ಸರ್ಕಾರವು ಬಿಪಿಎಲ್ ಕಾರ್ಡ್ ಅನ್ನು ಬಡತನ ರೇಖೆಗಿಂತ ಕೆಳಗಿರುವಂತಹ ವರ್ಗದ ಜನರಿಗೆ ವಿತರಿಸುತ್ತದೆ. ಆದರೆ ಇದರ ಲಾಭ ಪದೆದು ಅನಹ್ರರಲ್ಲದವರೂ, ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳುತ್ತಾರೆ. ಬಿಪಿಎಲ್ ರೇಷನ್ ಕಾರ್ಡ್ ಇದ್ದಂತಹ ಜನರು ಉಚಿತವಾಗಿಯೇ ಪಡಿತರವನ್ನು ಪಡೆಯಬಹುದಾಗಿದೆ. ರಾಜ್ಯ ಸರ್ಕಾರ ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಬಿಪಿಎಲ್ ಕಾರ್ಡ್ ಅನ್ನು ಹೊಂದಿದವರಿಗೆ ಅಕ್ಕಿಯ ಬದಲು ಫಲಾನುಭವಿಗಳ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತಿದೆ. ಇನ್ನು ಮುಂದೆ ಇಂತಹ ಉದ್ಯೋಗ ಮಾಡುತ್ತಿದ್ದರೆ ಅವರಿಗೆ ಬಿಪಿಎಲ್ ರೇಷನ್ ಕಾರ್ಡ್ಸ್ ಸಿಗುವುದಿಲ್ಲ
ಯಾವ ಉದ್ಯೋಗ ಮಾಡುತ್ತಿದ್ದರೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ –
1 ಸರ್ಕಾರಿ ನೌಕರರಾಗಿದ್ದರೆ ಸಾಮಾಜಿಕ ವಲಯದ ಉದ್ಯಮಗಳಲ್ಲಿ ಕೆಲಸವನ್ನು ಮಾಡುತ್ತಿದ್ದರೆ, ಯಾವುದೇ ಸರ್ಕಾರಿ ನಿಗಮಗಳಲ್ಲಿ ಕೆಲಸವನ್ನು ಮಾಡುತ್ತಿದ್ದರೆ ನಿಮಗೆ ಬಿಪಿಎಲ್ ರೇಷನ್ ಕಾರ್ಡ್ ದೊರೆಯುವುದಿಲ್ಲ.
2 ಸ್ವಾಯತ್ತ ಮಂಡಳಿಗಳಲ್ಲಿ ಕೆಲಸವನ್ನು ಮಾಡುವವರಿಗೂ ಬಿಪಿಎಲ್ ಕಾರ್ಡ್ ನೀಡಲಾಗುವುದಿಲ್ಲ.
3 ಸಹಕಾರಿ ಸಂಸ್ಥೆಗಳಲ್ಲಿ ಖಾಯಂ ಉದ್ಯೋಗಿಗಳಾಗಿದ್ದರೆ ಬಿಪಿಎಲ್ ರೇಷನ್ ಕಾರ್ಡ್ ಸಿಗುವುದಿಲ್ಲ
4 ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ, ವಕೀಲರಿಗೆ ಮತ್ತು ಲೆಕ್ಕಪರಿಶೋಧಕರಿಗೂ ಈ ಕಾರ್ಡ್ಗಳನ್ನು ಪಡೆಯುವ ಅವಕಾಶವಿಲ್ಲರುದಿಲ್ಲ.