ಬೈಂದೂರು : ತಾಯಿಯಿಂದ ಮಗುವಿಗೆ H I V ಸೋಂಕು ಹರಡುವಿಕೆ ನಿರ್ಮೂಲನೆ ಆಂದೋಲನ ಕಾರ್ಯಕ್ರಮ

JANANUDI.COM NETWORK

ಬೈಂದೂರು, ಮಾ.10:ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ ಷನ್ ಸೊಸೈಟಿ ಜಿಲ್ಲಾ ಪಂಚಾಯತ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಏಡ್ಸ್ ನಿಯಂತ್ರಣ ಹಾಗೂ ತಡೆಗಟ್ಟುವ ಘಟಕ ಉಡುಪಿ ಸಮುದಾಯ ಆರೋಗ್ಯ ಕೇಂದ್ರ ಬೈಂದೂರು ತಾಯಿಯಿಂದ ಮಗುವಿಗೆ H I V ಸೋಂಕು ಹರಡುವಿಕೆ ನಿರ್ಮೂಲನೆಗಾಗಿ ಆಂದೋಲನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮಕ್ಕೆ ಬೈಂದೂರು ತಹಸೀಲ್ದಾರ್ ಶೋಭಾ ಲಕ್ಷ್ಮಿ ಮುಖ್ಯ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ 40ಮಂದಿ ಗರ್ಭಿಣಿ ಯರನ್ನು ಆರತಿ ಬೆಳಗಿಸಿ ಉಡಿ ತುಂಬಿಸಿ ಹಾರೈಸಲಾಯಿತು.
ಸಮುದಾಯ ಅರೋಗ್ಯ ಕೇಂದ್ರ ಬೈಂದೂರು ಮಕ್ಕಳ ತಜ್ಞೆ ಡಾ. ನಂದಿನಿ, ಮತ್ತು ಮಹಿಳಾ ತಜ್ಞ ಡಾ. ರಾಜೇಶ್ ಸೌಕೂರ್,ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿ ಭಾರತೀ,ಇನ್ನರ್ ವೀಲ್ ಅಧ್ಯಕ್ಷೆ ಶಾಂತಿ ಪಿರೇರಾ,ಜಿಲ್ಲಾ ಕ್ಷಯ ರೋಗ ಮತ್ತು ಏಡ್ಸ್ ನಿಯಂತ್ರಣ ಅಧಿಕಾರಿ ಡಾ. ಚಿದಾನಂದ ಉಪಸ್ಥಿತರಿದ್ದರು
.ಸಮುದಾಯ ಅರೋಗ್ಯ ಕೇಂದ್ರ ಬೈಂದೂರು ಇದರ ಆಪ್ತ ಸಮಾಲೋಚಕಿ ವಸಂತಿ ಸ್ವಾಗತಿಸಿಸದರು, ಡಾ.ಚಿದಾನಂದ ಅವ್ರು ಪ್ರಾಸ್ತವಿಕ ಮಾತನಾಡಿದರು, .. ಜಿಲ್ಲಾ ಅರೋಗ್ಯ ಮತ್ತು ಉಪಶಿಕ್ಷಣ ಅಧಿಕಾರಿ ಚಂದ್ರಕಲಾ ಅವ್ರು ಧನ್ಯವಾದ ಮಾಡಿದರು
.