ಮುಳಬಾಗಿಲು, ಏ.06: ಎಂ.ಎಸ್.ಪಿ.ಸಿ (ಅಂಗನವಾಡಿ ಕೇಂದ್ರಗಳಿಗೆ) ಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಪಧಾರ್ಥಗಳನ್ನು ಸರಬರಾಜು ಮಾಡುವ ಕಿಸಾನ್ ಟ್ರೇಡರ್ಸ್ ಟೆಂಡರ್ ಪರವಾನಗಿ ರದ್ದು ಮಾಡಿ ಅಂಗನವಾಡಿ ಹಾಜರಾತಿ ಪರೀಶೀಲನೆ ಮಾಡಲು ವಿಶೇಷ ತಂಡ ರಚನೆ ಮಾಡಬೇಕೆಂದು ಏ.11 ರಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಕಳಪೆ ಆಹಾರ ಸಮೇತ ಪ್ರತಿಭಟನೆ ಮಾಡಲು ರೈತ ಸಂಘದ ಸಭೆಯಲ್ಲಿ ತಿರ್ಮಾನಿಸಲಾಯಿತು.
ಅಂಗನವಾಡಿ ಮಕ್ಕಳ ಹಾಗೂ ಗರ್ಭಿಣಿ ಸ್ತ್ರೀಯರ ಅಪೌಷ್ಠಿಕತೆ ಸಮಸ್ಯೆ ಹೋಗಲಾಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾg ನಿಡುವ ಅನುದಾನದಲ್ಲಿ ವಿತರಣೆ ಮಾಡುವ ಆಹಾರ ಪದಾರ್ಥಗಳೂ ಕಳಪೆ ಆಗಿದ್ದರೂ ಪರೀಶೀಲನೆ ಮಾಡಬೇಕಾದ ಶಿಶು ಅಭಿವೃದ್ದಿ ಅಧಿಕಾರಿಗಳು ಗುತ್ತಿಗೆದಾರರ ಜೊತೆ ಶಾಮೀಲಾಗಿ ಕಡಿಮೆ ಬೆಲೆಯ ಕಳಪೆ ಆಹಾರ ಪದಾರ್ಥಗಳನ್ನು ದುಬಾರಿ ಬೆಲೆಗೆ ಎಂ.ಎಸ್.ಪಿ.ಸಿಗಳಿಗೆ ಸರಬರಾಜು ಮಾಡುತ್ತಿದ್ದರೂ ಅಲ್ಲಿನ ಅಧಿಕಾರಿಗಳು ಕಣ್ಮುಚ್ಚಿ ಕುಳಿತು ಪ್ಯಾಕಿಂಗ್ ಮಾಡಿ ತೂಕ ಮತ್ತು ಗುಣಮಟ್ಟದಲ್ಲಿ ಮೋಸ ಮಾಡುತ್ತಿದ್ದಾರೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಶಿಶು ಅಭಿವೃದ್ದಿ ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ದುಬಾರಿ ಆಗಿರುವ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಮಕ್ಕಳನ್ನು ಪ್ರತಿಷ್ಠಿತ ಖಾಸಗಿ ಕಾಲೇಜುಗಳಿಗೆ ಸೇರಿಸಲಾಗದೆ ಮನೆಯಲ್ಲಿ ಮಕ್ಕಳನ್ನು ನೋಡಿಕೊಂಡರೆ ಕೂಲಿ ಕೆಲಸ ಮಾಡಲಾಗುವುದಿಲ್ಲ ಎಂದು ಅಂಗನವಾಡಿ ಕೇಂದ್ರಗಳಿಗೆ ಬಡವರ ಮಕ್ಕಳನ್ನು ಅಕ್ಷರ ಅಭ್ಯಾಸ ಮಾಡಿ ಸರ್ಕಾರ ನೀಡುವ ಗುಣಮಟ್ಟದ ಆಹಾರ ಸಿಗುತ್ತದೆ ಎಂಬ ನೀರಿಕ್ಷೆಯಲ್ಲಿರುವ ಪೋಷಕರಿಗೆ ಗುತ್ತಿಗೆದಾರರ ಹಾಗೂ ಅಧಿಕಾರಿಗಳ ಹಣ ದಾಹಕ್ಕೆ ಪೌಷ್ಠಿಕ ಆಹಾರ ಕಾಳ ಸಂತೆಯಲ್ಲಿ ಮಾರಾಟ ಆಗುತ್ತದೆ ಎಂದು ತಿಳಿಯುತ್ತಿಲ್ಲ ಜೊತೆಗೆ ಬಡ ಕೂಲಿ ಕಾರ್ಮಿಕರ ಹೆಣ್ಣು ಮಕ್ಕಳು ಗರ್ಭಿಣಿ ಆದಾಗ ಪೌಷ್ಠಿಕ ಆಹಾರ ನೀಡಿ ಬಲ ನಿಡುವ ಸರ್ಕಾರದ ಯೋಜನೆಗಳು ಮಣ್ಣು ಪಾಲಾಗುತ್ತಿವೆ ದುಬಾರಿ ಬೆಲೆಯಲ್ಲಿ ಗುಣಮಟ್ಟದ ಬೆಲ್ಲ, ಅಕ್ಕಿ, ತೊಗರಿ ಹೆಸರು ಬೇಳೆ, ಸಕ್ಕರೆ ಮತ್ತಿತರ ಆಹಾರ ಪದಾರ್ಥಗಳು ಗರೀಷ್ಠ ಬೆಲೆ ನೆಪದಲ್ಲಿ ಕನಿಷ್ಠ ಬೆಲೆಯ ಕಳಪೆ ಗುಣಮಟ್ಟದ ಆಹಾರ ಪದಾರ್ಥಗಳನ್ನು ಎಂ.ಎಸ್.ಪಿ.ಸಿ ಆಹಾರ ಘಟಕ ಕೇಂದ್ರಗಳಿಗೆ ಗುತ್ತಿಗೆದಾರರು ಸರಬರಾಜು ಮಾಡಿ ಮಕ್ಕಳ ಮತ್ತು ಗರ್ಭಿಣಿಯರ ಹೆಸರಿನಲ್ಲಿ ಅಧಿಕಾರಿಗಳು ಲೂಟಿ ಹೊಡೆಯುತ್ತಿದ್ದಾರೆಂದು ಅವ್ಯವಸ್ಥೆ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.
ಎಂ.ಎಸ್.ಪಿ.ಸಿ ಗಳಿಗೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವ ಟೆಂಡರ್ನ್ನು ಹತ್ತಾರು ವರ್ಷಗಳಿಂದ ಕಿಸಾನ್ ಟ್ರೇಡರ್ಸ್ಗೆ ನೀಡಿರುವ ಉದ್ದೇಶವಾದರೂ ಏನೂ? ಗುತ್ತಿಗೆದಾರರಿಗೆ ಬರುವ ಲಾಭದಲ್ಲಿ ಸಮಪಾಲು ಇದೆಯೇ ಎಂಬುದು ತನಿಖೆ ಆಗಬೇಕೆಂಬುದು ಸಭೆಯಲ್ಲಿ ಒತ್ತಾಯಿಸಿದರು.
ತಾಲ್ಲೂಕಾದ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ ತಾಲ್ಲೂಕಿನಾದ್ಯಂತ ಹದಗೆಟ್ಟಿರುವ ಅಂಗನವಾಡಿ ಕೇಂದ್ರಗಳನ್ನು ಅಭಿವೃದ್ದಿಪಡಿಸುವಲ್ಲಿ ಸರ್ಕಾರ ವಿಪಲವಾಗಿದೆ. ಜೀವಭಯದಲ್ಲಿ ಬಡವರ ಮಕ್ಕಳು ಬೀಳುವ ಅಂಗನವಾಡಿ ಕೇಂದ್ರಗಳಲ್ಲಿ ಪಾಠ ಕೇಳಬೇಕಾದ ಪರಿಸ್ಥಿತಿ ಇದ್ದರೂ ಸರಿಪಡಿಸಬೇಕಾದ ಸರ್ಕಾರಗಳು ಶಿಕ್ಷಣ ಕ್ಷೇತ್ರವನ್ನು ಖಾಸಗೀಕರಣ ಮಾಡಿ ಬಡವರ ಮಕ್ಕಳನ್ನು ರಾಜಕಾರಣಿಗಳ ಹಿಂಬಾಲಕರಾಗಿ ಜೈಕಾರ ಹಾಕಲು ಬಳಸಿಕೊಳ್ಳುತ್ತಿದ್ದಾರೆಂದು ಆರೋಪ ಮಾಡಿದರು.
