ಕ್ಯಾನ್ಸರ್ ವಾಸಿಯಾಗುವುದಿಲ್ಲ ಎಂಬ ಮಾತು ಸತ್ಯಕ್ಕೆ ದೂರ,ಆಧುನಿಕ ತಂತ್ರ ಜ್ಞಾನದದಲ್ಲಿ ಪ್ರಾರಂಭಿಕದ ಕ್ಯಾನ್ಸರ್ ವಾಸಿ ಮಾಡ ಬಹುದು

ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರೆ : – ಕ್ಯಾನ್ಸರ್ ಬಂದರೆ ವಾಸಿಯಾಗುವುದಿಲ್ಲ ಎಂಬ ಮಾತು ಸತ್ಯಕ್ಕೆ ದೂರವಾ ಗಿದ್ದು ಇಂದಿನ ಆಧುನಿಕ ತಂತ್ರ ಜ್ಞಾನದ ಯುಗದಲ್ಲಿ ಪ್ರಾರಂಭಿಕ ಹಂತದ ಕ್ಯಾನರ್‌ಗೂ ಚಿಕಿತ್ಸೆ ನೀಡಿ ವಾಸಿ ಮಾಡ ಬಲ್ಲ ನೂತನ ಅವಿಷ್ಕಾರಗಳಿವೆ ಎಂದು ಮಣಿ ಪಾಲ್ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ . ಆಶ್ವಿನ್ ರಾಜಗೋಪಾಲ್ ತಿಳಿಸಿದರು . ನಗರದ ಪತ್ರಕರ್ತರ ಭವನ ದಲ್ಲಿ ಮಣಿಪಾಲ್ ಆಸ್ಪತ್ರೆಯ ಸಹ ಯೋಗದಲ್ಲಿ ಆಯೋಜಿಸಿದ್ದ ಕ್ಯಾನ್ಸರ್ ಚಿಕಿತ್ಸೆ ಕುರಿತು ಇತ್ತೀಚಿನ ಅವಿಷ್ಕಾರಗಳ ವಿಷಯಕ್ಕೆ ಸಂಬಂಧಿ ಸಿದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ದೇಶದಲ್ಲಿ ಕ್ಯಾನ್ಸರ್ ರೋಗವು ಸಾಮಾನ್ಯ ಕಾಯಿಲೆಯಂತಾಗಿದೆ . ಕಳದ 4 ವರ್ಷಗಳ ಹಿಂದೆ ಶೇ 300 ಕ್ಕೂ ಪ್ರಮಾಣದಲ್ಲಿ ಹರಡಿತ್ತು , ಯುವಜನತೆಯಲ್ಲಿ ಶೇ 3.4 ರಿಂದ ಶೇ 6,26 ರಷ್ಟು ಪ್ರಮಾಣದಲ್ಲಿ ಹರಡಿತ್ತು .2018 ರ ಗೋಬ್ಲಾಕನ್ ಪ್ರಕಾರ ಭಾರತದಲ್ಲಿ 54,538 ಯುವ ಜನರು ಕ್ಯಾನ್ಸರ್ ನಿಂದ ಬಳಲುತ್ತಿದ್ದರು . 30 , 286 ಮಂದಿ ಸಾವಿಗೀಡಾಗಿದ್ದರು.ಎಂದರು ಈ ಹಿಂದೆ ಕ್ಯಾನ್ಸರ್ ಬಂದರೆ ಸಾವು ಯಾವಾಗ ಎಂಬ ಪ್ರಶ್ನೆ . ಸಹಜವಾಗಿತ್ತು . ಕ್ಯಾನ್ಸರ್ ಯಾವೂ ದೇ ಲಕ್ಷಣಗಳು ಗೋಚರಿಸದೆ ಮನುಷ್ಯನನ್ನು ಅವರಿಸುವ ಸಂಭವ “ ವಿತ್ತು . ಅದರೆ ಇಂದಿನ ನೂತನ ಅವಿಷ್ಕಾರಗಳಿಂದ ಕ್ಯಾನರ್ ಯಾವೂದೇ ವಿಧದಲ್ಲಿದ್ದರೂ ಅದನ್ನು ಪತ್ತೆ ಹಚ್ಚಬಹುದಾದ ತಂತ್ರಜ್ಞಾನ ಸಂಶೋದಿಸಲಾಗಿದೆ ಎಂದರು . ಈ ಹಿಂದೆ ಸಾಮಾನ್ಯವಾಗಿ ಎಲೆಅಡಿಕೆ ತಂಬಾಕು , ಹೊಗೆ ಸೂಪ್ಪುಗಳ ಅತಿಯಾದ ಬಳಕೆ ಯಿಂದ ಬಾಯಿಯಲ್ಲಿ ಗಾಯಗ ಳಾಗುವ ಮೂಲಕ ಕ್ಯಾನ್ಸರ್ ಕಣ್ಣಿಗೆ ಕಾಣುತ್ತಿತ್ತು . ಮೈಯಲ್ಲಿ ಗಡ್ಡೆಗಳು ಇರುವ ಮೂಲಕ ಗೋಚರಿಸು ತ್ತಿತ್ತು . ಮಹಿಳೆಯರಲ್ಲಿ ಸ್ತನ , ಗರ್ಭಕೋಶಗಲ್ಲಿ ಕ್ಯಾನ್ಸರ್‌ ಸಾಮಾನ್ಯ ಪ್ರಕರಣಗಳಾಗಿತ್ತು . ಇವುಗಳನ್ನು ಶಸ್ತ್ರಚಿಕಿತ್ಸೆ ಮೂಲಕ ಅರೈಕೆ ಮಾಡ ಲಾಗುತ್ತಿತ್ತು . ಇದಕ್ಕಾಗಿ ಹಲವು ದಿನಗಳು ಆಸ್ಪತ್ರೆಯಲ್ಲಿ ದಾಖಲಾಗ ಬೇಕಾಗಿತ್ತು ಎಂದರು . ಅದರೆ ಪ್ರಸ್ತುತ ಕ್ಯಾನ್ಸರ್ ಚಿಕಿತ್ಸೆ ಇಂದು ಬೆಳಿಗ್ಗೆ ದಾಖಲಾಗಿ ಸಂಜೆ ಬಿಡುಗಡೆ ಹೊಂದಬಹುದಾಗಿದೆ ಅಂದರೆ ಇಂದಿನ ಅಧುನೀಕ ಚಿಕಿತ್ಸೆ ವಿಧಾನಗಳು ಸುಲಭವಾಗಿದೆ . ಹೊಟ್ಟೆಯೊಳಗಿನ ಲೀವರ್‌ಗೂ ಕ್ಯಾನ್ಸರ್‌ ಸೊಂಕಿದ್ದರೂ ಅಧುನಿಕ ತಂತ್ರಜ್ಞಾನದ ಯಂತ್ರಗಳನ್ನು ಬಳಿಸಿ ಚಿಕಿತ್ಸೆ ನೀಡಿ ವಾಸಿ ಮಾಡಬಹು ದಾಗಿದೆ ಎಂದು ಹೇಳಿದರು . ಕ್ಯಾನ್ಸರ್ ತಜ್ಞ ಡಾ . ಅಭಯ್ ಕುಮಾರ್ ಮಾತನಾಡಿ ಫೆ 4 ರಂದು ಕ್ಯಾನ್ಸರ್‌ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ . ಕ್ಯಾನ್ಸರ್ ನಿಯಂತ್ರಿಸುವ ಬಗ್ಗೆ ಸಾರ್ವಜನಿ ಕರಲ್ಲಿ ಅರಿವು ಮೂಡಿಸಲು ವೈದ್ಯರೇ ಅಗಬೇಕೆಂದು ಇಲ್ಲ . ಸಾಮಾನ್ಯ ಜ್ಞಾನ ಇರುವವರು ಈ ಬಗ್ಗೆ ಅರಿವು ಮೊಡಿಸ ಬಹು ದಾಗಿದೆ ಎಂದರು . ಪ್ರಸ್ತುತ ಕೊವಿಡ್ -19 ನಿಂದಾಗಿ ಸಾರ್ವಜನಿಕರು ಆಸ್ಪತ್ರೆಗೆ ಬರಲು ಹೆದರುವಂತಾಗಿ ಕ್ಯಾನ್ಸರ್ ಪ್ರಮಾಣ ಕಳೆದ ಒಂದು ವರ್ಷ ದಿಂದ ಹೆಚ್ಚಾಗಿದೆ . ಪ್ರತಿಯೊಬ್ಬರೂ ವರ್ಷಕ್ಕೊಮ್ಮೆಯಾದರೂ ಸಂಪೂರ್ಣವಾಗಿ ದೈಹಿಕವಾಗಿ ತಪಾಸಣೆಗೆ ಒಳಪಡಬೇಕು ಕ್ರೀಡೆ ಗಳು , ಯೋಗ , ಚಟುವಟಿಕೆಗಳಲ್ಲಿ ತೊಡಗ ಬೇಕು , ಆಹಾರ ಸೇವನೆಯಲ್ಲಿ ಕ್ರಮ ಬದ್ದತೆಗಳನ್ನು ಪಾಲಿಸ ಬೇಕು . ದೈಹಿಕ ಹಾಗೂ ಮಾನಸಿಕ ಆರೋಗ್ಯಗಳ ಕಡೆಯು ಗಮನ ಹರಿಸುವುದು ಸೂಕ್ತ ಯಾವೂದೇ ಕಾಯಿಲೆಯನ್ನು ಪ್ರಾರಂಭಿಕ ಹಂತದಲ್ಲಿಯೇ ಚಿಕಿತ್ಸೆ ಪಡೆಯುವುದರಿಂದ ವಾಸಿ ಮಾಡಲು ಸಾಧ್ಯ , ಏನೊಂದು ಕಾಯಿಲೆ ಇಲ್ಲದಿದ್ದರೂ ಆಗಾಗ್ಗೆ ತಪಾಸಣೆ ಮಾಡಿಸಿ ಕೊಳ್ಳುವುದು ಮುಂಜಾಗೃತೆ ದೆ ಸೆ ೦ ರಲ್ಲಿ ಎಚ್ಚರವಹಿಸುವುದು ಸೂಕ್ತ ಎಂದು ಕಿವಿ ಮಾತು ಹೇಳಿದರು . ಅಪರ ಜಿಲ್ಲಾಧಿಕಾರಿ ಡಾ . ಸೇಹ್ನ ಮಾತನಾಡಿ ಕ್ಯಾನ್ಸರ್ ಪರಿಸರ ಹಾಳಾಗುತ್ತಿರುವ ಹಿನ್ನಲೆ ಯಲ್ಲಿ ಹೆಚ್ಚಾಗುತ್ತಿದೆ . ಕ್ಯಾನ್ಸರ್ ಹಲವು ರೂಪದಲ್ಲಿದ್ದು , ಯಾವೂದೇ ವಯಸ್ಸಿನವರಿಗೂ ಈ ಕಾಯಿಲೆ ಬರಲಿದೆ . ಹಲವು ದುರಾಭ್ಯಾಸಗಳಿಂದ ಮಾತ್ರ ಕ್ಯಾನ್ಸರ್ ಬರುತ್ತದೆ ಎಂಬುವುದರ ಜೊತೆಗೆ ಕೆಲವೊಂದು ಪದಾರ್ಥಗಳನ್ನು ಮಿತಿಮೀರಿ ಬಳಕೆಯಿಂದಲೂ ಈ ಕಾಯಿಲೆಗೆ ತುತ್ತಾಗುವ ಸಂಭವವಿದೆ ಎಂದರು . ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ವಿ.ಮುನಿರಾಜು ಮಾತ ನಾಡಿ ಮಣಿಪಾಲ್ ಆಸ್ಪತ್ರೆಯ ಅಧ್ಯಕ್ಷ ಡಾ , ಅರುಣ್ ಚಕ್ರವರ್ತಿಯವರು ನಮ್ಮ ಸಂಘದಲ್ಲಿ ಒಂದೇ ವರ್ಷದಲ್ಲಿ ಮಧುಮೇಹ , ಹೃದಯ ಹಾಗೂ ಕೋವಿಥ್ ಬಗ್ಗೆ ಕಾರ್ಯ ಗಾರಗಳನ್ನು ನಡೆಸಿ ಕೊಟ್ಟು ಇದು 4 ನೇ ಕಾರ್ಯಗಾರಕ್ಕೂ ಅವಕಾಶ ಮಾಡಿ ಕೊಟ್ಟಿರುವುದಕ್ಕೆ ಸಂಘದ ಪರವಾಗಿ ಕೃತಜ್ಞನತೆಯನ್ನು ಸಲ್ಲಿಸಿದರು . ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಿ.ವಿ. ಗೋಪಿನಾಥ್ ಮಾತ ನಾಡಿದರು . ಪ್ರಧಾನಕಾರ್ಯದರ್ಶಿ ಕೆ.ಎಸ್ . ಚಂದ್ರಶೇಖರ್ ಸ್ವಾಗತಿಸಿ ದರು , ಖಜಾಂಜಿ ಸುರೇಶ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು .