ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ
ಕೋಲಾರ.ಫೆ.8: ಕ್ಯಾನ್ಸರ್ ಬಗ್ಗೆ ಸಾಮಾನ್ಯ ಜ್ಞಾನ ಹೊಂದಿದ್ದರೂ ಸಹ ದುರಾಭ್ಯಾಸಗಳನ್ನು ನಿಯಂತ್ರಿಸಲಾಗದೆ ನಿರ್ಲಕ್ಷಿಸುತ್ತಿರುವುದರಿಂದ ಈ ಕಾಯಿಲೆಗೆ ತುತ್ತಾಗುತ್ತಿರುವುದು ವಿಷಾದಾನೀಯ ಸಂಗತಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ. ಸೇಹ್ನ ಕಳವಳ ವ್ಯಕ್ತಪಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಪತ್ರಕರ್ತರ ಸಂಘ ಹಾಗೂ ಮಣಿಪಾಲ್ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಿದ್ದ ಕ್ಯಾನ್ಸರ್ ಚಿಕಿತ್ಸೆ ಕುರಿತ ಇತ್ತೀಚಿನ ಅವಿಷ್ಕಾರಗಳ ವಿಷಯಕ್ಕೆ ಸಂಬಂದಿಸಿದ ಸಂವಾದ ಕಾರ್ಯಕ್ರಮವನ್ನು ಉದ್ಯಾಟಿಸಿ ಅವರು ಮಾತನಾಡುತ್ತಿದ್ದರು.
ಪರಿಸರ ಹಾಳಾಗುತ್ತಿರುವ ಹಿನ್ನಲೆಯಲ್ಲಿ ಕ್ಯಾನ್ಸರ್ ಹೆಚ್ಚಾಗುತ್ತಿದೆ. ಕ್ಯಾನ್ಸರ್ ಹಲವು ರೂಪದಲ್ಲಿ ಯಾವೂದೇ ವಯಸ್ಸಿನವರಿಗೂ ಈ ಕಾಯಿಲೆ ಬರಲಿದೆ. ಹಲವು ದುರಾಭ್ಯಾಸಗಳಿಂದ ಮಾತ್ರ ಕ್ಯಾನ್ಸರ್ ಬರುತ್ತದೆ ಎಂಬುವುದರ ಜೂತೆಗೆ ಕೆಲವೊಂದು ಪದಾರ್ಥಗಳನ್ನು ಮಿತಿಮೀರಿ ಬಳಕೆಯಿಂದಲೂ ಈ ಕಾಯಿಲೆಗೆ ತುತ್ತಾಗುವ ಸಂಭವಿದೆ ಎಂದರು.
ಮಣಿಪಾಲ್ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ. ಆಶ್ವಿನ್ ರಾಜಗೋಪಾಲ್ ಮಾತನಾಡಿ, ಕ್ಯಾನ್ಸರ್ ಬಂದರೆ ವಾಸಿಯಾಗುವುದಿಲ್ಲ ಎಂಬ ಮಾತು ಸತ್ಯಕ್ಕೆ ದೂರವಾಗಿದ್ದು ಇಂದಿನ ಅಧುನಿಕ ತಂತ್ರಜ್ಞಾನದ ಯುಗದಲ್ಲಿ ಪ್ರಾರಂಭಿಕ ಹಂತದ ಕ್ಯಾನರ್‍ಗೂ ಚಿಕಿತ್ಸೆ ನೀಡಿ ವಾಸಿ ಮಾಡ ಬಲ್ಲ ನೂತನ ಅವಿಷ್ಕಾರಗಳಾಗಿದೆ. ದೇಶದಲ್ಲಿ ಕ್ಯಾನ್ಸರ್ ರೋಗವು ಸಾಮಾನ್ಯ ಕಾಯಿಲೆಯಂತಾಗಿದೆ. ಕಳದ 4 ವರ್ಷಗಳ ಹಿಂದೆ ಶೇ 300ಕ್ಕೂ ಪ್ರಮಾಣದಲ್ಲಿ ಹರಡಿತ್ತು, ಯುವಜನತೆಯಲ್ಲಿ ಶೇ 3.4 ರಿಂದ ಶೇ 6.26ರಷ್ಟು ಪ್ರಮಾಣದಲ್ಲಿ ಹರಡಿತ್ತು.2018ರ ಗೋಬ್ಲಾಕನ್ ಪ್ರಕಾರ ಬಾರತದಲ್ಲಿ 54,538 ಯುವ ಜನರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು. 30, 286 ಮಂದಿ ಸಾವಿಗೀಡಾಗಿದ್ದರು. ಹಿರಿಯರ ಚಿಕಿತ್ಸೆಗೂ ಕಿರಿಯರ ಚಿಕಿತ್ಸೆಗಳು ವಿಭಿನ್ನವಾಗಿರುತ್ತದೆ ಎಂದರು.
