ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ
ಕೋಲಾರ, ಮೇ.31: ರೈತ ನಾಯಕ ರಾಕೇಶ್ ಟಿಕಾಯಿತ್ ರವರ ಮೇಲೆ ಮಸಿ ಬಳಿದು ಹಲ್ಲೆ ಮಾಡಿ ಕೊಲೆ ಮಾಡಲು ಮುಂದಾಗಿದ್ದ ದಂದೆಕೋರರ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸಬೇಕೆಂದು ರೈತ ಸಂಘದಿಂದ ಕಪ್ಪು ಬಟ್ಟೆ ದರಿಸಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಗೃಹ ಮಂತ್ರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ರೈತ ಹೋರಾಟವನ್ನು ದಮನ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಬಿಜೆಪಿ ಹೆಸರಿನಲ್ಲಿ ಗೂಂಡಾಗಳನ್ನು ಬಿಟ್ಟು ರೈತ ನಾಯಕರ ಮೇಲೆ ಹಲ್ಲೆ ಕೊಲೆ ಮಾಡಲು ಮುಂದಾಗಿರುವುದು ನಾಚಿಕೆಗೇಡು ಎಂದು ಜಿಲ್ಲಾದ್ಯಕ್ಷ ಐತಾಂಡಹಳ್ಳಿ ಮಂಜುನಾಥ್ ಸರ್ಕಾರಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ದಿನಕ್ಕೊಂದು ಬಿಜೆಪಿ ಶಾಸಕರು ಹಗರಣಗಳಲ್ಲಿ ಸಿಲುಕಿಕೊಂಡಿರುವ ಬಡ ಮಕ್ಕಳಿಗೆ ಪಠ್ಯ ಪುಸ್ತಕ ಸಮವಸ್ತ್ರ ನೀಡಲು ಯೋಗ್ಯತೆ ಇಲ್ಲದೆ ಜೊತೆಗೆ ಸಾವಿರಾರು ಕೋಟಿ ಹಣ ನೀಡಿದರೆ ಮುಖ್ಯಮಂತ್ರಿಯಾಗಬೇಕೆಂಬ ಹೇಳಿಕೆಗಳಿಂದ ತಪ್ಪಿಸಿಕೊಳ್ಳಲು ರೈತ ನಾಯಕರ ಮೇಲೆ ಹಲ್ಲೆ ಮಾಡುವ ಮುಖಾಂತರ ತನ್ನ ನರಿ ಬುದ್ದಿಯನ್ನು ತೋರಿಸುತ್ತಿದ್ದಾರೆಂದು ಅಸಮಾಧಾನ ವ್ಯಕ್ತಪಡಸಿದರು.
ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ ಮಾತನಾಡಿ ಕೇಂದ್ರ ಸರ್ಕಾರದ ಜಾರಿ ಮಾಡಲು ಮುಂದಾಗಿದ್ದ ಕೃಷಿ ಕಾಯ್ದೆಗಳ ವಿರುದ್ದ ನಿರಂತರವಾಗಿ ಒಂದು ವರ್ಷ 6 ತಿಂಗಳು ಹೋರಾಟ ಮಾಡುವ ಮುಖಾಂತರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿ ರೈತರ ಹೋರಾಟಕ್ಕೆ ಮಣಿದು ಕೃಷಿ ವಾಪಸ್ಸ್ ಪಡೆದ ಕೇಂದ್ರ ಸರ್ಕಾರ ಮತ್ತೆ ರೈತ ಹೋರಾಟದಲ್ಲಿ ಸಾವಿರಾರು ಕೋಟಿ ಡೀಲ್ ಮಾಡಲು ಮುಂದಾಗಿದ್ದರು ಎಂದು ಸುದ್ದು ಮಾದ್ಯಮದಲ್ಲಿ ಪ್ರಸಾರವಾದ ಆರೋಪಕ್ಕೆ ಉತ್ತರ ನೀಡಲು ಬೆಂಗಳೂರಿನ ಗಾಂದಿಭವನಕ್ಕೆ ಆಗಮಿಸಿದ್ದ ರೈತ ನಾಯಕರಾದ ರಾಕೇಶ್ ಟಿಕಾಯಿತ್, ಪತ್ರಿಕಾ ಘೋಷ್ಠಿ ಪ್ರಾರಂಭ ಮಾಡುವ ಸಮಯದಲ್ಲಿ ಏಕಾಏಕಿ ಮೋದಿ ಹೆಸರಿನಲ್ಲಿ ಹಲ್ಲೆ ಹಾಗೂ ಕೊಲೆ ಮಾಡಲು ಮುಂದಾಗುವ ಜೊತೆಗೆ ಮುಖಕ್ಕೆ ಮಸಿ ಬಳಿಯುವ ಮುಖಾಂತರ ಅಪಮಾನ ಮಾಡಿರುವ ವ್ಯಕ್ತಿಗಳ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸಿ ಮುಂದೆ ಅಹಿತಕರ ಘಟನೆ ನಡೆಯದಂತೆ ಜಾಗೃತಿವಹಿಸಬೇಕೆಂದು ಮನವಿ ಮಾಡಿದರು.
