ಶ್ರೀನಿವಾಸಪುರ : ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ತಮ್ಮ ಸಿ,ಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆಯನ್ನು ಎದುರಿಸಬೇಕು ಆ ಮೂಲಕ ಎಲ್ಲಾ ರಾಜಕಾರಣಿಗಳಿಗೂ ಮಾದರಿಯಾದ ರಾಜಕಾರಣ ನಡೆಸಬೇಕೆಂದು ಮಾಜಿ ವಿಧಾನ ಪರಿಷತ್ ಸದಸ್ಯ ವೈ.ಎ. ನಾರಾಯಣಸ್ವಾಮಿ ಅಗ್ರಹಿಸಿದರು.
ಪಟ್ಟಣದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಸುದ್ದಿಗಾರರೊಂದಿಗೆ ಮಾತನಾಡಿ. ರಾಜಕೀಯ ಜೀವನದ ಕೊನೆಯಲ್ಲಿ ಗೌರವವನ್ನು ಇಟ್ಟುಕೊಂಡು ರಾಜೀನಾಮೆ ಕೊಡಬೇಕು ಎನ್ನುವುದು ನಮ್ಮ ಆಸೆ .ಸಿದ್ದರಾಮಯ್ಯ ನವರು ತನಿಖೆ ಆಗುವವರೆಗೂ ನಾನು ಈ ಸೀಟಿನಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಹೇಳಿದರೆ ಅವರಿಗೆ ಸಿಗುವ ಗೌರವ ಯಾರಿಗೂ ಸಿಗುವುದಿಲ್ಲ ರಾಜಕೀಯದಲ್ಲಿ ನೈತಿಕತೆ ಬಹಳ ಮುಖ್ಯ. ರಾಮಕೃಷ್ಣ ಹೆಗ್ಗಡೆ ಕಾಲದಿಂದ ಮೌಲ್ಯಾಧಾರಿತ ರಾಜಕಾರಣ ಮಾಡಿಕೊಂಡು ಬರಬೇಕು ಎಂದು ಹೇಳಿ ಸಮಾಜವಾದದ ವ್ಯವಸ್ಥೆಯಿಂದ ಆಚೆ ಬಂದಿರುವವರು. ಅಂತಹ ಸಿದ್ದರಾಮಯ್ಯ ಸ್ವಜನ ಪಕ್ಷಪಾತಕ್ಕೆ ಬಲಿಯಾಗಿ ಭ್ರಷ್ಟಾಚಾರದ ಕೂಪದಲ್ಲಿ ಕೂಡಿರುವುದು ದುರಂತವೇ ಸರಿ! ಹೈಕೋರ್ಟ್ ತನಿಖೆಗೆ ಒಳಪಡಿಸಿದಾಗ ಸಿದ್ದರಾಮಯ್ಯನವರು ಯಾಕೇ ರಾಜೀನಾಮೆ ಕೊಟ್ಟಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ? ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು , ರಾಮಕೃಷ್ಣ ಹೆಗ್ಗಡೆ ರವರ ಗರಡಿಯಲ್ಲಿ ಬೆಳದಿರುವ ಸಿದ್ದರಾಮಯ್ಯ ನವರು ರಾಜೀನಾಮೆ ನೀಡದೆ ಏಕೆ ಈ ಮುಂಡುತನವನ್ನ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಕರ್ಮಕಾಂಡದ ಪರಮವಾದಿ ಎದ್ದು ಕಾಣುತ್ತಿದೆ. ಅವರ ಆಪ್ತವಲಯವೇ ದಾರಿತಪ್ಪಿಸುತ್ತಿದೆ. ಇದು ಆಪ್ತವಲಯಕ್ಕೂ ಸಹ ಗೊತ್ತಿದೆ. ಸಿದ್ದರಾಮಯ್ಯನವರನ್ನು ಆ ಬ್ರಹ್ಮಬಂದರೂ ಸಹ ಈ ಕೇಸ್ನಲ್ಲಿ ಬಚಾವ್ ಮಾಡಲು ಸಾಧ್ಯವಿಲ್ಲ ಎಂದು ನುಡಿದರು. ಅಪ್ತವಲಯವು ಮುಖ್ಯಮಂತ್ರಿಗಳಿಗೆ ಬಹುಪರಾಕ್ ಮಾಡುವುದರ ಜೊತೆಗೆ ಅವರ ಗೌರವವನ್ನ ಇನ್ನು ಕಡಿಮೆ ಮಾಡುತ್ತಿದ್ದಾರೆ. ಎಂದು ಹೀಯಾಲಿಸಿ , ಇದೆನ್ನೆಲ್ಲಾ ಬದಿಗೊತ್ತಿ ಸಿದ್ದರಾಮಯ್ಯನವರು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.
