ಹುತ್ತೂರು ಸೊಸೈಟಿಗೆ ಅಂಟಿರುವ ಕ್ಯಾನ್ಸರ್ ೨ ನೇ ಸ್ಟೇಜ್‌ಗೆ – ಬ್ಯಾಲಹಳ್ಳಿ ಗೋವಿಂದಗೌಡ ೩ ನೇಹಂತ ತಲುಪಿ ಸರ್ವನಾಶವಾಗೋ ಮುನ್ನಾ ಎಚ್ಚರವಹಿಸಿ – ಆಡಳಿತ ಮಂಡಳಿಗೆ ತಾಕೀತುಕೋಲಾರ : – ತಾಲ್ಲೂಕಿನ ಹುತ್ತೂರು ಸೊಸೈಟಿಗೆ ಅಂಟಿರುವ ಕ್ಯಾನ್ಸರ್ ೨ ನೇ ಹಂತ ತಲುಪಿದೆ , ಮೂರನೇ ಹಂತ ಮುಟ್ಟಿ ಸರ್ವನಾಶವಾಗುವ ಮುನ್ನಾ ಆಗಿರುವ ತಪ್ಪುಗಳನ್ನು ಸರಿಪಡಿಸಿ ಸಂಘಕ್ಕೆ ಜೀವ ತುಂಬಿ ಸರಿದಾರಿಗೆ ತನ್ನಿ ಎಂದು ಆಡಳಿತ ಮಂಡಳಿ ನಿರ್ದೇಶಕರಿಗೆ ಕೋಲಾರ , ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ತಾಕೀತು ಮಾಡಿದರು . ತಾಲೂಕಿನ ವಡಗೂರು ಗ್ರಾಮದಲ್ಲಿ ನಡೆದ ಹುತ್ತೂರು ಹೋಬಳಿ ರೇಷ್ಮೆ ಬೆಳಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು , ಹಿಂದೆ ಮಾಡಿರುವ ತಪ್ಪುಗಳಿಂದಾಗಿ ಈ ಭಾಗದ ರೈತರು , ಮಹಿಳೆಯರಿಗೆ ಅನ್ಯಾಯವಾಗಿದೆ ಎಂದರು .
ಹಿಂದೆ ಕಾರ್ಯನಿರ್ವಹಿಸಿದ್ದ ಕಾರ್ಯದರ್ಶಿ ವಿಜಯಕುಮಾರ್‌ರ ಭ್ರಷ್ಟಾಚಾರದ ಕುರಿತು ಆಡಳಿತ ಮಂಡಳಿ ಗಮನಹರಿಸಬೇಕಿತ್ತು , ಆದರೆ ಆಡಳಿತ ಮಂಡಳಿ ನಿದ್ರೆಯಲ್ಲಿತ್ತು , ತಪ್ಪು ಗಳು ಆಗಿವೆ ಅವುಗಳನ್ನು ಹೇಳಿಕೊಂಡು ಹೋದರೆ ಪ್ರಯೋಜನವಿಲ್ಲ ತಪ್ಪಗಳಿಂದಲ್ಲೇ ಸೊಸೈಟಿ ಜಿಲ್ಲೆಯಲ್ಲಿ ಕೊನೆಯ ಸ್ಥಾನದಲ್ಲಿದೆ ಸಾಲ ಪಡೆದ ರೈತರ ಮನೆ ಬಾಗಿಲಿಗೆ ಹೋಗಿ ಮರು ಪಾವತಿ ಮಾಡುವಂತೆ ಮನವೊಲಿಸುವ ಕೆಲಸವನ್ನು ಹಿಂದಿನ ಹಾಗೂ ಈಗಿನ ಆಡಳಿತ ಮಂಡಳಿ ಮಾಡಬೇಕಾಗಿತ್ತು ಎಂದರು . ಸಹಕಾರಿ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಂಡರೆ ವಸೂಲಿ ಮಾಡುವುದು ಕಷ್ಟ ರೈತರ ಮೇಲೆ ದೂರು ದಾಖಲಿಸಲು ಸಾಧ್ಯವಿಲ್ಲ ಮನವೊಲಿಸಬೇಕು ಎಂದ ಅವರು , ಅವಿಭಜಿತ ಜಿಲ್ಲೆಯಲ್ಲೇ ಹುತ್ತೂರು ಸೊಸೈಟಿ ಅತಿ ದೊಡ್ಡ ಸೊಸೈಟಿ , ಹೆಚ್ಚು ವಿಸ್ತಾರ ಹೊಂದಿದೆ . ಇಲ್ಲಿ ಕನಿಷ್ಟ ೫೦ ಕೋಟಿ ಸಾಲ ನೀಡಬೇಕಾಗಿತ್ತು ಆದರೆ ಸಾಧ್ಯವಾಗಿಲ್ಲ . ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದ ಅವರು , ವಹಿವಾಟಿನಲ್ಲಿ ಪಾರದರ್ಶಕತೆ ಕಾಪಾಡಿಕೊಳ್ಳದಿದ್ದರೆ ಮತ್ತು ಸೊಸೈಟಿಯ ಸಿಇಒ ಕಾರ್ಯವೈಖರಿಯನ್ನು ಗಮನಿಸದಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತದೆ ಎಂದರು .
