

ಹಾವೇರಿ: ರಸ್ತೆ ಬದಿ ನಿಂತ್ತಿದ್ದ ಲಾರಿಗೆ ಹಿಂದಿನಿಂದ ಬಂದ ಕಾರು ಡಿಕ್ಕಿ ಹೊಡೆದು ಕಾರಿನಲ್ಲಿದ್ದ 6 ಜನರು ಮೃತಪಟ್ಟಿರುವ ಘಟನೆ ಜಿಲ್ಲೆಯ:
ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಬಳಿಯ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.ಕಾರಿನಲ್ಲಿದ್ದ ಮತ್ತೋರ್ವನ ಸ್ಥಿತಿ ಗಂಭೀರವಾಗಿದ್ದು. ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಹರಿಹರ ನಿವಾಸಿ ಫರಾನ್ (27), ರಾಣೆಬೆನ್ನೂರು ನಿವಾಸಿ ಎಮ್ಮಿಶಿಪಾ (16), ಗೋವಾದ ಹಣಜಿ ನಿವಾಸಿಗಳಾದ ಅಲಿಷಾ (20),
ಪುಲಖಾನ್ (17) ಮೃತರು ಎಂದು ಗುರುತಿಸಲಾಗಿದೆ.
ಶಾಲೆ ರಜೆ ಇರುವ ಹಿನ್ನಲೆ ಸಂಬಂಧಿಕರೆಲ್ಲಾ ಸೇರಿ ರಾಣೇಬೆನ್ನೂರಿನಿಂದ ಗೋವಾಕ್ಕೆ ಹೊರಟಿದ್ದರು. ಇಂದು ಅಗಡಿ ತೋಟಕ್ಕೆ ಹೋಗಿ ನಂತರ ಗೋವಾಕ್ಕೆ ಹೋಗುವ ಪ್ಲಾನ್ನಲ್ಲಿದ್ದರು. ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತ್ತಿದ್ದ ಲಾಠಿಗೆ ಕಾರು ಚಾಲರ ಕ್ಕಿ ಹೊಡಿದಿದ್ದಾನೆ. ಪರಿಣಾಮ ಆರು ಜನರು ಸ್ಥಳದಲ್ಲೇ ಮೃತಪಟ್ಟಿದ್ದಾರೆ
ಘಟನಾ ಸ್ಥಳಕ್ಕೆ ಬ್ಯಾಡಗಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.