ವರದಿ: ಶಬ್ಬೀರ್ ಅಹಮ್ಮದ್, ಶ್ರೀನಿವಾಸಪುರ

ಕೋಲಾರ ಆಗಸ್ಟ್ 4 : ಮಕ್ಕಳು ಪೌಷ್ಠಿಕ ಆಹಾರವನ್ನು ಪ್ರತಿನಿತ್ಯ ಸೇವಿಸಬೇಕು. ಮಕ್ಕಳು ನಾಲಿಗೆಗೆ ರುಚಿ ನೀಡುವ ಅಪೌಷ್ಠಿಕ ಆಹಾರಕ್ಕೆ ಮಾರು ಹೋಗಿದ್ದಾರೆ. ಮನೆಯಲ್ಲಿ ಮಾಡುವ ಮುದ್ದೆ, ಚಪಾತಿ ಊಟ, ಸೊಪ್ಪು, ತರಕಾರಿ ಸಾರು ಸೇವನೆಯನ್ನು ಕಡಿಮೆ ಮಾಡಿದ್ದಾರೆ. ಮಕ್ಕಳ ಮನಸ್ಸನ್ನು ಅರಿತ ಎಂ.ಟಿ.ಆರ್ ರವರು ಮಕ್ಕಳಿಗಾಗಿ ಪೌಷ್ಠಿಕಾಂಶಯುಕ್ತ ಉಪ್ಪಿಟ್ಟು ಮತ್ತು ದಾಲ್ ಓಟ್ಸ್ಗಳನ್ನು ನೀಡುತ್ತಿರುವುದು ಸಂತೋಷದ ವಿಷಯ ಎಂದು ಮುದುವತ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಂದ್ರ ಕುಮಾರ್ ಅಭಿಪ್ರಾಯಪಟ್ಟರು.
ಕೋಲಾರ ತಾಲ್ಲೂಕು ಮುದುವತ್ತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಶೆಟ್ಟಿಕೊತ್ತನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ವಿಕಾಸ ಮತ್ತು ತೇಜಶ್ವಿನಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ಎಸ್.ಜಿ.ಕೋಟೆ, ಬಂಗಾರಪೇಟೆ ಇವರ ವತಿಯಿಂದ ಶಾಲಾ ವಿದ್ಯಾರ್ಥಿಗಳಿಗೆ ಎಂ.ಟಿ.ಆರ್. 3 ನಿಮಿಷಗಳ ಬ್ರೇಕ್ಫಾಸ್ಟ್ ತರಕಾರಿ ಉಪ್ಪಿಟ್ಟು ಮತ್ತು ದಾಲ್ ಓಟ್ಸ್ ಪ್ಯಾಕೇಟ್ಸ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತೇಜಶ್ವಿನಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಬಿ.ಕೆ.ರೇಣುಕಾರವರು ಸುಮಾರು ಗ್ರಾಮೀಣಾಭಿವೃದ್ಧಿ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ಮಹಿಳೆಯರಿಗೆ ಕೌಶಲ್ಯ ತರಬೇತಿ, ಮಕ್ಕಳಿಗೆ ಸಾಂಸ್ಕøತಿಕ ಕಲೆಗಳು, ಬೇಸಿಗೆ ಶಿಬಿರಗಳು, ಕೌಶಲ್ಯ ತರಬೇತಿ, ಮಕ್ಕಳಲ್ಲಿ ಸಾಂಸ್ಕøತಿಕ ಕಲೆಗಳು, ಬೇಸಿಗೆ ಶಿಬಿರಗಳು, ಕೌಶಲ್ಯ ತರಬೇತಿ, ಕೋವಿಡ್ -19ರ ಸಮಯದಲ್ಲಿ ಅರಿವು ಕಾರ್ಯಕ್ರಮಗಳು