ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ:- ರಾಜ್ಯದ ಕೈಗಾರಿಕೆಗಳಲ್ಲಿ 10 ಸಾವಿರ ಕೋಟಿ ರೂಪಾಯಿಗಳ ಸಿಎಸ್‍ಆರ್ ನಿಧಿ ಲಭ್ಯವಿದ್ದು, ಇದನ್ನು ಸದ್ಬಳಕೆ ಮಾಡಿಕೊಂಡು ಸಮುದಾಯ ಸೇವೆ ಮಾಡಲು ರೋಟರಿ ಪದಾಧಿಕಾರಿಗಳು ಮುಂದಾಗಬೇಕೆಂದು ರೋಟರಿ ನಿಯೋಜಿತ ರಾಜ್ಯಪಾಲ ಉದಯಕುಮಾರ್ ಕೆ.ಭಾಸ್ಕರ್ ಹೇಳಿದರು.
ನಗರದ ಅಂತರಗಂಗೆ ಬೆಟ್ಟದ ರೆಸಾರ್ಟ್ ಸಭಾಂಗಣದಲ್ಲಿ ಗುರುವಾರ ಸಂಜೆ ಕೋಲಾರ ರೋಟರಿ ಸೆಂಟ್ರಲ್‍ನ ನೂತನ ಅಧ್ಯಕ್ಷರಾಗಿ ಸಿಎಂಆರ್ ಶ್ರೀನಾಥ್ ಪದಗ್ರಹಣ ಸಮಾರಂಭದ ಅಧ್ಯಕ್ಷತೆವಹಿಸಿ ಅವರು ಮಾತನಾಡುತ್ತಿದ್ದರು.
ಕೈಗಾರಿಕೆಗಳ ಸಿಎಸ್‍ಆರ್ ನಿಧಿಯನ್ನು ಸದ್ಬಳಕೆ ಮಾಡಿಕೊಳ್ಳುವ ಸಲುವಾಗಿ ಪ್ರತಿ ರೋಟರಿ ಘಟಕವು ಆಂತರಿಕವಾಗಿ ಟ್ರಸ್ಟ್‍ವೊಂದನ್ನು ಸ್ಥಾಪಿಸಿಕೊಳ್ಳಬೇಕು, ಉಳಿದಂತೆ ಸಿಎಸ್‍ಆರ್ ನಿಧಿ ಪಡೆಯುವ ಕುರಿತು ಅಗತ್ಯ ಮಾಹಿತಿಯನ್ನು ರೋಟರಿ ಸಮಿತಿಯಿಂದಲೇ ನೀಡುವುದಾಗಿ ವಿವರಿಸಿದರು.
ಸೇವೆಯ ಜೊತೆಗೆ ನಾಯಕತ್ವವನ್ನು ಬೆಳೆಸುವಲ್ಲಿ ರೋಟರಿ ಸಂಸ್ಥೆ ಸಹಕಾರಿಯಾಗಿದ್ದು, ಕೋಲಾರದ ನಿರ್ಗಮಿತ ಅಧ್ಯಕ್ಷ ಎಸ್.ಸುಧಾಕರ್ ಕೊರೊನಾ ಕಾಲಘಟ್ಟದಲ್ಲಿಯೂ ಉತ್ತಮ ಸೇವೆಸಲ್ಲಿಸಿದ್ದಾರೆ. ಹೊಸ ಅಧ್ಯಕ್ಷ ಸಿಎಂಆರ್ ಶ್ರೀನಾಥ್ ಮುಂದೆಯೂ ಹೊಸ ಸವಾಲುಗಳಿದ್ದು, ಒಂದು ವರ್ಷದ ಅ„ಕಾರಾವ„ಯನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕಿವಿಮಾತು ಹೇಳಿದರು.
ಕೋಲಾರ ರೋಟರಿ ಸೆಂಟ್ರಲ್ ಅಧ್ಯಕ್ಷರಾಗಿ ಅಧಿಕಾರ ಸ್ಪೀಕರಿಸಿದ ಸಿಎಂಆರ್ ಶ್ರೀನಾಥ್ ಮಾತನಾಡಿ, ಶಿಕ್ಷಣ, ಆರೋಗ್ಯ ಸೇವೆಯ ಜೊತೆಗೆ ಕೋಲಾರ ನಗರಕ್ಕೆ ಶಾಶ್ವತವಾದ ಕೊಡುಗೆ, ಅಂತರಗಂಗೆಬೆಟ್ಟದಲ್ಲಿ 15 ಎಕರೆ ಪ್ರದೇಶದಲ್ಲಿ ಔಷಧೀಯ ವನ ನಿರ್ಮಾಣ ಮಾಡುವ ಗುರಿಯನ್ನು ತಾವು ಹೊಂದಿದ್ದು, ಇದಕ್ಕಾಗಿ ಜಿಲ್ಲಾಧಿಕಾರಿಗಳು ಸಲಹೆ ನೀಡಿದ್ದಾರೆ. ಈ ಕನಸುಗಳನ್ನು ನನಸು ಮಾಡಲು ಶ್ರಮಿಸುವುದಾಗಿ ಘೋಷಿಸಿದರು.
