ಶ್ರೀನಿವಾಸಪುರ 2 : ಸಣ್ಣ ಪುಟ್ಟ ರೈತರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ವಿನಾಕಾರಣ ತೊಂದರೆ ಕೊಡುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯ ಮುಖಂಡ ಕಾರ್ಯದರ್ಶಿ ವೀರಭದ್ರಸ್ವಾಮಿ ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದರು.ಪಟ್ಟಣದ ಅರಣ್ಯ ಇಲಾಖೆ ಕಚೇರಿ ಮುಂಭಾಗ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಧರಣಿ ನಡೆಸಿ ಪ್ರತಿಭಟಿಸಿ ಮಾತನಾಡಿದರು.ಐವತ್ತು ಆರವತ್ತು ವರ್ಷಗಳ ಹಿಂದೆ ಖರೀದಿ ಮಾಡಿ ಸಾಗುವಳಿ ಮಾಡುತ್ತಿರುವ ಸಣ್ಣ ಪುಟ್ಟ ರೈತರ ಜಮೀನಗಳನ್ನು […]
ಕೋಲಾರ,ಮಾ.3: ಮುಖದಲ್ಲಿ ಚಲಿಸುವ ಏಕೈಕ ಮೂಳೆ ಕೆಳದವಡೆ. ಕೆಳದವಡೆ ಮತ್ತು ತಲೆ ಬುರುಡೆಯ ಜಂಟಿ Temporomandibular joint (TMJ) ತಲೆ ಬುರುಡೆಯ ಫೋಸಾದಲ್ಲಿ ಸರಿಯುವುದರಿಂದ ಕೆಳದವಡೆಯ ಚಲನೆ ಸಾದ್ಯವಾಗುತ್ತದೆ. ಕೆಳದವಡೆಗೆ ಪೆಟ್ಟುಬಿದ್ದು, ಜಂಟಿ ಸುತ್ತ ರಕ್ತಸ್ರಾವವಾಗಿ ಕ್ರಮೇಣ ತಲೆ ಬುರುಡೆ ಜೊತೆ ಸೇರಿ ಒಂದೇ ಮೂಳೆಯಾಗಿ ದವಡೆಯ ಚಲನೆಯನ್ನು ನಿಬರ್ಂಧಿಸುವುದನ್ನು ಖಿಒಎ ಂಟಿಞಥಿಟosis (ಟಿ.ಎಂ.ಜೆ.ಆಂಕಾಲಸೀಸ್) ಎಂದು ಕೆರಯಲಾಗುತ್ತದೆ. ಇಂತಹ ಸಂದರ್ಭದಲ್ಲಿ ಬಾಯಿ ತೆಗೆಯುವುದು ಮತ್ತು ಆಹಾರ ಸೇವನೆಯಲ್ಲಿ ತೊಡುಕು ಕಂಡುಬರುತ್ತದೆ.ಆರ್ಎಲ್ ಜಾಲಪ್ಪ ಆಸ್ಪತ್ರೆಯದಂತ ವೈದ್ಯಕೀಯ ವಿಭಾಗದಲ್ಲಿ ಇಂತಹ […]