ಶನಿವಾರ ಕೋಲಾರ ಹೊರವಲಯದ ನಂದಿನಿ ಪ್ಯಾಲೇಸ್ ನಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಎರಡು ಬಣದಲ್ಲಿ ನಡೆದ ಜಗಳವು ತಾರಕ್ಕಕ್ಕೆ ಏರಿ, ಕೈ ಕೈ ಮಿಸಲಾಯಿಸಿಕೊಳ್ಳವ ಪರಿಸ್ಥಿತಿಯ ಕಂಡು ಬಂದಿದ್ದು, ಈ ಘಟನೆಯು ದುಖಃಖಾರವಾಗಿದೆ. ಇದರಿಂದ ಕಾಂಗ್ರೆಸ್ ಪಕ್ಷದ ಸಂಸ್ಕøತಿ ತಿಳಿಸುತ್ತದೆ. ಕಳೆದ 6 ವರ್ಷಗಳಿಗಂದಲೂ ಪಕ್ಷದ ಒಳ ಜಗಳವು ಪಕ್ಷದ ಮನೆಯು ಒಡೆದು ಭಾಗಗಳಾಗಿವೆ. ದಿಕ್ಕು ದಿಶೆಯಲ್ಲದೆ, ಅವರ ಅವರೇ ಜಗಳಾಗಿ ಎರಡು ಗುಂಪುಗಳಾಗಿ ಬೇರ್ಪಟ್ಟಿದೆ. ಮುಂದೆ ಯಾವ ರೀತಿಯಲ್ಲಿ ಹೋಗುತ್ತದೆ ನೀವೆ ಕಾದುನೋಡಿ ವ್ಯಂಗ್ಯವಾಡಿದರು.
ಕಾಂಗ್ರೆಸ್ ಪಕ್ಷಕ್ಕೆ ಅಂತರಿಕ ಒಳಜಗಳ ಜಾಸ್ತಿ ಆಗಿದೆ. ಸ್ವಂತ ಬಾರದಿಂದ ಕುಸಿಯುವುದು ಈ ದೇಶದಲ್ಲಿ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಎಂದು ಟೀಕಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದ ಮೇಲೆ ರಾಜ್ಯದ ಜನತೆ ದುಸ್ಥಿರವಾಗಿದ್ದಾರೆ. ಜನರು ಬದುಕು ಬರುಡಾಗಿದೆ. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ರವರು ಎತ್ತಿನಹೊಳೆ ಯೋಜನೆಯನ್ನು ನಾವು ಜಾರಿಗೆ ತಂದಿದ್ದೇವೆ ಎಂದು ಬೆನ್ನು ತಟ್ಟಿಕೊಳ್ಳುತ್ತಾ ಮೊದಲ ಹಂತಕ್ಕೆ ನಾವು ನೀರು ಜನತೆ ನೀರು ಕೊಡುತ್ತಿದ್ದೇವೆ ಎಂದು ಬೀಗುತ್ತಿದ್ದಾರೆ. ಕೋಲಾರ ಚಿಕ್ಕಬಳ್ಳಾಪುರಕ್ಕೆ ನೀರು ಯಾವಾಗ ಹರಿಸುತ್ತಾರೆ ಎಂಬ ಪ್ರಶ್ನೆ ನನ್ನನ್ನು ಹಾಗೂ ಈ ಭಾಗದ ಜನರಲ್ಲಿ ಕಾಡುತ್ತಿದೆ ಎಂದರು.
ಈ ಸಮಯದಲ್ಲಿ ತೂಪಲ್ಲಿ ಮಧು, ಗುಂಡಮನತ್ತ ಶ್ರೀಧರ್ ಇನ್ನೀತರರು ಉಪಸ್ಥಿತರಿದ್ದರು.