ಈ ಹಿಂದೆ ಕ್ಯಾನ್ಸರ್ ಬಂದರೆ ಸಾವು ಯಾವಾಗ ಎಂಬ ಪ್ರಶ್ನೆ ಸಹಜವಾಗಿತ್ತು. ಕ್ಯಾನ್ಸರ್ ಯಾವೂದೇ ಲಕ್ಷಣಗಳು ಗೋಚರಿಸದೆ ಮನುಷ್ಯನನ್ನು ಅವರಿಸುವ ಸಂಭವವಿತ್ತು. ಅದರೆ ಇಂದಿನ ನೂತನ ಅವಿಷ್ಕಾರಗಳಿಂದ ಕ್ಯಾನರ್ ಯಾವೂದೇ ವಿಧದಲ್ಲಿದ್ದರೂ ಅದನ್ನು ಪತ್ತೆ ಹಚ್ಚಬಹುದಾದ ತಂತ್ರಜ್ಞಾನ ಸಂಶೋದಿಸಲಾಗಿದೆ ಎಂದರು.
ಈ ಹಿಂದೆ ಸಾಮಾನ್ಯವಾಗಿ ಎಲೆಅಡಿಕೆ ತಂಬಾಕು, ಹೊಗೆಸೂಪ್ಪುಗಳ ಅತಿಯಾದ ಬಳಕೆಯಿಂದ ಬಾಯಿಯಲ್ಲಿ ಗಾಯಗಳಾಗುವ ಮೂಲಕ ಕ್ಯಾನ್ಸರ್ ಕಣ್ಣಿಗೆ ಕಾಣುತ್ತಿತ್ತು. ಮೈಯಲ್ಲಿ ಗಡ್ಡೆಗಳು ಇರುವ ಮೂಲಕ ಗೋಚರಿಸುತ್ತಿತ್ತು, ಮಹಿಳೆಯರಲ್ಲಿ ಸ್ತನ, ಗರ್ಭಕೋಶಗಳ್ಲಿ ಕ್ಯಾನ್ಸರ್ ಸಾಮಾನ್ಯ ಪ್ರಕರಣಗಳಾಗಿತ್ತು. ಇವುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಅರೈಕೆ ಮಾಡಲಾಗುತ್ತಿತ್ತು. ಇದಕ್ಕಾಗಿ ಹಲವು ದಿನಗಳು ಆಸ್ಪತ್ರೆಯಲ್ಲಿ ದಾಖಲಾಗ ಬೇಕಾಗಿತ್ತು ಎಂದರು.
ಅದರೆ ಪ್ರಸ್ತುತ ಕ್ಯಾನ್ಸರ್ ಚಿಕಿತ್ಸೆ ಇಂದು ಬೆಳಿಗ್ಗೆ ದಾಖಲಾಗಿ ಸಂಜೆ ಬಿಡುಗಡೆ ಹೊಂದಬಹುದಾಗಿದೆ ಅಂದರೆ ಇಂದಿನ ಅಧುನೀಕ ಚಿಕಿತ್ಸ ವಿಧಾನಗಳು ಸುಲಭವಾಗಿದೆ. ಹೊಟ್ಟೆಯೊಳಗಿನ ಲೀವರ್‍ಗೂ ಕ್ಯಾನ್ಸರ್ ಸೊಂಕಿದ್ದರೂ ಅಧುನಿಕ ತಂತ್ರಜ್ಞಾನದ ಯಂತ್ರಗಳನ್ನು ಬಳಿಸಿ ಚಿಕಿತ್ಸೆ ನೀಡಿ ವಾಸಿ ಮಾಡಬಹುದಾಗಿದೆ ಎಂದು ಹೇಳಿದರು.
ಕ್ಯಾನ್ಸರ್ ಸಾಮಾನ್ಯವಾಗಿ ನಾಲ್ಕು ಹಂತಗಳಲ್ಲಿ ಗುರುತಿಸಲಾಗಿದೆ. ಪ್ರಾರಂಭಿಕ ಒಂದನೇ ಹಂತದಲ್ಲಿ ಶೇ 95ರಷ್ಟು, ಎರಡನೇ ಹಂತದಲ್ಲಿ ಶೇ 80ರಷ್ಟು, ಮೂರನೇ ಹಂತದಲ್ಲಿ ಶೇ 60ರಷ್ಟು ವಾಸಿ ಮಾಡಬಹುದಾಗಿದೆ. ನಾಲ್ಕನೆ ಹಂತದಲ್ಲಿ ವಾಸಿ ಮಾಡುವುದು ಕಷ್ಟಸಾಧ್ಯ. ಅದರೆ ನಿಯಂತ್ರಿಸಬಹುದಾಗಿದೆ. ಯಾವೂದೇ ಕಾಯಿಲೆ ಇದ್ದರೂ ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆ ಪಡೆದರೆ ವಾಸಿ ಮಾಡಲು ಸುಲಭ, ವೆಚ್ಚಗಳು ಕಡಿಮೆಯಾಗಲಿದೆ ಎಂದು ತಿಳಿಸಿದರು.