ಸಾಲ ವಸೂಲಾತಿ ಅಭಿಯಾನ ಮಾಡಿ
ಸೊಸೈಟಿ ಆಡಳಿತ ಮಂಡಳಿ ಜವಾಬ್ದಾರಿ ಅರಿತು ಮುನ್ನಡೆಯಬೇಕು , ರೈತರಿಂದ ಬಾಕಿ ಇರುವ ಸಾಲವನ್ನು ವಸೂಲಿ ಮಾಡಲು ಬದ್ಧತೆ ತೋರಬೇಕು , ರೈತರ ಮನೆಬಾಗಿಲಿಗೆ ತೆರಳಿ ಒತ್ತಡ ಹಾಕಿದರೆ ಸಾಲ ಕಟ್ಟುತ್ತಾರೆ , ರೈತರೇನು ಮೋಸಗಾರರಲ್ಲ ಎಂದು ತಿಳಿಸಿದರು . ನೀವು ದಾಖಲೆಗಳ ಸಮರ್ಪಕ ನಿರ್ವಹಣೆ ಮಾಡಿದರೆ ಖಂಡಿತಾ ಡಿಸಿಸಿ ಬ್ಯಾಂಕ್ ವತಿಯಿಂದ ಮರುಸಾಲ ನೀಡುತ್ತೇವೆ ಹುತ್ತೂರು ಹೋಬಳಿಯಲ್ಲಿ ಕನಿಷ್ಠ ೫೦ ಕೋಟಿ ಸಾಲ ನೀಡಿ , ಈ ಭಾಗದ ರೈತರು , ಮಹಿಳೆಯರನ್ನು ಆರ್ಥಿಕವಾಗಿ ಸಬಲಗೊಳಿಸುವ ಆಶಯ ನಮಗೂ ಇದೆ ಎಂದರು . ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ , ಯಲವಾರ ಸೊಣ್ಣೆಗೌಡ , ಆಡಳಿತ ಮಂಡಳಿ ಇರುವುದು ಅಲಂಕಾರಕ್ಕಾಗಿ ಅಲ್ಲ , ನಿಮ್ಮಲ್ಲೂ ಬದ್ಧತೆ ಇರಬೇಕು , ಸೊಸೈಟಿಯ ಬೆಳವಣಿಗೆ ಗಮನಿಸುತ್ತಿರಬೇಕು , ಯಾರೋ ಮಾಡಿದ ತಪ್ಪಿನಿಂದ ರೈತರು , ಮಹಿಳೆಯರಿಗೆ ಶಿಕ್ಷೆಯಾಗಿದೆ , ಎಲ್ಲಾ ಕಡೆ ಬಡ್ಡಿರಹಿತ ಸಾಲ ನೀಡಲಾಗುತ್ತಿದೆ . ಈ ಸೊಸೈಟಿ ವ್ಯಾಪ್ತಿಯ ಮಹಿಳೆಯರು , ರೈತರಿಗೆ ಮಾತನ್ಯಾಯವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು .
ಸೊಸೈಟಿ ಅಧ್ಯಕ್ಷ ವಡಗೂರು ರಾಮು ಮಾತನಾಡಿ , ನಮ್ಮ ಆಡಳಿತ ಮಂಡಳಿ ಬಂದ ನಂತರ ೧.೮೩ ಕೋಟಿ ರೂ ಸಾಲ ನೀಡಿದ್ದೇವೆ ಹಿಂದಿನ ಕಾರ್ಯದರ್ಶಿ ವಿಜಯಕುಮಾರ್ ಮಾಡಿದ ತಪ್ಪಿಗೆ ಈ ಸೊಸೈಟಿ ಈ ಸ್ಥಿತಿಗೆ ಬಂದಿದೆ . ಹಿಂದೆ ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂದೆ ಒಳ್ಳೆಯ ರೀತಿಯಲ್ಲಿ ನಡೆಸಿಕೊಂಡು ಹೋಗತ್ತೇವೆ , ಅದಕ್ಕಾಗಿ ಸಂಕಲ್ಪ ಮಾಡಿದ್ದೇವೆ ಎಂದರು ಷೇರುದಾರಾದ ವಡಗೂರು ನಾಗರಾಜ್ ಮತ್ತಿತರರು ಮಾತನಾಡಿ ಹುತ್ತೂರು ಹೋಬಳಿಯಲ್ಲಿ ಸುಮಾರು ೫೨ ಹಳ್ಳಿಗಳು ಇದ್ದು ಪಂಚಾಯತಿಗೊಂದು ಸಹಕಾರ ಸಂಘ ಪ್ರಾರಂಭಿಸಲು ಒತ್ತಾಯಿಸಿದರು . ಇದಕ್ಕೆ ಸರ್ವಾನುಮತದ ಅಂಗೀಕಾರ ದೊರೆಯಿತು . ಒಟ್ಟಾರೆ ಸರ್ವಸದಸ್ಯರ ಸಭೆಯಲ್ಲಿ ಗದ್ದಲವಾಗುವ ಮುನ್ಸೂಚನೆ ಇತ್ತು , ಆಡಳಿತ ಮಂಡಳಿ ಹಾಗೂ ಷೇರುದಾರರ ಮಧ್ಯೆ ಉದ್ವಿಗ್ನ ವಾತಾವರಣವಿದ್ದರೂ ಯಾವುದೇ ಗಲಾಟೆ , ಮಾತಿನ ಚಕಮಕಿಗೆ ಅವಕಾಶವಿಲ್ಲದಂತೆ ಸಭೆಯನ್ನು ಯಶಸ್ವಿಯಾಗಿ ಮುಗಿಸಲಾಯಿತು . ವಡಗೂರು ಸೊಸೈಟಿ ಉಪಾಧ್ಯಕ್ಷ ಅಂಬರೀಶ್ , ನಿದೇರ್ಶಕರಾದ ಚಂದ್ರಶೇಖರ್ , ರಾಜೇಂದ್ರಪ್ರಸಾದ್ , ರಮೇಶ್ ಕುಮಾರ್ , ಕೆ.ರಮೇಶ್ , ಶ್ರೀನಿವಾಸಪ್ಪನಾರಾಯಣಸ್ವಾಮಿ , ಕೃಷ್ಣಮೂರ್ತಿ , ಚಂದ್ರಶೇಖರ್ , ಅಮರಾವತಿ , ನಾರಾಯಣಮ್ಮ ,ಕಾರ್ಯನಿರ್ವಾಹಣಾಧಿಕಾರಿ ವೈ.ವಿ ನಾಗರಾಜ್ , ಹಿರಿಯ ಸಹಕಾರಿ ಅಬ್ಬಣಿ ಶಂಕರ್ , ಅಬ್ಬಣಿ ಶಿವಪ್ಪ , ವಿಟ್ಲಪನಹಳ್ಳಿ ವೆಂಕಟೇಶ್ ಮುಂತಾದವರಿದ್ದರು