ಕ.ಪ್ರೌ. ಶಿಕ್ಷಣ ಪರೀಕ್ಷಾ ಮಂಡಳಿಯ ಗಣಕಯಂತ್ರ ಪರೀಕ್ಷೆಗಳಲ್ಲಿ ಕರ್ನಾಟಕ ವಾಣಿಜ್ಯ/ ಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆ % 100ರಷ್ಟು ಫಲಿತಾಂಶ

ವರದಿ: ಶಬ್ಬೀರ್ ಅಹ್ಮದ್, ಶ್ರೀನಿವಾಸಪುರ

ಶ್ರೀನಿವಾಸಪುರ: ಕಳೆದ ಫೆಬ್ರವರಿ ಮಾಹೆಯಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸಿದ ಗಣಕಯಂತ್ರ ಪರೀಕ್ಷೆಗಳಲ್ಲಿ ಕರ್ನಾಟಕ ವಾಣಿಜ್ಯ ಮತ್ತುಕಂಪ್ಯೂಟರ್ ಶಿಕ್ಷಣ ಸಂಸ್ಥೆಗೆ ಶೇಕಡ100ರಷ್ಟು ಫಲಿತಾಂಶದೊದಿಗೆಒಟ್ಟು 24 ಡಿಷ್ಟಿಂಗನ್ಸ್‍ದೊರೆತಿದ್ದು, ಫಲಿತಾಂಷದಲ್ಲಿ ಬಾಲಕಿಯರೇಹೆಚ್ಚಿನವರಾಗಿದ್ದಾರೆಎಂದು ಸಂಸ್ಥೆಯ ಪ್ರಾಂಶುಪಾಲರಾದ ಎನ್. ಕೃಷ್ಣಮೂರ್ತಿ ತಿಳಿಸಿದ್ದಾರೆ.
ಪಟ್ಟಣದಎಂ.ಜಿ. ರಸ್ತೆಯಲ್ಲಿರುವಕರ್ನಾಟಕ ವಾಣಿಜ್ಯ ಮತ್ತುಕಂಪ್ಯೂಟರ್ ಶಿಕ್ಷಣ ಸಂಸ್ಥೆಯು ಪಟ್ಟಣದಲ್ಲಿಗಣಕಯಂತ್ರ ಶಿಕ್ಷಣಕ್ಕೆ ಸರ್ಕಾರದಿಂದ ಮಾನ್ಯತೆಪಡೆದ ಏಕೈಕ ಗಣಕಯಂತ್ರ ಸಂಸ್ಥೆಯಾಗಿದ್ದು, ಕಳೆದ ಫೆಬ್ರವರಿ ಮಾಹೆಯಲ್ಲಿರಾಜ್ಯಮಟ್ಟದಲ್ಲಿಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷ ಮಂಡಳಿಯು ನಡೆಸಿದ ಆಫೀಸ್‍ಆಟೋಮೇಶನ್ ವಿಷಯದಲ್ಲಿ ನಮ್ಮ ಶಾಲೆಗೆ ಶೇಕಡ100ರಷ್ಟುಫಲಿತಾಂಶದೊರೆತಿರುತ್ತದೆ. ಶಾಲೆಯಲ್ಲಿಒಟ್ಟು 53 ವಿದ್ಯಾರ್ಥಿ/ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗಿದ್ದು, ಇವರಲ್ಲಿ ಬಾಲಕಿಯರು 24, ಬಾಲಕರು 29 ಮಂದಿ ಪರೀಕ್ಷೆಗೆ ಹಾಜರಾಗಿದ್ದು, ಎಲ್ಲಾ ವಿದ್ಯಾರ್ಥಿ/ವಿದ್ಯಾರ್ಥಿನಿಯರುತೇರ್ಗಡೆ ಹೊಂದಿದ್ದು,24 ಡಿಷ್ಟಿಂಗನ್ಸ್, (ಬಾಲಕಿಯರು-13, ಬಾಲಕರು-11) 20 ಪ್ರಥಮದರ್ಜೆ, 7 ದ್ವಿತೀಯ ದರ್ಜೆ, 2 ತೃತೀಯದರ್ಜೆಯಲ್ಲಿತೇರ್ಗಡೆ ಹೊಂದಿರುತ್ತಾರೆ.
ಈ ಪರೀಕ್ಷೆಯಲ್ಲಿತೇರ್ಗಡೆಯಾದಎಲ್ಲಾ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಾ, ಶಾಲೆಗೆ ದೊರೆತಿರುವಉತ್ತಮ ಫಲಿತಾಂಶಕ್ಕೆಕಾರಣರಾದ ಬೋಧಕರನ್ನುಪ್ರಾಂಶುಪಾಲರಾದಎನ್. ಕೃಷ್ಣಮೂರ್ತಿ ಮತ್ತುಕೇಂದ್ರ ವ್ಯವಸ್ಥಾಪಕರಾದಆರ್. ರಾದಇವರುಅಭಿನಂದಿಸಿದ್ದಾರೆ.