

ಕುಂದಾಪುರ: ಜು.15 ವಿದ್ಯಾರ್ಥಿಗಳು ಶ್ರಮಪಡಬೇಕು,ಬದ್ಧತೆ ಅತಿ ಮುಖ್ಯ.ವಿದ್ಯಾರ್ಥಿ ಜೀವನದಲ್ಲಿ ಇತರರೊಡನೆ ಬೆರೆತು,ಪ್ರತಿಯೊಂದು ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ನಿಮ್ಮ ಅರ್ಹತೆ,ಬಲ ಏನು ಎನ್ನುವುದನ್ನು ಅರಿತು ನಡೆಯಬೇಕು. ವಿಜ್ಞಾನ ರಂಗದಲ್ಲಿ ಅನೇಕ ಅವಕಾಶಗಳಿವೆ. ಅವೆಲ್ಲವನ್ನೂ ಬಳಸಿಕೊಳ್ಳಬೇಕು. ಎಂದು ಸಂಪನ್ಮೂಲ ವ್ಯಕ್ತಿಗಳಾದ ಕೋಟೇಶ್ವರದ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯ ಉಪನ್ಯಾಸಕರಾದ ಶ್ರೀ ವೆಂಕಟರಮಣ ಭಟ್ ಹಾಗೂ ಇಂಜಿನೀಯರ ಪದವಿಧರರಾದ ಶ್ರೀ ಪ್ಲಾಕ್ಸನ್ ನಜರೇತ್ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಹೇಳಿದರು.
ಸೈಂಟ್ ಮೇರಿಸ್ ಪದವಿಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ವೃತ್ತಿ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಇಬ್ಬರು ಸಂಪನ್ಮೂಲ ವ್ಯಕ್ತಿಗಳಾದ ಶ್ರೀ ವೆಂಕಟರಮಣ ಭಟ್ ಹಾಗೂ ಶ್ರೀ ಪ್ಲಾಕ್ಸನ್ ನಜರೇತ್ ರವರು ವಿದ್ಯಾರ್ಥಿ ಜೀವನ ಅತಿ ಮುಖ್ಯ.ಈ ಅವಧಿಯಲ್ಲಿಯೇ ಪೂರ್ವ ನಿಯೋಜಿತವಾಗಿ ಹಲವಾರು ಯೋಜನೆಗಳಿರಬೇಕು. ನಿಮ್ಮ ಅರ್ಹತೆ, ಬಲ ಏನು ಎನ್ನುವುದನ್ನು ಅರಿತು ನಡೆಯಬೇಕು. ಶಿಕ್ಷಣ ರಂಗದಲ್ಲಿ ಹಲವಾರು ಆಯ್ಕೆಗಳಿವೆ. ಅವೆಲ್ಲದರ ಸದುಪಯೋಗ ಪಡಿಸಿಕೊಳ್ಳಬೇಕು, ಹೀಗೆ ಅನೇಕ ವಿಚಾರ ಧಾರೆಗಳನ್ನು ಕ್ರಮವಾಗಿ ಕಲಾ ಮತ್ತು ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಅರ್ಥೈಸಿ ಹೇಳಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ಸ್ಥಾನ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ರೇಷ್ಮಾ ಫೆರ್ನಾಂಡಿಸ್ ರವರು ಸಂಪನ್ಮೂಲ ವ್ಯಕ್ತಿಗಳಿಗೆ ಶುಭ ಹಾರೈಸಿ,ವಿದ್ಯಾರ್ಥಿಗಳಿಗೆ ಹಿತವಚನ ನುಡಿದರು.ಉಪಪ್ರಾಂಶುಪಾಲರಾದ ಶ್ರೀಮತಿ ಮಂಜುಳಾ ನಾಯರವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಪ್ರಾರ್ಥನೆಯೊಂದಿಗೆ, ಭೌತಶಾಸ್ತ್ರ ಉಪನ್ಯಾಸಕಿ ಪಲ್ಲವಿ ಸ್ವಾಗತಿಸಿ, ಗಣಿತ ಉಪನ್ಯಾಸಕಿ ಸುಷ್ಮಾ ವಂದಿಸಿದರು. ಉಪನ್ಯಾಸಕ ನಾಗರಾಜ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗಣಕ ವಿಜ್ಞಾನ ಉಪನ್ಯಾಸಕಿ ಬಿನು ಜಯಚಂದ್ರನ್ ರವರು ಕಾರ್ಯಕ್ರಮ ಸಂಯೋಜಿಸಿದ್ದರು.