ಶ್ರೀನಿವಾಸಪುರ: ಪಟ್ಟಣದ ಪುರಸಭೆ ವಾಣಿಜ್ಯ ಸಂಕೀರ್ಣದಲ್ಲಿನ 11 ಅಂಗಡಿ ಮಳಿಗೆಗಳನ್ನು ಗುರುವಾರ ಬಹಿರಂಗ ಹರಾಜಿನ ಮೂಲಕ ರೂ.46.63 ಲಕ್ಷಕ್ಕೆ ನೀಡಲಾಯಿತು.ಪುರಸಭೆ ಮುಖ್ಯಾಧಿಕಾರಿ ವೈ.ಎನ್.ಸತ್ಯನಾರಾಯಣ ಹರಾಜಿನ ಬಳಿಕ ಮಾತನಾಡಿ, ಜಿಲ್ಲಾಧಿಕಾರಿ ಆದೇಶದ ಮೇರೆಗೆ ಖಾಲಿಯಿದ್ದ 11 ಅಂಗಡಿಗಳ ಬಹಿರಂಗ ಹರಾಜು ನಡೆಸಲಾಗಿದೆ. ಹರಾಜಿನಲ್ಲಿ ಅಂಗಡಿ ಪಡೆದುಕೊಂಡಿರುವ ವ್ಯಕ್ತಿಗಳು, ಅಂಗಡಿಗಳನ್ನು ವಾಣಿಜ್ಯ ಉದ್ದೇಶಕ್ಕೆ ಮಾತ್ರ ಬಳಸಬೇಕು ಎಂದು ಹೇಳಿದರು.ಅಂಗಡಿ ಮಳಿಗೆ ಬಾಡಿಗೆ ನಿಗದಿತ ಸಮಯಕ್ಕೆ ಸರಿಯಾಗಿ ಸಂದಾಯ ಮಾಡಬೇಕು. ಪುರರಸಭೆ ಗಮನಕ್ಕೆ ತರದೆ ಅಂಗಡಿ ಮಳಿಗೆಗಳನ್ನು ಬೇರೆಯರಿಗೆ ವರ್ಗಾಯಿಸಬಾರದು. ಪುರಸಭೆ […]
ಶ್ರೀನಿವಾಸಪುರ: ಅಭಿವೃದ್ಧಿ ಕಾಮಗಾರಿಗಳ ಗುಣಮಟ್ಟ ಸರಿಯಿರಬೇಕು. ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿ ನಡೆಯುವ ಸ್ಥಳಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲಿಸಬೇಕು ಎಂದು ಶಾಸಕ ಕೆ.ಆರ್.ರಮೇಶ್ ಕುಮಾರ್ ಹೇಳಿದರು.ತಾಲ್ಲೂಕಿನ ಲಕ್ಷ್ಮೀಪುರ ಕ್ರಾಸ್ ಸಮೀಪ ಬುಧವಾರ ರೂ.19 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗುವ ನಾಡಕಚೇರಿ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ನಿರ್ಮಾಣ ಕಾಮಗಾರಿ ನಿರ್ಮಿತಿ ಕೇಂದ್ರದಿಂದ ನಡೆಯುತ್ತಿದೆ. ಅವರಿಂದ ಉತ್ತಮ ಗುಣಮಟ್ಟದ ಕಾಮಗಾರಿ ನಿರೀಕ್ಷಿಸಲಾಗಿದೆ ಎಂದು ಹೇಳಿದರು.ಕ್ಷೇತ್ರದಲ್ಲಿ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಆದ್ಯತೆ […]
ಮುಳಬಾಗಿಲು : ಪೆ.28: ರಾಗಿ ಖರೀದಿ ಕೇಂದ್ರಗಳಲ್ಲಿ ದಲ್ಲಾಳಿಗಳಿಗೆ ಕಡಿವಾಣ ಹಾಕಿ ರೈತರ ಬೆವರ ಹನಿಗೆ ತಕ್ಕ ಬೆಂಬಲ ಬೆಲೆ ರೈತರಿಗೆ ಸಿಗಬೇಕೆಂದು ರೈತ ಸಂಘದಿಂದ ರಾಗಿ ಖರೀದಿ ಕೇಂದ್ರದ ಅಧಿಕಾರಿಗಳ ಮುಖಾಂತರ ಜಿಲ್ಲಾ ವ್ಯವಸ್ಥಾಪಕರಿಗೆ ಮನವಿ ನೀಡಿ ಒತ್ತಾಯಿಸಲಾಯಿತು. ವಂಚನೆ ಹೇಗೆಂದರೆ: ಖರೀದಿ ಕೇಂದ್ರಕ್ಕೆ ರಾಗಿ ಮಾರಾಟ ಮಾಡಬೇಕಾದರೆ ರೈತರು ಪ್ರೂಟ್ಸ್ ತಂತ್ರಾಂಶದಲ್ಲಿ ಎಪ್.