JANANUDI.COM NETWORK
ಉಡುಪಿ: ಕೋವಿಡ್ ಸಾಂಕ್ರಾಮಿಕ ರೋಗ ಹರಡದಂತೆ ರಾಜ್ಯ ಸರ್ಕಾರ ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ವಾರಾಂತ್ಯ ಕಫ್ರ್ಯೂ ಘೋಷಿಸಿದೆ, ಜನ ಸಾಮಾನ್ಯರ ಅಂಗಡಿ ಮುಗ್ಗಟ್ಟಗಳನ್ನು ಮುಚ್ಚಿಸಿ ಜನ ಸಾಮನ್ಯರಿಗೆರಸ್ತೆಯಲಿ ತಿರುಗಾಡದಂತೆ ನಿಧ್ರ್ಯಾಕ್ಷಿಣ್ಯವಾಗಿ ಕ್ರಮ ಜರಗಿಸುತ್ತದೆ. ಆದರೆ ಉಡುಪಿ ರಥ ಬೀದಿಯಲಿ ಭಾರೀ ರಥ ಬೀದಿಯಲ್ಲಿ ಭಾರೀ ಜನಸ್ತೋಮದೊಂದಿಗೆ ರಥೋತ್ಸವ ನಡೆಸಲಾಯಿತು.
ಉಳಿದ ಧರ್ಮದವರು ಉಡುಪಿ ಪರ್ಯಾದಂತೆ ಹಬ್ಬ ಜಾತ್ರೆಗಳಿದ್ದರು, ಸರಕಾರದ ಆದೇಶಕ್ಕೆ ತಲೆ ಭಾಗಿ, ಅವುಗಳನ್ನು ಮುಂದಕ್ಕೆ ದೂಡಿ, ಸಾಂಕ್ರಾಮಿಕ ರೋಗ ಹರಡದಂತೆ ನಾಡಿಗೆ, ಸರಕಾರಕ್ಕೆ ಸಹಕಾರ ನೀಡಿದೆ.
ಆದರೆ ಉಡುಪಿ ಮಠದವರು, ಇದೆನ್ನೆಲ್ಲ ಕ್ಯಾರೆ ಅನ್ನದೆ, ಭಾರಿ ಜನಸಾಗರದೊಂದಿಗೆ ರಥೋತ್ಸವ ಮಾಡಿತು. ಅಂದರೆ ಸರಕಾರದ ಆದೇಶ ಉಲಂಘನೇ ಮಾಡಲಾಯಿತು. ಇಲ್ಲ ಉಡುಪಿ ಜಿಲ್ಲಾಡಳಿತ ಈ ರಥೋತ್ಸವ ಮಾಡಲು ಅನುಮತಿ ನೀಡಿತ್ತೆ ಎಂಬ ಗುಮಾನಿ ಕಾಡುತ್ತದೆ.
ಮಕರ ಸಂಕ್ರಮಣದಂದು ಉಡುಪಿ ಶ್ರೀಕೃಷ್ಣನ ಪ್ರತಿಷ್ಠೆಯ ಹಬ್ಬ, ಸಂಕ್ರಮಣದ ಮರುದಿನ ಹಗಲು ಬ್ರಹ್ಮ ರಥೋತ್ಸವ ಆಚರಿಸುವ ಕ್ರಮ. ಚೂರ್ಣೋತ್ಸವದೊಂದಿಗೆ ಸಂಪತ್ಸೋವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದ್ದು, ಈ ಮೂಲಕ ಸರಕಾರದ ಕೋವಿಡ್ ನಿಯಮಾವಳಿ ಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಲಾಗಿದ್ದು ಎದ್ದು ಕಾಣುತಿದ್ದು, ಎಲ್ಲೆಲ್ಲಿಯೂ ಆರೋಪಗಳು ಕೇಳಿ ಬರುತ್ತಿವೆ.
ಸರಕಾರ ನ್ಯಾಯಲಯ ಕಾಂಗ್ರೆಸಿನ ಮೇಕೆದಾಟು ಯೋಜನೆಗಾಗಿ ಹಮ್ಮಿಕೊಂಡಿದ್ದ ಪಾದ ಯಾತ್ರೆ ರದ್ದು ಮಾಡಲು ಕಾರಣವಾಯಿತು. ಹಾಗಾದರೆ ಇವರ ಮೇಲೆ ಯಾರು ಕ್ರಮ ತೆಗೆದುಕೊಳ್ಳುವುದಿಲ್ಲವೋ. ಉಡುಪಿಗೆ ಮಾತ್ರ ರಿಯಾಯಿತಿ ಇದೆಯಾ?
