ಕುಂದಾಪುರ, ಫೆ.17 ಗ್ಯಾರಂಟಿ ಯೋಜನೆಗಳ ಅನುಷ್ಠಾನದ ನಂತರ ಜಿ ಎಸ್ ಟಿ ಸಂಗ್ರಹದಲ್ಲಿ 14% ಹೆಚ್ಚುವರಿ ಯಾಗಿರುವುದು ದೇಶಕ್ಕೆ ಮಾದರಿಯಾಗಿದೆ. ಕರಾವಳಿಯ ಮೀನುಗಾರರ ತುರ್ತು ರಕ್ಷಣೆಗೆ ಸಮುದ್ರ ಅಂಬುಲೆನ್ಸ್ ಖರೀದಿ ಘೋಷಿಸಿರುವುದು, ಮೀನುಗಾರರ ಆತ್ಮಸ್ಥೈರ್ಯವನ್ನು ಹೆಚ್ಚಿಸಿದೆ, ಮಾತ್ರವಲ್ಲದೆ ದುಡಿಯುವ ವರ್ಗದ ಪರ ಸರಕಾರವಿರುವುದು ಸ್ಪಷ್ಟವಾಗಿದೆ. 80 ವರ್ಷ ಮೇಲ್ಪಟ್ಟ ವೃದ್ಧರಿಗೆ ಅನ್ನ ಸುವಿದಾ ಯೋಜನೆಯಿಂದ ಮನೆ ಬಾಗಿಲಿಗೆ ಆಹಾರಧಾನ್ಯ ವಿತರಣೆ, ಹಿರಿಯ ನಾಗರಿಕರಿಗೆ ಸಂದ ಗೌರವವಾಗಿದೆ. ಗೃಹ ಜ್ಯೋತಿ ಯೋಜನೆಯಲ್ಲಿ 10 ಯೂನಿಟ್ ಹೆಚ್ಚುವರಿ ವಿದ್ಯುತ್ ಅನ್ನು ನೀಡಿರುವುದು, ಎಪಿಎಂಸಿ ಕಾಯ್ದೆ ತಿದ್ದುಪಡಿ, ಕೃಷಿಕರಿಗೆ ಬೆಂಬಲ ಬೆಲೆ, ರೈತರು ಮತ್ತು ಮಹಿಳೆಯರಿಗೆ ಸಂತಸವನ್ನು ತಂದಿದೆ. ಮಾನ್ನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಈ ವರ್ಷದ ಬಜೆಟ್ ರಾಜ್ಯದ ಸರ್ವತೋಮುಖ ಬೆಳವಣಿಗೆಗೆ ದಿಕ್ಸೂಚಿಯಾದ ಬಜೆಟ್ ಆಗುದೆಯೆಂದು ಕುಂದಾಪುರ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ,ವಿನೋದ್ ಕ್ರಾಸ್ಟೋ, ಮಾದ್ಯಮಕ್ಕೆ ತಿಳಿಸಿದ್ದಾರೆ