ಐ.ಡಿ ಮಾಡಿಸುವುದು ಕಡ್ಡಾಯ ಎಪ್.ಐ.ಡಿ ಸೃಷ್ಠಿಗೆ ಜಮೀನಿನ ಪಹಣಿ ಆದಾರ್ ಬ್ಯಾಂಕ್ ಪಾಸ್ ಬುಕ್ ಮಾಹಿತಿ ಅಗತ್ಯವಾಗಿದೆ ಈ ಎಲ್ಲಾ ದಾಖೆಲಗಳನ್ನೇ […]
ಶ್ರೀನಿವಾಸಪುರ: ಪಟ್ಟಣದಲ್ಲಿ ಸೋಮವಾರ, ಈಚೆಗೆ ನಿಧನರಾದ ಶಾಸಕ ಕೆ.ಆರ್.ರಮೇಶ್ ಕುಮಾರ್ ಅವರ ಪತ್ನಿ ವಿಜಯಮ್ಮ ಅವರ ಗೌರವಾರ್ಥ ಏರ್ಪಡಿಸಿದ್ದ ಪುಷ್ಪಾಂಜಲಿ ಕಾರ್ಯಕ್ರಮದದ ಅಂಗವಾಗಿ ಸರ್ವಧರ್ಮ ಪ್ರಾರ್ಥನೆ ಹಾಗೂ ಅನ್ನಸಂತರ್ಪಣೆ ಮಾಡಲಾಯಿತು.ಪುರಸಭೆ ಕಚೇರಿ ಸಮೀಪ ಎಂಜಿ ರಸ್ತೆ ಬದಿಯಲ್ಲಿ ನಿರ್ಮಿಸಲಾಗಿದ್ದ ವೇದಿಕೆ ಮೇಲೆ ಇಡಲಾಗಿದ್ದ ದಿವಂಗತ ವಿಜಯಮ್ಮ ಅವರ ಭಾವಚಿತ್ರಕ್ಕೆ ಶಾಸಕ ಕೆ.ಆರ್.ರಮೇಶ್ ಕುಮಾರ್ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಸಾರ್ವಜನಿಕರು ಪುಷ್ಪಾಂಜಲಿ ಅರ್ಪಿಸಿದರು.ಶಾಸಕ ಕೆ.ಆರ್.ರಮೇಶ್ ಕುಮಾರ್ ಅಭಿಮಾನಿ ಬಳಗದ ಸದಸ್ಯರು, ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ […]
ಕೋಲಾರ:- ಏಳನೇ ವೇತನ ಆಯೋಗದ ವರದಿ ಜಾರಿ, ಎನ್ಪಿಎಸ್ ರದ್ದತಿಗೆ ಆಗ್ರಹಿಸಿ ರಾಜ್ಯ ಸರ್ಕಾರಿ ನೌಕರರ ಸಂಘ ಮಾ.1 ರಿಂದ ನಡೆಸುತ್ತಿರುವ ಅನಿರ್ಧಿಷ್ಟ ಮುಷ್ಕರಕ್ಕೆ ಆರೋಗ್ಯ ಇಲಾಖೆ, ಜಿಲ್ಲಾಸ್ಪತ್ರೆ ನೌಕರರು ಬೆಂಬಲ ವ್ಯಕ್ತಪಡಿಸಿದ್ದು, ತುರ್ತು ಚಿಕಿತ್ಸೆ,ಐಸಿಯು ಹೊರತುಪಡಿಸಿ ಉಳಿದೆಲ್ಲಾ ಸೇವೆಗಳು ಬಂದ್ ಆಗಲಿದೆ ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಜಿ.ಸುರೇಶ್ಬಾಬು ತಿಳಿಸಿದರು.ನಗರದ ಜಿಲ್ಲಾಸ್ಪತ್ರೆ ಮುಂಭಾಗ ಸೋಮವಾರ ಜಿಲ್ಲಾಸ್ಪತ್ರೆಯ ಮುಂಭಾಗ ವೈದ್ಯರು, ಶುಶ್ರೂಷಕರು ಸೇರಿದಂತೆ ಆರೋಗ್ಯ ಇಲಾಖೆಯ ಎಲ್ಲಾ ನೌಕರರು ಮುಷ್ಕರಕ್ಕೆ ಪೂರ್ವಭಾವಿಯಾಗಿ ಸಭೆ ನಡೆಸಿ ನೌಕರರ […]
