

ತಲ್ಲೂರು; ದಿನಾಂಕ 2/02/2025 ರಂದು ಬೆಳಿಗ್ಗೆ ದೇವಾಲಯದ ಧರ್ಮ ಗುರುಗಳಾದ ವಂದನೀಯ ಫಾದರ್ ಎಡ್ವಿನ್ ಡಿಸೋಜಾರವರು ದಿವ್ಯ ಬಲಿಪೂಜೆಯನ್ನುನೆರವೇರಿಸಿದರು. ಒಂದನೇ ತರಗತಿಯಿಂದ ಪಿ ಯ ಸಿ ವರೆಗಿನ ವಿದ್ಯಾರ್ಥಿಗಳು ಪ್ರಾರ್ಥನಾ ವಿಧಿಯಲ್ಲಿ ಸಹಕರಿಸಿದರು.
ಲಘು ಉಪಹಾರದ ನಂತರ ದೇವಾಲಯದ ಸಭಾಂಗಣದಲ್ಲಿ ತರಗತಿವಾರು “ಭರವಸೆ “ ಎಂಬ ವಿಷಯದ ಮೇಲೆ ಬೈಬಲ್ ಆಧಾರಿತ ಮನರಂಜನಾ ಕಾರ್ಯಕ್ರಮಗಳು ನಡೆದವು.
ಮುಖ್ಯ ಅತಿಥಿಗಳಾಗಿ, ಜಯರಾಣಿ ಕಾನ್ವೆಂಟಿನ ಮುಖ್ಯಸ್ಥೆ ಧರ್ಮಭಗಿನಿ ಜೂಲಿ ಹಾಜರಿದ್ದು, “ಧಾರ್ಮಿಕ ಶಿಕ್ಷಣ ಎನ್ನುವುದು. ತಂತ್ರಜ್ಞಾನ ಅಥವಾ ವೈಜ್ಞಾನಿಕ ವಿಚಾರಗಳನ್ನು ಕಲಿಯುವ ವಿಷಯವಲ್ಲ. ಇದು ಯೇಸು ಯಾರು ಎಂದು ತಿಳಿದುಕೊಳ್ಳುವುದರ ಬಗ್ಗೆಯಾಗಿದೆ. ಮಕ್ಕಳಿಗೆ ಚಿಕ್ಕಂದಿನಿಂದಲೇ ನೀಡಲಾಗುವ ಧಾರ್ಮಿಕ ಶಿಕ್ಷಣ ಅವರ ಭವಿಷ್ಯದಲ್ಲಿ ಮೈಲಿಗಲ್ಲಾಗುತ್ತದೆ. ದೇವರಲ್ಲಿ ನಂಬಿಕೆಯನ್ನು ಹೊಂದಿದ್ದರೆ, ನಮ್ಮ ಜೀವನದಲ್ಲಿ ಬರುವ ಎಲ್ಲಾ ಸವಾಲುಗಳನ್ನು ಧೈರ್ಯದಿಂದ ಎದುರಿಸಬಹುದು “ಎಂದು.ಮಕ್ಕಳಿಗೆ ಸಂದೇಶ ನೀಡಿದರು.
ತದನಂತರ ಭಾನುವಾರದ ಧಾರ್ಮಿಕ ಶಿಕ್ಷಣ ಪರೀಕ್ಷೆಯಲ್ಲಿ ಸಾಧನೆಗೈದ, ಚರ್ಚಿನ ವಿವಿಧ ಚಟುವಟಿಕೆಗಳಲ್ಲಿ ಭಾಗವಹಿಸಿದ.
ಮಕ್ಕಳಿಗೆ, ಧಾರ್ಮಿಕ ಶಿಕ್ಷಣ ನೀಡಲು ಸಹಕರಿಸುವ ಶಿಕ್ಷಕರಿಗೆ, ಧರ್ಮಗುರುಗಳು ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಪಾಲನಾ ಮಂಡಳಿಯ ಉಪಾಧ್ಯಕ್ಷರು, ಕಾರ್ಯದರ್ಶಿಗಳು, 20 ಆಯೋಗದ ಸಂಚಾಲಕರು, ಸಮಾಜ ಸಂಪರ್ಕ ಆಯೋಗದ ಸಂಚಾಲಕರು ಹಾಗೂ ಪೋಷಕರು ಹಾಜರಿದ್ದರು. ಧಾರ್ಮಿಕ ಶಿಕ್ಷಣ ಆಯೋಗದ ಸಂಚಾಲಕರಾದ ಶ್ರೀಮತಿ ರೇಷ್ಮಾ ಮೆಂಡೋನ್ಸರವರು ಸ್ವಾಗತಿಸಿದರು. ವಿದ್ಯಾರ್ಥಿನಿ ದಿಯಾ ಡಿಸಿಲ್ವ ಕಾರ್ಯಕ್ರಮವನ್ನು ನಿರೂಪಿಸಿದರು.
Catechism Day was celebrated on 02/03/2025 at St. Francis Assisi Church, Tallur.
Catechism Day was celebrated on 02/03/2025 at St. Francis Assisi Church, Tallur.
In the morning at 7.30, Rev. Fr. Edwin D’Souza, the parish priest had celebrated the Mass and the Divine Adoration.
After a light breakfast, a programme was held where Bible based entertainment on the theme “Hope” by the students of class 1 to 10, took place in the Church hall.
The Vice President and the Secretary of Parish Pastoral Council, Coordinators of 20 Commissions, Classes from 1 to PUC and Parents were also present for this occasion.
Ms. Diya D’Silva, a student had anchored the programme.
Mrs. Reshma Mendonca, Convener of the Catechism Commission, welcomed the gathering.
Sr. Julie, Head of Jayarani Convent was the Chief Guest and gave a message on how Catechism is not about learning technology or scientific ideas, about knowing who Jesus is, how Catechism imparted to children from their childhood is a milestone in their future and also, by having faith in God, we can bravely face all the challenges that come in our life.
After the speech of the Chief guest, the catechism teachers gave away the prizes to the children who passed the catechism exam on Sunday as well as for those who participated in various activities of the church.
A token of gratitude was given to the Catechism teachers for their cooperation in teaching catechism followed by few words of appreciation by Rev. Fr. Edwin D’Souza and thus, concluded the programme.



