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಹಾಜರಾತಿ ಹಾಗೂ ಗರ್ಭಿಣಿ ಸ್ತ್ರೀಯರ ಲೆಕ್ಕವನ್ನು ಪುಸ್ತಕದಲ್ಲಿ ತಪ್ಪು ಲೆಕ್ಕ ಬರೆದು ಹೆಚ್ಚಿನ ಹಾಜರಾತಿ ತೋರಿಸಿ ಆಹಾರ ಸರಬರಾಜಿನಲ್ಲಿ ಹೆಚ್ಚಿಗೆ ಬಿಲ್ ಮಾಡಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳು ಸಮಪಾಲಾಗಿ ಹಂಚಿಕೊಳ್ಳುತ್ತಿದ್ದಾರೆಂದು ಆರೋಪ ಮಾಡಿದರು .
ಎಂ.ಎಸ್.ಪಿ.ಸಿ (ಅಂಗನವಾಡಿ ಕೇಂದ್ರಗಳಿಗೆ) ಗಳಲ್ಲಿ ಕಳಪೆ ಗುಣಮಟ್ಟದ ಆಹಾರ ಪಧಾರ್ಥಗಳನ್ನು ಸರಬರಾಜು ಮಾಡುವ ಕಿಸಾನ್ ಟ್ರೇಡರ್ಸ್ ಟೆಂಡರ್ ಪರವಾನಗಿ ರದ್ದು ಮಾಡಿ ಅಂಗನವಾಡಿ ಹಾಜರಾತಿ ಪರೀಶೀಲನೆ ಮಾಡಲು ವಿಶೇಷ ತಂಡ ರಚನೆ ಮಾಡಬೇಕೆಂದು ಏ.11 ರಂದು ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಕಳಪೆ ಆಹಾರ ಸಮೇತ ಪ್ರತಿಭಟನೆ ಮಾಡುವ ಮೂಲಕ ಅಂಗನವಾಡಿ ಅವ್ಯವಸ್ಥೆ ಗುತ್ತಿಗೆದಾರರ ಹಗಲು ದರೋಡೆಗೆ ಕಡಿವಾಣ ಹಾಕುವ ಹೋರಾಟಕ್ಕೆ ಹೆಚ್ಚಿನ ಸಂಖ್ಯೆ ಭಾಗವಹಿಸಿ ಸಹಕರಿಸಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ರಾಜ್ಯ ಪ್ರಧಾನ ಕಾರ್ಯದರ್ಶಿ ಪಾರುಕ್ಪಾಷ, ಬಂಗಾರಿ ಮಂಜು, ವಿಜಯ್ಪಾಲ್, ಆದಿಲ್ಪಾಷ, ಬಾಸ್ಕರ್, ಸುನಿಲ್ಕುಮಾರ್, ಹೆಬ್ಬಣಿ ಆನಂದ್ರೆಡ್ಡಿ, ಹೆಬ್ಬಣಿ ರಾಮಮೂರ್ತಿ, ಮಾಲೂರು ತಾ.ಅ ಯಲ್ಲಪ್ಪ, ಮಾಸ್ತಿ ವೆಂಕಟೇಶ್, ಹರೀಶ್, ತೆರ್ನಹಳ್ಳಿ ಆಂಜಿನಪ್ಪ, ಸಂದೀಪ್ರೆಡ್ಡಿ, ಸಂದೀಪ್ಗೌಡ, ರಾಮಸಾಗರ ವೇಣು, ಮುಂತಾದವರಿದ್ದರು.