ಕೋಲಾರ:- ತಮ್ಮ ತಾಯಿಯ ಪುಣ್ಯತಿಥಿಯಂದು ಅವರ ನೆನಪಿನಲ್ಲಿ ಪ್ರತಿ ವರ್ಷ ಸರ್ಕಾರಿ ಶಾಲಾ ಮಕ್ಕಳಿಗೆ ಸಹಾಯ ಮಾಡುತ್ತಾ ಬಂದಿರುವ ಯೋಧ ಆನಂದ್ ಸಹೋದರರು ಈ ಬಾರಿ ಅರಾಭಿಕೊತ್ತನೂರು ಸರ್ಕಾರಿ ಪ್ರಾಥಮಿಕ ಶಾಲಾ ಮಕ್ಕಳಿಗೆ ತಟ್ಟೆ ಲೋಟ ಹಾಗೂ ಪ್ರೌಢಶಾಲೆಯ ಬಿಸಿಯೂಟ ಕೊಠಡಿ ನವೀಕರಣಕ್ಕೆ 10 ಸಾವಿರ ರೂ ಆರ್ಥಿಕ ನೆರವು ನೀಡಿದರು.ತಾಯಿ ಆಂಜಿನಮ್ಮ ಅವರ ಪುಣ್ಯತಿಥಿ ಅಂಗವಾಗಿ ಸಹೋದರರಾದ ಶೇಖರ್, ಯೋಧ ಆನಂದ್, ಅಬಕಾರಿ ಇಲಾಖೆ ನೌಕರ ಶಿವಶಂಕರ್ ಪ್ರತಿವರ್ಷದಂತೆ ಈ ಬಾರಿಯೂ ಸೋಮವಾರ ಅರಾಭಿಕೊತ್ತನೂರು ಸರ್ಕಾರಿ […]
ಕೋಲಾರ; ಫೆ.27; ಕೆಆರ್ಐಡಿಎಲ್ ಇಲಾಖೆಯಡಿ ಜಿಲ್ಲಾದ್ಯಂತ ಕಳೆದುಹೋಗಿರುವ ಚೆಕ್ ಡ್ಯಾಂ, ಸಮುದಾಯ ಭವನಗಳನ್ನು ಹುಡುಕಿಕೊಟ್ಟು ಕೋಟಿಕೋಟಿ ಭ್ರಷ್ಟಾಚಾರವೆಸಗಿರುವ ಆಸ್ತಿಯನ್ನು ಹರಾಜು ಹಾಕಿ ಕಾಮಗಾರಿಗಳನನ್ನು ಪೂರ್ಣಗೊಳಿಸಬೇಕೆಂದು ರೈತಸಂಘದಿಂದ ಭೂಸೇನಾ ಇಲಾಖೆಯೆದುರು ಹೋರಾಟ ಮಾಡಿ ಕಾರ್ಯಪಾಲಕ ಅಭಿಯಂತರರಿಗೆ ಮನವಿ ನೀಡಿ ಆಗ್ರಹಿಸಲಾಯಿತು.ಟೆಂಡರ್ ಇಲ್ಲದೆ ಕಾಮಗಾರಿ ನಿರ್ವಹಿಸುವ ಭೂಸೇನಾ ಇಲಾಖೆ ಅಧಿಕಾರಿಗಳಿಗೆ ಗುತ್ತಿಗೆದಾರರಿಗೆ ಚಿನ್ನದ ಮೊಟ್ಟೆ ಇಡುವ ಇಲಾಖೆಯಾಗಿ ಮಾರ್ಪಟ್ಟು ಆನೆ ನಡೆದಿದ್ದೇ ದಾರಿ ಎಂಬಂತೆ ಅಲ್ಲಿನ ಎಂಜಿನಿಯರ್ಗಳಾದ ಕೋದಂಡರಾಮಯ್ಯ, ವಿಜಯ್ಕುಮಾರ್ ಅವರು ಇಲಾಖೆಯನ್ನೇ ಮಾರಾಟಕ್ಕೆ ಇಟ್ಟಿದ್ದರೂ ಕ್ರಮಕೈಗೊಳ್ಳಬೇಕಾದ ಜನಪ್ರನಿನಿಧಿಗಳು ನಾಪತ್ತೆಯಾಗಿದ್ದಾರೆ […]