ಕುಂದಾಪುರ, ಸೆ.14; ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇವರ ವತಿಯಿಂದ, ಇನ್ನರ್ ವಿಲ್ ತುಂದಾಪುರ ದಕ್ಷಿಣ. ರೋಟರಿ ಸಮುದಾಯ ದಳ ತಲ್ಲೂರು, ಪ್ರಾಥಮಿಕ ಅರೋಗ್ಯ ಕೇಂದ್ರ ಗಂಗೊಳ್ಳಿ ಕಥೋಲಿಕ್ ಸಭಾ ತಲ್ಲೂರು ಘಟಕ ಹಾಗೂ ಆರೋಗ್ಯ ಆಯೋಗ ತಲ್ಲೂರು ಚರ್ಚ್ ಇವರ ಅಶ್ರಯದಲ್ಲಿ, ಮಂಗಳೂರಿನ ಪ್ರಸಿದ್ಧ ಜುಲೇಖಾ ಯೆನೆಪೆÇೀಯ ಇನ್ಸಿಟ್ಯೂಟ್ ಆಫ್ ಒಂಕೋಲಜಿ ಆಸ್ಪತ್ರೆಯ ನುರಿತ ಅನುಭವಿ ವೈದ್ಯರಿಂದ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ತಲ್ಲೂರು ಇಗರ್ಜಿಯ ಸಭಾಂಗಣದಲ್ಲಿ ಸೆ.14ರಂದು ನಡೆಸಲಾಯಿತು.
ಚಿನ್ನಯಿ ಆಸ್ಪತ್ರೆಯ ವೈದ್ಯಾಧಿಕಾ ರೊ. ಡಾ. ಉಮೇಶ್ ಪುತ್ರನ್, ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ “ಇಂದು ನಮ್ಮ ಭಾರತ 3 ವಿಷಯಗಳಲ್ಲಿ ನಂಬರ್ ಒಂದನೇ ಸ್ಥಾನ ಪಡೆದಿದೆ, ಇದು ಉತ್ತಮ ವಿಚಾರಗಳಲ್ಲಿ ಅಲ್ಲ, ಒಂದು ಅಪಘಾತದಲ್ಲಿ ಸಾವನ್ನಪ್ಪುವವರ ಸಂಖ್ಯೆಯಲ್ಲಿ, ಇನ್ನೊಂದು ಮಧುಮೇಹ, ಮತ್ತೊಂದು ಕ್ಯಾನ್ಸ್ರ್ ಈ ವಿಷಯಗಳಿಗೆ ಭಾರತದ ರಾಜಾದಾನಿಗಳಾಗಿವೆ, ಇದೆಲ್ಲ ನಮ್ಮ ಉಪೇಕ್ಷೆಯ ಫಲ, ನಾವು ತಪಾಸಣೆಗೆ ಹಿಂಜರಿಯುತ್ತೇವೆ, ನಮಗೇನು ಇಲ್ಲಪ್ಪ ಅಂದು ಸುಮ್ಮನಾಗುತ್ತೇವೆ, ಕ್ಯಾನ್ಸರ್ ಕಾಯಿಲೆ ಮೊದಲೇ ಆರಂಭವಾಗಿದ್ದರೂ ನಮ್ಮ ಗೋಚರಕ್ಕೆ ಬರುವುದಿಲ್ಲ, ಅದು ನಮ್ಮ ದೇಹದಲ್ಲಿ ನಿಗೂಢವಾಗಿ ಬಹಳ ಹಿಂದಿನಿಂದಲೂ, ನಂತರ ಬಾಧಿಸಬಹುದು, ಈ ಗಡ್ಡೆಗಳು ಬೆಳೆಯಲು ಸಾಕಷ್ಟು ವರ್ಷಗಳು ತೆಗೆದುಕೊಳ್ಳುತ್ತವೆ, ಆದರಿಂದ ನಾವು ಮೊದಲೇ ತಪಾಸಣೆ ಮಾಡಿಕೊಂಡರೆ, ಹೆಚ್ಚಿನ ರೀತಿಯಲ್ಲಿ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದಾಗಿದೆ, ಹೆಂಗಸರಿಗೆ ಸ್ಥನ ಜ್ಯಾನ್ಸರ್, ಗರ್ಭಕೋಶದ ಕ್ಯಾನ್ಸರ್ ಮತ್ತು ಗಂಡಸರಿಗೆ ಬಾಯಿ ಕ್ಯಾನ್ಸರ್ ಹೆಚ್ಚಾಗಿ ಭಾದಿಸುತ್ತದೆ ’ ಎಂದು ತಿಳಿಸಿದರು.
