ಬೈಂದೂರು – ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ ಕ್ಯಾನ್ಸರ್ ತಪಾಸಣೆ ಶಿಬಿರ

JANANUDI.COM NETWORK

ಬೈಂದೂರು, ಮಹಿಳಾ ದಿನಾಚರಣೆಯ ಅಂಗವಾಗಿ ಮಹಿಳೆಯರಿಗೆ ಕ್ಯಾನ್ಸರ್ ತಪಾಸಣೆ ಶಿಬಿರ ವನ್ನು ಸಮುದಾಯ ಅರೋಗ್ಯ ಕೇಂದ್ರ ಬೈಂದೂರು ಹಾಗೂ ಇನ್ನೆರವೀಲ್ ಕ್ಲಬ್ ಬೈಂದೂರು ಸಹಾಭಾಗೀತ್ವದಲ್ಲಿ ಸಮುದಾಯ ಅರೋಗ್ಯ ಕೇಂದ್ರ ಬೈಂದೂರುನಲ್ಲಿ ನಡೆಸಲಾಯಿತು.

Dr. ನಂದಿನಿ ಮಕ್ಕಳ ತಜ್ಞೆ ದೀಪ ಬೆಳಗಿಸಿ ಪ್ರಾಸ್ತವಿಕ ಸಂದೇಶ ನೀಡಿದರು. Dr. ರಾಜೇಶ್ ಸೌಕೂರ್. ಸ್ತ್ರೀ ರೋಗ ತಜ್ಞರು. ಗರ್ಭಕಂಠ ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಿದರು. ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶಾಂತಿ ಪಿರೇರಾ ಮಹಿಳೆಯರು ಎಲ್ಲರ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ಆದರೆ ತಮ್ಮ ಅರೋಗ್ಯದ ಬಗ್ಗೆ ಯೋಚನೆ ಮಾಡುವುದಿಲ್ಲ ಮೊದಲಿಗೆ ತಮ್ಮ ಅರೋಗ್ಯವನ್ನು ಕಾಪಾಡಿಕೊಳ್ಳುವ ಜೊತೆಗೆ ತಮ್ಮ ಕುಟುಂಬದ ಜವಾಬ್ದಾರಿ ನಿಭಾಯಿಸಬೇಕು. ಎಂದು ನುಡಿದರು. ಮಣಿಪಾಲ ಆಸ್ಪತ್ರೆಯ ಇನ್ನೊರ್ವ Dr. ಅರುಣ್ ಹಾಜರಾಗಿದ್ದರು. 50ಮಂದಿ ಮಹಿಳೆಯರು ಗರ್ಭಕಂಠ ದ ತಪಾಸಣೆಯ ಉಪಯೋಗ ವನ್ನು ಪಡೆದರು. ಇನ್ನರ್ ವೀಲ್ ಸದಸ್ಯರು ಹಾಗೂ ಕಥೋಲಿಕ್ ಸ್ತ್ರೀ ಸಂಘಟನೆ ಸದಸ್ಯರು ಮತ್ತು ಸಂಪದ ಉಡುಪಿ – ಕುಂದಾಪುರ ವಲಯದ ಮಹಿಳಾ ಸಂಘಟನೆಯ animator ಸಿಂಥಿಯ ರೋಡ್ರಿಗಸ್ ಹಾಜರಿದ್ದರು.

ಸಮುದಾಯ ಅರೋಗ್ಯ ಕೇಂದ್ರದ ಬೈಂದೂರಿನ inspection Inspection ಆಫೀಸರ್ ಸಂತೋಷ ಅವರು ಧನ್ಯವಾದ ನೀಡಿದರು.