ವೃದ್ಧರಿಗೆ ಮತ್ತು ವಿಲಚೇತನರಿಗೆ ರೇಷನ್ ಕಿಟ್ಗಳನ್ನು ವಿರಣೆ, ಮಾಸ್ಕ್ ಸ್ಯಾನಿಟೈಜರ್ಗಳ ವಿತರಣೆ, ತಾಲ್ಲೂಕು ಜಿಲ್ಲಾ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಸಾಂಸ್ಕøತಿಕ ಕಾರ್ಯಕ್ರಮಗಳು – ಶಿಭಿರಗಳು ನಡೆಸುತ್ತಾ ಬಂದಿರುತ್ತಾರೆ. ಇಂತಹ ಸಂಸ್ಥೆಗೆ ಗೌರವ ಮತ್ತು ಸಹಕಾರ ನೀಡುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಸಹ ಶಿಕ್ಷಕ ಶಿವಶಂಕರ್ ಮಾತನಾಡಿ ಎಂ.ಟಿ.ಆರ್. ಉಪ್ಪಿಟ್ಟು ಮತ್ತು ದಾಲ್ ಓಟ್ಸ್ ಪ್ರತಿ ದಿನ ಉಪಹಾರವಾಗಿ ಸೇವಿಸುವುದರಿಂದ ಮಕ್ಕಳಿಗೆ ಏನೇನು ಪೋಷಕಾಂಶಗಳು ದೊರೆಯುತ್ತವೆ ಮತ್ತು ಆ ಪೋಷಕಾಂಶಗಳಿಂದ ಮಕ್ಕಳ ಆರೋಗ್ಯ ಹೇಗೆ ವೃದ್ಧಿಸುವುದು ಎಂಬುದನ್ನು ವಿವರವಾಗಿ ತಿಳಿಸಿದರು.
ತೇಜಶ್ವಿನಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಬಿ.ಕೆ.ರೇಣುಕಾ ಮಾತನಾಡಿ ಉಪ್ಪಿಟ್ಟು ಮತ್ತು ಓಟ್ಸ್ಗಳನ್ನು ಉಪಹಾರದಲ್ಲಿ ಹೇಗೆ ತಯಾರಿಸಬೇಕು ಮತ್ತು ಸೇವನೆಯಿಂದ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿ ಹೇಗೆ ಹೆಚ್ಚುತ್ತದೆ ಎಂದು ತಿಳಿಸಿದು. ಇದೇ ಸಂದರ್ಭದಲ್ಲಿ 83 ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಉಪ್ಪಿಟ್ಟು ಮತ್ತು ದಾಲ್ ಔಟ್ಸ್ ಪಾಕೇಟ್ ವಿತರಿಸಲಾಯಿತು.
ಶಾಲೆಯ ಮುಖ್ಯೋಪಾದ್ಯಾಯರಾದ ಬಿ.ಮುನಿರತ್ನಮ್ಮ ಮಾತನಾಡಿ ಮುಂದಿನ ದಿನಗಳಲ್ಲಿ ನಮ್ಮ ಶಾಲೆಗೆ ಇನ್ನು ಹೆಚ್ಚಿನ ಸಹಾಯ ಮಾಡಬೇಕಾಗಿ ಸಂಸ್ಥೆಯಲ್ಲಿ ಹಾಗೂ ಪಂಚಾಯಿತಿ ಅಧ್ಯಕ್ಷರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ಮುನಿಯಪ್ಪ, ಶಿವಶಂಕರ, ಪ್ರಮೀಳಮ್ಮ, ಸುಶೀಲಮ್ಮ, ಉಪಸ್ಥಿತರಿದ್ದರು. ಗ್ರಾಮ ಪಂಚಾಯಿತಿ ಸದಸ್ಯರಾದ ಮಮತ, ರತ್ನಮ್ಮ ಹಾಗೂ ಎಆರ್ಎಲ್ಎಂ ಎಂ.ಬಿ.ಕೆ. ಆಶಾ ರವರು ಉಪಸ್ಥಿತರಿದ್ದರು.