ನಿರ್ಗಮಿತ ಅಧ್ಯಕ್ಷ ಎಸ್.ಸುಧಾಕರ್ ಮಾತನಾಡಿ, ಕೊರೊನಾ ಕಾಲಘಟ್ಟದಲ್ಲಿ ಅಧ್ಯಕ್ಷರಾಗಲು ತಾವು ಆರಂಭದಲ್ಲಿ ಹಿಂಜರಿದಿದ್ದರೂ, ಅಧ್ಯಕ್ಷರಾದ ನಂತರ ಸಮುದಾಯದ ಸೇವೆಗೆ ಉತ್ತಮ ಅವಕಾಶ ಲಭ್ಯವಾಗಿದ್ದಕ್ಕೆ ಸಂತಸ ವ್ಯಕ್ತಪಡಿಸಿ, ಕೊರೊನಾ ಕಾಲಘಟ್ಟದಲ್ಲಿಯೂ ಒಂದು ವರ್ಷದ ಅವಧಿಯಲ್ಲಿ ಸುಮಾರು 20 ಲಕ್ಷ ರೂಗಳಿಗೂ ಮೇಲ್ಪಟ್ಟು ಆತ್ಮತೃಪ್ತಿಯಾಗುವಂತೆ ಸಮಿತಿಯ ಸಹಕಾರದೊಂದಿಗೆ ಉತ್ತಮ ಸೇವಾ ಕಾರ್ಯಗಳನ್ನು ನಡೆಸಿರುವುದಾಗಿ ಘೋಷಿಸಿದರು.
ಕೋಲಾರ ರೋಟರಿ ನಂದಿನಿ ಅಧ್ಯಕ್ಷ ಕೆ.ವಿ.ಶಂಕರಪ್ಪ ಮಾತನಾಡಿ, ಸೇವಾ ಕಾರ್ಯದಲ್ಲಿ ರೋಟರಿ ಸಂಸ್ಥೆಯು ವಿಶ್ವದಲ್ಲಿಯೇ ಮಂಚೂಣಿಯಲ್ಲಿ ನಿಂತಿದ್ದು, ಸೇವೆಗೆ ಅವಕಾಶ ಸಿಗುವ ಯಾವುದೇ ಅವಕಾಶವನ್ನು ಕೈಚೆಲ್ಲಬಾರದು ಎಂದು ಕಿವಿ ಮಾತು ಹೇಳಿದರು.
ಇದೇ ಸಂದರ್ಭದಲ್ಲಿ ರೋಟರಿ ನೂತನ ಸಮಿತಿಯ ಪದಾಧಿಕಾರಿಗಳಾಗಿ ಜಿ.ಸಿ.ಹನುಮಂತು, ಕೆ.ಪಿ.ರಮೇಶ್‍ಬಾಬು, ಚಂಪಕ್ ರಮೇಶ್, ವಿ.ಎಚ್.ರಾಜ್‍ಕುಮಾರ್, ಫೈರ್ ರಮೇಶ್, ರೂಪೇಶ್ ಆರ್ಯ, ಸುಂದರ ಪ್ರಕಾಶ್, ಎ.ಜಿ.ಗೋವಿಂದರಾಜು, ಸಂಪತ್‍ರಾಮಂiÀi್ಯ ಇತರರು ಅಧಿಕಾರ ಸ್ಪೀಕರಿಸಿದರು.
ವೇದಿಕೆಯಲ್ಲಿ ವಲಯ ರೋಟರಿ ರಾಜ್ಯಪಾಲ ಎಸ್.ವಿ.ಸುಧಾಕರ್, ಸಹಾಯಕ ರಾಜ್ಯಪಾಲ ಜಿ.ಎಸ್.ಶಿವಮೂರ್ತಿ ಉಪಸ್ಥಿತರಿದ್ದರು.
ರೋಟರಿ ಕೆಜಿಎಫ್ ಅಧ್ಯಕ್ಷ ಸಿ.ಎ.ಮುರಳಿಧರ್, ಶ್ರೀನಿವಾಸಪುರ ಅಧ್ಯಕ್ಷ ಡಾ.ವೆಂಕಟಾಚಲಪತಿ, ಬಂಗಾರಪೇಟೆ ಅಧ್ಯಕ್ಷ ಶಂಕರಪ್ಪ, ರವೀಂದ್ರನಾಥ್, ಕೆ.ಜಯದೇವ್, ಸೋಮಣ್ಣ ಇತರರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಎಸ್.ಸುಧಾಕರ್ ಅವಧಿಯ ಸೇವಾ ಕಾರ್ಯಗಳಿಗೆ ಪ್ರೋತ್ಸಹಾ ಪ್ರೇರಣೆ ನೀಡಿದ ಗಣ್ಯರನ್ನು ಸನ್ಮಾನಿಸಲಾಯಿತು.
ಸಾಯಿ ಪ್ರಜ್ವಲ್ ಪ್ರಾರ್ಥಿಸಿ, ವಿ.ಎಚ್.ರಾಜ್‍ಕುಮರ್ ನಿರೂಪಿಸಿ, ಎಸ್.ಸುಧಾಕರ್ ವಂದಿಸಿದರು.