ಮುಖ್ಯ ಅತಿಥಿಗಳಾದ ರೊ. ಡಾ. ಉತ್ತಮ್ ಕುಮಾರ್ ಶೆಟ್ಟಿ ಇವರು ಮಾತನಾಡಿ ‘ರೋಗ ಬಂದು ಚಿಕಿತ್ಸೆ ಮಾಡಿಕೊಳ್ಳುವುದಕಿಂತ ರೋಗ ಬರದ ರೀತಿ ಜೀವಿಸುವುದು ಉತ್ತಮ, ಕ್ಯಾನ್ಸರ್ ತಪಾಸಣಾ ಶಿಬಿರ ಒಂದು ಉತ್ತಮ ಕಾರ್ಯಕ್ರಮ ಒಂದು ವೇಳೆ ಕ್ಯಾನ್ಸರ್ ಬರುವ ಸಂದರ್ಭ ಹಾಗೂ ಕ್ಯಾನ್ಸರ್ ಆರಂಭ ಹಂತದಲ್ಲಿದೆ ಇದೆ ಎಂದು ತಿಳಿದರೆ ಅದನ್ನು ವಾಸಿ ಮಾಡಬಹುದು, ಅದಕ್ಕಾಗಿ ಇಂತಹ ಶಿಬಿರಗಳ ಅಗತ್ಯವಿದೆ’ ಎಂದು ತಿಳಿಸಿದರು.
ತಲ್ಲೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗಿರೀಶ್ ಎಸ್. ನಾಯಕ್ ‘ಇದೊಂದು ವೀಶೆಷ ಕಾರ್ಯಕ್ರಮ, ರಕ್ತದಾನ, ಅನ್ನದಾನ ಇಂತಹದೆಲ್ಲ ನಾವು ಮಾಡಬಹುದು, ಆದರೆ ಆರೋಗ್ಯ ದಾನ ಮಾಡಲಿಕ್ಕೆ ಆಗುವುದಿಲ್ಲ, ಆದರೆ ಆದರೆ ಆರೋಗ್ಯ ಸುಧಾರಿಸಿಕೊಳ್ಳಲು ಸಹಾಯ ಮಾಡಬಹುದು ಈ ಕಾರ್ಯಕ್ರಮ ಅಂತಹುದಾಗಿದೆ, ಇದನ್ನು ಹಮ್ಮಿಕೊಂಡ ರೋಟರಿ ಅಧ್ಯಕ್ಷರಿಗೆ ಮತ್ತು ಸಹಕಾರ ನೀಡಿದವರಿಗೆ ಶ್ಲಾಘಿಸಿದರು.
ಜುಲೇಖಾ ಯೆನೆಪೆÇೀಯ ಇನ್ಸಿಟ್ಯೂಟ್ ಆಫ್ ಒಂಕೋಲಜಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಎಸ್. ನೇಹ ಕಾರಂತ್ ಮಾತನಾಡಿದರು. ವೇದಿಕೆಯಲ್ಲಿ ಡಾ. ರಾಜೇಂದ್ರ ಶೆಟ್ಟಿ, ತಲ್ಲೂರು ಚರ್ಚಿನ ಪಾಲನ ಮಂಡಳಿ ಉಪಾಧ್ಯಕ್ಷರಾದ ಕೆಲ್ವಿನ್ ಮೆಂಡೊನ್ಸಾ ಮತ್ತು ಇತರರು ಉಪಸ್ಥಿತರಿದ್ದರು. ರೋಟರಿ ಕ್ಲಬ್ ಕುಂದಾಪುರ ದಕ್ಷಿಣ ಇದರ ಅಧ್ಯಕ್ಷೆ ರೊ. ಜೂಡಿತ್ ಮೆಂಡೊನ್ಸಾ ಪ್ರಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ರೊ. ಸುರೇಖ ಪುರಾಣಿಕ್ ಕಾರ್ಯಕ್ರಮ ನಿರೂಪಿಸಿದರು. ಈ ಶಿಬಿರದ ಲಾಭವನ್ನು ಎಲ್ಲಾ ಸಮಾಜದವರು ಪಡೆದುಕೊಂಡರು.