

ಶಿಕಾರಿಪುರ: ಭೀಕರ ಅಪಘಾತವೊಂದರಲ್ಲಿ ಫಾದರ್ ಆಂತೋನಿ ಪೀಟರ್ ಸಾವನ್ನಪ್ಪಿದ್ದಾರೆ. ಕೆಎಸ್ಆರ್ಟಿಸಿ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಅವರು ಸಾವನ್ನಪ್ಪಿದ್ದಾರೆ.ದಾವಣಗೆರೆ ಜಿಲ್ಲೆ ಸವಳಂಗ ಬಳಿಯ ಚಿನ್ನಿಕಟ್ಟೆಯ ಬಳಿ ಇಯೊನ್ ಕಾರು ಮತ್ತು KSRTC ಬಸ್ ನಡುವೆ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದ ಕ್ರೈಸ್ತಧರ್ಮದ ಗುರುಗಳು ಸಾವನ್ನಪ್ಪಿದ್ದಾರೆ.ಇಂದು ಮೂರುವರೆ ಹೊತ್ತಿಗೆ ಗಂಟೆಗೆ ನಡೆದಿದೆ. ಹಾನಗಲ್ ನಿಂದ ಶಿವಮೊಗ್ಗಕ್ಕೆ ಬರುತ್ತಿದ್ದ KSRTC ಬಸ್ ಮತ್ತು ಶಿವಮೊಗ್ಗದಿಂದ ಹೊರಟಿದ್ದ ಇಯೊನ್ ವಾಹನಗಳ ನಡುವೆ ಡಿಕ್ಕಿ ಯಾಗಿದೆ.
ಶಿಕಾರಿಪುರದ ಸೇಂಟ್ ಥೆರೆಸಾ ಲಿಟ್ಲ್ ಫ್ಲವರ್ ಆಫ್ ಜೀಸಸ್ ಚರ್ಚ್ನ ಪ್ಯಾರಿಷ್ ಫಾದರ್ ಆಂತೋನಿ ಪೀಟರ್ ಧರ್ಮಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದರು. ಫಾದರ್ ಆಂತೋನಿ ಜೊತೆ ಪ್ರಯಾಣಿಸುತಿದ್ದ ಬ್ರದರ್ ಸ್ಟೀಪನ್ ತೀವ್ರ ಗಾಯಾಳುವಾಗಿ ಅಸ್ಪತ್ರೆ ದಾಖಲಿಸಲಾಗಿದೆ
ಶಿವಮೊಗ್ಗ ಧರ್ಮಪ್ರಾಂತ್ಯದಲ್ಲಿ ಜನಪ್ರಿಯರಾದ ಅವರು ಜೂನ್ 2017 ರಿಂದ ಜೂನ್ 2023 ರವರೆಗೆ ಹರಿಹರ ಬೆಸಿಲಿಕಾದಲ್ಲಿ ಫಾದರ್ ಆಗಿ ಸೇವೆ ಸಲ್ಲಿಸಿದ್ದಾರೆ.ಅವರು ತಮ್ಮ ಧರ್ಮಕೇಂದ್ರದವರಿಗೆ ಅಚಲವಾದ ಸಮರ್ಪಣೆಗೆ ಹೆಸರುವಾಸಿಯಾಗಿದ್ದರು ಮತ್ತು ಅವರ ಆಧ್ಯಾತ್ಮಿಕ ಮಾರ್ಗದರ್ಶನ ಮತ್ತು ಸಮುದಾಯ ಸೇವೆಗಾಗಿ ಹರಿಹರ ಬೆಸಿಲಿಕಾದಲ್ಲಿ ಅವರ ಅಧಿಕಾರಾವಧಿಯಲ್ಲಿ ಅಪಾರ ಗೌರವವನ್ನು ಗಳಿಸಿದ್ದರು.ಫಾದರ್ ಆಂಟನಿ ಪೀಟರ್ ಅವರ ನಿಧನದ ಸುದ್ದಿ ಸ್ಥಳೀಯ ಸಮುದಾಯ ಮತ್ತು ಧರ್ಮಕೇಂದ್ರದ ಜನರು ಅಪಾರ ದುಃಖದಲ್ಲಿ ಮುಳುಗಿದ್ದಾರೆ.












