![](https://jananudi.com/wp-content/uploads/2024/06/ಜಾಹಿರಾತು.jpg)
![](https://jananudi.com/wp-content/uploads/2024/06/000000-JANANUDI-5.png)
![](https://jananudi.com/wp-content/uploads/2024/06/WhatsApp-Image-2024-06-26-at-3.01.11-PM-1.jpg)
ಬ್ರಹ್ಮಾವರ : ಎಸ್ ಎಮ್ ಎಸ್ ಪ ಪೂ ಕಾಲೇಜಿನಲ್ಲಿ ಮಾದಕ ವ್ಯಸನ ಮುಕ್ತ ಮಾಹಿತಿ ಕಾರ್ಯಕ್ರಮ. ದಿನಾಂಕ 26/06/2024 ರಂದು ಅಂತರಾಷ್ಟ್ರೀಯ ಮಾದಕ ವಿರೋದಿ ದಿನದಂದು ನಶಾಮುಕ್ತ ಭಾರತ ಅಭಿಯಾನದಡಿ ಎಸ್ ಎಮ್ ಎಸ್ ಪದವಿ ಪೂರ್ವ ಕಾಲೇಜು ಬ್ರಹ್ಮಾವರ ಹಾಗೂ ಬ್ರಹ್ಮಾವರ ಅರಕ್ಷಕ ಠಾಣೆ ಇದರ ಜಂಟಿ ಆಶ್ರ ಯದಲ್ಲಿ ವಿದ್ಯಾರ್ಥಿಗಳಿಗೆ ಮಾದಕ ವ್ಯಸನ ಮುಕ್ತ ಜೀವನ ಮತ್ತು ಅಕ್ರಮ ಕಳ್ಳಸಾಗಾಣೆ ಬಗ್ಗೆ ಮಾಹಿತಿ ಕಾರ್ಯಗಾರವನ್ನು ನಡೆಸಲಾಯಿತು.
ಸಂಪನ್ಮೂಲ ವ್ಯಕ್ತಿಯಾಗಿ ಬ್ರಹ್ಮಾವರ ಅರಕ್ಷಕ ಠಾಣೆಯ ಪೋಲಿಸ್ ಉಪ ನಿರೀಕ್ಷರಾದ ಶ್ರಿ ಮಧು ಬಿ ರವರು ಭಾಗವಹಿಸಿ ಮಾದಕವ್ಯಸನ , ಸೈಬರ್ ಅಪರಾಧ, ವಾಹನ ಅಪಘಾತ,ಸಾಮಾಜಿಕ ಜಾಲತಾಣದ ದುಷ್ಪರಿಣಾಮ ಹಾಗೂ ಫೊಕ್ಸೋ ಅಪರಾಧಗಳ ಬಗ್ಗೆ ವಿದ್ಯಾರ್ಥಿಗಳಿಗೆ ಗಳಿಗೆ ಮಾಹಿತಿ ನೀಡಿದರು. ಪ್ರಾಂಶುಪಾಲರಾದ ಲ.ಐವಾನ್ ದೊನಾತ್ ಸುವಾರಿಸ್ ಅಧ್ಯಕ್ಷತೆ ವಹಿಸಿದ್ದರು.ಉಪನ್ಯಾಸಕರಾದ ವಿಜಯ ಆಳ್ವ ಸ್ವಾಗತಿಸಿ, ಸೀಸರ್ ಗೊನ್ಸಾಲ್ವಿಸ್ ವಂದಿಸಿ ಸಂತೋಷ್ ನೀಲಾವರ್ ನಿರೂಪಿಸಿದರು. ಬ್ರಹ್ಮಾವರ ಅರಕ್ಷಕ ಠಾಣೆ ಸಿಬಂದಿ, ಕಾಲೇಜಿನ ಉಪನ್ಯಾಸಕರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು.
![](https://jananudi.com/wp-content/uploads/2024/06/WhatsApp-Image-2024-06-26-at-3.01.11-PM.jpg)
![](https://jananudi.com/wp-content/uploads/2024/06/WhatsApp-Image-2024-06-26-at-3.01.10-PM.jpg)