ಈ ವಿಚಾರದಲ್ಲಿ ಸಾರ್ವಜನಿಕ ಹಿತಾಸಕ್ತಿಗಾಗಿ ದಾವೆ ಹೂಡಬಹಿದಲ್ಲವೇ, ಆಡಳಿತ ನಡೆಸುವ ಸರಕಾರ ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತೀದೆಯೇ.
ಸರಕಾರದ ಆದೇಶಗಳು ಮತ್ತು ಕಫ್ರ್ಯು ಧರ್ಮದ ಆದಾರದಲ್ಲಿ ಇವೆಯಾ? ಇಂತಹ ಆದೇಶಗಳು ಬಡ ಜನರಿಗೆ, ಜನ ಸಾಮಾನ್ಯರಿಗೆ ಮಾತ್ರ ಅನವಯಾಗುತ್ತದಾ?
ಇಂದು ಬೆಳಗ್ಗೆ ರಥಬೀದಿಯಲ್ಲಿ ನಡೆದ ಹಗಲು ರಥೋತ್ಸವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿರುವುದು ದ್ರಶ್ಯ ಮಾದ್ಯಮದಲ್ಲಿ ಸೆರೆಯಾಗಿವೆ.. ವಾರಾಂತ್ಯ ಕಫ್ರ್ಯೂ ಜಾರಿ ಇದ್ದೂ, ಭಾರೀ ಸಂಖ್ಯೆಯಲ್ಲಿ ಮತ್ತು ಮಾಸ್ಕ್ ಧರಿಸದೆ, ಜನ ಸೇರಿರುವುದು ಎನೊಂದು ಚೂರು ಅಂತರ ಕಾಪಾಡದೆ, ಹಿಂಡುಹಿಂಡಾಗಿ ಜನ ನೆರೆದಿರುವುದು ಸರಕಾರದ ಕೋವಿಡ್-19 ಮಾರ್ಗಸೂಚಿಯ ಸ್ಪಷ್ಟ ಉಲ್ಲಂಘನೆಯಾಗಿದ್ದು. ಇದೊಂದ ಅಪರಾದವಾಗಿದೆ. ಸರಕಾರ ಏನು ಕ್ರಮ ತೆಗೆದೊಕೊಳ್ಳುವುದೊ ಕಾದು ನೋಡ ಬೇಕಾಗಿದೆ.
ಪ್ರತಿಭಟನೆ, ಮೆರವಣಿಗೆ, ಜಾತ್ರೆ, ಹಬ್ಬ, ಸಮಾವೇಶಗಳು ನಡೆಯದಂತೆ ಕ್ರಮ ವಹಿಸಬೇಕಾದ ಸರಕಾರ ಇಲ್ಲಿ ಮಾತ್ರ ಕಣ್ಣು ಮುಚ್ಚಿ ಕುಳಿತಂತೆ ಕಾಣುತ್ತದೆ, ಸರಕಾರ, ಜಿಲ್ಲಾಡಳಿತ ಇಲ್ಲವೆಂಬಂತೆ ಅನ್ನಿಸುತ್ತಿದೆ.
ಸರಕಾರ ಜಿಲ್ಲಾಡಳಿತ ಮಾಡಿದ ಇಂತಹ ಎಡವಟ್ಟಿನಿಂದ ಇತರರು , ಉಡುಪಿಯವರು ಮಾಡಿದ್ದಾರೆ, ನಾವು ಮಾಡುತ್ತೇವೆ ಎಂಬ ಒಕ್ಕೋತಾಯಕ್ಕೆ ಸಿಲುಕುವುದು ಖಚಿತವಾಗಿದೆ. ಇಂತಹ ಒಂದು ಎಡವಟ್ಟು ಸರಕಾರಕ್ಕೆ ಆಡಳಿತ ನಡೆಸಲು ಬಾರದು ಎಂಬ ಜನ ಯೋಚಿಸುವಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಕಫ್ರ್ಯು, ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದಕ್ಕೆ ಎನು ಕ್ರಮ ತೆಗೆದು ಕೊಳ್ಳುವರೆ ಕಾದು ನೋಡಬೇಕಾಗಿದೆ.