದರೂ , ವಿಶ್ವದ ಹತ್ತು ಹಲವು ರಾಷ್ಟ್ರಗಳ ಅನುಸರಣೆ ಮತ್ತು ಅಳವಡಿಕೆಗೆ ಕಾರಣವಾಗಿದೆಯೆಂದು ವಿವರಿಸಿದರು . ಸಂವಿಧಾನದ ಮಹತ್ವ ಪ್ರತಿಯೊಬ್ಬರ […]
ಶ್ರೀನಿವಾಸಪುರ: ಕೋಲಾರ ಜಿಲ್ಲಾ ಹಾಲು ಒಕ್ಕೂಟ, ಶ್ರೀನಿವಾಸಪುರ ಶಿಬಿರ ಕಚೇರಿಯಲ್ಲಿ ರೂ.5,70,000/- ಗಳ ಮೊತ್ತದ ರಾಸುಗಳ ವಿಮಾ ಪರಿಹಾರ ಚೆಕ್ ಗಳನ್ನು ಕೋಮುಲ್ ನಿರ್ದೇಶಕರು ಎನ್. ಹನುಮೇಶ್ ರವರು ಫಲಾನುಭವಿಗಳಿಗೆ ವಿತರಣೆ ಮಾಡಿದರು, ಕಾರ್ಯಕ್ರಮದಲ್ಲಿ ಮಾತನಾಡಿ ದಿನಾಂಕ.16.11.2022 ರಿಂದ ಹಾಲು ಉತ್ಪಾದಕರಿಗೆ ಹಾಲಿನ ಖರೀದಿ ಧರ ರೂ.2 ಹೆಚ್ಚಿಸಲಾಗಿದ್ದು, ಪುನಃ ದಿನಾಂಕ.01.12.2022 ರಿಂದ ರೂ.2 ಹೆಚ್ಚಿಸಲಾಗಿದ್ದು ಒಕ್ಕೂಟವು ಒಟ್ಟಾರೆ ರೂ 4/- ಹೆಚ್ಚಿಸಲಾಗಿದ್ದು, ಪ್ರಸ್ತುತ 3.5 FAT, 8.5 SNF ಹಾಲಿನ ಗುಣಮಟ್ಟಕ್ಕೆ 31ರೂ ಒಕ್ಕೂಟ ನೀಡುತ್ತಿದ್ದು, […]
ಶ್ರೀನಿವಾಸಪುರ 1 : ನಮ್ಮ ರಾಷ್ಟ್ರದ ಪ್ರಜಾಸತ್ತೆಗೆ ಮೂಲಭೂತ ಅಡಿಪಾಯವಾಗಿರುವ ಭಾರತದ ಸೊಗಸಾದ ಸಂವಿಧಾನವನ್ನು ರಚಿಸಿರುವ ಮಾಹಾ ಪುರಷ ಎಂದು ತಹಶೀಲ್ದಾರ್ ಶರೀನ್ತಾಜ್ ಬಣ್ಣಿಸಿದರು.ತಾಲೂಕು ಆಡಳಿತವತಿಯಿಂದ ಮಂಗಳವಾರ ನಡೆದ ಮಹಾಪರಿನಿರ್ವಾಣ ದಿನಾಚರಣೆಯ ಅಂಗವಾಗಿ ಪಟ್ಟಣದ ತಾಲೂಕು ಕಚೇರಿಯ ಮುಂಭಾಗದ ಆಂಬೇಡ್ಕರ್ರವರ ಪುತ್ಥಳಿಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ನಮಗೆ ಸ್ವಾಭಿಮಾನದ ಸ್ವತಂತ್ರ ತಂದು ಕೊಟ್ಟಿರುವ ಡಾ. ಅಂಬೇಡ್ಕರ್ ಅವರಿಗೆ ಕೇವಲ ಪೂಜೆ ಸಲ್ಲಿಸಿದರೆ ಸಾಲದು. ನಾವು ಅವರ ತತ್ವಾದರ್ಶಗಳನ್ನು , ಸಿದ್ಧಾಂತಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಅಂದಾಗ ಮಾತ್ರ […]