ಮಂಗಳೂರು: ಅಮೃತ ಮಹೋತ್ಸವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವು ಅಪರಾಹ್ನ 3.30. ಕ್ಕೆ ಶಾಲಾ ಸಭಾಂಗಣದಲ್ಲಿ ನೆರವೇರಿತು. ಅಮೃತ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷರಾದ ಕಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂದನೀಯ ಗುರು ಆಂಟನಿ ಸೆರಾ, ಇವರುನವೀಕರಿಸಲ್ಪಟ್ಟ ಶಾಲಾ ಸಭಾಂಗಣವನ್ನು ಹಾಗೂಕಾರ್ಯಕ್ರಮವನ್ನು ಉದ್ಘಾಟಿಸಿ ಸೌಹಾರ್ದದ ಪ್ರತಿಕವಾದ ಈ ಶಾಲೆಯಿಂದ ಇನ್ನಷ್ಟು ಮಕ್ಕಳು ಕಲಿತು ಸಮಾಜದ ವಿವಿಧಸ್ಥಳಗಳಲ್ಲಿ ಬೆಳಗಲಿ ಎಂದು ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಸ್ವಾಮಿ ಜಿತಕಾಮನಂದಾಜಿ ಅಧ್ಯಕ್ಷರು ಶ್ರೀರಾಮಕೃಷ್ಣ ಮಠ ಮಂಗಳೂರು ಇವರು ಎಲ್ಲರನ್ನೂ ಉದ್ದೇಶಿಸಿ ಮಾತನಾಡಿ ಆಶೀರ್ವಾದ ನೀಡಿದರು. ಕಾರ್ಯಕ್ರಮದಲ್ಲಿ ಶ್ರೀ .ಎಚ್ .ಆರ್ ಈಶ್ವರ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳೂರು ದಕ್ಷಿಣ, ಶ್ರೀ ಪ್ರೇಮಾನಂದ ಮುಖ್ಯ ಸಚೇತಕರು ಮಂಗಳೂರು ಮಹಾನಗರ ಪಾಲಿಕೆ, ಕಾರ್ಪೊರೇಟರ್ ಶ್ರೀಮತಿ ಭಾನುಮತಿ, ಹಳೆ ವಿದ್ಯಾರ್ಥಿ ಶ್ರೀ. ಟಿ. ಆರ್. ಪೂಂಜಾ, ಶ್ರೀ ಸಂತೋಷ್ ಸಿಕ್ವೇರಾ, ಶ್ರೀಅಶೋಕ್ ಫೆರ್ನಾಂಡಿಸ್ ಇವರು ಉಪಸ್ಥಿತರಿದ್ದರು.
ವಂದನೀಯ ಗುರು ಎರಿಕ್ ಕ್ರಾಸ್ತಾ ಸಂಚಾಲಕರು ಕಾಸ್ಸಿಯ ಪ್ರೌಢಶಾಲೆ ಇವರು ಸ್ವಾಗತಿಸಿದರು. ಶಾಲ ಮುಖ್ಯೋಪಾಧ್ಯರಾದ ಶ್ರೀ.ಎವರೆಸ್ಟ್ ಕ್ರಾಸ್ತಾರವರು ವಂದಿಸಿದರು. ಹಿರಿಯ ಶಿಕ್ಷಕಿ ರೀಟಾ ಪಿಂಟೋ ಕಾರ್ಯಕ್ರಮವನ್ನು ನಿರ್ವಹಿಸಿದರು.
ಮಕ್ಕಳ ಸಾಂಸ್ಕೃತಿಕಕಾರ್ಯಕ್ರಮದೊಂದಿಗೆ ಅಮೃತಮಹೋತ್ಸವ ಕಾರ್ಯಕ್ರಮ ಸಂಪನ್ನಗೊಂಡಿತು.