ಕೋಲಾರ : ಚೆನ್ನೈ ಮೈಸೂರು ಚೆನ್ನೈ ಅತಿ ವೇಗದ ರೈಲು ಕಾರಿಡಾರ್ ಯೋಜನೆ, 463.159 ಕಿಲೋ ಮೀಟರ್ಗಳ ಪರಮ ಆದ್ಯತೆಯ ಮಹತ್ವದ ಯೋಜನೆಯಾಗಿದ್ದು ಚೆನ್ನೈನಿಂದ ಶುರುವಾಗಲಿದ್ದು, ಚೆನ್ನೈ ಎಕ್ಸ್ ಪ್ರೆಸ್ ನಿಂದ ನಮ್ಮ ಕೋಲಾರಕ್ಕೆ ಯಾವುದೇ ತೊಂದರೆಯಿಲ್ಲದೆ ಬುಲೆಟ್ ರೈಲು ಬರುವುದಕ್ಕೆ ಸಿದ್ಧವಿದೆ ಎಂದು ಜಿಲ್ಲಾಧಿಕಾರಿಗಳಾದ ಅಕ್ರಂ ಪಾಷ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಂಗಣ ಸಭಾಂಗಣದಲ್ಲಿ ನಡೆದ ಮೈಸೂರು ಚೆನ್ನೈ ಹೈ ಸ್ಪೀಡ್ ರೈಲು ಕಾರಿಡಾರ್ಗಳಿಗಾಗಿ ಪರಿಸರ ಮತ್ತು ಸಾಮಾಜಿಕ ಪರಿಗಣನೆಗಳ ಸಾರ್ವಜನಿಕ ಸಮಾಲೋಚನೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಈ ಚೆನ್ನೈ ಮೈಸೂರು ಚೆನ್ನೈ ರೈಲು ಮಾರ್ಗವು ಹೊಲ ಗದ್ದೆಗಳ ನಡುವೆ ಹಾದು ಹೋಗುವುದಾಗಿ ಗ್ರಾಮಸ್ಥರಿಗೆ ತಿಳಿಸಿದರು.
ಪ್ರಸ್ತಾವಿತ ಮಾರ್ಗವು ಎತ್ತರಿಸಿದ ಸೇತುನಾಲೆಗಳು ಮತ್ತು ಸುರಂಗಗಳನ್ನು ಒಳಗೊಂಡಿದೆ. ಜೊತೆಗೆ ಇವರು ಜಾಸ್ತಿ ಜಮೀನನ್ನು ತೆಗೆದುಕೊಳ್ಳುವುದಿಲ್ಲ ಇವರು 17 ಮೀಟರ್ ಮಾತ್ರ ಅವರು ತೆಗೆದುಕೊಳ್ಳುತ್ತಾರೆ ನಿಮ್ಮ ಜಮೀನಿನ ಮೇಲೆ ಟ್ಯಾಕ್ ಇರುವುದಿಲ್ಲ ಮೇಲೆ ಇರುತ್ತದೆ ಏಕೆಂದರೆ ಆ ವೇಗ ತುಂಬಾ ಇರುತ್ತದೆ ಆ ಕಾರಣದಿಂದ ಮೇಲೆ ಹೋಗುತ್ತವೆ ಎಂದರು.
ಹಳ್ಳಿಗಳಲ್ಲಿ ಅವರು ಈಗಾಗಲೇ ಜೋಡಣೆಯನ್ನು ತೋರಿಸಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದೆಂದು ಹೇಳಿದರು. ಬೆಂಗಳೂರು ವಿಮಾನ ನಿಲ್ದಾಣ ದಿಂದ ಕೆಜಿಎಫ್ಗೆ ಕೇವಲ ಅರ್ಧ ಗಂಟೆಯಲ್ಲಿ ಹೋಗಬಹುದೆಂದರು. ಕೋಲಾರದಿಂದ ಕೆಜಿಎಫ್ 15 ನಿಮಿಷದಲ್ಲಿ ತಲುಪಬಹುದು. ಬುಲೆಟ್ ರೈಲುಗಳು ಮಾಡಬೇಕು ಎಂದು ಸುಮಾರು ಕಡೆ ಪ್ರಾಜೆಕ್ಟ್ಗಳನ್ನು ಕೊಟ್ಟಿದ್ದಾರೆ ಅದರಲ್ಲಿ ನಮ್ಮ ರಾಜ್ಯವನ್ನು ಆಯ್ಕೆ ಮಾಡಲಾಗಿದೆ. ಆಂಧ್ರಪ್ರದೇಶ, ಕರ್ನಾಟಕ ಹಾಗೂ ತಮಿಳುನಾಡು ಈ ಮೂರು ಸೇರುವಂತಹ ರಸ್ತೆ ಇದೆ. ಆ ಕಾರಣದಿಂದ ಪ್ರಾಜೆಕ್ಟ್ ನಮಗೆ ಬಂದರೆ ತುಂಬಾ ಸೌಲಭ್ಯಗಳು ನಮಗೆ ದೊರೆಯುತ್ತವೆ ಬೇರೆ ಬೇರೆ ಕೈಗಾರಿಕೆಗಳು ಬರುತ್ತವೆ ಇವು ಎಲ್ಲ ನಮ್ಮ ಜಿಲ್ಲೆಗೆ ಬಂದರೆ ಉದ್ಯೋಗಗಳು ಸಿಗುತ್ತವೆ ಜನರಿಗೆ ತುಂಬಾ ಅನುಕೂಲವಾಗುತ್ತದೆ ಎಂದರು.
ಇಂತಹ ಸಂದರ್ಭದಲ್ಲಿ ನಾವುಗಳು ಸರ್ಕಾರಕ್ಕೆ ಪ್ರೋತ್ಸಾಹ ಕೊಟ್ಟಾಗ ಸರ್ಕಾರ ನಮಗೆ ಬೆಂಬಲ ನೀಡುತ್ತದೆ. ರೈಲು ವಿನ್ಯಾಸದಲ್ಲಿ ಶಬ್ದ ಮತ್ತು ಕಂಪನಗಳನ್ನು ತೆಗೆಸುವ ಕ್ರಮಗಳನ್ನು ಅಳವಡಿಸಲಾಗುವುದು ಸೂಕ್ತ ಪ್ರದೇಶಗಳಲ್ಲಿ ಶಬ್ದ ನಿಬರ್ಂಧಕಗಳನ್ನು ಒದಗಿಸಲಾಗುವುದು ಜನನಿಬಿಡ ಮತ್ತು ನಗರ ಪ್ರದೇಶಗಳ ಮೂಲಕ ಹಾದು ಹೋಗುವಲ್ಲಿ ಖಾಸಗಿ ಸಮಸ್ಯೆ ಅಂತಹ ಪ್ರದೇಶಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸಲಾಗುವುದೆಂದರು.
ಸಭೆಯಲ್ಲಿ ನ್ಯಾಷನಲ್ ಹೈ ಸ್ಪೀಡ್ ರೈಲು ಕಾರ್ಪೋರೇಷನ್ ಲಿಮಿಟೆಡ್ನ ಜೆ.ಜಿ.ಎಂ.ಎಸ್.ಡಿ ಅನಿಲ್ ಶರ್ಮ, ಆರ್.ಬಿ ಅಸೋಸಿಯೇಷನ್ ಪ್ರಾಜೆಕ್ಟ್ ಇಂಜಿನಿಯರ್ ಸಚ್ಚಿದಾನಂದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.