ಕೋಡಿಹಳ್ಳಿ ಚಂದ್ರಶೇಖರ್ ಆರೋಪ ನ್ಯಾಯಾಂಗ ತನಿಖೆ ಮಾಡಿ ರೈತರ ಹೆಸರಿನಲ್ಲಿ ಮೋಸ ಮಾಡಿರುವ ಇವರ ವಿರುದ್ದ ಗೂಂಡಾ ಕಾಯ್ದೆಯಲ್ಲಿ ಕೇಸು ದಾಖಲಿಸಿ, ಅದನ್ನು ಬಿಟ್ಟು ಈ ರೀತಿ ರೈತರ ಹೋರಾಟವನ್ನು ದಮನ ಮಾಡಲು ಮುಂದಾದರೆ ನ್ಯಾಯಕ್ಕಾಗಿ ಅನ್ನದಾತ ಯಾರ ಬಳಿ ಹೋಗಬೇಕು. ಈ ಸಮಸ್ಯೆಯನ್ನು ಗೃಹ ಮಂತ್ರಿಗಳು ಗಂಬೀರವಾಗಿ ಪರಿಗಣಿಸಬೇಕೆಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳು ನಿಮ್ಮ ಮನವಿಯನ್ನು ಗೌರವಾನ್ವಿತ ಗೃಹ ಮಂತ್ರಿಗಳಿಗೆ ಕಳಿಹಿಸುವ ಭರವಸೆ ನೀಡಿದರು .
ಹೋರಾಟದಲ್ಲಿ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾ ಕಾರ್ಯದ್ಯಕ್ಷ ವಕ್ಕಲೇರಿ ಹನುಮಯ್ಯ, ತಾಲ್ಲೂಕಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ವಿಭಾಗಿಯ ಕಾರ್ಯದರ್ಶಿ ಪಾರುಕ್ಪಾಷ, ಮಂಗಸಂದ್ರ ತಿಮ್ಮಣ್ಣ, ವೆಂಕಟೇಶಪ್ಪ, ಕುವಣ್ಣ, ಗೋವಿಂದಪ್ಪ, ಬಂಗಾರಿ ಮಂಜು, ವಿಶ್ವ, ವಿಜಯ್ಪಾಲ್, ಮುಳಬಾಗಿಲು ತಾಲ್ಲೂಕಾದ್ಯಕ್ಷ ಯಲುವಳ್ಳಿ ಪ್ರಭಾಕರ್, ಮಾಲೂರು ತಾಲ್ಲೂಕಾದ್ಯಕ್ಷ ಯಲ್ಲಪ್ಪ, ಹರೀಶ್, ಸಂದೀಪ್ರೆಡ್ಡಿ, ಸಂದೀಪ್ಗೌಡ, ವೇಣು, ಸುನಿಲ್ ಕುಮಾರ್, ಭಾಸ್ಕರ್, ಯಾರಂಘಟ್ಟ ಗೀರೀಶ್, ಲಕ್ಷ್ಮೀ, ಸಂಧ್ಯಾ, ತೆರ್ನಹಳ್ಳಿ ಆಂಜಿನಪ್ಪ ಮುಂತಾದವರಿದ್ದರು.