JANANUDI.COM NETWORK

ಬೈಂದೂರು,ನಾಡ ಜೂ.6: ಬೈಂದೂರು ತಾಲೂಕು ನಾಡಾ ಗ್ರಾಮದ ಬಡಾಕೆರೆ ರೈಲ್ವೆ ಮೇಲ್ ಸೇತುವೆ ಬಳಿ ರೈಲು ಡಿಕ್ಕಿ ಹೊಡೆದು ನಾಲ್ಕು ವರ್ಷದ ಕಪ್ಪು ಚಿರತೆ ಮೃತಪಟ್ಟ ಘಟನೆ ಕೆಲದಿನಗಳ ಹಿಂದೆನಡೆದಿದೆ. ಆಹಾರ ಅರಸಿಕೊಂಡು ಚಿರತೆ ರೈಲ್ವೆ ಮೇಲ್ ಸೇತುವೆ ಬಳಿ ಬಂದಿದ್ದು, ಈ ವೇಳೆಗೆ ರೈಲಿಗೆ ಸಿಲುಕಿ ಸಾವನ್ನಪ್ಪಿದೆ ಎನ್ನಲಾಗಿದೆ.
ಕುಂದಾಪುರ ವಲಯ ಅರಣ್ಯಾಧಿಕಾರಿ ಪ್ರಭಾಕರ ಕುಲಾಲ್ ಸಿಬ್ಬಂದಿ ಚಿರತೆ ಶವ ವಶಕ್ಕೆ ಪಡೆದು, ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಮೃತ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿ. ವನ್ಯಜೀವಿ ನಿಯಮದ ಪ್ರಕಾರ ಅಂತಿಮ ಸಂಸ್ಕಾರ ಮಾಡಿದರು