ಪಂಜಾಬ್ ನಲ್ಲಿ ಮದುಮಗನ ಬಂಧನ ; ಮದುವೆ ಅರಕ್ಷತೆಯಲ್ಲಿ 100 ಕ್ಕೂ ಅಧಿಕ ಮಂದಿ ಸೇರಿದ್ದು

JANANUDI.COM NETWORK

ಜಲಂಧರ್: ವಾರಾಂತ್ಯ ಲಾಕ್‌ಡೌನ್ ಸಮಯದಲ್ಲಿ ಕೋವಿಡ್ -19 ನಿಯಾಮವಳಿ ಉಲ್ಲಂಘಿಸಿ ಮದುವೆ ಆರತಕ್ಷತೆ ಸಮಯದಲ್ಲಿ ಬಂಧಿಸಿದ ಘಟನೆ ಶನಿವಾರ ರಾತ್ರಿ ಪಂಜಾಬ್‌ನ ಜಲಂಧರ್‌ನಲ್ಲಿ ನಡೆದಿದೆ.
ಜಲಂಧರ್‌ನ ಮಂದಿರದಲ್ಲಿ ನಡೆದ ಆರತಕ್ಷತೆ ಸಮಾರಂಭದಲ್ಲಿ 100 ಕ್ಕೂ ಹೆಚ್ಚು ಜನ ಭಾಗವಹಿಸಿದ್ದು ಪೊಲೀಸರ ಗಮನಕ್ಕೆ ಬಂದು ಜಲಂಧರ್ ಪೊಲೀಸರು ವರ ಮತ್ತು ಆತನ ತಂದೆಯನ್ನು ಬಂಧಿಸಿದ್ದಾರೆ.
ಪೊಲೀಸರು ದಿಢೀರ್ ಆರತಕ್ಷತೆ ಸ್ಥಳಕ್ಕೆ ಆಗಮಿಸಿ ವರ ಮತ್ತು ಆತನ ತಂದೆಯನ್ನು ವಶಕ್ಕೆ ಪಡೆಯುತ್ತಿದ್ದಾಗ ಹಲವಾರು ಅತಿಥಿಗಳು ತಕ್ಷಣ ಸ್ಥಳದಿಂದ ಪರಾರಿಯಾಗಿದ್ದು ವರದಿಯಾಗಿದೆ.
”ಕೊರೋನಾ ನಿಯಂತ್ರಿಸಲು ರಾಜ್ಯದಲ್ಲಿ ವಾರಾಂತ್ಯ ಕರ್ಫ್ಯೂ ಜಾರಿಗೊಳಿಸಲಾಗಿದೆ. ಈ ವೇಳೆ ಮದುವೆ ಹಾಗೂ ಇತರೆ ಸಮಾರಂಭಗಳಲ್ಲಿ 20ಕ್ಕೂ ಹೆಚ್ಚು ಜನ ಭಾಗವಹಿಸುವಂತಿಲ್ಲ. ಹೀಗಿರುವಾಗ ಕೋವಿಡ್ ನಿಯಮ ಉಲ್ಲಂಘಿಸಿ ಆರತಕ್ಷತೆ ನಡೆಸಿದ್ದರಿಂದ ವರ ಹಾಗೂ ಆತನ ತಂದೆಯನ್ನು ಬಂಧಿಸಲಾಗಿದೆ’ ಎಂದು ಜಲಂಧರ್ ನ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
’ಈ ಕಾರ್ಯಕ್ರಮಕ್ಕೆ ಜಿಲ್ಲಾಡಳಿತದಿಂದ ಯಾವುದೇ ಅನುಮತಿ ಸಹ ಪಡೆದಿಲ್ಲ ಎಂದು ಅವರು ಹೇಳಿದ್ದಾರೆ. ಈಗ ಕೋವಿಡ್ ನಿಯಮ ಉಲ್ಲಂಘಿಸಿ ಆರತಕ್ಷತೆ ನಡೆಸಿದ್ದಕ್ಕಾಗಿ ವರ ಮತ್ತು ಅವರ ತಂದೆಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 188 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ’ ಎಂದು ಪೊಲೀಸರು ತಿಳಿಸಿದ್ದಾರೆ.