ಶ್ರೀನಿವಾಸಪುರ : ಶ್ರೀನಿವಾಸಪುರ ಪುರಸಭೆಗೆ ಒಟ್ಟು 23 ಸದಸ್ಯರಿದ್ದು, ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ನಡೆದ ಚುನಾವಣೆಯಲ್ಲಿ ಬಿ.ಆರ್.ಬಾಸ್ಕರ್ ಬಿನ್ ರಾಮಚಂದ್ರಯ್ಯ ರವರು ಅಧ್ಯಕ್ಷರಾಗಿ ಆಯ್ಕೆಯಾಗಿರುತ್ತಾರೆ. ಎಂದು ಪುರಸಭೆ ನೂತನ ಅಧ್ಯಕ್ಷರ ಅತ್ತೆ ಚಂದ್ರಕಳಾ ಶ್ರೀನಿವಾಸ್ ಮಾಹಿತಿ ನೀಡಿದರು.
ಪಟ್ಟಣದ ಜಾಕೀರ್ ಹುಸೇನ್ ಮೊಹಲ್ಲಾ ಬಡವಾಣೆಯ ಸ್ವಗೃಹದಲ್ಲಿ ಶುಕ್ರವಾರ ಪತ್ರಿಕಾ ಗೋಷ್ಟಿಯಲ್ಲಿ ಮಾತನಾಡಿದರು.
ನೀಲಾವತಿಯವರ ಮತವನ್ನು ಕಾಂಗ್ರೇಸ್ ಪಾರ್ಟಿಯ ಪರವಾಗಿ ಪಡೆಯದೇ ಇರಲು ಕಾಂಗ್ರೇಸ್ ಪಾರ್ಟಿಯ ಎಲ್ಲಾ ಮುಖಂಡರು ಮತ್ತು ಅಭ್ಯರ್ಥಿಯಾಗಿದ್ದ ಬಿ.ಆರ್ ಬಾಸ್ಕರ್ ರವರು ಮೊದಲೇ ನಿರ್ಧರಿಸಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೇಸ್ನ 11 ಸದಸ್ಯರಿರುತ್ತಾರೆ. ನೀಲಾವತಿ ಕೋಂ ಶ್ರೀನಿವಾಸ್ (ಕಳ್ಳೇಕಾಯಿ ಸೀನಾ) ಜಗಜೀವನಪಾಳ್ಯ, ಶ್ರೀನಿವಾಸಪುರ ಇವರು ಜಗಜೀವನಪಾಳ್ಯದ ಪುರಸಭಾ ಸದಸ್ಯರಾಗಿರುತ್ತಾರೆ. 23/10/2023 ರಂದು ನಡೆದ ಕೌನ್ಸಿಲರ್ ಶ್ರೀನಿವಾಸನ್ ರವರ ಹತ್ಯೆ ಪ್ರಕರಣದಲ್ಲಿ ನೀಲಾವತಿ ಕೋಂ ಶ್ರೀನಿವಾಸ್(ಕಳ್ಳೇಕಾಯಿ ಸೀನಾ) ರವರ ಪುತ್ರ ಆರೋಪಿಯಾಗಿ ಬಂಧನದಲ್ಲಿರುತ್ತಾನೆ. ನೀಲಾವತಿ ಮತ್ತು ಅವರ ಪತಿ ಕಳ್ಳೇಕಾಯಿ ಸೀನಾ ರವರು ಮೇಲೂ ಕೊಲೆ ಪ್ರಕರಣ ಸಂಬಂಧ ಆರೋಪವಿದ್ದು, ಸಿ.ಐ.ಡಿ. ತನಿಖೆ ನಡೆಯುತ್ತಿರುತ್ತವೆ.
ಆದ ಕಾರಣ ಆದರೆ ಮತದಾನ ದಿನ 23.08.2024 ರಂದು ಎಲ್ಲಾ ಸದಸ್ಯರೂ ಮತದಾನದ ಕೇಂದ್ರವಾದ ಪುರಸಭೆ ಕಾರ್ಯಾಲಯದ ಒಳಗೆ ಪ್ರವೇಶಿಸಿದ ನಂತರ ಸುಮಾರು 15-20 ನಿಮಿಷಗಳ ನಂತರ ನೀಲಾವತಿಯವರು ಮತದಾನದ ಕೇಂದ್ರದ ಒಳಗೆ ಪ್ರವೇಶಿಸಿ ತಾನೂ ಕಾಂಗ್ರೇಸ್ ಅಭ್ಯರ್ಥಿಯ ಪರವಾಗಿ ಬಂದಿದ್ದೇನೆ ಎಂಬು ತಪ್ಪು ಕಲ್ಪನೆಯನ್ನು ಸಾರ್ವಜನಿಕರಲ್ಲಿ ಬಿಂಬಿಸಲು ಈ ಪ್ರಯತ್ನವನ್ನು ಮಾಡಿರುತ್ತಾರೆ. ಈ ಮೂಲಕ ತಮ್ಮ ಮೇಲೆ ಇರುವ ಕೊಲೆಯ ಸಂಬಂಧಿ ಆರೋಪವನ್ನು ಮರೆಮಾಚಲು ಪ್ರಯತ್ನಿಸಿರುತ್ತಾರೆ.
ನೀಲಾವತಿ ರವರು ಮತವಿಲ್ಲದೆಯೇ ಬಿ.ಆರ್ ಬಾಸ್ಕರ್ ರವರು ವಿರೋಧ ಪಕ್ಷಗಳ ಅಭ್ಯರ್ಥಿಗಳಿಗಿಂತ ಒಂದು ಮತವನ್ನು ಹೆಚ್ಚಿಗೆ ಪಡೆದಿರುತ್ತಾರೆ. ಆದ್ದರಿಂದ ಗೆಲುಗಾಗಿ ನೀಲಾವತಿಯವರ ಮತ ಬೇಕಾಗಿರುವುದಿಲ್ಲ. ಸಾರ್ವಜನಿಕರಲ್ಲಿ ಮತ್ತು ಎಲ್ಲಾ ಪಕ್ಷದಲ್ಲಿರುವ ಎಂ. ಶ್ರೀನಿವಾಸನ್ ರವರ ಹಿತೈಷಿಗಳಲ್ಲಿ ತಪ್ಪು ಕಲ್ಪನೆ ಮೂಡಿಸುವ ಕುಯುಕ್ತಿಯಿಂದ ನೀಲಾವತಿರವರು ಮತದಾನ ಕೇಂದ್ರಕ್ಕೆ ಬಂದಿರುತ್ತಾರೆ ಎಂದು ಈ ಮೂಲಕ ಸ್ಪಷೀಕರಣ ಕೊಡಲು ಬಯಸುತ್ತೇನೆ.