ಬೈಂದೂರು:-ಸರ್ಕಾರಿ ಉದ್ಯೋಗ ಮಾಹಿತಿ ಶಿಬಿರ ಹಾಗೂ ಮಾದಕ ವ್ಯಸನಿ ವಿರುದ್ಧ ಜಾಗೃತಿ.

JANANUDI.COM NETWORK

ಬೈಂದೂರು:- ನಮ್ಮ ನಾಡ ಒಕ್ಕೂಟ ಬೈಂದೂರು ಘಟಕ ಹಾಗೂ ಸ್ಥಳೀಯ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಬೈಂದೂರಿನ ಹೋಟೆಲ್ ಅಂಬಿಕಾ ಇಂಟರ್ನ್ಯಾಷನಲ್ ನ ಹಾಲ್ ನಲ್ಲಿ ಸರ್ಕಾರಿ ಉದ್ಯೋಗ ಮಾಹಿತಿ ಶಿಬಿರ ಹಾಗೂ ಮಾದಕ ವ್ಯಸನಿ ವಿರುದ್ಧ ಜಾಗ್ರತಿ ಕಾರ್ಯಕ್ರಮ ನಡೆಯಿತು.
ನಮ್ಮ ನಾಡ ಒಕ್ಕೂಟ ಬೈಂದೂರು ಘಟಕದ ಅಧ್ಯಕ್ಷರಾದ ಅಬ್ದುಲ್ ಸಮಿ ಪ್ರಾಸ್ತಾವಿಕ ಭಾಷಣ ನುಡಿದು ಅತಿಥಿಗಳನ್ನು ಸ್ವಾಗತಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿ ತನ್ನ ವಿದ್ಯಾಭ್ಯಾಸದ ಜೊತೆಗೆ ಉದ್ಯೋಗದ ಬಗ್ಗೆ ಮಾಹಿತಿಗಳನ್ನು ಪಡೆದುಕೊಳ್ಳಬೇಕೆಂದು , ನಮ್ಮ ನಾಡ ಒಕ್ಕೂಟದ ಸಂಘಟನಾ ಕಾರ್ಯದರ್ಶಿಯಾದ ಹುಸೇನ್ ಹೈಕಾಡಿ  ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಪ್ರಾರಂಭದಿಂದಲೇ ಸರಕಾರಿ ಉದ್ಯೋಗದ ಬಗ್ಗೆ ಆಸಕ್ತಿ ವಹಿಸಿದರೆ ಹಾಗೂ ಪೂರ್ವಾತಯಾರಿಯಂತೆ ಕಲಿತರೆ, ತಮ್ಮ-ತಮ್ಮ ವಿದ್ಯಾಭ್ಯಾಸ ಮುಗಿಯುವ ಹಂತದಲ್ಲಿ, ಮುಂದಿನ ನಿರ್ಧಾರ ತೆಗೆದುಕೊಳ್ಳಲು ಸಮಯಾವಕಾಶ ಸಿಗುತ್ತದೆ ಎಂದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಬೈಂದೂರು ಎಜುಕೇಶನ್ ಡಿಪಾರ್ಟ್ಮೆಂಟಿನ ಬ್ಲಾಕ್ ಕೊರ್ಡಿನೇಟರ್ ಅಬ್ದುಲ್ ರವೂಫ್ ಅವರು ಹಿತನುಡಿದರು.
ಮುಖ್ಯ ಅತಿಥಿಗಳಾಗಿ ಎನ್.ಎನ್. ಓ. ಹೆಬ್ರಿ ಘಟಕದ ಅಧ್ಯಕ್ಷ ಮೊಹಮ್ಮದ್ ರಫೀಕ್, ಎನ್.ಎನ್. ಓ. ಬೈಂದೂರು ಘಟಕದ ಉಪಾಧ್ಯಕ್ಷರಾದ ಮಮ್ಡು ಇಬ್ರಾಹೀಂ ಮಾಸ್ಟರ್, ಎನ್.ಎನ್. ಓ. ಬೈಂದೂರು ಘಟಕದ ಸಲಹೆಗಾರ ಉಸ್ಮಾನ್ ಜಾಫರ್, ಬೈಂದೂರು ಜುಮಾ ಮಸೀದಿಯ ಖತೀಬ್ ಫೈಝುಲ್ ಬಾರಿ ಮೌಲಾನ ಉಪಸ್ಥಿತರಿದ್ದರು.
ಈ ಸಮಾರಂಭದಲ್ಲಿ ಸರಕಾರಿ ನೌಕರಿಯಲ್ಲಿ ಸೇವೆ ಸಲ್ಲಿಸುತ್ತಿರುವ ಅಬ್ದುಲ್ ರವೂಫ್ ಸರ್, ಎನ್.ಎನ್. ಓ. ಬೈಂದೂರು ಘಟಕದ ಉಪಾಧ್ಯಕ್ಷರಾದ ಸಯ್ಯದ್ ಅಜ್ಮಲ್ ಸಹಬ್ (ರಿಟೈರ್ಡ್ ಚಾರ್ಟರ್ಡ್ ಅಕೌಂಟಂಟ್) ಮತ್ತು ಝಹೀರ್ ಅಬ್ಬಾಸ್ ಮುಖ್ರಿ (ಅರಣ್ಯ ಸಿಬ್ಬಂದಿ) ಇವರೆಲ್ಲರಿಗೂ ಸನ್ಮಾನಿಸಲಾಯಿತು.
ಹಂಝತ್ ಹೆಜಮಾಡಿ (ವಕೀಲರು ಮತ್ತು ಸಾಮಾಜಿಕ ಚಿಂತಕರು), ಅಬ್ದುಲ್ ರಝಾಕ್ ಮತ್ತು ಅಹ್ಮದ್ ನೌಝಲ್ ಒಳಗೊಂಡ ತಂಡ ಈ ಕಾರ್ಯಕ್ರಮಕ್ಕೆ ಬಂದ ಸುಮಾರು 80 ವಿದ್ಯಾರ್ಥಿಗಳಿಗೆ ಮಾದಕ ವ್ಯಸನದ ಜಾಗೃತಿ ಹಾಗೂ ಸರಕಾರಿ ಉದ್ಯೋಗಗಳ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು.
ನೂರುಲ್ ಇಸ್ಲಾಂ ಸಹಬ್ ಕಾರ್ಯಕ್ರಮವನ್ನು ನಡೆಸಿಕೊಟ್ಟರೆ, ಎನ್.ಎನ್. ಓ. ಬೈಂದೂರು ಘಟಕದ ಕಾರ್ಯದರ್ಶಿಗಳಾದ ಅಲ್ತಾಫ್ ಮುಖ್ರಿ ಮತ್ತು ಕಾವಾ ಸಯೀದ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನೆರವೇರಿಸಲು ಸಹಾಯವಾದರು.
ಈ ಕಾರ್ಯಕ್ರಮಕ್ಕೆ ಸೋಚ್ ಚಾರಿಟೇಬಲ್ ಟ್ರಸ್ಟ್ (ಖ) ಶಿರೂರು, ನಾಖುದಾ ವೆಲ್ಫೇರ್ ಅಸೋಸಿಯೇಷನ್ (ಖ) ಶಿರೂರು ಹಾಗೂ ಹಳಗೇರಿ ಓವರ್ಸೀಸ್ ಕಮಿಟಿ ಸೌಜನ್ಯ ಬೆಂಬಲ ನೀಡಿ ಪ್ರೋತ್ಸಾಹಿಸಿದರು
.