ಕ್ಯಾನ್ಸರ್ ತಜ್ಞ ಡಾ. ಅಭಯ್ ಕುಮಾರ್ ಮಾತನಾಡಿ ಫೆ 4ರಂದು ಕ್ಯಾನ್ಸರ್ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಕ್ಯಾನ್ಸರ್ ನಿಯಂತ್ರಿಸುವ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೋಡಿಸಲು ವೈದ್ಯರೇ ಅಗಬೇಕೆಂದು ಇಲ್ಲ. ಸಾಮಾನ್ಯ ಜ್ಞಾನ ಇರುವವರು ಈ ಬಗ್ಗೆ ಅರಿವು ಮೋಡಿಸ ಬಹುದಾಗಿದೆ ಎಂದರು.
ಕ್ಯಾನ್ಸರ್ ಮಾನವನ ಯಾವೂದೇ ಅಂಗಾಂಗಗಳಿಗೆ ಸೊಂಕುಂಟಾಗ ಬಹುದಾಗಿದೆ. ಅದಕ್ಕೆ ನಿರ್ದಿಷ್ಟವಾದ ಯಾವೂದೇ ಅಂಗಗಳಿಲ್ಲ.ಯಾವೂದೇ ಅಂಗದಲ್ಲಿ ಕ್ಯಾನ್ಸರ್ ಗೋಚರಿಸುವ ಸಾಧ್ಯತೆ ಇರುತ್ತದೆ. ರೋಗ ನಿರೋಧಕ ಕಣಗಳ ಉತ್ಪಾದನೆ ಸ್ಥಗಿತಗೊಂಡ ಜಾಗದಲ್ಲಿ ಕ್ಯಾನ್ಸರ್ ಗೋಚರಿಸುವ ಸಾಧ್ಯತೆ ಇರುತ್ತದೆ ಎಂದರು.
ಮಹಿಳೆಯರಲ್ಲಿ ಸ್ತನ, ಗರ್ಭಕೋಶ, ಎಲೆ ಅಡಿಕೆ ಬಳಿಸುವವರಲ್ಲಿ ಗಂಟಲು, ಬಾಯಿ, ಇತರರಲ್ಲಿ ಕೆಮ್ಮು, ವಾಂತಿ, ರಕ್ತಸ್ರವ, ಚರ್ಮ, ಮೈಯಲ್ಲಿ ಗಡ್ಡೆಗಳು, ಮುಂತಾದ ವಿಧದಲ್ಲಿ ಗೋಚರಿಸುವುದು, ಇದು ಮಾನಸಿಕ ಮತ್ತು ದೈಹಿಕ ಒತ್ತಡಗಳಿಂದಲೂ ಬರುವ ಸಾಧ್ಯತೆಗಳಿರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಕ್ಯಾನ್ಸರ್ ಬಹುರೂಪದ ಕಾರಣಗಳನ್ನು ಹೊಂದಿರುತ್ತದೆ ಸಮರ್ಪಕವಾದ ನಿದ್ರೆ ಇಲ್ಲದಿರುವುದು, ಅತಿಯಾದ ಮಾಂಸ ಆಹಾರ ಸೇವನೆ, ಸಂಸ್ಕರಣ ಗೊಂಡ ಆಹಾರ, ಜಡತ್ವ, ಒತ್ತಡ, ಮಾಲಿನ್ಯ ರಾಸಾಯಾನಿಕ ಬಳಕೆಗಳಿಂದ, ವಿದೇಶಿಯರ ಜೀವನ ಶೈಲಿಗಳಿಂದಲೂ ಕ್ಯಾನ್ಸರ್ ಬರುವ ಸಾಧ್ಯತೆಗಳನ್ನು ಅಲ್ಲಗೆಳೆಯುವಂತಿಲ್ಲ, ವಾಸಿಯಾಗದ ಗಾಯಗಳು, ದೀರ್ಘಕಾಲದಿಂದ ಇರುವ ಗಡ್ಡೆಗಳು.ಮೈ ಮೇಲಿನ ಮಚ್ಚೆಗಳು, ಕೆಮ್ಮು, ವಾಂತಿ ವಾಸಿಯಾಗದಿರುವುದು ಕ್ಯಾನ್ಸರ್ ಲಕ್ಷಣಗಳಾಗಿದೆ ಎಂದರು.