

ವೃತ್ತಿ ಸೇವೆಯಲ್ಲಿ ಅತ್ಯುತ್ತಮ ಸಾಧನೆಗೈದು ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ಕುಂದಾಪುರ ಕೆನರಾ ಬ್ಯಾಂಕ್ ವಿಭಾಗೀಯ ಪ್ರಬಂಧಕ ರತ್ನಾಕರ ಗಾಣಿಗ ಗಂಗೊಳ್ಳಿಯವರನ್ನು ರೋಟರಿ ಕುಂದಾಪುರ ದಕ್ಷಿಣದ ವತಿಯಿಂದ ಗೌರವಿಸಲಾಯಿತು.
ಕುಂದಾಪುರ ಸರಕಾರಿ ಪ. ಪೂ. ಕಾಲೇಜಿನ ಲಕ್ಷ್ಮೀ ನರಸಿಂಹ ಕಲಾಮಂದಿರದಲ್ಲಿ ನಡೆದ ಸಮಾರಂಭದಲ್ಲಿ ರೋಟರಿ ಕುಂದಾಪುರ ದಕ್ಷಿಣದ ಅಧ್ಯಕ್ಷ ಸತ್ಯನಾರಾಯಣ ಪುರಾಣಿಕ ಅಧ್ಯಕ್ಷತೆ ವಹಿಸಿದ್ದರು.
ವೃತ್ತಿ ಸೇವೆ ನಿರ್ದೇಶಕ ಯು.ಎಸ್.ಶೆಣೈ ರತ್ನಾಕರ ಗಾಣಿಗರನ್ನು ಪರಿಚಯಿಸಿ ಅಭಿನಂದಿಸಿದರು.
ರತ್ನಾಕರ ಗಾಣಿಗ ಮಾತನಾಡಿ “ಬ್ಯಾಂಕ್ ಮೂಲಕ ಸಾರ್ವಜನಿಕ ಸೇವೆಗೈಯಲು ತುಂಬಾ ಅವಕಾಶವಿದ್ದು ನಾನು ಬಡವರು, ವಿದ್ಯಾರ್ಥಿ ಗಳಿಗೆ ಸಹಾಯ ಮಾಡಲು ಗರಿಷ್ಠ ಪ್ರಯತ್ನ ಮಾಡಿದ್ದೇನೆ. ಬ್ಯಾಂಕಿನ ಹಾಗೂ ಸಾರ್ವಜನಿಕ ರ ವಿಶ್ವಾಸ ಗಳಿಸಿದ್ದೇನೆ. ರೋಟರಿ ಕುಂದಾಪುರ ದಕ್ಷಿಣ ವೃತ್ತಿ ಸೇವೆಯ ಸಾಧನೆಗೆ ಗುರಿತಿಸಿರುವುದು ತುಂಬಾ ಸಂತೋಷ ವಾಯಿತು” ಎಂದರು. ಕಾರ್ಯದರ್ಶಿ ಸಚಿನ್ ನಕ್ಕತ್ತಾಯ ವಂದಿಸಿದರು.
